Mahanati: ವೇದಿಕೆಗೆ ಖ್ಯಾತ ನಿರ್ದೇಶಕರು; ಸ್ಪರ್ಧಿಗಳ ಅದೃಷ್ಟ ಖುಲಾಯಿಸುತ್ತಾ?
'ಮಹಾನಟಿ' ರಿಯಾಲಿಟಿ ಶೋ ಮುಗಿಯುವ ಹಂತ ತಲುಪಿದೆ. ಫಿನಾಲೆಗೆ ವೇದಿಕೆ ರೆಡಿಯಾಗಿದೆ. ಇಷ್ಟು ವಾರಗಳ ಕಾಲ ರಂಜಿಸಿದವರು ಇದೀಗ ಗೆದ್ದು ಬೀಗುವ ಸಮಯವೂ ಹತ್ತಿರವಾಗಿದೆ. ಫಿನಾಲೆಗೆ ಈಗಾಗಲೇ ಐವರು ಸೆಲೆಕ್ಟ್ ಆಗಿದ್ದಾರೆ. ಇನ್ನೇನಿದ್ದರು ಮುಂದಿನ ವಾರ ಫಿನಾಲೆ ರೌಂಡ್‌ನಲ್ಲೂ ತಮ್ಮ ಚಾಕಚಕ್ಯತೆ ತೋರಿಸಿ, ಗೆಲುವನ್ನು ತಮ್ಮದಾಗಿಸಿಕೊಳ್ಳುವುದಷ್ಟೇ ಬಾಕಿ ಇದೆ.
ಈ ಶೋನಲ್ಲಿ ಭಾಗವಹಿಸಿರುವ ಒಬ್ಬೊಬ್ಬರದ್ದು ಒಂದೊಂದು ಕನಸು. ನಟಿಯಾಗಬೇಕೆಂದೆ ಎಲ್ಲರೂ ಸ್ಪರ್ಧೆಗೆ ಇಳಿದಿದ್ದಾರೆ. ಐವರಲ್ಲೂ ಎಲ್ಲರೂ ಸೂಪರ್ ಆಗಿನೇ ತಮ್ಮ ಅಭಿನಯ ತೋರಿಸಿದರು, ಗ್ರ್ಯಾಂಡ್ ಫಿನಾಲೆಯಲ್ಲಿ ಪಟ್ಟ ಸಿಗುವುದು ಒಬ್ಬರಿಗೆ ಮಾತ್ರ. ಆದರೆ ಅವಕಾಶದ ಬಾಗಿಲು ತೆರೆಯುವ ವೇದಿಕೆಯನ್ನಂತು ಜೀ ಕನ್ನಡ ಸೃಷ್ಟಿಸಿದೆ. ಅದು ಹೇಗೆ ಅಂತೀರಾ, ನಿರ್ದೇಶಕರನ್ನು ಕರೆಸಿರುವುದು.

ಸ್ಪರ್ಧಿಗಳಿಗೆ ತರುಣ್ ಹೇಳಿದ್ದೇನು?
ಈ ವಾರ ಐವರು ಫಿನಾಲೆ ತಲುಪಿದ್ದಾರೆ. ಗಗನಾ, ಪ್ರಿಯಾಂಕ, ಶ್ವೇತಾ ಭಟ್, ಆರಾಧನಾ ಭಟ್, ಧನುಶ್ರೀ. ಜನ ಕೂಡ ಇವರ ಅಭಿನಯಕ್ಕೆ ಮನಸೋತಿದ್ದರು. ಇದೀಗ ಗೆಸ್ಟ್ ಆಗಿ ಬಂದಿದ್ದ ನಾಲ್ವರು ನಿರ್ದೇಶಕರ ಮುಂದೆ ತಮ್ಮ ಪ್ರತಿಭೆಯನ್ನು ಹೊರ ಹಾಕಿ, ಫಿನಾಲೆಗೆ ಹೋಗಿದ್ದಾರೆ. ಈ ಸಂತಸದ ನಡುವೆ ಇನ್ನಷ್ಟು ಹಿಂಟ್ ಕೊಟ್ಟಿದ್ದಾರೆ ತರುಣ್ ಸುಧೀರ್. ಇಲ್ಲಿ ಬಂದಿರುವ ಎಲ್ಲಾ ನಿರ್ದೇಶಕರು ಒಂದೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದಾರೆ. ಎಲ್ಲವೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ನಿಮಗೂ ಅವಕಾಶ ಸಿಗಬಹುದು ಎಂದಿದ್ದಾರೆ.
ನಿರ್ದೇಶಕರ ಮುಂದಿನ ಸಿನಿಮಾ ಮಾಹಿತಿ
ಹೀಗೆ ಮಾತನಾಡುತ್ತಾ ಎಲ್ಲಾ ನಿರ್ದೇಶಕರ ವಿಶೇಷತೆಯನ್ನು ತರುಣ್ ಸುಧೀರ್ ಕೊಂಡಾಡಿದ್ದಾರೆ. ಶಶಾಂಕ್ ಅವರು ಪ್ರಜ್ವಲ್, ರಾಧಿಕಾ, ಯಶ್ ಅವರಿಂದ ಹಿಡಿದು ಮಯೂರಿ ತನಕವೂ ಲಾಂಚ್ ಮಾಡಿದ್ದಾರೆ. ಇಂಡಸ್ಟ್ರಿನಲ್ಲಿ ಸ್ಟ್ಯಾಂಡ್ ಆಗಿರುವಂತ ಎಷ್ಟೋ ನಟರನ್ನು ಅವರು ಲಾಂಚ್ ಮಾಡಿದ್ದಾರೆ. ಜಯತೀರ್ಥ ಸರ್ ಅವರು, ರಿಷಬ್ ಶೆಟ್ಟಿ ಅವರನ್ನ ಕಮರ್ಷಿಯಲ್ ಹೀರೋ ಆಗಿ ಲಾಂಚ್ ಮಾಡಿದವರೇ ಜಯತೀರ್ಥ ಸರ್. ಸಂತು ಈಗ ಕನ್ನಡ ಬಿಡಿ, ಹಿಂದಿಯಲ್ಲಿ ಒಂದು ಪ್ರಾಜೆಕ್ಟ್ ಮುಗಿಸಿದ್ದಾರೆ. ಪನ್ನಗ, ಬರೀ ಡೈರೆಕ್ಟರ್ ಅಲ್ಲ ನಿರ್ಮಾಪಕ ಕೂಡ ಎಂದು ಎಲ್ಲರ ಬಗ್ಗೆಯೂ ಹೇಳಿದ್ದಾರೆ.

ಮುಂದಿನ ಚಿತ್ರಗಳಲ್ಲಿ ಅವಕಾಶ?
ಈ ನಾಲ್ಕು ಜನ ಬಂದಿರುವುದರಿಂದ ಸ್ಪರ್ಧಿಗಳಿಗೂ ಸಿನಿಮಾದಲ್ಲಿ ಅವಕಾಶ ಸಿಗಬಹುದು ಎಂದಿದ್ದಾರೆ. ವಿಶೇಷ ಅತಿಥಿಯಾಗಿ ಬಂದಿದ್ದ ನಾಲ್ಕು ನಿರ್ದೇಶಕರು ಸ್ಪರ್ಧಿಗಳ ಅಭಿನಯ ನೋಡಿದ್ದಾರೆ. ಇದೊಂದು ರೀತಿಯಲ್ಲಿ ಆಡಿಷನ್ ಆಗಿಯೇ ಕನ್ವರ್ಟ್ ಆಗಿದೆ. ಯಾರು ಯಾವ ಪಾತ್ರಕ್ಕೆ ಹೊಂದಾಣಿಕೆಯಾಗಬಹುದೆಂದು ತಿಳಿದು ಅವರೇ ಆರಿಸಿಕೊಳ್ಳಬೇಕಿದೆ.
ಅವಕಾಶದ ಮಾತು ಕೇಳಿ ಸಂತಸ
ಇಷ್ಟು ವಾರಗಳ ಕಾಲ ಕೊಟ್ಟಂತ ಎಲ್ಲಾ ಟಾಸ್ಕ್‌ಗಳನ್ನು ಅಚ್ಚು ಕಟ್ಟಾಗಿ ಮಾಡುತ್ತಿರುವುದು ಯಾವುದೋ ಕನಸಿಗಾಗಿಯೇ. ನಾನು ನಟಿಯಾಗಬೇಕೆಂಬ ಆಸೆಗಾಗಿಯೇ. ಈಗ ನಿರ್ದೇಶಕರೆಲ್ಲ ಕಂಟೆಸ್ಟೆಂಟ್ ಅಭಿನಯ ಮೆಚ್ಚಿ ಅವಕಾಶ ನೀಡಿದರೆ ಅದಕ್ಕಿಂತ ಖುಷಿ ಮತ್ತೊಂದು ಇಲ್ಲ. ತರುಣ್ ಸುಧೀರ್ ಆ ರೀತಿ ಹೇಳಿದಾಕ್ಷಣ ಎಲ್ಲಾ ಕಂಟೆಸ್ಟೆಂಟ್ ಮುಖದಲ್ಲೂ ನಗು ಅರಳಿತ್ತು. ಅವಕಾಶ ಸಿಕ್ಕಿದರೆ ತುಂಬಾ ಖುಷಿ ಪಡುವ ಭಾವನೆಯೂ ಮನದಲ್ಲಿ ಕಾಣಿಸಿಕೊಂಡಿತ್ತು.


Click it and Unblock the Notifications











