twitter
    For Quick Alerts
    ALLOW NOTIFICATIONS  
    For Daily Alerts

    Puttakkana Makkalu: 'ಪುಟ್ಟಕ್ಕನ ಮಕ್ಕಳುʼ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಕಂಠಿ, ನಾಗ, ಮುಂಗುಸಿ

    By ಎಸ್ ಸುಮಂತ್
    |

    ಒಂದು ಕಾಲ ಇತ್ತು. ಧಾರಾವಾಹಿಯಲ್ಲಿ ನಟಿಸುವವರನ್ನು, ಸಿನಿಮಾದಲ್ಲಿ ನಟಿಸುವವರನ್ನು ಬರೀ ತೆರೆ ಮೇಲೆ ನೋಡಿಯೇ ಖುಷಿ ಪಡಬೇಕಾಗಿತ್ತು. ಅವರ ಸೌಂದರ್ಯ, ಅವರ ನಟನೆ, ಅವರ ಲೈಫ್ ಸ್ಟೈಲ್ ನೋಡಿ ಅವರನ್ನು ಸ್ವರ್ಗದಲ್ಲಿರುವವರಂತೆ ಟ್ರೀಟ್ ಮಾಡುತ್ತಿದ್ದೆವು. ಅವರನ್ನು ನಾವೂ ದೂರದಿಂದ ಮಾತ್ರ ನೋಡೋದಕ್ಕೆ ಸಾಧ್ಯ. ಹತ್ತಿರದಿಂದ ನೋಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ತೆರೆ ಮೇಲೆ ಗಮನ ಸೆಳೆದವರೆಲ್ಲ ನಮ್ಮ ಪಕ್ಕದಲ್ಲೇ ಬಂದು ನಿಲ್ಲುತ್ತಿದ್ದಾರೆ.

    ಇತ್ತೀಚಿನ ಧಾರಾವಾಹಿಗಳ ರೇಂಜ್‌ ಬದಲಾಯಿಸಿಕೊಂಡಿವೆ. ಸಿನಿಮಾಗಳಲ್ಲಿ ಇದ್ದಂತೆ ರಿಚ್‌ನೆಸ್ ಈಗ ಧಾರಾವಾಹಿಗಳಲ್ಲೂ ಬಂದು ಕೂತಿದೆ. ಅದರಲ್ಲೂ ಕಣ್ಣಿಗೆ ಅದ್ಬುತ ಎನಿಸುವಂತಹ ದೃಶ್ಯಗಳನ್ನು ಈಗ ಸೀರಿಯಲ್ ಗಳಲ್ಲಿ ಕಟ್ಟಿಕೊಡಲಾಗುತ್ತಿದೆ. ಜೀ ಕನ್ನಡದಲ್ಲಿ ಬರುತ್ತಿರುವಂತಹ ಎಲ್ಲಾ ಧಾರಾವಾಹಿಗಳಲ್ಲೂ ನಾವೂ ಈ ವೈಭವವನ್ನ ಕಾಣಬಹುದು. ಅದರಂತೆ ಜನ ಕೂಡ ಈ ಧಾರಾವಾಹಿಗಳನನ್ಉ ಮನಸಾರೆ ಇಷ್ಟಪಟ್ಟು, ಸಿಕ್ಕಾಪಟ್ಟೆ ಟಿಆರ್‌ಪಿಯನ್ನು ಕೊಡುತ್ತಿದ್ದಾರೆ. ಇದೇ ಖುಷಿಯಲ್ಲಿ ಎಲ್ಲಾ ಧಾರಾವಾಹಿಗಳು ಒಂದೊಂದು ಊರಲ್ಲಿ ಜಾತ್ರೆ ಶುರು ಮಾಡಿವೆ.

    Bhavya Gowda: ಒಮ್ಮೆ ಬಳಸಿದ ಬಟ್ಟೆ ಮತ್ತೆ ಬಳಸೋದಿಲ್ವಂತೆ ನಟಿ ಭವ್ಯ ಗೌಡ !Bhavya Gowda: ಒಮ್ಮೆ ಬಳಸಿದ ಬಟ್ಟೆ ಮತ್ತೆ ಬಳಸೋದಿಲ್ವಂತೆ ನಟಿ ಭವ್ಯ ಗೌಡ !

    ಸಕ್ಸಸ್ ಯಾತ್ರೆ ಈಗ ಧಾರಾವಾಹಿಗೆ ಶಿಫ್ಟ್

    ಸಕ್ಸಸ್ ಯಾತ್ರೆ ಈಗ ಧಾರಾವಾಹಿಗೆ ಶಿಫ್ಟ್

    ಒಂದು ಸಿನಿಮಾ 25 ವಾರಗಳ ಕಾಲ ಯಶಸ್ವಿಯಾಗಿ ಓಡಿದರೆ ಅಭಿಮಾನಿಗಳಿಗಾಗಿ ಸಕ್ಸಸ್ ಯಾತ್ರೆ ಶುರು ಮಾಡುತ್ತಾರೆ. ಸಿನಿಮಾ ನೋಡಿ ಯಶಸ್ಸು ಕೊಟ್ಟವರ ಬಳಿಯೇ ಹೋಗಿ ಥ್ಯಾಂಕ್ಸ್ ಹೇಳುತ್ತಾರೆ. ಅದರಲ್ಲೂ ಪವರ್ ಸ್ಟಾರ್ ಡಾ ಪುನೀತ್ ರಾಜ್ ಕುಮಾರ್ ಸೇರಿದಂತೆ ಬಿಗ್ ಸ್ಟಾರ್ ಗಳು ತಮ್ಮ ಸಿನಿಮಾದ ಜಾತ್ರೆ ಶುರು ಮಾಡುತ್ತಾರೆ. ಆದರೆ ಈಗ ಈ ಸಂಪ್ರದಾಯ ಧಾರಾವಾಹಿಗಳಲ್ಲೂ ಶುರುವಾಗಿದೆ. ಒಂದು ಧಾರಾವಾಹಿ ಅತಿ ಹೆಚ್ಚು ಜನಪ್ರಿಯವಾಗಿ ಓಡುತ್ತಿದೆ ಅಂದಾಗ ಆ ಧಾರಾವಾಹಿ ಟೀಂ ಒಂದೊಂದು ಹಳ್ಳಿಗೆ ಹೋಗಿ ಅಲ್ಲಿ ಜಾತ್ರೆ ಮಾಡಿ, ಜನಗಳ ನಡುವೆ ಬೆರೆತು ಬರುತ್ತಾರೆ.

    ಮಂಡ್ಯದಲ್ಲಿ ಪುಟ್ಟಕ್ಕನ ಮಕ್ಕಳ ಅಬ್ಬರ

    ಮಂಡ್ಯದಲ್ಲಿ ಪುಟ್ಟಕ್ಕನ ಮಕ್ಕಳ ಅಬ್ಬರ

    ಹೀಗೆ ಜಾತ್ರೆ ಮಾಡುವುದರ ಹಿಂದೆಯೂ ಒಂದು ಉದ್ದೇಶವಿದೆ. ಯಾಕಂದ್ರೆ ಧಾರಾವಾಹಿಯನ್ನು ನೋಡುವವರಿಗೆ ಒಂದೊಂದು ಎಪಿಸೋಡ್‌ನಲ್ಲೂ ಒಂದೊಂದು ಪ್ರಶ್ನೆಗಳು ಕಾಡುವುದಕ್ಕೆ ಶುರುವಾಗುತ್ತವೆ. ಒಬ್ಬರಿಗೆ ಹೀರೋ ಇಷ್ಟ, ಇನ್ನೊಂದಷ್ಟು ಜನರಿಗೆ ವಿಲನ್ ಇಷ್ಟ. ಇನ್ನು ಹಲವರಿಗೆ ಧಾರಾವಾಹಿಯ ಜೋಡಿ ಇಷ್ಟವಾಗುತ್ತೆ. ಸೋ ಹೀಗೆ ಹಳ್ಳಿ ಹಳ್ಳಿಗೆ ಹೋದಾಗ ಜನರ ಜೊತೆ ಕುಳಿತಾಗ, ಜನರು ಕೂಡ ಆ ಧಾರಾವಾಹಿಯಲ್ಲಿ ಬರುವ ಡೌಟ್‌ಗಳಿಗೆ ಉತ್ತರ ಕಂಡು ಕೊಳ್ಳುತ್ತಾರೆ. ಜೊತೆಗೆ ನಟ-ನಟಿಯರ ಜೊತೆ ಹತ್ತಿರದಿಂದ ಮಾತಾಡಿದ ಖುಷಿ ಅವರಿಗೆ ಸಿಗುತ್ತದೆ.

    ಟೀಂಗೆ ಭಯಂಕರ ಲಾಭ

    ಅಷ್ಟೇ ಅಲ್ಲ ಧಾರಾವಾಹಿ ಟೀಂಗೆ ಇದು ಸಿಕ್ಕಾಪಟ್ಟೆ ಅಡ್ವಾಂಟೇಜ್ ಆಗಿ ಕನ್ವರ್ಟ್ ಆಗುತ್ತೆ. ವೀಕ್ಷಕರು ಆ ಧಾರಾವಾಹಿಯಲ್ಲಿ ಮತ್ತೇನನ್ನು ಬಯಸುತ್ತಿದ್ದಾರೆ ಎಂಬುದು ಸುಲಭವಾಗಿ ಕ್ಯಾಚ್ ಮಾಡಬಹುದಾಗಿರುತ್ತೆ. ಆಗ ಮುಂದಿನ ಪಾತ್ರಗಳಲ್ಲೂ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತೆ.

    ತಮಟೆ ಸೌಂಡಿಗೆ ಫುಲ್ ಡಾನ್ಸ್

    ತಮಟೆ ಸೌಂಡಿಗೆ ಫುಲ್ ಡಾನ್ಸ್

    ಈಗಾಗಲೇ ಮಂಡ್ಯ ಜಿಲ್ಲೆ ತಲುಪಿರುವ ಟಿಂ ಸಖತ್ ಎಂಜಾಯ್ ಮಾಡಿದೆ. ಮಂಡ್ಯ ಜನತೆ ಕೂಡ ಪುಟ್ಟಕ್ಕನ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡಿದೆ. ಹಾರ ಹಾಕಿ ವಾದ್ಯಗೋಷ್ಟಿಯೊಂದಿಗೆ ಸ್ವಾಗತಿಸಿದೆ. ಆ ವಾದ್ಯಗಳ ಸೌಂಡಿಗೆ ಕಂಠಿ, ನಾಗ, ಮುಂಗುಸಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಮಂಡ್ಯ ಜನತೆಯ ಸಂತೋಷ ಅಂತು ಆಕಾಶದಲ್ಲಿ ತೇಲಾಡುತ್ತಿದೆ. ಈ ಸಂವಾದದಲ್ಲಿ ಯಾರಿಗೆ ಏನೇನು ಆಸೆ ಇದೆ ಅನ್ನೋದು ಗೊತ್ತಾಗಲಿದೆ.

    English summary
    zee kannada puttakkana makkalu Written Update on March 30th episode. Here is the details about Puttakkana Makkalu Kanti and team had full masti.
    Wednesday, March 30, 2022, 22:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X