Don't Miss!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಾನು ನನ್ನಪ್ಪ: ಜೀ ಕನ್ನಡ ಸೆಲೆಬ್ರೆಟಿಗಳ ರಿಯಲ್ ಲೈಫ್ ತಂದೆ ಹೇಗಿದ್ದಾರೆ ನೋಡಿ?
ಇಂದು ವಿಶ್ವ ತಂದೆಯಂದಿರ ದಿನ. ಹೀಗಾಗಿ ಎಲ್ಲಾ ಮಕ್ಕಳು ತಮ್ಮ ಮೊದಲ ಹೀರೊಗೆ ಶುಭಾಶಯ ತಿಳಿಸಿದ್ದಾರೆ. ಮೊಬೈಲ್‌ಗಳಲ್ಲಿ ಸ್ಟೇಟಸ್ ಹಾಕಿಕೊಂಡು, ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಹೀಗೆ ನಾನಾ ವಿಶೇಷತೆಗಳ ಮೂಲಕ ಅಪ್ಪಂದಿರ ದಿನವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ಅಪ್ಪ ಎಂದರೆ ಆಕಾಶ, ಅಪ್ಪ ಎಂದರೆ ಶಕ್ತಿ ಎನ್ನುತ್ತಾ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ತಾಯಂದಿರ ದಿನದಂತೆ ಜೀ ಕನ್ನಡ ತಂದೆಯಂದಿರ ದಿನವನ್ನು ಅಷ್ಟೇ ಅದ್ಭುತವಾಗಿ ಸೆಲೆಬ್ರೆಟ್ ಮಾಡಿತ್ತು. ಈ ಕಾರ್ಯಕ್ರಮದ ಮೂಲಕ ಜೀ ತಾರೆಯರ ತಂದೆಯನ್ನು ನೋಡುವ ಅವಕಾಶ ಪ್ರೇಕ್ಷಕರದ್ದಾಗಿದೆ.
ಕೆಟ್ಟ ಮಕ್ಕಳಿರಬಹುದು ಆದರೆ ಈ ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎನ್ನುವ ಮಾತು ಅದೆಷ್ಡು ಸತ್ಯವೋ, ಮಕ್ಕಳಿಗೆ ತಂದೆಯೇ ಮೊದಲ ಹೀರೋ ಎಂಬುದು ಹಲವರ ಪಾಲಿಗಷ್ಟೇ ಸತ್ಯ. ಎಲ್ಲಾ ಕಷ್ಟ ಸುಖದ ನಡುವೆ ಇಂದು ತಮಗನ್ನಿಸಿದ್ದನ್ನು ಗೀಚಿ, ಕೈಗೆಟಕ್ಕಿದ್ದನ್ನು ತೆಗೆದುಕೊಂಡು ಹೋಗಿ, ಹೆಗಲ ಮೇಲೆ ಕೂರಿಸಿ ಆಕಾಶ ತೋರಿಸಿದ ತಂದೆಗೆ ಶುಭಕೋರಿ, ಖುಷಿ ಪಟ್ಟಿದ್ದಾರೆ.
ಪುಟ್ಟಕ್ಕನ
ಮಕ್ಕಳು:
ಕಂಠಿ-ಸ್ನೇಹಾ
ಡ್ಯುಯೆಟ್
ಶುರು..
ಹ್ಯಾಂಡ್ಸಮ್
ಆಗೋದ
ಕಂಠಿ..!
ಸ್ಟಾರ್ ನಟ-ನಟಿಯರ ತಂದೆಯಂದಿರ ಸಮಾಗಮ
ಇಂದು ವಿಶ್ವ ತಂದೆಯಂದಿರ ದಿನ. ಸೋಶಿಯಲ್ ಮೀಡಿಯಾ ಬಳಸುವವರೆ ಎಲ್ಲರೂ ಆಗಿರುವ ಕಾರಣ ಮಕ್ಕಳ ಮತ್ತು ತಂದೆಯ ಬಾಂಧವ್ಯವನ್ನು ನೋಡಿಯೇ ಇರುತ್ತೀರಾ. ಇಷ್ಟು ಅದ್ಭುತ ಜಗತ್ತನ್ನು ಕಂಡು ಖುಷಿ ಪಟ್ಟಿರುತ್ತೀರಿ. ಸಾಮಾನ್ಯ ಜನರೇ ಇಷ್ಟು ಆತ್ಮೀಯವಾಗಿರುವಾಗ ಇನ್ನು ಸೆಲೆಬ್ರೆಟಿಗಳ ತಂದೆಯಂದಿರು ಹೇಗಿರುತ್ತಾರೆ ಎಂಬುದನ್ನು ನೋಡಲು ಕುತೂಹಲವಿದ್ದೆ ಇರುತ್ತೆ. ಅವರು ಹೇಗಿರುತ್ತಾರೆ? ಮಕ್ಕಳ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ಮಕ್ಕಳು ಅಪ್ಪನ ಬಳಿ ಎಷ್ಟು ಕ್ಲೋಸ್ ಆಗಿರುತ್ತಾರೆ? ಎಂಬುದೆಲ್ಲವನ್ನೂ ನೋಡುವ, ತಿಳಿದುಕೊಳ್ಳುವ ಕುತೂಹಲವಿದ್ದೆ ಇರುತ್ತೆ. ಇದೀಗ ಜೀ ಕನ್ನಡ ಕೊಟ್ಟ ಕಾರ್ಯಕ್ರಮದಿಂದ ಆ ಆಸೆ ಈಡೇರಿದೆ. ಸೆಲೆಬ್ರೆಟಿಗಳ ಅಪ್ಪಂದಿರನ್ನು ಕಂಡು ಕಣ್ಣು ಅಭಿಮಾನಿಗಳೂ ಖುಷಿ ಪಟ್ಟಿದ್ದಾರೆ.
ಬೆಟ್ಟದ
ಹೂ:
ರಾಹುಲ್
ಮೇಲೆ
ಅನುಮಾನ:
ಮನೆಕೆಲಸದವನಿಗೆ
ಹೂವಿ
ಗಂಟು
ಹಾಕಲು
ಹೊರಟ
ಮಾಲಿನಿ!

ನಟ-ನಟಿಯರ ಅಪ್ಪಂದಿರ ಹೆಸರು ಇಲ್ಲಿದೆ?
ಧಾರಾವಾಹಿಯ ನಟ ನಟಿಯರ ಹೆಸರಿನ ಜೊತೆಗೆ ಅವರ ಊರು ಅಥವಾ ಅವರ ತಂದೆಯಂದಿರ ಹೆಸರು ಸೇರ್ಪಡೆಯಾಗಿರುತ್ತದೆ. ಆ ರೀತಿಯ ಹೆಸರನ್ನು ಯಾವೆಲ್ಲಾ ಧಾರಾವಾಹಿ ನಟ ನಟಿಯರು ಇಟ್ಟುಕೊಂಡಿದ್ದಾರೆ ಅನ್ನೋ ಡಿಟೈಲ್ ಇಲ್ಲಿದೆ. ಪಾರು ಧಾರಾವಾಹಿಯಲ್ಲಿ ಪಾರು ನಿಜವಾದ ಹೆಸರು ಮೋಕ್ಷಿತಾ ಪೈ. ಈ ಪೈ ಎಂಬ ಹೆಸರು ಕೇಳಿ ಯಾವ ರೀತಿಯದ್ದು ಇದು ಎಂಬ ಅನುಮಾನ ನಿಮಗೆ ಮೂಡಿಯೇ ಇರುತ್ತೆ. ಮೋಕ್ಷಿತಾ ಪೈ ತಂದೆಯ ಹೆಸರು ನಾಗೇಶ್ ಕುಲದೇವ್ ಪೈ. ಇನ್ನು ಆದಿ ಅಪ್ಪನ ಹೆಸರು ಪದ್ಮನಾಭ. ಪ್ರೀತು ಅಪ್ಪನ ಹೆಸರು ನೀಲಪ್ಪ ಮೂಲಿಮನಿ. ಶಿವಾನಿ ಅಲಿಯಾಸ್ ನಮ್ರತಾ ಗೌಡ ತಂದೆಯ ಹೆಸರು ಶ್ರೀನಿವಾಸ ಗೌಡ. ಕಂಠಿ ಅಲಿಯಾಸ್ ಧನುಶ್ ತಂದೆಯ ಹೆಸರು ನಾರಾಯಣಸ್ವಾಮಿ. ಅಮೂಲ್ಯ ಅಲಿಯಾಸ್ ನಿಶಾ ರವಿಕೃಷ್ಣ ತಂದೆಯ ಹೆಸರು ರವಿಕೃಷ್ಣ. ಜೀ ಕನ್ನಡ ಮಕ್ಕಳ ಜೊತೆ ಅವರವರ ತಂದೆಯಂದಿರ ಫೋಟೊ ಹಾಕಿ ಮಾಹಿತಿ ನೀಡಿದೆ.

ಅಪ್ಪಂದಿರ ದಿನಕ್ಕೆ ಭಾವನೆಗಳ ಟಚ್
ಸೆಲೆಬ್ರೆಟಿಗಳು ಎಂದರೆ ಎಲ್ಲರಿಗೂ ಪರಿಚಿತ. ತೆರೆ ಮೇಲೆ ಅವರನ್ನು ನೋಡಿ ಅವರ ಅಭಿಮಾನಿಗಳಾಗಿರುತ್ತೇವೆ. ಆದರೆ ಅದರ ಹಿಂದಿನ ಪರಿಶ್ರಮ ತಂದೆ ತಾಯಂದಿರದ್ದು. ನಟ ನಟಿಯರು ಕೂಡ ಅವಕಾಶ ಸಿಕ್ಕಾಗೆಲ್ಲ ಅವರ ಬಗೆಗಿನ ಗೌರವವನ್ನು ತೋರಿಸಿರುತ್ತಾರೆ. ತೆರೆ ಮೇಲೆ ಮಗಳ ಅಥವಾ ಮಗನ ಡ್ಯಾನ್ಸ್ ನೋಡಿ, ನಟನೆ ನೋಡಿ ಖುಷಿ ಪಟ್ಟ ತಂದೆಯಂದಿರಿಗೆ ಮಕ್ಕಳ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿರುವುದಿಲ್ಲ. ಅದನ್ನು ಜೀ ಕನ್ನಡ ಒದಗಿಸಿಕೊಟ್ಟಿದೆ. ವೇದಿಕೆ ಮೇಲೆ ಮಕ್ಕಳ ಜೊತೆ ನೃತ್ಯವನ್ನು ಮಾಡಿದ್ದಾರೆ.
ಹಸಿರು
ಡ್ರೆಸ್,
ಹಸಿರು
ಮೇಕಪ್,
ಹಸಿರು
ಜ್ಯುವೆಲ್ಲರಿ:
ಮಿರ
ಮಿರ
ಮಿಂಚಿದ
'ಗಟ್ಟಿಮೇಳ'
ಆರತಿ
ಅಪ್ಪಂದಿರ ಮಾಡಿದ ತ್ಯಾಗಕ್ಕೆ ಕಣ್ಣೀರಿನ ಧನ್ಯವಾದ
ಅಪ್ಪ ಎಂದರೆ ಹಾಗೇ ತನಗೆ ಧಕ್ಕದ್ದು ಮಕ್ಕಳಿಗೆ ಧಕ್ಕಲಿ ಏಂಬ ಭಾವನೆ. ಅಪ್ಪ ಹೆಗಲ ಮೇಲೆ ಮಕ್ಕಳನ್ನು ಯಾಕೆ ಕೂರಿಸಿಕೊಂಡು ಓಡಾಡುತ್ತಾನೆ ಎಂದರೆ ತಾನೂ ನೋಡಲು ಆಗದ ಪ್ರಪಂಚವನ್ನು ಮಕ್ಕಳು ಕಾಣಲಿ ಎಂಬುದಕ್ಕೆ ಎಂಬ ಮಾತಿದೆ. ಅದೇ ಪ್ರೀತಿ ತಂದೆ ಮಕ್ಕಳಲ್ಲಿ ಇದ್ದೆ ಇರುತ್ತದೆ. ಮಕ್ಕಳನ್ನು ಸಂತಸವಾಗಿ ಇಡುವುದಕ್ಕೆ ಅಪ್ಪ ಹಲವು ಕಷ್ಟಗಳನ್ನು ಪಡುತ್ತಾನೆ. ಮಕ್ಕಳ ಸುಖ ನೆಮ್ಮದಿಯಷ್ಟೇ ಮುಖ್ಯವಾಗುತ್ತದೆ. ಮಕ್ಕಳು ಬಯಸಿದ್ದೆಲ್ಲವನ್ನು ನೀಡುವವನೇ ಅಪ್ಪ. ಇದೀಗ ಸೆಲೆಬ್ರೆಟಿಗಳ ಪಾಲಿಗೂ ಆಗಿದ್ದು ಅದೇ. 'ನಾನು ನನ್ನಪ್ಪ' ಕಾರ್ಯಕ್ರಮ ಹಲವು ನೋವುಗಳಿಗೆ ವೇದಿಕೆಯಾಗಿದೆ. ತಡೆದುಕೊಂಡಿದ್ದ ಕಣ್ಣೀರಿಗೆ ಸಾಕ್ಷಿಯಾಗಿದೆ. ವ್ಯಕ್ತಪಡಿಸದ ಭಾವನೆಗಳಿಗೆ ಮುಕ್ತ ವೇದಿಕೆಯಾಗಿದೆ. ಅಪ್ಪ ತನಗೇನಾಗಿದ್ದರು ಎಂದು ಹೇಳಿಕೊಳ್ಳಲು ಸಮಯ ಕೊಟ್ಟಿದೆ. ತಂದೆ ಜೊತೆಗೆ ಕುಣಿತದೊಂದಿಗೆ, ಮಗ-ಮಗಳಾಗಿದ್ದಕ್ಕೆ ಧನ್ಯವಾದ ತಿಳಿಸಲು ನಾನು ನನ್ನಪ್ಪ ವೇದಿಕೆ ಸಾಕ್ಷಿಯಾಗಿದೆ.