Mahanati: ಮಹಾನಟಿಯರಿಗೆ ಶಕ್ತಿಯೇ ರಮೇಶ್ ಅರವಿಂದ್; ಪ್ರತಿ ಡೈಲಾಗ್‌ಗೂ ಜೊತೆಯಾದ ನಟನಿಗೆ ಸಲಾಂ

By ಎಸ್ ಸುಮಂತ್

ಯಾರಾದರೂ ಏನನ್ನಾದರೂ ಕಲಿಯಬೇಕು ಎಂದರೆ ಅವರಿಗೆ ಗುರುವಿನ ಅವಶ್ಯಕತೆ ಇರುತ್ತದೆ. ಅವರ ಜೊತೆಗೆ ನಿಂತು ಹೇಳಿಕೊಟ್ಟರೆ ಕಲಿಕೆಯೂ ಅದ್ಭುತ. ಮಹಾನಟಿ ರಿಯಾಲಿಟಿ ಶೋನಲ್ಲಿ ಪ್ರತಿಭಾವಂತರಿಗೇನು ಕಡಿಮೆ ಇಲ್ಲ. ಆದರೆ ಆ ಕಲೆ ಪ್ರಬುದ್ಧತೆ ಪಡೆಯಬೇಕು ಎಂದರೆ ಅನುಭವಸ್ಥರ ಮಾತು, ತರಬೇತಿ ಬಹಳ ಮುಖ್ಯವಾಗುತ್ತದೆ. ಇದೀಗ ಮಹಾನಟಿ ವೇದಿಕೆಯಲ್ಲೂ ರಮೇಶ್ ಅರವಿಂದ್ ಎಲ್ಲಾ ಪ್ರತಿಭಾವಂತರಿಗೂ ಟೀಚರ್ ಆಗಿದ್ದಾರೆ.

ಬಂದಿರುವಂತ ಕಂಟೆಸ್ಟೆಂಟ್‌ಗಳಿಗೆ ರಮೇಶ್ ಅರವಿಂದ್ ಅವರೇ ಟಾಪಿಕ್ ಕೊಡುತ್ತಾರೆ. ಆ ಟಾಪಿಕ್‌ಗೆ ಅಭಿನಯಿಸುವಾಗ ಗುರುವಾಗಿ ನಿಂತಿದ್ದಾರೆ. ಅಷ್ಟು‌ ಬೆಂಬಲವಾಗಿ ನಿಂತ ರಮೇಶ್ ಅರವಿಂದ್ ಅವರಿಗೆ ಇಡೀ ತಂಡ ಧನ್ಯವಾದ ಅರ್ಪಿಸಿದೆ.

Zee kannada reality show mahanati Written Update on April 7th episode

ಬಾಡಿ ಶೇಮಿಂಗ್ ಬಗ್ಗೆ ನಟಿಸಿದ ಆಶಿಕಾ

ಮಹಾನಟಿ ಆಡಿಷನ್‌ಗೆ ಬಂದಾಗ ಆಶಿಕಾ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದರು. ಈಗ ಅದೇ ಕಾನ್ಸೆಪ್ಟ್ ಬಗ್ಗೆ ರಮೇಶ್ ಅರವಿಂದ್ ಅಭಿನಯಿಸಲು ಹೇಳಿದ್ದಾರೆ. ಗಂಡ - ಹೆಂಡತಿ ಸಂಸಾರ. ಹೆಂಡತಿ ದಪ್ಪ‌ ಇರ್ತಾಳೆ. ಗಂಡ ಎಲ್ಲಿಯೇ ಹೋದರು ಕರೆದುಕೊಂಡು ಹೋಗಲ್ಲ. ಈ ಕಾನ್ಸೆಪ್ಟ್ ಮೇಲೆ ಆಶಿಕಾಗೆ ಅಭಿನಯಿಸುವುದಕ್ಕೆ ಹೇಳಿದ್ದಾರೆ ರಮೇಶ್ ಅರವಿಂದ್. ತಕ್ಷಣ ಅಭಿನಯಿಸಿದ ಆಶಿಕಾ, 'ಬಂದ್ಯಾ ಬಾ. ನಿಂಗೆ ನಿಜವಾಗಲೂ ನಾನು ಇಷ್ಟ ಇದ್ದೀನಾ ಇಲ್ವಾ. ಎರಡ್ಮೂರು ಸಲ ಮನೆಯಲ್ಲಿ ಬಿಟ್ಟು ಹೋಗಿದ್ದೀಯಾ. ದಪ್ಪ ಇದ್ದೀನಿ ಅಂತಾನಾ' ಅಂತ ಸ್ಪಾಟ್‌ನಲ್ಲೇ ಡೈಲಾಗ್ ತೆಗೆದು ಹೇಳಿದ್ದಾರೆ.

ಆಶಿಕಾ ಗಂಡನ ಪಾತ್ರದಲ್ಲಿ ರಮೇಶ್

ಮೊದಲ ಅಭಿನಯ ಇಷ್ಟಪಟ್ಟ ರಮೇಶ್ ಅರವಿಂದ್ ಮತ್ತೊಂದು ಟಾಸ್ಕ್ ಕೊಟ್ಟಿದ್ದಾರೆ. ನಾನೇ ಗಂಡನಾಗಿ ಅಭಿನಯಿಸ್ತೀನಿ. ಅಡುಗೆ ಮಾಡುತ್ತಾ ಗಂಡನ ಬಳಿ ತನಗಾಗುತ್ತಿರುವ ನೋವನ್ನು ಹೇಳಿಕೊಳ್ಳಬೇಕು ಎಂಬುದೇ ಟಾಸ್ಕ್. ರಮೇಶ್ ಅರವಿಂದ್ ಟಾಸ್ಕ್ ಶುರು ಮಾಡಿದ್ದಾರೆ. ಆಗ ಆಶಿಕಾ, ತಾನೂ ದಪ್ಪ ಇರುವ ಬಗ್ಗೆ, ಕಪ್ಪಾಗಿರುವ ಬಗ್ಗೆ ಗಂಡನ ಜೊತೆಗೆ ಅಳುತ್ತಾ, ಮನದ ಬೇಸರ ಹೊರ ಹಾಕಿದ್ದಾರೆ. ರಮೇಶ್ ಅರವಿಂದ್ ಕೂಡ ಗಂಡನ ಪಾತ್ರಧಾರಿಯಾಗಿ ಸಪೋರ್ಟ್ ಮಾಡಿದ್ದಾರೆ.

Zee kannada reality show mahanati Written Update on April 7th episode

ಸಿನಿಮಾದ ಡೈಲಾಗ್ ಜೊತೆಯಾದ ರಮೇಶ್

ನಿಶ್ವಿಕಾ ನಾಯ್ಡು ಕೂಡ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಜೊತೆಗೆ ರಮೇಶ್ ಅವರ ಜೊತೆಗೆ 'ಶಿವಾಜಿ ಸೂರತ್ಕಲ್- 2' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಇದೀಗ ಅದೇ ಸಿನಿಮಾವನ್ನು ವೇದಿಕೆ ಮೇಲೆ ರಿ-ಕ್ರಿಯೇಟ್ ಮಾಡಿದ್ದಾರೆ. ಇದು ಸ್ಪರ್ಧಿಗಳಿಗೆ ಸ್ಪೂರ್ತಿಯಾಗಿದೆ. ಬೇರೆ ಸ್ಪರ್ಧಿಗಳು ಕೂಡ ಅವರಂತೆಯೇ ಅಭಿನಯಿಸಿದ್ದಾರೆ.

ನಿಂತು ಧನ್ಯವಾದ ಅರ್ಪಿಸಿದ ಸ್ಪರ್ಧಿಗಳು

ಸ್ಪರ್ಧಿಗಳಿಂದ ನಗು, ಅಳು, ಪ್ರತಿಭೆಯನ್ನು ಹೊರ ಹಾಕಿಸುವಲ್ಲಿ ರಮೇಶ್ ಅರವಿಂದ್ ಅವರ ಪಾತ್ರ ಮಹತ್ವದ್ದಾಗಿದೆ. ಎಲ್ಲರ ಜೊತೆಗೂ ಪಾತ್ರಗಳ ಸಪೋರ್ಟ್ ಮಾಡಿದ್ದಾರೆ. ಅದಕ್ಕೆ ತಾಳ್ಮೆಯೂ ಬೇಕು, ಬೆಂಬಲಿಸುವ ಮನಸ್ಸು ಇರಬೇಕು, ಪ್ರೀತಿಯು ಬೇಕು. ಅದೆಲ್ಲವೂ ರಮೇಶ್ ಅರವಿಂದ್ ಅವರ ಕಡೆಯಿಂದ ಸಾಧ್ಯವಾಗಿದೆ. ಇದನ್ನು ಆಂಕರ್ ಅನುಶ್ರೀ ವೇದಿಕೆ ಮೇಲೆ ಹೇಳಿದ್ದಾರೆ. ಆ ಹೊಗಳಿಕೆಯನ್ನು ರಮೇಶ್ ಅರವಿಂದ್ ಸ್ವಿಖರಿಸುವುದಕ್ಕೆ ಮುಜುಗರ ಪಟ್ಟುಕೊಂಡರು. ಆದರೂ ಇದು ಸತ್ಯವಾಗಿದೆ. ದಯವಿಟ್ಟು ಈ ಧನ್ಯವಾದವನ್ನು ಅರ್ಪಿಸಿಕೊಳ್ಳಿ ಎಂದು ಎಲ್ಲರೂ ಒಂದು ಕ್ಷಣ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Mahanati today episode. Here is the details about Ramesh Aravind is the guru for the contestants;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X