mahanati: ಮೈಮೇಲೆ ಬೆಂಕಿ ಬಿದ್ರು ಹೆದರಲ್ಲ ತರುಣ್ ಸುಧೀರ್; ಆ ಟ್ರಿಕ್ಸ್ ಏನು ಗೊತ್ತಾ..?

By ಎಸ್ ಸುಮಂತ್

ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಶೋ ಬರ್ತಿದೆ. ಈ ಶೋ ನಲ್ಲಿ ಭಾಗಿಯಾದ ಕಲಾವಿದರೆಲ್ಲಾ ಒಬ್ಬೊಬ್ಬರು ಒಂದೊಂದು ಪ್ರತಿಭೆಯನ್ನು ಹೊಂದಿರುವವರು. ವೇದಿಕೆ ಮೇಲೆ ಹತ್ತಿದರೆ ಶಿಳ್ಳೆ, ಚಪ್ಪಾಳೆಯನ್ನು ಪಡೆಯದೆ ಇರುವುದಿಲ್ಲ. ಜೊತೆಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಿದೆ.

ಇಷ್ಟು ದಿನ ಯಾವುದೇ ರಿಯಾಲಿಟಿ ಶೋಗಳು ಬಂದರು, ವೇದಿಕೆ ಮೇಲಷ್ಟೇ ಅವರ ಪರ್ಫಾಮೆನ್ಸ್ ಕಾಣಿಸುತ್ತಾ ಇತ್ತು. ಆದರೆ ಈ ಬಾರಿಯ ಮಹಾನಟಿಯ ರಿಯಾಲಿಟಿ ಶೋ ಬೇರೆಯದ್ದೇ ರೀತಿ ಇದೆ. ಪ್ರತಿಭಾವಂತರನ್ನೇ ಹುಡುಕಿರುವ ಶೋನಲ್ಲಿ, ಒಂದೊಂದು ವಾರ ಒಂದೊಂದು ರೀತಿಯ ಕಲೆಯ ಪ್ರದರ್ಶನವಾಗುತ್ತದೆ. ಈಗಾಗಲೇ ಕಾಮಿಡಿ, ಸೀರಿಯಸ್ ನಟನೆಯನ್ನು ಮಾಡಿ ತೋರಿಸಿರುವುದರ ಜೊತೆಗೆ ಹಳೆಯ ದಿನಗಳನ್ನಹ ರಿಕ್ರಿಯೇಟ್ ಮಾಡಿದ್ದಾರೆ. ಈ ವಾರ ಫುಲ್ ಮಾಸ್ ಎಪಿಸೋಡ್ ಜನರ ಮುಂದೆ ಬರಲಿದೆ.

Zee kannada reality show mahanati Written Update on June 23rd episode

ಬೆಂಕಿಗೆಲ್ಲಾ ಜಗ್ಗಲ್ಲ ಸುಧೀರ್ ಮಗ

'ಕಾಟೇರ'ದಂತ ಸಕ್ಸಸ್ ಸಿನಿಮಾ ನೀಡದ ತರುಣ್ ಸುಧೀರ್ ಇದ್ದಕ್ಕಿದ್ದ ಹಾಗೇ ಕಿರುತೆರೆಗೆ ಬಂದು ಬಿಟ್ಟಿದ್ದಾರೆ. ಮಹಾನಟಿ ವೇದಿಕೆಯಲ್ಲಿ ತರುಣ್ ಸುಧೀರ್ ಕೂಡ ಜಡ್ಜ್ ಆಗಿದ್ದಾರೆ. ಅವರು ತೆಗೆದಿರುವುದು ಮಾಸ್ ಸಿನಿಮಾಗಳನ್ನೇ. ಅಲ್ಲು ಮಚ್ಚು, ಲಾಂಗು ಝಳಪಿಸುವುದರ ಜೊತೆಗೆ ವಿಲನ್ ಗೆ ಬೆಂಕಿಯೂ ಹೊತ್ತಿಕೊಳ್ಳುತ್ತೆ. ಈಗ ವೇದಿಕೆ ಮೇಲೆ ತರುಣ್ ಸುಧೀರ್ ಮೈಮೇಲೆ ಬೆಂಕಿ ಹೊತ್ತಿಕೊಂಡರು ತಲೆ ಕೆಡಿಸಿಕೊಳ್ಳದೆ ಓಡಾಡಿದ್ದಾರೆ.

ಬೆಂಕಿ ಅಂದ್ರೆ ನಿಶ್ವಿಕಾಗಿಲ್ಲ ಭಯ!

ಇನ್ನು ನಿಶ್ವಿಕಾ ನಾಯ್ಡು ಅವರನ್ನು ತರುಣ್ ಸುಧೀರ್ ವೇದಿಕೆ ಮೇಲೆ ಕರೆದಿದ್ದಾರೆ. ಅವರ ಜಾಕೆಟ್‌ಗೂ ಬೆಂಕಿ ಹಾಕಿಸಿದ್ದಾರೆ. ನಿಶ್ವಿಕಾ ನಾಯ್ಡು ಹೆದರುವ ಸೀನ್ ಇಲ್ಲವೇ ಇಲ್ಲ. ಹೇಯ್ ಇದಾ..? ಅಂತ ಕೈನಲ್ಲೇ ಬೆಂಕಿಯನ್ನು ತಳ್ಳಿದ್ದಾರೆ. ಅದು ಕೈಗೂ ತಾಗಿಲ್ಲ, ಸುಟ್ಟು ಇಲ್ಲ‌. ಮಾಸ್ ಲುಕ್‌ನಲ್ಲಿ ಬೆಂಕಿ ಹಾರಿಸಿದ ನಿಶ್ವಿಕಾ ನಾಯ್ಡುಗೆ ಚಪ್ಪಾಳೆ ಬಂದಿದೆ.

Zee kannada reality show mahanati Written Update on June 23rd episode

ಸಿನಿಮಾದ ಬೆಂಕಿ ಬಗ್ಗೆ ಬೇಡ ಭಯ

ಸಿನಿಮಾದಲ್ಲಿ ಫೈಟ್ ಸೀನ್‌ಗಳನ್ನ ನೋಡಿದಾಗ ಅದೆಷ್ಟು ಹೆಲ್ಮೆಟ್ ಹೊಡೆದು ಹೋಗುತ್ತವೋ, ಅದೆಷ್ಟೂ ಲಾಂಗು ಮಚ್ಚು ಸೌಂಡ್ ಮಾಡುತ್ತವೋ ಅಲ್ವಾ. ಒಮ್ಮೊಮ್ಮೆ ಟೈಯರ್‌ಗೆ ಹಂಚಿದ ಬೆಂಕಿ ಮನುಷ್ಯನಿಗೂ ಹೊತ್ತಿಕೊಂಡು ಬಿಡುತ್ತೆ. ಹೊರಗೆ ಕೂತು ನೋಡುವ ನಮಗೆ ಯಪ್ಪಾ ಏನಿದು ಬೆಂಕಿ ಹೊತ್ತಿಕೊಂಡ್ರು ಸುಡಲ್ವಾ ಇವರಿಗೆ ಎಂಬ ಭಯ ನಮಗೆ ಆಗುತ್ತೆ. ಆದರೆ ಅದು ನಿಜವಾದ ಬೆಂಕಿಯೇ ಆದರೂ ಮನುಷ್ಯನನ್ನು ಸುಡುವಷ್ಟು ಬೆಂಕಿ ಅಲ್ಲ‌. ಹೀಗಾಗಿ ಯಾವ ಆರ್ಟಿಸ್ಟ್ ಕೂಡ ಬೆಂಕಿಗೆ ಹೆದರಲ್ಲ.

ಬೆಂಕಿ ಸೀಕ್ರೆಟ್ ಹೇಳಿದ ಮಾಸ್ಟರ್

ವೇದಿಕೆಯಲ್ಲಿದ್ದ ಮಾಸ್ಟರ್ ಅನ್ನು ಕರೆದ ಅನುಶ್ರೀ ಈ ಬೆಂಕಿಯ ಸೀಕ್ರೆಟ್ ರಿವಿಲ್ ಮಾಡಿಸಿದ್ದಾರೆ. ಬೆಂಕಿ ಹಚ್ಚುವುದಕ್ಕೂ ಮುನ್ನ ಒಂದು ಜೆಲ್ ಅಪ್ಲೈ ಮಾಡಲಾಗುತ್ತದೆ. ಆ ಜೆಲ್ ಹಾಕಿದರೆ ಬೆಂಕಿ ಹತ್ತಿಕೊಳ್ಳುತ್ತೆ, ಆದರೆ ದೇಹಕ್ಕೆ ತಾಗುವುದಿಲ್ಲ. ಇದನ್ನು ವೇದಿಕೆ ಮೇಲೆ ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಕೂಡ ಟ್ರೈ ಮಾಡಿದರು. ಇನ್ಮೇಲೆ ಸಿನಿಮಾದಲ್ಲಿ ಬೆಂಕಿ ಹೊತ್ತಿಕೊಂಡ ಸೀನ್ ಬಂದರೂ ನೋಡುಗರು ಹೆದರಿಕೊಳ್ಳುವುದಿಲ್ಲ‌. ಯಾಕಂದ್ರೆ ಆ ಬೆಂಕಿಯನ್ನ ಕೈಯಿಂದಾನೇ ಆರಿಸಬಹುದು.

More from Filmibeat

English summary
zee kannada reality show mahanati Written Update on June 23rd episode. Here is the details about fire secret reveal of the movie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X