»   » ಈ ಪುಟಾಣಿಗಳಲ್ಲಿ ನಿಮ್ಮೂರ ಮಗು ಇರಬಹುದಾ?

ಈ ಪುಟಾಣಿಗಳಲ್ಲಿ ನಿಮ್ಮೂರ ಮಗು ಇರಬಹುದಾ?

Posted By:
Subscribe to Filmibeat Kannada
Little champs
ಜೀ ಕನ್ನಡ ಇದೀಗ ಸ ರಿ ಗ ಮ ಪ 9 ನೇ ಸೀಸನ್ ಪ್ರಾರಂಭಿಸಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ನಲ್ಲಿ ಅಂತಿಮವಾಗಿ 17 ಪುಟಾಣಿ ಗಾಯನ ಪ್ರತಿಭೆಗಳು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜುಲೈ 29 ಭಾನುವಾರ ಸಂಚಿಕೆಯಲ್ಲಿ ಆ 17 ಪುಟಾಣಿ ಸ್ಪರ್ಧಿಗಳು ಯಾರು ಎಂಬುದು ಬಹಿರಂಗಗೊಳ್ಳಲಿದೆ.

ಗಾಯನದಲ್ಲಿ ಪ್ರತಿಭಾವಂತ ಪುಟಾಣಿಗಳ ಆಯ್ಕೆಗಾಗಿ ರಾಜ್ಯದ ಆರು ಭಾಗಗಳಲ್ಲಿ ಪ್ರತಿಭಾನ್ವೇಷಣೆ (ಆಡಿಷನ್) ನಡೆಸಲಾಗಿದ್ದು, ಗುಲಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು, ದಾವಣಗೆರೆ, ಬೆಂಗಳೂರು ನಗರಗಳಲ್ಲಿ ಆಡಿಷನ್ ನಲ್ಲಿ 2000 ಕ್ಕೂ ಹೆಚ್ಚು ಮಕ್ಕಳು ಬಾಗವಹಿಸಿದ್ದರು. 54 ಮಕ್ಕಳನ್ನು ಆಯ್ಕೆ ಸುತ್ತಿನಲ್ಲಿ ಹಾಡಲು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಜೀ ಕನ್ನಡ ಸ್ಟೂಡಿಯೋಕೆ ಈ ಎಲ್ಲ ಮಕ್ಕಳನ್ನೂ ಕರೆಸಿಕೊಂಡು ಆಯ್ಕೆ ಸುತ್ತಿನ ಸ್ಪರ್ಧೆ ನಡೆಸಿ 17 ಸ್ಪರ್ಧಿಗಳನ್ನು ಅಂತಿಮಗೊಳಿಸಲಾಗಿದೆ.

ಸ ರಿ ಗ ಮ ಪ ಜೀ ವಾಹಿನಿಯ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಕನ್ನಡದಲ್ಲಿ 9ನೇ ಆವೃತ್ತಿಯನ್ನು ಪುಟಾಣಿಗಳೊಂದಿಗೆ ನಡೆಸಿಕೊಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ ವಿಶೇಷ ಎಂದರೆ ಇದು ಭಾವನೆಗಳಿಗೆ ಘಾಸಿ ಮಾಡುವ ಸ್ಪರ್ಧೆ ಅಲ್ಲ. ಮಕ್ಕಳ ಮನಸ್ಸಿಗೆ ನೋವಾಗದಂತೆ ಸ್ಪರ್ಧೆ ನಡೆಸುತ್ತೇವೆ. ಸೋತವರ ಮುಖದಲ್ಲೂ ನಗುವನ್ನು ಮೂಡಿಸುತ್ತೇವೆ. ಎಲ್ಲ ಕಾಲಕ್ಕೂ ಸಲ್ಲುವ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಈ ಹಾಡುಗಳನ್ನು ಕೇಳುವುದೇ ಒಂದು ಆಹ್ಲಾದಕರ ಅನುಭವ. ಜೊತೆಗೆ ಪುಟ್ಟ ಮಕ್ಕಳ ತುಂಟತನ, ಮುಗ್ದತೆ, ಆಯಾಚಿತವಾಗಿ ಮೂಡುವ ಸ್ಪರ್ಧಾ ಮನೋಭಾವ, ಮಿಶ್ರಭಾವನೆಗಳ ಬುತ್ತಿಯಾಗಲಿದೆ ಈ ಸಲದ ಸ ರಿ ಗ ಮ ಪ ಎಂದು ವಿವರಿಸಿಸುತ್ತಾರೆ ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ| ಗೌತಮ ಮಾಚಯ್ಯ

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ವೀಕ್ಷಿಸಿ ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್. (ಒನ್ ಇಂಡಿಯಾ ಕನ್ನಡ)

English summary
Sa Re Ga Ma Little Champs reality show telecasts on 29th July 2012 at Zee Kannada Channel. 17 childrens selected for this competition finally from the various parts of the Karnataka. 
 
Please Wait while comments are loading...