Mahanati: ಮಹಾನಟಿ ವೇದಿಕೆಯಲ್ಲಿ 'ರಿಷಿ': ಚಿತ್ರದುರ್ಗದ ಗಗನಾಗೆ ನಂಬರ್ ಬೇಕಂತೆ!
ಮಹಾನಟಿ ವೇದಿಕೆಯಲ್ಲಿ ಈ ವಾರ ಬೇರೆ ರೀತಿಯಾದಂತ ಕಂಟೆಂಟ್ ನೀಡಲಾಗಿದೆ. ಪ್ರತಿ ಸಲ ತೀರ್ಪುಗಾರರ ಸ್ಥಾನದಲ್ಲಿ ಕೂತಿರುವ ರಮೇಶ್ ಅರವಿಂದ್ ಒಂದೊಂದು ಕಾನ್ಸೆಪ್ಟ್ ನೀಡುತ್ತಾರೆ. ಆ ಕಾನ್ಸೆಪ್ಟ್ ಪ್ರಕಾರ ನಟನೆ ಮಾಡಿ ತೋರಿಸಬೇಕಾಗುತ್ತದೆ.
ಈ ವಾರ ಕಾನ್ಸೆಪ್ಟ್ ಜೊತೆಗೆ ಸೆಲೆಬ್ರೆಟಿಗಳನ್ನು ಜೊತೆಗೆ ಕರೆಸಲಾಗಿದೆ. ಯಾವ್ಯಾವ ಕಾನ್ಸೆಪ್ಟ್‌ಗೆ ಯಾರು ಸರಿ ಹೊಂದುತ್ತಾರೆ ಆ ಸೆಲೆಬ್ರೆಟಿಗಳನ್ನು ಕರೆಸಲಾಗಿದೆ. 'ಮುದ್ದು ಮಣಿಗಳು' ಧಾರಾವಾಹಿ ಮೂಲಕ ಸೋನಿ ಎಲ್ಲರಿಗೂ ಚಿರಪರಿಚಿತ. ಮುದ್ದುಲಕ್ಷ್ಮೀಯ ಮಗಳಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮುಗಿದ ಮೇಲೆ ಇದೀಗ ಮಹಾನಟಿ ವೇದಿಕೆ ಮುಖಾಂತರ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಬಂದಿದ್ದಾರೆ. ನಟನೆಯ ಜೊತೆಗೆ ಎಲ್ಲರನ್ನು ನಕ್ಕು ನಲಿಸಿದ್ದಾರೆ.

ಪ್ರಿಯಕರನ ಮೆಚ್ಚಿಸುವ ಸವಾಲು
ಸೋನಿ ಮುಲೇವಾಗೆ ಈ ಬಾರಿ ರಮೇಶ್ ಅರವಿಂದ್ ಕೊಟ್ಟಂತ ಕಾನ್ಸೆಪ್ಟ್ ಅಂದ್ರೆ ಬಾಯ್ ಫ್ರೆಂಡ್‌ನ ಇಂಪ್ರೆಸ್ ಮಾಡಬೇಕು. ಮಾತಲ್ಲಿಯೇ ಇಂಪ್ರೆಸ್ ಮಾಡಬಹುದು. ಆದರೆ ಸೋನಿಗೆ ಸಂಜೆಯಾದರೆ ಕಣ್ಣು ಕೂಡ ಕಾಣುವುದಿಲ್ಲ. ಇದು ದೊಡ್ಡ ಸಮಸ್ಯೆ. ಬರುವಾಗಲೇ ಮನದಲ್ಲೇ ಬೈಕೊಂಡು ಬಂದಿದ್ದಾಳೆ. ಸಂಜೆ ವೇಳೆಗೆ ಕರಿಬೇಕಾ. ಹೊಟೇಲ್ ಏನೋ ಸಿಕ್ಕಾಯ್ತು. ಆದ್ರೆ ಈಗ ಅವನೆಲ್ಲಿದ್ದಾನೋ ಏನೋ. ಹೇಗೆ ಹುಡುಕುವುದು ಎಂದು ಪ್ರಶ್ನೆ ಮಾಡಿಕೊಂಡಿದ್ದಾಳೆ. ಆಮೇಲೆ ಹುಡುಗನೇ ಕೂಗಿ ಕರೆದಿದ್ದಾನೆ.
ರಿಷಿ-ಸೋನಿ ಮಾತಿಗೆ ಪ್ರೇಕ್ಷಕರ ನಗು
ಸೋನಿ ಬಾಯ್ ಫ್ರೆಂಡ್ ರೂಪದಲ್ಲಿ ರಿಯಾಲಿಟಿ ಶೋನಲ್ಲಿ ಪ್ರತ್ಯಕ್ಷವಾಗಿದ್ದು ರಿಷಿ. ಸೌಂಡ್ ಏನೋ ಬಂತು ಎಲ್ಲಿ ಕೂತಿದ್ದಾನೆ ಗೊತ್ತಾಗ್ತಿಲ್ವಲ್ಲ ಅಂತಾನೇ ಹೇಳಿಕೊಂಡು ಹೋಗಿ, ಕೂತಿದ್ದಾಳೆ. ಅವನು ಆ ಚೇರ್ ನಲ್ಲಿ ಕೂತರೆ ಇವಳು ಈ ಚೇರಿನಲ್ಲಿ ಕೂತಿದ್ದಾಳೆ. ತನ್ನ ನ್ಯೂನ್ಯತೆ ಮುಚ್ಚಿಕೊಳ್ಳುವುದಕ್ಕೆ ರಿಷಿಯನ್ನೇ ತನ್ನ ಟೇಬಲ್‌ಗೆ ಕರೆಸಿಕೊಂಡಿದ್ದಾಳೆ. ರಿಂಗ್ ಕಿಟ್ಟರು ಡಿಸೈನ್ ಗೊತ್ತಾಗುತ್ತಿಲ್ಲ, ರೋಸ್ ಕೊಟ್ಟರು ಪಿನ್ ಎನ್ನುತ್ತಿದ್ದಾಳೆ. ಆದರೆ ರಿಷಿ ಕೊಂಚವೂ ಅನುಮಾನ ಪಡದೇ, ಬೇಸರ ಮಾಡಿಕೊಳ್ಳದೇ ಹುಡುಗಿಗೆ ಇಂಪ್ರೆಸ್ ಮಾಡಿದ್ದಾನೆ.

ರಿಷಿ ಜೊತೆಗೆ ಫುಲ್ ಡ್ಯಾನ್ಸ್
ಬ್ಲೈಂಡ್ ಡೇಟ್ ಹೋಗಿದ್ದ ರಿಷಿಗೆ ಅದೇನ್ ಆಯ್ತೋ ಏನೋ. ಕಾಫಿ ಟೇಬಲ್‌ಗೆ ಬಂದ ಕೂಡಲೇ ನನಗೆ ಟೈಮ್ ಆಯ್ತು ಅಂತ ಹೇಳಿ ಹೊರಟೇ ಬಿಟ್ಟರು. ನೇರವಾಗಿ ವೇದಿಕೆ ಮೇಲೆ ಬಂದರು. ರಿಷಿ ಎಂದರೆ ಅಲ್ಲಿರುವ ಮಹಾನಟಿಯರಿಗೆಲ್ಲಾ ಇಷ್ಟ. ಬರೀ ಸೋನಿ ಜೊತೆಗೆ ಡೇಟ್ ಮಾಡಿದರೆ ಎಲ್ಲರಿಗೂ ಬೇಸರವಾಗಲ್ವಾ. ಅದಕ್ಕೆ ಎಲ್ಲಾಮಹಾನಟಿಯರನ್ನು ಅನುಶ್ರೀ ವೇದಿಕೆ ಮೇಲೆ ಕರೆದಿದ್ದಾರೆ. ಎಲ್ಲಾ ನಟಿಮಣಿಯರು ರಿಷಿ ಜೊತೆಗೆ ಹೆಜ್ಜೆ ಹಾಕಿದ್ದಾರೆ.
ರಿಷಿ ವಿಚಾರಕ್ಕೂ ಗಗನಾ ಕಾಮಿಡಿ
ಮಹಾನಟಿ ವೇದಿಕೆಯಲ್ಲಿ ಗಗನಾ ಎಲ್ಲರನ್ನು ನಕ್ಕು ನಲಿಸುವಂತ, ಹಾಸ್ಯಪ್ರಧಾನ ಪ್ರತಿಭೆ. ಎಲ್ಲಾ ವಿಚಾರದಲ್ಲೂ ನಕ್ಕು ನಲಿಸುತ್ತಾರೆ. ರಿಷಿ ಜೊತೆಗೆ ಹೆಜ್ಜೆ ಹಾಕುವಾಗಲೂ ಎಕ್ಸ್‌ಪ್ರೆಷನ್ ಚೇಂಜ್ ಇದ್ದದ್ದನ್ನು ಅನುಶ್ರೀ ಗಮನಿಸಿದ್ದಾರೆ. ಏನದು ಅಂತ ಕೇಳಿದಾಗ, ಏರ್ಪೋರ್ಟ್ ಕಥೆ ಹೇಳಿದ್ದಾರೆ ಗಗನಾ. ಅಲ್ಲಿ ಸಿಕ್ಕಿದ್ರು. ಆದ್ರೂ ಮಾತನಾಡಿಸುವುದಕ್ಕೆ ಆಗದೆ, ಬರೀ ಫೋಟೋ ತೆಗೆದಿದ್ದೆ ಎಂದಿದ್ದಾರೆ. ಈಗ ಪಕ್ಕದಲ್ಲಿಯೇ ಇದ್ದಾರೆ ಏನು ಹೇಳಬೇಕು ಅನ್ನಿಸ್ತಾ ಇದೆ ಹೇಳಿ ಎಂದು ತಮಾಷೆ ಮಾಡಿದ್ದಾರೆ ಅನುಶ್ರೀ. ವಿಮಾನದಲ್ಲಿ ಇಬ್ಬರು ಜೊತೆಗೆ ಕೂತು ಟ್ರಾವೆಲ್ ಮಾಡುವಾಗ ಇಬ್ಬರ ಮಾತುಕತೆ ಹೇಗಿರುತ್ತೆ ಎಂಬುದನ್ನು ರಿಹರ್ಸಲ್ ಮಾಡಿಸಿದ್ದಾರೆ. ಈ ವೇಳೆ ಅನುಶ್ರೀ, ಜ್ಯೂಸ್, ಕಾಫಿ ಬೇಕಾ ಅಂತ ಕೇಳಿದ್ರೆ ರಿಷಿ ನೀರು ಸಾಕು ಎಂದರೆ, ಗಗನಾ ಇವ್ರ ನಂಬರ್ ಕೊಡಿ ಅಂತ ಅಲ್ಲೂ ಕಾಮಿಡಿ ಮಾಡಿದ್ದಾರೆ.


Click it and Unblock the Notifications











