'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್': ಸಧ್ವಿನ್-ಶಾರಿಕಾ ಡ್ಯಾನ್ಸ್ ನೋಡಿ ಭಯಪಟ್ಟ ರಕ್ಷಿತಾ
ಡಿಕೆಡಿ ಕಾರ್ಯಕ್ರಮ ನೋಡಿದರೆ ಮೈ ನಡುಗುತ್ತೆ. ನೋಡದೆ ಹೋದಲ್ಲಿ ಏನನ್ನೋ ಮಿಸ್ ಮಾಡಿಕೊಂಡ ಭಾವ ಕಾಡುತ್ತದೆ. ಹೀಗಾಗಿ ಭಯವಿದ್ದರು ಆ ಶೋ ನೋಡದೆ ಇರುವವರು ಕಡಿಮೆ. ಯಾಕೆಂದರೆ ಮಕ್ಕಳು ಕುಣಿಯುವ ಆ ಡ್ಯಾನ್ಸ್ ಎಲ್ಲರನ್ನು ಅಷ್ಟು ಕಾಡುತ್ತಿದೆ. ಮೈನಲ್ಲಿ ಮೂಳೆಯೇ ಇಲ್ಲದಂತೆ ಕುಣಿಯುತ್ತಾರೆ. ಮೇಲೆಗರಿ ಕೆಳಗೆ ಬೀಳುತ್ತಾರೆ. ರಪ್ ಅಂತ ಇನ್ನೆಲ್ಲಿಯೋ ಪಾಸ್ ಆಗುತ್ತಾರೆ. ಇದೆಲ್ಲವನ್ನು ನೋಡುವಾಗ ಎದೆ ಝಲ್ ಎನ್ನುತ್ತೆ, ಹೃದಯ ಬಾಯಿಗೆ ಬರುತ್ತೆ ಎನ್ನುತ್ತಾರಲ್ಲ ಅಂಥದ್ದೊಂದು ಅನುಭವ ಆಗುತ್ತದೆ.
ಇಂದಿನ ಎಪಿಸೋಡಿನಲ್ಲಿಯೂ ಒಬ್ಬೊಬ್ಬರದ್ದು ಒಂದೊಂದು ರೀತಿಯ ಮೈನವಿರೇಳಿಯುವ, ಕುಂತಲ್ಲಿಯೆ ಭಯಗೊಳಿಸುವಂತ ನೃತ್ಯಗಳು. ಅದರಲ್ಲಿ ರಕ್ಷಿತಾ ಅವರನ್ನು ದಿಗಿಲು ಬಡಿಸಿದ್ದು ಮಾತ್ರ ಅವರದ್ದೆ ಸಿನಿಮಾ ಹಾಡು. ಸದ್ವಿನ್ ಮತ್ತು ಶಾರಿಕಾ ಕುಣಿದ ರೀತಿಗೆ ರಕ್ಷಿತಾ ಅವರು ಅಕ್ಷರಶಃ ಕಳೆದು ಹೋಗಿದ್ದಾರೆ. ಕೊರಿಯೋಗ್ರಫಿಗೆ ಫಿದಾ ಆಗಿದ್ದಾರೆ. ಆದರೆ ಮಕ್ಕಳ ಮೈಮಾಟಕ್ಕೆ ಭಯಗೊಂಡಿದ್ದಾರೆ.

ಭಯಕ್ಕೆ ಅರ್ಜುನ್ ಜನ್ಯ ತೋಳಲ್ಲಿ ಅಡಗಿದ ರಕ್ಷಿತಾ
ಶಿವಣ್ಣ, ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯಾ, ರಕ್ಷಿತಾ ಇಷ್ಟು ಜನ ಜಡ್ಜಸ್ ಗಳಾಗಿದ್ದಾರೆ. ಮಕ್ಕಳ ಪ್ರತಿದಿನ ಡ್ಯಾನ್ಸ್ ನೋಡುವಾಗಲೂ ಜಡ್ಜಸ್ ಗಳು ಎಂಜಾಯ್ ಮಾಡುತ್ತಾರೆ. ಆದರೆ ರಕ್ಷಿತಾ ಮಕ್ಕಳ ರಿಸ್ಕಿ ಸ್ಟೆಪ್ ನೋಡಿದಾಗೆಲ್ಲಾ ಒಂದು ಕ್ಷಣ ಗಾಬರಿಯಾಗುತ್ತಾರೆ. ಭಯಗೊಳ್ಳುತ್ತಾರೆ. ಅದರೆ ಇಂದು ಸ್ವಲ್ಪ ಜಾಸ್ತಿಯೇ ಭಯಗೊಂಡಿದ್ದಾರೆ. ಅದೆಷ್ಟು ಭಯವೆಂದರೆ ಅರ್ಜುನ್ ಜನ್ಯ ತೋಳುಗಳಲ್ಲಿ ಅಡಗಿಕೊಂಡಿದ್ದಾರೆ. ಏಕ್ ಲವ್ ಯಾ ಸಿನಿಮಾದ ಯಾರೆ ಯಾರೇ ಎಂಬ ಹಾಡಿಗೆ ಸಾರಿಕಾ ಮತ್ತು ಸದ್ವಿನ್ ಡ್ಯಾನ್ಸ್ ಮಾಡಿದ್ದಾರೆ. ಅದು ರೋಮ್ಯಾಂಟಕ್ ಸಾಂಗ್ ಕೂಡ. ಸಿನಿಮಾದಲ್ಲೂ ಒಂದಷ್ಟು ಎಕ್ಸ್ ಡ್ರಾಡಿನರಿ ಎಂಬಂತ ಸ್ಟೆಪ್ ಗಳಿದ್ದಾವೆ. ಆದ್ರೆ ವೇದಿಕೆ ಮೇಲೆ ಕಂಟೆಸ್ಟೆಂಟ್ ಗಳು ಹೆಚ್ಚು extraordinary ಎಂಬಂತೆ ಹಾಕಿದ ಸ್ಟೆಪ್ಪುಗಳಿಗೆ ರಕ್ಷಿತಾ ಗಾಬರಿಯಾಗಿದ್ದಾರೆ.

ಹೋವರ್ ಬೋರ್ಡ್ ನಿಂದ ಅಪ್ಪು ನೆನಪು
ಯಾರೆ ಯಾರೆ ಹಾಡಿನಲ್ಲಿ ಕುಣಿಯುವಾಗ ರಿಸ್ಕಿ ಸ್ಟೆಪ್ ಗಳ ಜೊತೆಗೆ ಹೋವರ್ ಬೋರ್ಡ್ ಉಪಯೋಗಿಸಿರುವುದು ಒಂದು ಚಾಲೆಂಜ್. ಈ ಹೋವರ್ ಬೋರ್ಡ್ ಸುಮ್ಮನೆ ಬಳಸುವುದೇ ಒಂದು ಸವಾಲಿನ ಕೆಲಸ. ಸ್ವಲ್ಪ ಕಾಲು ಸ್ಕಿಡ್ ಆದರೂ ಸರಿಯಾಗಿ ಬೀಳುತ್ತಾರೆ. ಗ್ರಿಪ್ ತುಂಬಾ ಮುಖ್ಯ ಆಗುತ್ತೆ. ಅಂತದ್ರಲ್ಲಿ ಸದ್ವಿನ್ ಆ ಹೋವರ್ ಬೋರ್ಡ್ ಮೇಲೆ ನಿಂತು ಮಾಡಿದ ಡ್ಯಾನ್ಸ್ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಅಷ್ಟೇ ಅಲ್ಕ ಈ ಹಿಂದೆ ಅಪ್ಪು ನಿಧನ ಹೊಂದಿದಾಗ ಹೊಇವರ್ ಬೋರ್ಡ್ ಮೇಲೆ ನಿಂತು ಮನೆಯಲ್ಲೆಲ್ಲಾ ಓಡಾಡಿ, ಎಂಜಾಯ್ ಮಾಡಿದ್ದರು. ಆ ನೆನಪು ಮರುಕಳಿಸಿದೆ. ಶಿವಣ್ಣ ಈ ಹೋವರ್ ಬೋರ್ಡ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳಿಗೆ ಅಪ್ಪು ಅವರನ್ನು ನೆನಪಿಸಿದೆ.

ಡಿಕೆಡಿಯಲ್ಲಿ ಯಾರೆ ಯಾರೆ ಹಾಡಿನ ಮೇಲೆ ಲವ್ವು
ಈ ಬಾರಿ ಏಕ್ ಲವ್ ಯಾ ಸಿನಿಮಾದ ಯಾರೆ ಯಾರೇ ಹಾಡಿಗೆ ಎರಡು ಜೋಡಿಗಳು ಹೆಜ್ಜೆ ಹಾಕಿದ್ದಾರೆ. ಒಂದು ಸದ್ವಿನ್ ಮತ್ತು ಶಾರಿಕಾ ಆದರೆ, ಶಶಾಂಕ್ ಮತ್ತು ತ್ರಿಷಾ ಕೂಡ ಇದೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಪರ್ಫಾಮೆನ್ಸ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಶಶಾಂಕ್ ಮತ್ತು ತ್ರಿಷಾ ರೆಡ್ ಕಲರ್ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದರೆ, ಸದ್ವಿನ್ ಮತ್ತು ಶಾರಿಕಾ ಎಲ್ಲೆ ಕಲರ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಇಬ್ಬರ ಪರ್ಫಾರ್ಮೆನ್ಸ್ ಜಡ್ಜಸ್ ಗಳ ಮನಸ್ಸನ್ನು ಕದ್ದಿದೆ.

ವೇದಿಕೆ ಮೇಲಿದ್ದವರಿಗೂ ನಡುಕ
ಸಿನಿಮಾದಲ್ಲೆಲ್ಲಾ ಅದೆಷ್ಟು ಡ್ಯಾನ್ಸ್ ಮಾಡಿರಲ್ಲ, ಅದೆಷ್ಟು ಫೈಟ್ ಮಾಡಿರಲ್ಲ. ಆದರೆ ಡಿಕೆಡಿ ನಲ್ಲಿ ಮೈನವಿರೇಳುವಂತ ನೃತ್ಯ ಪ್ರದರ್ಶನವಂತು ಆಗುತ್ತಿರುತ್ತೆ. ಸೀಟಿನ ಮೇಲೆ ಕೂತ ಜಡ್ಜಸ್ ಗಳು ಎದ್ದು ಕುಳಿತು ಮಾಡುತ್ತಾರೆ. ಸೀಟಿನಂಚಿಗೆ ತಂದು ಕೂರಿಸುವಂತ ಪ್ರದರ್ಶನ ನೀಡುತ್ತಿದ್ದಾರೆ. ಈ ವಾರದ ಶಿವನ ಅವತಾರದ ನೃತ್ಯವೂ ಅದೇ ರೇಂಜಿಗಿದೆ.


Click it and Unblock the Notifications











