Mahanati: ರಾಧಿಕಾ ಪಂಡಿತ್ ಪಾತ್ರ ಮಾಡುವುದಕ್ಕೆ ಹೋಗಿ 20‌ ಟೇಕ್ ತೆಗೆದುಕೊಂಡ ಪ್ರಿಯಾಂಕ!

By ಎಸ್ ಸುಮಂತ್

'ಮಹಾನಟಿ' ವೇದಿಕೆಯಲ್ಲಿ ಮಹಾಪ್ರತಿಭೆಗಳೇ ಇದ್ದಾರೆ. ಇದು ಪ್ರತಿಭೆಗಳ ಅನಾವರಣಕ್ಕೆ ಮಾತ್ರ ವೇದಿಕೆಯಾಗಿಲ್ಲ. ಕಂಪ್ಲೀಟ್ ಮನರಂಜನೆಯ ವೇದಿಕೆಯಾಗಿದೆ. ನಟಿಯಾರಾಗಬೇಕೆಂಬ ಕನಸು ಹೊತ್ತು, ಹೆಣ್ಣು ಮಕ್ಕಳು ವೇದಿಕೆ ಏರಿದ್ದಾರೆ. ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರೇ. ಹೀಗಾಗಿಯೇ ಒಳ್ಳೆ ಮನರಂಜನೆಯ ಪ್ಯಾಕ್ ಜನಕ್ಕೆ ಸಿಗಲಿದೆ.

ವೇದಿಕೆಯಲ್ಲಿ ನಟಿಸುವುದಕ್ಕೆ ಅಂತ ಬರೀ ಸ್ಕಿಟ್‌ಗಳನ್ನಷ್ಟೇ ನೀಡುವುದಿಲ್ಲ. ಒಂದೊಂದು ವಾರವೂ ವಿಭಿನ್ನತೆ ಇರುತ್ತದೆ. ಸ್ಪರ್ಧಿಗಳಿಗೇನೆ ಹುಮ್ಮಸ್ಸು ಹೆಚ್ಚಾಗುವಂತ ನಟನಾ ರೀತಿ ಸಿದ್ಧವಾಗಿರುತ್ತದೆ. ಒಳ್ಳೊಳ್ಳೆ ಫೋಟೋಶೂಟ್ ಮಾಡಿಸುತ್ತಾರೆ, ಒಳ್ಳೊಳ್ಳೆ ಊರುಗಳಿಗೆ ಕರೆದುಕೊಂಡು ಹೋಗಿ ಶೂಟ್ ಮಾಡಿಸುತ್ತಾರೆ. ವಿಭಿನ್ನತೆ ಇರುತ್ತದೆ. ಹೀಗಾಗಿಯೇ ಎಲ್ಲರು ಖುಷಿಯಿಂದಾನೇ ಅಭಿನಯಿಸುತ್ತಾರೆ. ಈ ವಾರವಂತು ಒಬ್ಬರಿಗೆ ಒಂದು ಸಿನಿಮಾದ ನಟಿಯರ ಪಾತ್ರವನ್ನು ನೀಡಿದ್ದಾರೆ.

Zee kannada reality show mahanati Written Update on June 2nd episode

ರಾಧಿಕಾ ಪಂಡಿತ್ ಪಾತ್ರದಲ್ಲಿ ಪ್ರಿಯಾಂಕ

ಶನಿವಾರ ಮತ್ತು ಭಾನುವಾರ ಮಹಾನಟಿ ವೇದಿಕೆಯಲ್ಲಿ ತುಂಬಾ ಸ್ಪೆಷಲ್. ಯಾಕಂದ್ರೆ ಎಲ್ಲರಿಗೂ ಒಂದು ಸಿನಿಮಾ, ಆ ಸಿನಿಮಾದಲ್ಲಿ ನಟಿಯ ಪಾತ್ರವನ್ನು ರೀ- ಕ್ರಿಯೇಟ್ ಮಾಡಬೇಕಿದೆ. ಅದರಂತೆ ಪ್ರಿಯಾಂಕ ಅವರಿಗೆ ರಾಧಿಕಾ ಪಂಡಿತ್ ಅವರ ಪಾತ್ರ ಸಿಕ್ಕಿದೆ. ಹುಡುಗರು ಸಿನಿಮಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಂದಾಸ್ ಆಗಿ ಎಂಟ್ರಿ

'ಹುಡುಗರು' ಸಿನಿಮಾದಲ್ಲಿ ರಾಧಿಕಾ ಪಂಡಿತ್ ತಿಂಡಿಪೋತಿ ಆಗಿದ್ದರು. ಲಂಗಾ-ದಾವಣಿ ಹಾಕಿಕೊಂಡು, ಟಿವಿಎಸ್‌ ಎಕ್ಸ್‌ಎಲ್ ಗಾಡಿ ಏರಿ, ಬಾಯಿಗೆ ಯಾವಾಗಲೂ ಏನಾದರು ಎಸೆದುಕೊಂಡು ತಿನ್ನುತ್ತಾ ಸಾಗುತ್ತಾರೆ. ಸಿನಿಮಾದಲ್ಲಿ ದೊಡ್ಡ ತಿಂಡಿಪೋತಿಯಾಗಿದ್ದಾರೆ. ಇದೇ ಪಾತ್ರ ಈಗ ತೆರೆಮೇಲೆ ರೀ-ಕ್ರಿಯೇಟ್ ಆಗಿದೆ. ಪ್ರಿಯಾಂಕ ಲಂಗ-ದಾವಣಿ ಹಾಕಿ, ಲೂನಾ ಏರಿದ್ದಾರೆ. ಆದರೆ ಈ ಪರ್ಫೆಕ್ಟ್ ಪಿಕ್ಚರ್‌ಗೂ ಮುನ್ನ ಪ್ರಿಯಾಂಕ ಟೇಕ್ ತೆಗೆದುಕೊಂಡಿದ್ದು, 20 ಸಲ. ಅದು ಮನೆಯಿಂದ ಹೊರಗೆ ಬರುವುದಕ್ಕೆ ಮಾತ್ರ. ಇನ್ನು ಫಸ್ಟ್ ಟೈಮ್ ಲಂಗಾ-ದಾವಣಿ ಹಾಕಿ, ಅದರಲ್ಲೂ ಟಿವಿಎಸ್‌ ಎಕ್ಸ್‌ಎಲ್ ಓಡಿಸುತ್ತಾ ಇದ್ದೀನಿ ಎಂದಿದ್ದಾರೆ. ಆದರೆ ಫೈನಲ್ ವಿಟಿ ಮಾತ್ರ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ‌.

ಪ್ರಿಯಾಂಕ ಹಿಂದೆ ಬಿದ್ದ ವಿಶ್ವ

ಇನ್ನು ಇದೇ ವೇದಿಕೆಗೆ 'ಲಕ್ಷ್ಮೀ ನಿವಾಸ' ಧಾರಾವಾಹಿಯ ವಿಶ್ವ ಕೂಡ ಬಂದಿದ್ದಾನೆ. ಆಂಕರ್ ಅನುಶ್ರೀ, ವಿಶ್ವ ನಿಮ್ಗೆ ಜಾಹ್ನವಿ ಅಂತೂ ಸಿಗಲಿಲ್ಲ. ಇಲ್ಲಿ 'ಮಹಾನಟಿ' ವೇದಿಕೆಯಲ್ಲಿ ಯಾರು ಇಷ್ಟ ಎಂದು ಕೇಳಿದ್ದಾರೆ. ಆಗ ವಿಶ್ವ, ಪ್ರಿಯಾಂಕರ ಹೆಸರನ್ನು ಹೇಳಿದ್ದಾನೆ.‌ ವೇದಿಕೆ ಮೇಲೆ ಇದ್ದವರೆಲ್ಲ ಜೋರು ಚಪ್ಪಾಳೆ ತಟ್ಟಿದ್ದಾರೆ. ಯಾಕೆ ಪ್ರಿಯಾಂಕ ಇಷ್ಟ ಎಂದು ಕೇಳಿದರೆ, ಅವರು ನೋಡುವುದಕ್ಕೆ ಚೆನ್ನಾಗಿದ್ದಾರೆ. ಹುಡುಗರಿಗೆ ಇನ್ನೇನು ಬೇಕು ಹೇಳಿ ಎಂದಿದ್ದಾರೆ. ಬಳಿಕ 'ಮುಂಗಾರು ಮಳೆ' ಡೈಲಾಗ್ ಹೇಳಿ ಪ್ರಿಯಾಂಕರನ್ನು ಇಂಪ್ರೆಸ್ ಮಾಡಿದ್ದಾರೆ.

Zee kannada reality show mahanati Written Update on June 2nd episode

ಟಿವಿಎಸ್‌ ಎಕ್ಸ್‌ಎಲ್ ಓಡಿಸಿದ ರಮೇಶ್

ಇನ್ನು ಕೆಲವೊಂದು ಮಹತ್ವದ ಪಾತ್ರಗಳನ್ನು ಸ್ಪರ್ಧಿಗಳು ಮಾತ್ರ ರೀ-ಕ್ರಿಯೇಟ್ ಮಾಡುವುದಿಲ್ಲ. ತೀರ್ಪುಗಾರರು ಕೂಡ ಇನ್ವಾಲ್ ಆಗ್ತಾರೆ. ಇದೀಗ ರಾಧಿಕಾ ಪಂಡಿತ್ ಓಡಿಸಿದ್ದ ಲೂನಾವನ್ನು ಪ್ರಿಯಾಂಕ ಓಡಿಸಿಕೊಂಡು ಬಂದಿದ್ದರು. ವೇದಿಕೆ ಮೇಲೆ ಆ ಟಿವಿಎಸ್‌ ಎಕ್ಸ್‌ಎಲ್ ಸೆಂಟರ್ ಆಫ್ ಅಟ್ರಾಕ್ಷನ್.‌ ಈ ಗಾಡಿ ಮೇಲೆ ರಮೇಶ್ ಅರವಿಂದ್ ಅವರಿಗೂ ಮನಸ್ಸಾದಂತೆ ಕಂಡಿದೆ. ಅನುಶ್ರೀ ಅವರು ಕರೆದ ಕೂಡಲೇ ಓಡಿ ಬಂದು ಟಿವಿಎಸ್‌ ಎಕ್ಸ್‌ಎಲ್ ಓಡಿಸಿದ್ದಾರೆ.

More from Filmibeat

English summary
Kannada reality show mahanati latest episode. Here is the details about Priyanka took twenty re-takes to recreate the role of Radhika Pandit;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X