mahanati: ವಿನಯ್ ಪ್ರಸಾದ್‌ಗೆ ಸೊಸೆಯಾಗೋದು ಅಂದ್ರೆ ಸುಮ್ನೆನಾ? ಧನ್ಯಶ್ರೀ ಮದುವೆ ಕ್ಯಾನ್ಸಲ್

By ಎಸ್ ಸುಮಂತ್

ಮಹಾನಟಿ ವೇದಿಕೆಗೆ ಇಂದು ವಿನಯ್ ಪ್ರಸಾದ್ ಬಂದಿದ್ದಾರೆ. ಸೊಸೆಯನ್ನು ಪರೀಕ್ಷೆ ಮಾಡುವುದಕ್ಕಾಗಿ ಇಂದು ಮಹಾನಟಿ ವೇದಿಕೆಗೆ ಬಂದಿದ್ದಾರೆ. ವಿನಯ್ ಪ್ರಸಾದ್ ಸೊಸೆಯಾಗುವುದು ಅಷ್ಟು ಸುಲಭವಲ್ಲ. ಅದೆಷ್ಟೋ ಷರತ್ತುಗಳು ಇರುತ್ತವೆ. ಆ ಷರತ್ತುಗಳನ್ನೆಲ್ಲಾ ಒಪ್ಪಿ, ಮಗನನ್ನ ಮದುವೆಯಾಗಬೇಕಿದೆ. ಅದು ಎಲ್ಲಾ ಹೆಣ್ಣು ಮಕ್ಕಳಿಗೂ ಅದು ಸಾಧ್ಯವಲ್ಲ.

'ಪಾರು' ಧಾರಾವಾಹಿಯಲ್ಲಿ ವಿನಯ್ ಪ್ರಸಾದ್ ಹೇಗಿರುತ್ತಾರೆ ಎಂಬುದನ್ನು ಎಲ್ಲರು ನೋಡಿದ್ದಾರೆ. ಅತ್ತೆಯ ಗತ್ತು ಹೇಗೆ ಎಂಬುದನ್ನು ತೋರಿಸಿದ್ದಾರೆ. ಸೊಸೆಯಂದಿರು ಎಷ್ಟು ಭಯ-ಭಕ್ತಿಯಿಂದ, ಎಷ್ಟು ಸಾಂಪ್ರದಾಯಿಕವಾಗಿ ಇರುತ್ತಾರೆ ಎಂಬುದು ಕೂಡ ಎಲ್ಲರೂ ನೋಡಿದ್ದಾರೆ. ಆದರೆ ಧನ್ಯಶ್ರೀ ಫುಲ್ ಮಾಡ್ರನ್ ಸೊಸೆಯಾಗಿ ಬಂದರೆ ಅಖಿಲಾಂಡೇಶ್ವರಿ ಒಪ್ಪುವುದಾದರೂ ಹೇಗೆ..?

Zee kannada reality show Mahanati Written Update on latest episode

ಧನ್ಯಶ್ರೀಗೆ ಹೊಸ ಸವಾಲು

ತರಿಕೆರೆಯ ಧನ್ಯಶ್ರೀಗೆ ಅತ್ತೆಗೆ ಸವಾಲು ಹಾಕುವಂತ ಕಾನ್ಸೆಪ್ಟ್ ಸಿಕ್ಕಿದೆ. ಧನ್ಯಶ್ರೀ ಲವ್ ಮಾಡುತ್ತಾ ಇರುತ್ತಾಳೆ. ಫುಲ್ ಮಾಡ್ರನ್ ಹುಡುಗಿ. ಆದರೆ ಅತ್ತೆ ಫುಲ್ ಟ್ರೇಡಿಷನಲ್. ಈಗ ಮಾಡ್ರನ್ ಸೊಸೆ ಹೋಗಿ ಅತ್ತೆಯನ್ನು ಮದುವೆಗೆ ಒಪ್ಪಿಸಬೇಕು. ಅತ್ತೆ ಒಪ್ಪುವುದುಂಟೆ. ಹಾಗಂತ ಸುಮ್ಮನೆ ಬರುವುದಲ್ಲ ಅತ್ತೆಗೆ ಸವಾಲಾಕಿ ಬರಬೇಕು. ಅಂತ ಸವಾಲನ್ನ ಧನ್ಯಶ್ರೀಗೆ ನೀಡಲಾಗಿದೆ. ಅನುಶ್ರೀ ಕೊಟ್ಟ ಸವಾಲನ್ನು ಗೆಲ್ಲುವುದಕ್ಕೆ ಧನ್ಯಶ್ರೀ ಸಿದ್ದರಾಗಿ ಹೋಗಿದ್ದಾರೆ‌.

ಬಂದ ಕೂಡಲೇ ಅತ್ತೆಗೆ ಬೇಸರ

ಧನ್ಯಶ್ರೀಯ ಅತ್ತೆಯನ್ನು ಕಂಡು ಪ್ರೇಕ್ಷಕರಿಗೂ ಶಾಕ್ ಎನಿಸಿದೆ‌. ಯಾಕಂದ್ರೆ ಅತ್ತೆ ಎಂದರೆ ಬೇಗ ನೆನಪಾಗುವುದು ಅದು ಅಖಿಲಾಂಡೇಶ್ವರಿ ಮಾತ್ರ. ಪ್ರೀತಿಗೆ, ಗತ್ತಿಗೆ ಎಲ್ಲದಕ್ಕೂ ಪರ್ಫೆಕ್ಟ್. ಈಗ ಮಹಾನಟಿಯ ನಟನೆಗೂ ಸಾಥ್ ಕೊಡುವುದಕ್ಕೆ ಅಖಿಲಾಂಡೇಶ್ವರಿ ಬಂದಿದ್ದಾರೆ. ಅಖಿಲಾ ಅವರನ್ನ ನೋಡಿದ ಕೂಡಲೇ ಜಡ್ಜಸ್ ಕೂಡ ವಾವ್ ಇವರಾ ಎಂದಿದ್ದಾರೆ. ಅತ್ತೆ ಪೇಪರ್ ಓದುತ್ತಾ ಕುಳಿತಿದ್ದಾರೆ. ಮನೆಗೆ ಬಂದ ಫ್ಯೂಚರ್ ಸೊಸೆ, ಬಂದೊಡನೆ ಕಾಲಿಗೆ ಬಿದ್ದಿದ್ದಾಳೆ. ಆದರೆ ಆರಂಭದಲ್ಲಿಯೇ ಅತ್ತೆಯ ಬಳಿ ಬೈಗುಳ ತಿಂದಿದ್ದಾಳೆ. ಅತ್ತೆ ಕುಳಿತುಕೊಳ್ಳುವ ಮುನ್ನವೆ ಕುಳಿತುಕೊಂಡು, ಇದೇನಾ ನಿಂಗೆ ಕಲಿಸಿರುವ ಸಂಸ್ಕೃತಿ ಎಂದು ಬೈಗುಳ ತಿಂದಿದ್ದಾಳೆ.

Zee kannada reality show Mahanati Written Update on latest episode

ಷರತ್ತುಗಳನ್ನು ಕೇಳಿ ಧನ್ಯಶ್ರೀ ಶಾಕ್

ಅತ್ತೆಯ ಮಾತು ಕೇಳಿ ಎದ್ದು ನಿಂತ ಧನ್ಯಶ್ರೀ ಸರಿ ಆಂಟಿ ನೀವೇ ಮೊದಲು ಕುಳಿತುಕೊಳ್ಳಿ ಎಂದಿದ್ದಾರೆ. ಅಖಿಲಾ ಕುಳಿತುಕೊಂಡ ಮೇಲೆ ಮಾತು ಶುರುವಾಗುತ್ತೆ. ಮನೆಯಲ್ಲಿ ಸೊಸೆ ಅಂದ್ರೆ ಹೇಗಿರಬೇಕು ಎಂಬುದನ್ನು ಅಖಿಲಾ ಹೇಳುತ್ತಾರೆ. ನಮ್ಮ ಮನೆಯಲ್ಲಿ ನಾನು ಹೇಳಿದಂತೆ ಆಗಬೇಕು. ಅಡುಗೆ ಮಾಡುವುದಕ್ಕೆ ಬರುತ್ತೆ ಅಲ್ವಾ. ಡೈಲಿ ಮೂರೊತ್ತು ನೀನೆ ಅಡುಗೆ ಮಾಡಬೇಕು. ಅಡುಗೆ ಏನು ಮಾಡಬೇಕು ಅಂತ ನಾನು ಹೇಳ್ತೀನಿ. ಹಾಗೇ ಡೈಲಿ ಸೀರೆಯನ್ನೇ ಉಡಬೇಕು ಎಂದಿದ್ದಾರೆ.

ಅತ್ತೆಗೆ ತಿರು ಮಂತ್ರ ಕೊಟ್ಟ ಧನ್ಯಶ್ರೀ

ಅತ್ತೆಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಧನ್ಯಶ್ರೀಗೆ ಇದೆಲ್ಲಾ ಆಗಿ ಹೋಗುವ ಮಾತಲ್ಲ ಎಂಬುದು ಅರ್ಥವಾಗಿದೆ. ಆಮೇಲೆ ತಿರುಗಿ ಬಿದ್ದಿದ್ದಾಳೆ. ನೀವು ಇಷ್ಟು ಸಮಯ ಹೇಳಿದ್ದೆಲ್ಲಾ ಕೇಳಿಸಿಕೊಂಡ ಮೇಲೆ ನಿಮಗೆ ಬೇಕಾಗಿರುವುದು ಸೊಸೆಯಲ್ಲ, ಮನೆ ಕೆಲಸದವಳು ಎಂಬುದಂತು ಅರ್ಥವಾಯ್ತು. ಏನು ಹೇಳಿದ್ದು ಮೂರೊತ್ತು ಅಡುಗೆ ನಾನೇ ಮಾಡಬೇಕಾ. ನಂಗೆ ಬಿಸಿ ನೀರು ಇಡೋಕು ಬರಲ್ಲ. ಇನ್ನು ಮನೆಯಲ್ಲಿ ಸೀರೆಯನ್ನೇ ಉಡಬೇಕು, ನಂಗೆ ಉಡುವುದಕ್ಕೆ ಬರಲ್ಲ. ಇನ್ನು ನಿಮ್ಮ ಕಾಲಿಗೆ ಬಿದ್ದಿದ್ದು ನಿಮ್ಮ ಮಗ ಹೇಳಿದ ಅಂತಷ್ಟೆ.

ಒಪ್ಪಿಗೆ ಇಲ್ಲದಿದ್ರು ಡೋಂಟ್ ಕೇರ್

ನಮ್ಮಿಬ್ಬರ ಮದುವೆ ನಡೆದೇ ನಡೆಯುತ್ತೆ. ಯಾಕಂದ್ರೆ ನಾನು ನಿಮ್ಮ ಮಗ ಒಪ್ಪಿ ಆಗಿದೆ. ನಿಮ್ಮ ಆಶೀರ್ವಾದ ತೆಗೆದುಕೊಂಡು ಆಗೋಣ ಅಂತಿದ್ವಿ. ಆದ್ರೂ ನಿಮ್ಮ ಮಗ ಸಂತೋಷವಾಗಿಯೇ ನಂಗೆ ತಾಳಿ ಕಟ್ಟೇ ಕಟ್ಟುತ್ತಾನೆ ಎಂದು ಸವಾಲಾಕಿ ಹೊರಟಿದ್ದಾರೆ. ಆಗ ಅಖಿಲಾಂಡೇಶ್ವರಿ ಘರ್ಜಿಸಿದ ಸದ್ದು ನಮಗೆ ಮತ್ತೆ 'ಪಾರು' ಧಾರಾವಾಹಿಯಲ್ಲಿನ ಆಕೆ ದರ್ಬಾರ್ ನೆನಪಿಸಿದೆ.

More from Filmibeat

English summary
zee kannada reality show mahanati Written Update on May 5th episode. Here is the details about Vinay Prasad came to Mahanati reality show;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X