Mahanati: ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತ: ಎಲ್ಲರ ಮನಸ್ಸಿಗೆ ನಾಟುವಂತೆ ನಟಿಸಿದ ಆರಾಧನಾ
ಮಹಾನಟಿ ವೇದಿಕೆಯಲ್ಲಿ ಪ್ರತಿಭಾವಂತರೆ ಇರುವ ಕಾರಣ, ಒಳ್ಳೆಯ ಮನರಂಜನೆ ಸಿಗುತ್ತದೆ. ಒಂದೊಂದು ಕಂಟೆಂಟ್ ಗಳನ್ನು ತೆಗೆದುಕೊಂಡು ಅದ್ಭುತವಾಗಿ ನಟಿಸುತ್ತಾರೆ. ಆ ನಟನೆಯನ್ನು ನೋಡುವುದೇ ಚೆಂದ. ಭಾವನಾತ್ಮಕವಾಗಿಯೂ ಸೆಳೆಯುತ್ತಾರೆ. ಈ ವಾರದ ವೇದಿಕೆಯಲ್ಲೂ ಅಷ್ಟೇ ಎಲ್ಲಾ ಸ್ಪರ್ಧಿಗಳು ನಟನೆಯ ಮೂಲಕವೇ ಗಮನ ಸೆಳೆದಿದ್ದಾರೆ.
ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ಪ್ರೇಮಾ, ತರುಣ್ ಸುಧೀರ್ ಎಲ್ಲರ ನಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಬಳಿಕ ಅವರ ನಟನೆಗೆ ಹೊಗಳಿಕೆಯನ್ನು ನೀಡುತ್ತಾರೆ, ಸರಿ ಮಾಡುವ ಜಾಗದಲ್ಲಿ ಸರಿ ಕೂಡ ಮಾಡುತ್ತಾರೆ. ಒಟ್ಟಾರೆ ಶನಿವಾರ ಮತ್ತು ಭಾನುವಾರ ಈ ಮಹಾನಟಿ ವೇದಿಕೆಯಲ್ಲಿ ಜನರಿಗೆ ಒಳ್ಳೆಯ ಮನರಂಜನೆ ಸಿಗಲಿದೆ. ಎಲ್ಲರ ನಟನೆಯನ್ನು ನೋಡುವುದಕ್ಕೇನೆ ಜನ ಕೂಡ ವೇಯ್ಟ್ ಮಾಡ್ತಾ ಇರುತ್ತಾರೆ.

ಮಗಳು ಪಾಸ್.. ತಂದೆ ಸಾವು..!
ಆಕೆ ರೈತನ ಮಗಳು. ಕಷ್ಟಪಟ್ಟು ಸಾಲ-ಸೋಲ ಮಾಡಿ ಮಗಳನ್ಮು ಓದಿಸುತ್ತಾನೆ ತಂದೆ. ಮಗಳು ಕೂಡ ತಂದೆಯ ಹೆಸರನ್ನು ಉಳಿಸುತ್ತಾಳೆ. ಅದರಂತೆ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗುತ್ತಾಳೆ. ಆ ಖುಷಿಯನ್ನು ಹೇಳುವುದಕ್ಕೆಂದು ಮನೆಗೆ ಬಂದಾಗ ಅಪ್ಪ ಜೀವಂತ ಇರುವುದಿಲ್ಲ. ಆ ಖುಷಿಯನ್ನು ಕೇಳುವ ಸ್ಥಿತಿಯಲ್ಲಿ ಇರಲ್ಲ. ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಮಗಳ ಪಾತ್ರದಲ್ಲಿ ಆರಾಧನಾ ಭಟ್ ನಟಿಸಿದ್ದಾರೆ.
ಸಾಲ ವಸೂಲಿಗೆ ಬಂದ ಬ್ಯಾಂಕ್‌ನವ್ರ
ತಂದೆ ಸತ್ತು ಬಿದ್ದಿದ್ದಾರೆ. ಆ ನೋವನ್ನೇ ಮಗಳಿಂದ ಸಹಿಸುವುದಕ್ಕೆ ಆಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿರುವ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದರೆ ಹೇಗಿರುತ್ತೆ. ಮಗಳು ಆಗಲೇ ರೊಚ್ಚಿಗೆದ್ದಿದ್ದು. ಬನ್ನಿ ಇನ್ನೇನು ಉಳಿದಿದೆ. ಅಪ್ಪನ ಕಿಡ್ನಿ, ಕಣ್ಣನ್ನು ತೆಗೆದುಕೊಂಡು ಹೋಗಿ, ನಿಮ್ಮ ಸಾಲವನ್ನು ತೀರಿಸಿಕೊಳ್ಳಿ. ಬಡವರ ಕಷ್ಟ ಕೇಳುವುದು ಯಾರು ನಿಮಗೆ ಇಷ್ಟ ಬಂದಂತೆ ನೀವೂ ನಡೆದುಕೊಳ್ಳಿ ಎಂದೇ ಬೇಸರ ಜೊರ ಹಾಕಿದ್ದಾರೆ.

ಶಾಲೆಯಲ್ಲಿ ಹೇಳಿಕೊಡುವುದೇ ಬೇರೆ
ಅಪ್ಪನ ಹೆಣದ ಮುಂದೆ ಕೂತು, ಶಾಲೆಯಲ್ಲಿ ಜೈಜವಾನ್ ಜೈ ಕಿಸಾನ್ ಅಂತಾರೆ ಆದರೆ ಆಗುವುದೇನು. ರೈತರ ಕಷ್ಟಗಳನ್ನು ಯಾರು ಕೇಳುವುದಿಲ್ಲ. ಕಷ್ಟಪಟ್ಟು ದುಡಿದು ಇಡೀ ದೇಶಕ್ಕೆ ಅನ್ನ ಕೊಡುವ ರೈತನಿಗೆ ಇಂಥ ಪರಿಸ್ಥಿತಿ. ಅಪ್ಪ ಎದ್ದೇಳು ಅಪ್ಪ ಅಂತ ಅಪ್ಪನ ಶವದ ಮುಂದೆ ಕಣ್ಣೀರು ಹಾಕಿದ್ದಾಳೆ. ಅಪ್ಪನನ್ನು ಕಳೆದುಕೊಂಡ ನೋವು ಜೋರಾಗಿದೆ. ಯಾಕಂದ್ರೆ ಆ ಮಗಳಿಗೆ ಮಾತ್ರ ಗೊತ್ತು ತಂದೆ ಎಷ್ಟು ಕಷ್ಟಪಡುತ್ತಾನೆ ಎಂಬುದು ಮಗಳಿಗಷ್ಟೇ ಗೊತ್ತು.
ಆರಾಧನಾ ಆಕ್ಟಿಂಗ್ ಶಬ್ಬಾಶ್ ಗಿರಿ
ಆರಾಧನಾ ನಟನೆ ನೋಡಿ ತೀರ್ಪುಗಾರರು ಒಂದು ಕ್ಷಣ ಮೂಕ ಪ್ರೇಕ್ಷಕರಾಗಿದ್ದಾರೆ. ತಂದೆಯ ಸಾವಿನ ನೋವನ್ನು ಅದರಲ್ಲೂ ಸಾಲಕ್ಕೆ ಹೆದರಿ ಸತ್ತ ಅಪ್ಪನ ಸಾವನ್ನು ಹೇಗೆ ತಾನೇ ಸಹಿಸುವುದಕ್ಕೆ ಸಾಧ್ಯ. ನಿಜವಾದ ಶವದ ಮುಂದೆಯೇ ನಿಂತಂತೆ ಆರಾಧನಾ ನಟನೆ ಮಾಡಿದ್ದಾರೆ. ಈ ನಟನೆ ಕಂಡು, ರಮೇಶ್ ಅರವಿಂದ್ ಸೈಲೆಂಟ್ ಆಗಿದ್ದಾರೆ. ಕಟ್ ಇಟ್ ಎಂದು ಹೇಳುವಾಗಲೂ ಅವರ ಮನಸ್ಸು ಭಾರವಾಗಿತ್ತು. ಆರಾಧನಾ ಭಟ್ ಅವರ ನಟನೆ ಕಂಡು ಇಡೀ ವೇದಿಕೆ ಮೂಕವಿಸ್ಮಿತರಾಗಿದ್ದಾರೆ.


Click it and Unblock the Notifications











