Mahanati: ಅಣ್ಣ-ತಂಗಿ ಆಗಿದ್ದ ಚಂದನಾ-ನವನೀತ್ ರೊಮ್ಯಾಂಟಿಕ್ ಸೀನ್!

By ಎಸ್ ಸುಮಂತ್

ಮಹಾನಟಿ ರಿಯಾಲಿಟಿ ಶೋ ನೋಡುವುದಕ್ಕೇನೆ ಖುಷಿ ಕೊಡುತ್ತೆ. ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯ ವಿಭಿನ್ನ ಪ್ರಯತ್ನವನ್ನೇ ಮುಂದಿಡುತ್ತಿದ್ದಾರೆ. ಪ್ರತಿಭೆಗಳಿಂದ ಕಲೆಯನ್ನು ಹೊರ ಹಾಕಿಸುವ ಯತ್ನ ನಡೆಯುತ್ತಿದೆ. ಈ ವಾರವಂತೂ ಎಲ್ಲರನ್ನು ರೆಟ್ರೋ ಸ್ಟೈಲ್ ಕಡೆಗೆ ಕರೆದುಕೊಂಡು ಹೋಗಿದ್ದಾರೆ.

ಸಾಂಗ್ಸ್ ಶೂಟ್ ಕಾನ್ಸೆಪ್ಟ್ ತೆಗೆದುಕೊಳ್ಳಲಾಗಿದೆ. ಕಳೆದ ಬಾರಿ ಫೋಟೋ ಶೂಟ್ ಕಾನ್ಸೆಪ್ಟ್‌ನಲ್ಲಿ ಎಲ್ಲರಿಗೂ ಮಾಡ್ರನ್ ಜೊತೆಗೆ ಟ್ರೆಡಿಷನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದರು. ಆಮೇಲೆ ಫೇಮಸ್ ನಟಿಯರ, ಫೇಮಸ್ ದೃಶ್ಯವನ್ನ ರೀ-ಕ್ರಿಯೇಟ್ ಮಾಡಿದ್ದರು. ಆ ಎಪಿಸೋಡ್ ಅಂತು ಅದ್ಭುತವಾಗಿತ್ತು. ಎಲ್ಲರೂ ನೆಚ್ಚಿನ ನಟಿಮಣಿಯರ ರೀತಿಯಲ್ಲಿಯೇ ಕಾಣಿಸುತ್ತಿದ್ದರು. ಈ ವಾರ ಅದಕ್ಕಿಂತ ಅದ್ಭುತ.

zee kannada reality show mahanati Written Update on June 16th episode

ಸಾಂಗ್ ಶೂಟ್ ಎಪಿಸೋಡ್

'ಮಹಾನಟಿ' ವೇದಿಕೆಯಲ್ಲಿ ಪ್ರತಿವಾರ ಕೂಡ ಹೊಸತೊಂದು ಕಾನ್ಸೆಪ್ಟ್ ಇಟ್ಟುಕೊಂಡು ಬರುತ್ತಾರೆ. ಅದರಲ್ಲಿ ವಿಭಿನ್ನತೆ, ವಿಶೇಷತೆ ಖಂಡಿತ ಇರುತ್ತದೆ. ಈ ವಾರ ಸಾಂಗ್ ಶೂಟ್ ಕಾನ್ಸೆಪ್ಟ್ ಅನ್ನು ಮಾಡಲಾಗಿದ್ದು, ಒಬ್ಬೊಬ್ಬ ಕಂಟೆಸ್ಟೆಂಟ್ ಒಂದೊಂದು ರೀತಿಯ ಸಾಂಗ್ ತೆಗೆದುಕೊಂಡಿದ್ದಾರೆ. ಆ ಸಾಂಗ್‌ನಲ್ಲಿ ನಟ-ನಟಿಯರ ವೇಷ ಭೂಷಣ ಹೇಗಿತ್ತೋ ಅದೆಲ್ಲವನ್ನು ಇಲ್ಲಿ ರೀ-ಕ್ರಿಯೇಟ್ ಮಾಡಿದ್ದಾರೆ. ಅದರಲ್ಲೂ ನವನೀತ್ ಹಾಗೂ ಚಂದನಾ ನಗುವ ನಯನಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಟ್ರೆಂಡ್ ಆಗಿದೆ ಥೀಮ್ ಫೋಟೋಶೂಟ್

ಇತ್ತಿಚೆಗೆ ಥೀಮ್ ಫೋಟೋಶೂಟ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಅದರಲ್ಲೂ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವಿಚಾರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಥೀಮ್ ಫೋಟೋಗ್ರಫಿ. ಹಳೇ ಹಾಡುಗಳಿಗೆ, ಭಾವನೆ ತುಂಬುತ್ತಾ ಹೆಜ್ಜೆ ಹಾಕುವುದು. ಇದೇ ಕಾನ್ಸೆಪ್ಟ್ ಈಗ 'ಮಹಾನಟಿ' ವೇದಿಕೆಯಲ್ಲೂ ನಳನಳಿಸುತ್ತಿದೆ. ಹಳೆ ಹಾಡುಗಳಿಗೆ ಅಭಿನಯದ ಮೂಲಕವೇ ಜೀವ ತುಂಬಿದ್ದಾರೆ ಮಹಾನಟಿಯರು. ನೋಡುಗರಿಗೂ ಈ ಕಾನ್ಸೆಪ್ಟ್ ಇಷ್ಟವಾಗಿದೆ. ಹೀಗಾಗಿಯೇ ರೆಟ್ರೋ ಸ್ಟೈಲ್‌ನ ಒಂದೊಂದು ವಿಡಿಯೋ ಕೂಡ ಮಿಲಿಯನ್ ಗಟ್ಟಲೇ ಓಡಿದೆ. ಲೈಕ್ಸ್ ಎಲ್ಲರೂ ಮಾಡ್ತಿದ್ದಾರೆ.

zee kannada reality show mahanati Written Update on June 16th episode

ಚಂದನಾ-ನವನೀತ್ ಸಖತ್ ನಟನೆ

ಈ ಹಾಡಿನಲ್ಲಿ ನವನೀತ್ ಮತ್ತು ಚಂದನಾ ಅದ್ಭುತವಾಗಿ ನಟಿಸಿದ್ದಾರೆ. ಈ ಹಾಡಿನಲ್ಲಿ ಹಳೇ ಬೆಂಗಳೂರನ್ನೇ ಸೃಷ್ಟಿಸಿದ್ದಾರೆ. ಹಳೆ ಕ್ಯಾಮರಾದಲ್ಲಿ ಹೇಗೆ ದೃಶ್ಯ ಸೆರೆಯಾಗುತ್ತಿತ್ತೋ ಅದೇ ರೀತಿಯ ದೃಶ್ಯ ಇದರಲ್ಲಿ ಸೆರೆಯಾಗಿದೆ. ಚಂದನಾ ಕೂಡ ಸೀರೆಯುಟ್ಟು, ನವನೀತ್ ಜೊತೆಗೆ ವಿಧಾನಸೌಧದ ಮುಂದೆ, ಎಂಜಿ ರೋಡಲ್ಲಿ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ನಗುವ ನಯನಾ ಮಧುರ ಮೌನ.. ಹಾಡು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ನೋಡುಗರು ಅವರ ಅಭಿನಯಕ್ಕೆ ಮನಸೋತಿದ್ದಾರೆ.

ಅಣ್ಣ-ತಂಗಿ ಇಲ್ಲಿ ಜೋಡಿ

ಚಂದನಾ ಹಾಗೂ ನವನೀತ್ ಅವರ ಈ ರೀತಿಯ ಪರ್ಫಾಮೆನ್ಸ್‌ಗೆ ತೀರ್ಪುಗಾರರು ಕೂಡ ಮನಸೋತಿದ್ದಾರೆ. ಪ್ರತಿಯೊಂದು ಫ್ರೇಮ್ ಕೂಡ ಐಕಾನಿಕ್ ಆಗಿತ್ತು. ಕಣ್ಣುಗಳ ಮೂಲಕವೇ ಚಂದನಾ ತುಂಬಾ ಮಾತನಾಡಿದ್ದು, ಹಳೇ ಹಾಡಿಗೂ ಇದಕ್ಕೂ ಕಂಪೇರ್ ಮಾಡುವುದಕ್ಕೇನೆ ಆಗ್ತಿಲ್ಲ. ಅಷ್ಟು ಚೆನ್ನಾಗಿದೆ‌ ನಿಮ್ಮ ಅಭಿನಯ ಎಂದು ಪ್ರೇಮಾ ಹೊಗಳಿದ್ದಾರೆ. ಎಲ್ಲರ ಹೊಗಳಿಕೆಯನ್ನು ಕೇಳಿ ಚಂದನಾ ಕಣ್ಣೀರಾಕಿದ್ದಾರೆ, ಭಾವುಕರಾಗಿದ್ದಾರೆ. ಈ ಹಾಡು ಅಭಿಮಾನಿಗಳಿಗೂ ಕೂಡ ಇಷ್ಟವಾಗಿದೆ. ಆದರೆ ಇದೇ ನವನೀತ್ ಮತ್ತು ಚಂದನಾ ಒಟ್ಟಿಗೆ ಅಭಿನಯಿಸಿದ ಧಾರಾವಾಹಿಯೊಂದು ನೆನಪಾಗಿದೆ. ಎಲ್ಲರು ಕನ್ಯಾದಾನ ಧಾರಾವಾಹಿಯಲ್ಲಿ ನೀವೂ ಅಣ್ಣ-ತಂಗಿ ಆಗಿದ್ರಿ ಅಲ್ವಾ? ಎಂದಿದ್ದಾರೆ.

More from Filmibeat

English summary
zee kannada reality show mahanati Written Update on June 16th episode. Here is the details about Song shoot in Mahanati reality show;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X