Mahanati: ಸಿಂಚನಾಗೆ ಮಾವನ ಮಗಳೇ ಗೊತ್ತಿಲ್ವಾ? ಡೈರೆಕ್ಟರ್‌ಗಿಂತ ನೋಡುಗರೇ ಬುದ್ದಿವಂತರು ಏನ್ ಅಂತೀರಾ..?
ಧಾರಾವಾಹಿಗಳಲ್ಲಿ ಕೆಲವೊಂದು ಸಲ ರಿಯಾಲಿಟಿಗೆ ಹತ್ತಿರವೇ ಇರಲ್ಲ. ಆ ರೀತಿಯ ಸೀನ್‌ಗಳನ್ನೆಲ್ಲ ಶೂಟ್ ಮಾಡಿ ಬಿಡುತ್ತಾರೆ. ಕೌಟುಂಬಿಕ ಧಾರಾವಾಹಿಗಳೆಂದರೆ ಕೊಂಚ ರಿಯಾಲಿಟಿಗೆ ಕನೆಕ್ಟ್ ಇರಬೇಕು. ಈಗಂತು ನೋಡುಗರು ತುಂಬಾ ಬುದ್ದಿವಂತರಿರುತ್ತಾರೆ. ಇವತ್ತಿನ ಕಥೆಯ ಎಳೆಯನ್ನು ಇಟ್ಟುಕೊಂಡು ನಾಳೆ ಯಾವ ರೀತಿ ಕಥೆ ಟರ್ನ್ ತೆಗೆದುಬಹುದು ಎಂಬುದನ್ನು ಊಹೆ ಮಾಡುವ ಬುದ್ದಿವಂತರ ಕಾಲವಿದು. ಆದರೆ ನಿರ್ದೇಶಕರೇನಾದರೂ ಹುಮ್ಮಸ್ಸಲ್ಲಿ ಅದ್ದೂರಿತನ ತಂದಿಟ್ಟರೆ ಕಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆ ಮಾಡಿಬಿಡುತ್ತಾರೆ.
ಸದ್ಯ 'ಮಹಾನಟಿ'ಯ ಕ್ವಾರ್ಟರ್ ಫಿನಾಲೆ ನಡೆಯುತ್ತಿದೆ. ಈ ರೌಂಡ್‌ನಲ್ಲಿ ಐದು ಜನರಿಗೆ ಮಾತ್ರ ಅವಕಾಶವಿರಲಿದ್ದು ನಾಲ್ಕು ಜನ ಪಯಣ ಮುಗಿಸಲಿದ್ದಾರೆ. ಅದಕ್ಕೂ ಮುನ್ನ ಈ ವಾರ ಸೀರಿಯಲ್ ಸೆಟ್‌ಗಳಿಗೆ ಹೋಗುವ ಟಾಸ್ಕ್ ನೀಡಲಾಗಿದೆ. ಅಲ್ಲಿಯೇ ರಿಯಾಲಿಟಿಗಿಂತ ಬೇರೆಯದ್ದೇ ತೋರಿಸಲಾಗಿದೆ.

ಲಕ್ಷ್ಮೀ ನಿವಾಸ ಸೆಟ್‌ಗೆ ಹೋದ ಗಗನಾ
'ಮಹಾನಟಿ' ರಿಯಾಲಿಟಿ ಶೋನಲ್ಲಿ ಈ ವಾರ ಸ್ಪರ್ಧಿಗಳು ಒಂದೊಂದು ಸೀರಿಯಲ್ ಸೆಟ್‌ಗೆ ಹೋಗಿ ರಿಯಲ್ ಆಗಿ ಆಕ್ಟ್ ಮಾಡುವಂತ ಸವಾಲು ಇತ್ತು. ಅದರಂತೆ ಗಗನಾ ಲಕ್ಷ್ಮೀ ನಿವಾಸ ಸೆಟ್‌ಗೆ ತೆರಳಿದ್ದರು. ಹೋದ ಕೂಡಲೇ ಲಕ್ಷ್ಮೀದೇವಿ ಅವರಿಂದ ಆಶೀರ್ವಾದ ಪಡೆದು, ಮನೆಯವರ ಜೊತೆ ಹಾಡು ಹರಟಿ, ಶ್ವೇತಾ ಅವರನ್ನು ಕಣ್ತುಂಬಿಕೊಂಡು ಹೊಗಳಿ ಬಂದರು.
ಗಗನಾ ಗೌಡ್ರ ಮಾವನ ಮಗಳಂತೆ
ಗಗನಾಗೆ ಕೊಟ್ಟಿದ್ದ ಚಾಲೆಂಜ್ ಅಂದ್ರೆ ಗೌಡ್ರು ಪ್ರೀತಿ ಮಾಡುತ್ತಿರುವ ಭಾವನಾಗೆ ಸಿದ್ದೇಗೌಡ್ರ ಪ್ರೀತಿಯ ವಿಚಾರ ಹೇಳಬೇಕು. ಹೀಗಾಗಿ ಗಗನಾ ದೇವಸ್ಥಾನಕ್ಕೆ ಹೋಗಿ ಇಬ್ಬರ ಹೆಸರಲ್ಲಿ ಪೂಜೆ ಬೇರೆ ಮಾಡಿಸಿಕೊಂಡು ಬಂದ್ರು. ಮನೆ ಒಳಗೆ ಹೋದ ಮೇಲೆ ಭಾವನಾಳನ್ನು ನೋಡಿ ಗಗನಾ ಫುಲ್ ಖುಷಿ. ದಂತದ ಗೊಂಬೆ ಇದ್ದಂಗೆ ಅವ್ರೆ ನಮ್ ಹುಡುಗಿ ಅಂತ ನಮ್ ಗೌಡ್ರು ಹೇಳ್ತಾ ಇದ್ರು ಅಂತ ಹೇಳಿ ಗಗನಾ, ಗೌಡ್ರನ್ನ ತಗಲಾಕಿಸಿ ಬಿಟ್ಟರು.

ಸಿಂಚನಾಗೆ ಗಗನಾ ಗೊತ್ತೇ ಇಲ್ವಾ
ಮನೆ ಒಳಗೆ ಗಗನಾ ಎಂಟ್ರಿ ಆದಾಗ ಸಿಂಚನಾ ಕಡೆಯಿಂದ ನೋ ರಿಯಾಕ್ಷನ್. ಪರಿಚಯವೇ ಇಲ್ಲವೇನೋ ಎಂಬಂತೆಯೇ ವರ್ತಿಸಿದಳು. ಸಿದ್ದೇಗೌಡ್ರು ಹಾಗೂ ಸಿಂಚನಾ ಸ್ವಂತ ಅಕ್ಕ ತಮ್ಮ. ಮಾವನ ಮಗಳಾದರೆ ಸಿಂಚನಾಗೆ ಗೊತ್ತೆ ಆಗಲಿಲ್ವಾ? ಎಂಬುದು ಪ್ರಶ್ನೆ. ಹಾಗೇ ಎಲ್ಲರನ್ನು ನಗಿಸಿದಾಗ, ಭಾವನಾಳ ಜೊತೆಗೆ ಮಾತನಾಡಿದಾಗ, ನೀವೂ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಅಂತ ಸಿಂಚನಾ ಹೇಳಿದಳು.
ಡೈರೆಕ್ಟರ್ ನ ಪ್ರಶ್ನಿಸಿದ ವೀಕ್ಷಕರು
ಒಂದು ದಿನದ ವರ್ಕ್ ಶಾಪ್‌ಗಾಗಿಯೇ 'ಮಹಾನಟಿ' ಕಲಾವಿದರನ್ನು ಸೀರಿಯಲ್ ಶೂಟಿಂಗ್ ಸ್ಪಾಟ್‌ಗೆ ಕಳುಹಿಸಲಾಗಿತ್ತು. ಇವತ್ತಿನ ಗಗನಾ ಹಾಗೂ ಸಿದ್ದೇಗೌಡ್ರ ದೃಶ್ಯ ಸೀರಿಯಲ್‌ನಲ್ಲೇನು ಪ್ರಸಾರ ಆಗಲ್ಲ. ಆದರೆ ವೀಕ್ಷಕರ ಪ್ರಶ್ನೆ ಬೇರೆಯೇ ಇದೆ. ವರ್ಕ್ ಶಾಪ್‌ಗೇ ತೋರಿಸುವುದಾದರೂ ರಿಯಾಲಿಟಿಗೆ ಹತ್ತಿರವಿರುವಂತೆ ತೋರಿಸಿ. ಸಿಂಚನಾ ಹಾಗೂ ಸಿದ್ದೇಗೌಡ್ರು ಅಕ್ಕ ತಮ್ಮ ಆದ ಮೇಲೆ ಗಗನಾ ಮಾವನ ಮಗಳು ಎಂದು ಹೇಳುವಾಗ ಸಿಂಚನಾ ರಿಯಾಕ್ಷನ್ ಯಾಕೆ ಆಗಿತ್ತು. ಹಾಗಾದ್ರೆ ಸಿಂಚನಾಗೆ ಗಗನಾ ಮಾವನ ಮಗಳು ಎಂಬುದೇ ಗೊತ್ತಿಲ್ವಾ ಎಂದೆಲ್ಲಾ ಪ್ರಶ್ನೆ ಕೇಳುತ್ತಿದ್ದಾರೆ.


Click it and Unblock the Notifications











