Mahanati: ತರುಣ್ ಮೆಚ್ಚುಗೆ ಗಳಿಸಿದ್ದ ಗಗನಾ ಫುಲ್ ಟ್ರೋಲ್; ನಂಗು ಮೋಸ ಮಾಡಿದ್ಲು ಎಂದ ಅನಾಮಿಕ!
ಮಹಾನಟಿ ವೇದಿಕೆಯಲ್ಲಿ ಸ್ಪಾಟ್‌ನಲ್ಲೇ ಡೈಲಾಗ್ ಸೃಷ್ಟಿಸುವ ಪ್ರತಿಭಾವಂತಿ ನಟಿ ಗಗನಾ ಬಾರಿ. ಚಿತ್ರದುರ್ಗದ ಈ ಚೆಲುವೆಗೆ ನಗಿಸುವ ಕಲೆ ತುಂಬಾ ಚೆನ್ನಾಗಿದೆ. ಯಾವುದೇ ಸಬ್ಜೆಕ್ಟ್ ಕೊಟ್ಟರು ಪಟ್ ಅಂತ ಡೈಲಾಗ್ ಸೃಷ್ಟಿ ಮಾಡಿಕೊಂಡು ಎಲ್ಲರೂ ನಗಿಸುವಂತೆ ಮಾಡುತ್ತಾರೆ. ಮೊದಲ ದಿನವೇ ಇವರ ಅಂಬಾನಿ ಮದುವೆಯ ಡೈಲಾಗ್‌ಗೆ ಇಡೀ ವೇದಿಕೆ ಬಿದ್ದು ಬಿದ್ದು ನಕ್ಕಿತ್ತು. ಜನರು ಕೂಡ ನಕ್ಕಿದ್ದರು.
ಆರಂಭದಲ್ಲಿ ಗಗನಾ ಬಾರಿ ಡೈಲಾಗ್ ಫಿದಾ ಆಗಿದ್ದ ತರುಣ್ ಸುಧೀರ್, ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಎರಡನೇ ಬಾರಿಗೆ ಲೋಟವನ್ನು ಬಹುಮಾನವಾಗಿ ನೀಡಿದ್ದರು. ಹೀಗೆ ವಾರಕ್ಕೊಮ್ಮೆ ವಿಭಿನ್ನವಾದ ನಟನೆಯಿಂದ ಜಡ್ಜಸ್ ಗಳ ಗಮನ ಸೆಳೆಯುತ್ತಿದ್ದರು. ಇವರ ಬಗ್ಗೆ ಹೊರಗೆ ಪಾಸಿಟಿವ್ ಕಮೆಂಟ್ ಗಳು ಕೂಡ ಬರುತ್ತಿದ್ದವು. ಆದರೀಗ ಮೆಕ್ಯಾನಿಕ್ ಗಳ ಸುದ್ದುಗೆ ಹೋಗಿ ಟ್ರೋಲ್ ಗಳಿಗೆ ಗುರಿಯಾಗಿದ್ದಾರೆ.

ಮೆಕ್ಯಾನಿಕ್ ಟಾಪಿಕ್ ಕೊಟ್ಟಿದ್ದ ರಮೇಶ್
ಮಹಾನಟಿ ವೇದಿಕೆಯಲ್ಲಿ ರಮೇಶ್ ಅರವಿಂದ್ ಅವರು ಕಂಟೆಸ್ಟೆಂಟ್‌ಗಳಿಗೆ ಒಂದೊಂದು ಕಾನ್ಸೆಪ್ಟ್ ಕೊಡುತ್ತಾರೆ. ಆ ಕಾನ್ಸೆಪ್ಟ್ ತಕ್ಕ ಹಾಗೇ ನಟನೆ ಮಾಡಿ ತೋರಿಸಬೇಕು. ಸಮಯ ಬೇಕಾದವರು ತೆಗೆದುಕೊಳ್ಳಬಹುದು. ಆದರೆ ಮಹಾನಟಿಯರು ತಕ್ಷಣಕ್ಕೆ ಡೈಲಾಗ್‌ನ್ನೆಲ್ಲಾ ಕ್ರಿಯೇಟ್ ಮಾಡಿಕೊಳ್ಳುತ್ತಾರೆ. ಈ ಬಾರಿ ಗಗನಾ ಬಾರಿಗೆ ಮೆಕ್ಯಾನಿಕಲ್ ಲೈಫ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ದರು.
ಗಗನಾ ವಿರುದ್ಧ ನೆಟ್ಟಿಗರು ಗರಂ
ನಿಮ್ಮ ತಂಗಿ ಮೆಕ್ಯಾನಿಕ್‌ನ ಲವ್ ಮಾಡುತ್ತಿದ್ದರೆ ಏನು ಮಾಡುತ್ತೀಯಾ? ಎಂದಾಗ ಡೈಲಾಗ್ ಹೇಳುವ ಭರದಲ್ಲಿ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂಬ ಡೈಲಾಗ್ ಹೊಡೆದಿದ್ದಳು. ಆ ಡೈಲಾಗ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಗಗನಾ ಚಿಕ್ಕ ಹುಡುಗಿ ಎಂಬ ಮಾತುಗಳ ಜೊತೆಗೆ ರಮೇಶ್ ಅರವಿಂದ್ ಅವರು ಕೊಟ್ಟ ಕಾನ್ಸೆಪ್ಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
'ಕುಣಿದು ಕುಣಿದು ಬಾರೆ'ಗೆ ಸ್ಟೆಪ್
ಈ ವಾರದ ಮಹಾನಟಿ ವೇದಿಕೆಯಲ್ಲಿ ಕುಣಿದು ಕುಣಿದು ಬಾರೆ ಹಾಡಿಗೆ ಸ್ಟೆಪ್ಸ್ ಹಾಕಿದರು. ಗಗನಾ ಬಾರಿ ಡೈಲಾಗ್ ಹೇಳಿದರೂ, ಡ್ಯಾನ್ಸ್ ಮಾಡಿದರು ಎಂಥವರಿಗೆ ಆದರೂ ನಗು ಬರುತ್ತದೆ. ಮನರಂಜನೆ ಕೊಡುವುದರಲ್ಲಿ ಗಗನಾ ಬಾರಿ ಮುಂದು. ಹೀಗಾಗಿ ಅವರನ್ನೇ ಹೆಚ್ಚು ಮಾತನಾಡಿಸುವ ಪ್ರಯತ್ನವೂ ಜೀ ಕನ್ನಡದಲ್ಲಿ ನಡೆಯುತ್ತಿದೆ.

ಕಮೆಂಟ್ ಹಾಕಿದ ಭಗ್ನ ಪ್ರೇಮಿ
ಇದೀಗ ಗಗನಾ ಬಾರಿಯ ಈ ವಿಡಿಯೋಗೆ ಶಾಕಿಂಗ್ ಕಮೆಂಟ್‌ಗಳು ಬಂದಿವೆ. ಅದರಲ್ಲೂ ಭಗ್ನ ಪ್ರೇಮಿ ಎಂಬ ವಿಚಾರವೂ ಬಂದಿದೆ. ಟ್ರೋಲ್ ಪೇಜ್‌ನಲ್ಲಿ ನನಗೆ ಮೋಸ ಮಾಡಿದ್ದೀಯಾ ಎಂಬ ಕಮೆಂಟ್ ಹಾಕಿ ಕುತೂಹಲ ಹುಟ್ಟಿಸಿದ್ದಾರೆ. 'ನೀನ್ ಎಂತ ಟ್ಯಾಲೆಂಟ್ ಅಂತ ಗೊತ್ತು. ನನ್ನಂತವನಿಗೆ ಕಾಗೆ ಹಾರಿಸಿದ್ದೀಯ. ಇನ್ನು ಚಾನೆಲ್ ಯಾವ ಲೆಕ್ಕ' ಅಂತ ಟ್ರೋಲ್ ಗುರು ಬೆಂಗಳೂರು ಎಂಬ ಪೇಜ್ ಕಮೆಂಟ್ ಮಾಡಿದ್ದೆ ತಡ, ಒಂದಷ್ಟು ಮಂದಿ ಕುತೂಹಲದಿಂದ ಆ ವಿಚಾರವನ್ನು ಕೇಳಿದ್ದಾರೆ. 'ಯಾರೋ ನೊಂದ ಪ್ರೇಮಿ ಇರಬೇಕು' ಒಬ್ಬರು ಕಮೆಂಟ್ ಹಾಕುದ್ರೆ, 'ಬ್ರೋ ನಿಜ ನಿಮ್ಮ ಲವ್ವರ್ ಹ' ಅಂತ ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











