Mahanati: ಚಿತ್ರದುರ್ಗದ ಗಗನಾ ಸಖತ್ ಫೇಮಸ್; ಟೀ ಲೋಟ ತೊಳೆಯಲು ಮೇಕಪ್ ಮಾಡಿಕೊಂಡು ಹೋದ ಗಗನಾ

By ಎಸ್ ಸುಮಂತ್

ಜೀ ಕನ್ನಡದಲ್ಲಿ ಮಹಾನಟಿ ಎಂಬ ರಿಯಾಲಿಟಿ ಶೋ ಬರ್ತಿದೆ. ಇದು ಪ್ರತಿಭಾವಂತರಿಗೆ ಒಂದು ವೇದಿಕೆಯಾಗದರೆ, ನೋಡುಗರಿಗೆ ಫುಲ್ ಮೀಲ್ಸ್ ಮನರಂಜನೆ ನೀಡುವಂತ ಕಾರ್ಯಕ್ರಮವಾಗಿದೆ. ಈ ಮಹಾನಟಿ ವೇದಿಕೆಯಲ್ಲಿ ವೇದಿಕೆಯಲ್ಲಿ ಎಲ್ಲರೂ ಪ್ರತಿಭಾವಂತರೆ. ಯಾರೂ ಕೂಡ ನಟನೆಯಲ್ಲಿ ಕಡಿಮೆಯಿಲ್ಲ. ಯಾವುದೇ ರೀತಿಯ ಟಾಸ್ಕ್ ಕೊಟ್ಟರು ಅದನ್ನು ಅದ್ಭುತವಾಗಿ ನಿಭಾಯಿಸಿ, ಜಡ್ಜಸ್ ಗಳಿಂದ ಸೈ ಎನಿಸಿಕೊಳ್ಳುತ್ತಿದ್ದಾರೆ.

ಈ ವಾರ ಎಲ್ಲರಿಗೂ ಪ್ರಾಕ್ಟಿಕಲ್ ಲೈಫ್‌ನ ಅನುಭವ ಮಾಡಿಸಿದ್ದಾರೆ. ಎಷ್ಟೋ ಜನ ತಮ್ಮ ಜೀವನ ಸಾಗಿಸುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಾರೆ. ಟೀ ಮಾರುವವರ ಹಿಂದೆ, ಬಟ್ಟೆ ಮಾರುವವರ ಹಿಂದೆ, ಮಾರ್ಕೆಟ್‌ನಲ್ಲಿ ತರಕಾರಿ ಮಾರುವವರ ಹಿಂದೊಂದು ಕಥೆ ಇರುತ್ತದೆ‌. ಒಂದೊಂದು ಕಷ್ಟ ಕಾರ್ಪಣ್ಯ ಇರುತ್ತದೆ. ಅದೆಲ್ಲವನ್ನು ಸ್ಪರ್ಧಿಗಳು ಇಂದು ತಮ್ಮದೇ ರೀತಿಯಲ್ಲಿ ವೇದಿಕೆ ಮೇಲೆ ಅಭಿನಯಿಸಿ ತೋರಿಸಿದ್ದಾರೆ.

zee kannada reality show mahanati Written Update on April 20th episode

ಟೀ ಶಾಪ್‌ಗೆ ಟ್ರೈನಿಂಗ್ ಹೋದ ಗಗನಾ

ಇವತ್ತು ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಕೊಟ್ಟಂತೆ ಗಗನಾಗೆ ಟೀ ಶಾಪ್‌ನಲ್ಲಿ ಟೀ ಮಾಡಿ, ಮಾರುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಮಹಾನಟಿ ಬಳಗದವರು ಕೊಟ್ಟ ಟೀ ಕೆಫೆಗೆ ಗಗನಾ ಭಾರಿ ಭೇಟಿ ನೀಡಿದರು. ಅಲ್ಲಿ ಇಬ್ಬ ಮಹಿಳೆಯೇ ಟೀ ಮಾಡಿ, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಹೋದ ಕೂಡಲೇ ನನಗೆ ಟೀ ಮಾಡಲು ಬರಲ್ಲ ಎಂದೇ ಹೇಳಿದರು ಗಗನಾ. ಆದರೆ ಆ ಮಹಿಳೆ ಎಲ್ಲಾ ಕೆಲಸವನ್ನು ಹೇಳಿಕೊಟ್ಟರು.


ತಾನೇ ಟೀ ಮಾಡಿ ಸರ್ವ್ ಮಾಡಿದ ಗಗನಾ

ಅದು ಮಡಿಕೆ ಟೀ. ಹೀಗಾಗಿ ಮಡಿಕೆಯನ್ನು ಬಿಸಿ ನೀರಿನಲ್ಲಿ ನೆನೆ ಹಾಕಲಾಗಿತ್ತು. ಅದನ್ನು ತೋರಿಸಿದರು. ಬಳಿಕ ಗಗನಾಗೆ ಲೋಟ ತೊಳೆಯುವುದಕ್ಕೆ ಹೇಳಿದರು. ಅದರಂತೆ ಗಗನಾ ಬ್ಯಾಗ್ ಸೈಡ್ ನಲ್ಲಿಟ್ಟು ಲೋಟ ತೊಳೆಯುತ್ತಿದ್ದರು. ಆಗ 'ಮಹಾನಟಿ ಮಹಾನಟಿ ಅಂತ ಕುಣ್ಕೊಂಡ್ ಕುಣ್ಕೊಂಡು ಬಂದೆ. ಆದರೆ ಇಲ್ಲಿ ಟೀ ಲೋಟ ತೊಳೆಯುವುದಕ್ಕೆ ಬಿಟ್ಟಿದ್ದಾರೆ. ಟೀ ಲೋಟ ತೊಳೆಯುವುದಕ್ಕೆ ಇಷ್ಟೊಂದು ಮೇಕಪ್ ಹಾಕಿಕೊಂಡು ಬರಬೇಕಿತ್ತಾ?' ಅಂತ ಕಾಮಿಡಿ ಮಾಡಿ ಎಲ್ಲರನ್ನು ನಗಿಸಿದ್ದಾರೆ.

zee kannada reality show mahanati Written Update on April 20th episode

ಅಣ್ಣನ ಮಗ ಜವಾಬ್ದಾರಿಯ ನಟನೆ

ಅದು ಜಸ್ಟ್ ತರಬೇತಿ. ಈಗ ಟೀ ಮಾರುವವರ ಜೀವನವನ್ನೇ ವೇದಿಕೆ ಮೇಲೆ ತರಬೇಕಿತ್ತು ಗಗನಾ. ತೀರ್ಪುಗಾರರು ಕೂಡ ಶುರು ಮಾಡಲು ಒಪ್ಪಿಗೆ ನೀಡಿದರು. ಗಗನಾ ತಮ್ಮ ಅಭಿನಯ ಶುರು ಮಾಡಿಕೊಂಡರು. 'ನಾನು ಎಸ್ಎಸ್ಎಲ್‌ಸಿ ಫೇಲ್ ಆದೆ. ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಅಣ್ಣ ಬೇರೆ ಸತ್ತು ಹೋದ. ಮಗುವಿನ ಜವಾಬ್ದಾರಿ ನಮ್ಮ ಹೆಗಲ ಮೇಲಾಕಿ ಅತ್ತಿಗೆ ಹೋಗೆ ಬಿಟ್ಟಳು. ನನಗೂ ಮದುವೆಯಾಗುವ ಆಸೆ. ಆದರೆ ಜವಾಬ್ದಾರಿ ಹೆಗಲ ಮೇಲಿದೆಯಲ್ಲ' ಎಂದು ಕಣ್ಣೀರು ಹಾಕಿಸಿಬಿಟ್ಟರು.

ನೆಟ್ಟಿಗರಿಂದ ಗಗನಾಗೆ ಡಿಮ್ಯಾಂಡ್

ಜೀ ಕನ್ನಡ ಒಂದು ಪೋಸ್ಟರ್ ಹಾಕಿ ಕ್ಯಾಪ್ಶನ್ ಹಾಕಿದ್ದರು. ಈ‌ ಮಹಾನಟಿಯರಲ್ಲಿ ಯಾರ ಅಭಿನಯ ನೋಡುವುದಕ್ಕೆ ಇಷ್ಟ ಅಂತ. ಆಲ್ಮೋಸ್ಟ್ ಅದರಲ್ಲಿ ಬಂದಿರುವ ಹೆಸರು ಗಗನಾ ಹಾಗೂ ಆಶಿಕಾ ಶರ್ಮಾ. ಆದರೆ ಹೆಚ್ಚು ವೋಟ್ ಬಂದಿರುವುದು ಚಿತ್ರದುರ್ಗದ ಪ್ರತಿಭೆ ಗಗನಾಗೆ.

More from Filmibeat

English summary
zee kannada reality show mahanati; Here is the details about Gagana told the plight of women in the form of drama
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X