ತರುಣ್ - ಸೋನಲ್ ಮದುವೆ ಗುಸುಗುಸು; ಮಾತಲ್ಲೇ ರೊಮ್ಯಾಂಟಿಕ್ ಆಗ್ಬಿಟ್ರು ಡೈರೆಕ್ಟರ್
ತರುಣ್ ಸುಧೀರ್ ಮದುವೆ ಮಾಡಬೇಕು ಎಂಬುದು ಅವರ ತಾಯಿ ಮಂಗಳಾ ಸುಧೀರ್ ಅವರ ಬಹು ದಿನದ ಕನಸು. ಈ ಆಸೆಯನ್ನು ಹಲವು ವೇದಿಕೆಗಳಲ್ಲಿ ಅವರು ಹೇಳಿಕೊಂಡಿದ್ದಾರೆ. ಆ ಕಾಲ ಈಗ ಕೂಡಿ ಬಂದಿದೆ ಎನ್ನುತ್ತಿದೆ ಗಾಂಧಿನಗರ. ಗುರು ಬಲ ಕೂಡಿ ಬಂದರೆ ಕಂಕಣ ಭಾಗ್ಯಾ ತಾನಾಗೇ ಒದಗಿ ಬರಲಿದೆಯಂತೆ. ತರುಣ್ ಸುಧೀರ್ ಅವರಿಗೂ ಕಂಕಣ ಕಟ್ಟುವ ಸಮಯ ಬಂದಾಗಿದೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಅದೇ ಸುದ್ದಿ ಹರಿದಾಡುತ್ತಿದೆ.
ತರುಣ್ ಸುಧೀರ್ ಅವರಿಗೆ ಹುಡುಗಿ ಹೇಗಿರಬೇಕು ಎಂದು ಕೇಳಿದಾಗೆಲ್ಲಾ ಹಾಗೇ ಹೀಗೆ ಅಂತೆಲ್ಲಾ ಡಿಮ್ಯಾಂಡ್ ಇಲ್ಲ. ನಮ್ಮ ಅಮ್ಮ ಅವಳು ಹೊಂದಾಣಿಕೆ ಮಾಡಿಕೊಂಡು ಹೋಗಿ ಬಿಟ್ಟರೆ ಅದೇ ನನಗೆ ಸಂತಸ. ಅಮ್ಮ ತುಂಬಾ ಮುಖ್ಯ ನನಗೆ. ನಾನೇಗೋ ಅಡ್ಜೆಸ್ಟ್ ಮಾಡ್ಕೊಂಡು ಹೋಗ್ತಿನಿ ಅಂತಾರೆ. ಇತ್ತಿಚೆಗೆ ಸೋನಲ್ ಮಂಟೋರೋ ಹಾಗೂ ತರುಣ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಓಡಾಡುತ್ತಿದೆ. ಈಗ 'ಮಹಾನಟಿ' ವೇದಿಕೆಯಲ್ಲೂ ಪರೋಕ್ಷವಾಗಿ ಸುದ್ದಿಯ ಸದ್ದು ಮಾಡಿದೆ.

ಹಾರ್ಟ್ ಬ್ರೇಕ್ ಎಂದ ಅಮೃತಾ
'ಮಹಾನಟಿ' ವೇದಿಕೆಯಲ್ಲಿ ಆಗಾಗ ತಮಾಷೆ, ಕಾಲೆಳೆಯುವುದು ನಡೆಯುತ್ತಲೇ ಇರುತ್ತದೆ. ಈ ವಾರ ಒಳ್ಳೆ ಟಾಪಿಕ್ ಸಿಕ್ಕಿದೆ. ನಿರ್ದೇಶಕ ತರುಣ್ ಸುಧೀರ್ ಮದುವೆ ಆಗ್ತಾ ಇದ್ದಾರೆ ಎಂಬ ಸುದ್ದಿ ಚಂದನವನದಲ್ಲೆಲ್ಲಾ ಸಂಭ್ರಮಿಸುವಂತೆ ಮಾಡಿದೆ. ತರುಣ್ ನಿರ್ದೇಶನದ 'ರಾಬರ್ಟ್' ಸಿನಿಮಾದಲ್ಲಿ ನಟಿಸಿದ್ದ ಸೋನಲ್ ಜೊತೆಗೆ ನಿರ್ದೇಶಕರು ಮದುವೆ ಆಗ್ತಾ ಇದಾರೆ ಎನ್ನಲಾಗ್ತಿದೆ. ಇದೀಗ ಅದೇ ವಿಚಾರ ಮಹಾನಟಿ ವೇದಿಕೆಯಲ್ಲಿ ಪ್ರಸ್ತಾಪ ಆಗಿದ್ದು, ಅಮೃತಾ ಹಾರ್ಟ್ ಬ್ರೇಕ್ ಆಗಿದೆ.
ಇದು ಅಂತೆ ಕಂತೆ ಸುದ್ದಿ ಎಂದ ತರುಣ್
ತರುಣ್ ಸುಧೀರ್ ಬಳಿ ಹೋದ ಅಮೃತಾ ಅವರ ಎದೆಗೆ ಗನ್ ಇಟ್ಟು ಕೇಳಿದ್ದಾರೆ. ಎರಡು ಎಪಿಸೋಡಿನಲ್ಲಿ ಕವಿತೆ ಕೊಟ್ಟಿದ್ದೆ. ಅದಕ್ಕೆ ಜವಾಬ್ ಇಲ್ಲ. ಆದರೆ ಎಲ್ಲಾ ಜವಾಬು ಆ ನ್ಯೂಸ್ ಹಿಂದೆ ಬರ್ತಿದೆ. ಇದು ನ್ಯಾಯನಾ? ಎಂದು ಕೇಳಿದಾಗ ನಾನು ಹೇಳಿದ್ನಾ ಆ ಸುದ್ದಿಯನ್ನ, ಅಂತೆ ಕಂತೆ ತಾನೇ. ನಾನೇ ಹೇಳಿದಾಗ ನಂಬಬೇಕು ಅಂತ ಏನೋ ಒಂದು ಹೇಳಿ ತರುಣ್ ಸಂಭಾಳಿಸಿದ್ದಾರೆ.
ಶೀಘ್ರದಲ್ಲೇ ಮದುವೆ ಅನೌನ್ಸ್
ತರುಣ್ ಸುಧೀರ್ ಅವರೇ ಈ ಸುದ್ದಿಯನ್ನು ಬ್ರೇಕ್ ಮಾಡುವ ಕಾಲವೂ ದೂರ ಏನು ಇಲ್ಲ. ಆಪ್ತ ಮೂಲಗಳ ಪ್ರಕಾರ ಈಗಾಗಲೇ ಆ ಸುದ್ದಿ ಹೌದು ಎನ್ನಲಾಗ್ತಿದೆ. ಇನ್ನು ಅಧಿಕೃತವಾಗಿ ಅನೌನ್ಸ್ ಮಾಡುವುದೊಂದೇ ಬಾಕಿ. ಜುಲೈ 5 ರಂದು ಸುದ್ದಿಗೋಷ್ಠಿ ಮಾಡಿ, ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ ಎಂಬ ಮಾತಿದೆ. ಆ ದಿನಕ್ಕಾಗಿ ಫ್ಯಾನ್ಸ್ ನಿಜಕ್ಕೂ ಕುತೂಹಲದಿಂದ ಕಾಯುತ್ತಿದ್ದಾರೆ.

ತರುಣ್ ನಗುವಿನಲ್ಲೇ ಇದೆ ನಾಚಿಕೆ..!
ಗನ್ ಹಿಡಿದು ಶೂಟ್ ಮಾಡುವುದಕ್ಕೆ ಹೋದರೆ ಗನ್‌ಗಿಂತ ಪವರ್ ಫುಲ್ ಕಣ್ಣು. ನೀವೂ ಅದರಲ್ಲೇ ತಾನೇ ಮೊದಲು ಶೂಟ್ ಮಾಡಬೇಕಾಗಿರೋದು ಅಂತ ತರುಣ್ ಹೇಳಿದ್ದಾರೆ. ಆದರೆ ಆ ರೀತಿ ಹೇಳುವಾಗ ಅವರ ಮುಖದಲ್ಲಿದ್ದ ನಗು, ನಾಚಿಕೆ ಮದುವೆಯಾಗುವ ಹುಡುಗಿಯನ್ನೇ ನೆನೆಸಿಕೊಂಡಂತೆ ಇತ್ತು. ಕೇಳುಗರೇ ತರುಣ್ ಸುಧೀರ್ ಮಾತಿಗೆ ಕಳೆದೋಗುವಂತೆ ಇತ್ತು. ಅವರ ಒಂದೊಂದು ಡೈಲಾಗ್‌ಗಲ್ಲೂ ರೊಮ್ಯಾಂಟಿಕ್ ಮೂಡಿನಲ್ಲಿ ಇದ್ದರು ಎಂಬ ಫೀಲ್ ಕೊಡುತ್ತಾ ಇತ್ತು. ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











