Mahanati: ಸ್ವರ್ಗ ನಮ್ಮ ದುರ್ಗ; ನಿರ್ದೇಶಕರಿಂದಾನೇ ಹೇಳಿಸಿದ ಚಿತ್ರದುರ್ಗದ ಪ್ರತಿಭೆ ಗಗನಾ

By ಎಸ್ ಸುಮಂತ್

'ಮಹಾನಟಿ' ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ತಲುಪಿದೆ. ಒಳ್ಳೊಳ್ಳೆ ಸ್ಪರ್ಧಿಗಳು ಈ ಸಲ ಭಾಗಿಯಾಗಿದ್ದಾರೆ. ಶನಿವಾರ ಮತ್ತು ಭಾನುವಾರ ನಕ್ಕು ನಲಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಈ ಶೋ ವಿಶೇಷತೆಯಿಂದ ಕೂಡ ಕೂಡಿದೆ. ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರೆ ಆಗಿದ್ದಾರೆ. ಆ ಕಲೆಗೆ ಪರ್ಫೆಕ್ಟ್ ವೇದಿಕೆ ಮಾಡಿಕೊಟ್ಟಿದೆ ಜೀ ಕನ್ನಡ.

ಪ್ರತಿ ವಾರವೂ ರಿಯಾಲಿಟಿ ಶೋನಲ್ಲಿ ವಿಭಿನ್ನತೆ ಇರುತ್ತದೆ. ರಿಹರ್ಸಲ್ ಗೂ ಕಳುಹಿಸುತ್ತಾರೆ. ಈ ಬಾರಿಯ ಮಹಾನಟಿ ರಿಯಾಲಿಟಿನಲ್ಲಿ ಮಾಡಿರುವ ಹೋಂ ವರ್ಕ್ ಖಂಡಿತ ಎಷ್ಟೋ ಪ್ರತಿಭೆಗಳಿಗೆ ಸ್ಥಾನ ಸಿಗಬಹುದು. ಈ ವಾರ ಅವಕಾಶವನ್ನು ಮತ್ತಷ್ಟು ಹತ್ತಿರಕ್ಕೆ ತಂದಿದ್ದಾರೆ. ನಾಲ್ಕು ಜನ ಪಳಗಿದ ನಿರ್ದೇಶಕರೆದುರು ಪ್ರತಿಭೆಗಳಿಗೆ ನಟಿಸುವಂತ ಅವಕಾಶ ಸಿಕ್ಕಿದೆ. ಅದನ್ನ ಗಗನಾ ಬಿಟ್ಟು ಕೊಡುವ ಮಾತೇ ಇಲ್ಲ. ನಿರ್ದೇಶಕರು ನಕ್ಕು ನಲಿಯುವಂತೆ ಮಾಡಿದ್ದಾರೆ.

zee kannada reality show mahanati Written Update on July 7th episode

ಗಗನಾ ನಟನೆಗೆ ಫುಲ್ ಮಾರ್ಕ್ಸ್

ಇಂದಿನ ಮಹಾನಟಿ ವೇದಿಕೆಯಲ್ಲಿ ಗಗನಾ ಡಬ್ಬಲ್ ಆಕ್ಟಿಂಗ್ ಪ್ಲೇ ಮಾಡಿದ್ದಾರೆ. ಒಂದು ಕಡೆ ಫುಕ್ ಟ್ರೆಡಿಷನಲ್ ಹುಡುಗಿ. ಮತ್ತೊಂದು ಕಡೆ ಫುಲ್ ರೌಡಿ ಬೇಬಿ. ಎರಡು ನಟನೆಯನ್ನು ಒಂದೇ ವೇದಿಕೆಯಲ್ಲಿ ಮಾಡಿದ್ದು, ವಾವ್ ಎನಿಸಿಕೊಂಡಿದ್ದಾರೆ. ನಿರ್ದೇಶಕರಿಂದಾನೂ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಗಗನಾ ಮಾತಿಗೆ ಶಶಾಂಕ್ ಖುಷಿ

ಕಳೆದ ವರ್ಷವಷ್ಟೇ ರಿಲೀಸ್ ಆದ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದ ಸಕ್ಸಸ್ ಫುಲ್ ನಿರ್ದೇಶಕರಾದಂತ ಶಶಾಂಕ್ ಅವರು ಮಹಾನಟಿ ವೇದಿಕೆ ಮೇಲಿದ್ದರು. ಅವರಿಗೆ ಅನುಶ್ರೀ, ಗಗನಾ ಬಗ್ಗೆ ಪರಿಚಯ ಮಾಡಿಕೊಟ್ಟರು. ನೀವೇನೆ ಕೇಳಿ ಸರ್ ಪಟ್ ಅಂತ ಉತ್ತರ ಹೇಳಿ ಬಿಡುತ್ತಾಳೆ ಎನ್ನುವಾಗಲೇ, ಸರ್ ನೀವೂ ದುರ್ಗದವರು ತಾನೇ ಎಂದು ಗಗನಾ ಕೇಳಿದ್ದಾರೆ. ಅಷ್ಟಕ್ಕೆ ಖುಷಿಯಾದ ಶಶಾಂಕ್ ಅವರು, ನಾನೇ ಹೇಳೋಣ ಅಂತಿದ್ದೆ. ಅಷ್ಟರಲ್ಲಿ ನೀನೇ ಹೇಳಿಬಿಟ್ಟೆ ಎಂದಿದ್ದಾರೆ. ನಿರ್ದೇಶಕರೇ ಕಣ್ಣಮುಂದೆ ಇರುವಾಗ ದುರ್ಗದ ಬಗ್ಗೆ ಒಂದು ಮಾತಾದ್ರು ಹೇಳಿಸದೆ ಬಿಡುತ್ತಾರೆಯೇ. ಸ್ವರ್ಗ ನಮ್ಮ ದುರ್ಗ ಅಂತ ನಿರ್ದೇಶಕರ ಬಾಯಿಂದಾನೇ ಹೇಳಿಸಿದ್ದಾರೆ ಗಗನಾ.

zee kannada reality show mahanati Written Update on July 7th episode

ವೆಜಿಟೇರಿಯನ್ ಇಷ್ಟಪಡುವ ನಾನ್ ವೆಜ್

ಇನ್ನು ನೆಕ್ಸ್ಟ್ ಪನ್ನಗ ಅವರ ಬಳಿ ಬಂದಿದ್ದು, ಸರ್ ನಿಮ್ಮ 'ಫ್ರೆಂಚ್ ಬಿರಿಯಾನಿ' ವೆಜ್ ಅಥವಾ ನಾನ್ ವೆಜ್ ಅಂತ ಕೇಳಿದಾಗ, ನಿರ್ದೇಶಕ ಪನ್ನಗಾಭರಣ ಅವರು ಫುಲ್ ನಾನ್ ವೆಜ್ ಅಂತ ಹೇಳಿದ್ದಾರೆ. ಆಗ ಗಗನಾ ನಾನು ಪ್ಯೂರ್ ವೆಜ್ ಆಗಿದ್ದು ತುಂಬಾ ಇಷ್ಟಪಟ್ಟಂತ ಬಿರಿಯಾನಿ ಅಂದ್ರೆ ಅದು ಫ್ರೆಂಚ್ ಬಿರಿಯಾನಿ ಎಂದಿದ್ದಾರೆ. ಗಗನಾ ಮಾತಿಗೆ ಪನ್ನಗ ಅವರು ನಾಚಿ ನೀರಾಗಿದ್ದಾರೆ.

ವೇದಿಕೆ ಮೇಲೆಲ್ಲಾ ನಗು ನಗು

ಈ ವಾರ ಮಹಾನಟಿ ವೇದಿಕೆಗೆ ಸ್ಯಾಂಡಲ್‌ವುಡ್‌ನ ನಾಲ್ಕು ಜನ ನಿರ್ದೇಶಕರು ಬಂದಿದ್ದಾರೆ. ಜಯತೀರ್ಥ, ಶಶಾಂಕ್, ಪನ್ನಗಭಾರಣ, ತರುಣ್ ಸುಧೀರ್. ಗಗನಾ ಬಾರಿ ಈಗಾಗಲೇ ತರುಣ್ ಸುಧೀರ್ ಕಡೆಯಿಂದ ಸ್ಕ್ರಿಪ್ಟ್ ರೈಟರ್‌ಗೆ ಅಡ್ವಾನ್ಸ್ ಕೂಡ ಪಡೆದಿದ್ದಾರೆ. ತಮ್ಮದೇ ಶೈಲಿಯಲ್ಲಿ ಎಲ್ಲರನ್ನು ಸೆಳೆಯುವ ಗಗನಾ ಇಂದು ನಿರ್ದೇಶಕರ ಮೆಚ್ಚಿನ ಕಂಟೆಸ್ಟೆಂಟ್ ಆಗಿದ್ದಾರೆ. ವೇದಿಕೆ ಮೇಲಿದ್ದ ನಿರ್ದೇಶಕರನ್ನು ನಕ್ಕು ನಲಿಸಿದ್ದಾರೆ‌.

More from Filmibeat

English summary
zee kannada reality show mahanati Written Update on July 7th episode. Here is the details about Shashank said heaven is our durga.. Gagana got applause;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X