ಇನ್ನೆರಡು ತಿಂಗಳಿನಲ್ಲಿ 'ನಾಗಿಣಿ 2' ಧಾರವಾಹಿ ಅಂತ್ಯ?
ಧಾರಾವಾಹಿಗಳು ಬಹಳ ದಿನಗಳ ಕಾಲ ಪ್ರಸಾರವಾಗುತ್ತವೆ ಎಂಬುದು ಚಾಲ್ತಿಯ ಮಾತು. ಎಷ್ಟೇ ವರ್ಷ ಪ್ರಸಾರವಾದರೂ ಪ್ರತಿ ಧಾರಾವಾಹಿಗೆ, ಕತೆಗೆ ಅಂತ್ಯ ಇದ್ದೇ ಇರುತ್ತದೆ. ಅಂತೆಯೇ ಇದೀಗ 'ನಾಗಿಣಿ 2' ಧಾರಾವಾಹಿ ಅಂತ್ಯವಾಗುತ್ತಿದೆ.
ಈ ವೇಳೆಗಾಗಲೆ 'ನಾಗಿಣಿ 2' ಧಾರಾವಾಹಿ ಅಂತ್ಯವಾಗಬೇಕಿತ್ತು. ಆದರೆ ಅಭಿಮಾನಿಗಳ ಒತ್ತಾಯದಿಂದ ಇನ್ನಷ್ಟು ದಿನಗಳ ಕಾಲ ಧಾರಾವಾಹಿ ಪ್ರಸಾರವಾಗಲಿದೆ. ಇದರಿಂದ ಅಭಿಮಾನಿಗಳು ಕೊಂಚ ಸಂತೋಷದಿಂದ ಇದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ 2' ಉತ್ತಮವಾಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಾಗಿಣಿ ಹಾಗೂ ಆದಿಶೇಷ ಸರಸ ಸಲ್ಲಾಪದ ಸಮಯದಲ್ಲಿ ಆದಿಶೇಷನನ್ನು ಕೊಂದು ನಾಗಮಣಿಯನ್ನು ವಶಪಡಿಸಿಕೊಂಡ ದಿಗ್ವಿಜಯನ ಮೇಲೆ ಹೇಗೆ ಮರುಜನ್ಮ ಎತ್ತಿ ತನ್ನ ಹಗೆಯನ್ನು ಹೇಗೆ ತೀರಿಸಿಕೊಳ್ಳುತ್ತದೆ? ನಾಗಮಣಿಯ ರಕ್ಷಣೆಯನ್ನು ನಾಗಿಣಿ ಹೇಗೆ ಮಾಡುತ್ತದೆ? ಯಾವೆಲ್ಲ ರೀತಿಯಲ್ಲಿ ಅಡೆ ತಡೆ ಬಂದರು ಧೈರ್ಯದಿಂದ ಎಲ್ಲವನ್ನೂ ಎದುರಿಸಿ ನಾಗಮಣಿ ರಕ್ಷಿಸಲಾಗುತ್ತದೆ ಎಂಬುವುದನ್ನು ಈ ಧಾರವಾಹಿಯಲ್ಲಿ ಕಟ್ಟಿಕೊಡಲಾಗಿದೆ.

'ನಾಗಿಣಿ 2' ಧಾರವಾಹಿ ಇನ್ನೇನು ಮುಗಿದೇ ಹೋಗುತ್ತದೆ ಎನ್ನುವ ಸಮಯದಲ್ಲಿ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಮಾಯಾಂಗನೆ ಕತೆಗೆ ವಾಪಸ್ ಎಂಟ್ರಿ ಕೊಟ್ಟಿದ್ದಾರೆ. ಆದಿಶೇಷನ ಮೇಲೆ ಪ್ರೀತಿಯಾಗಿರುವ ಮಾಯಾಂಗನೆ ಶಿವಾನಿಯನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾಳೆ. ಇದೀಗ ಶೈಲುನೇ ಶಿವಾನಿ ಎಂಬ ಅರಿವು ತ್ರಿಶೂಲ್‌ಗೆ ಆಗುತ್ತಿದೆ. ಮಾಯಾ ಆಗಮನ ಕೊಂಚ ಮಟ್ಟಿಗೆ ಅನುಮಾನವನ್ನೂ ತ್ರಿಶೂಲ್‌ಗೆ ಮೂಡಿಸಿದೆ.
ತ್ರಿಶೂಲ್ ಇದೀಗ ತನ್ನ ಹೆಂಡತಿ ಶೈಲುವನ್ನು ಬಿಟ್ಟು ಕೆಲವು ಸಮಯ ದೂರ ಇರುವುದಾಗಿ ಹೇಳುತ್ತಿದ್ದಾನೆ ಆದರೆ ಇದಕ್ಕೆ ಮಾತ್ರ ಶಿವಾನಿ ಒಪ್ಪುತ್ತಿಲ್ಲ, ಅದಕ್ಕೆ ತ್ರಿಶೂಲ್ ನನ್ನ ಹೆಂಡತಿ, ಮಗು ಚೆನ್ನಾಗಿರಬೇಕು, ಒಟ್ಟಿಗೆ ಇರಬೇಕು ಈ ಕಾರಣಕ್ಕಾಗಿ ನಾನು ಸ್ವಲ್ಪ ದಿನ ದೂರ ಇರಲೇಬೇಕು ಎಂದು ಹಠ ಹಿಡಿದಿದ್ದಾನೆ, ಆದರೆ ಶಿವಾನಿ ಮಾತ್ರ ತ್ರಿಶೂಲ್ ಅನ್ನು ಹೋಗಲು ಬಿಡುತ್ತಿಲ್ಲ. ವಿಚಿತ್ರ ಘಟನೆಗಳು ಕಣ್ಣೆದುರು ಬರುತ್ತಿರುವಾಗ ತ್ರಿಶೂಲ್ ಇದರಿಂದ ಕೊಂಚ ಮಟ್ಟಿಗೆ ವಿಚಲಿತನಾಗುತ್ತಾನೆ. ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ನೀನಿಲ್ಲದೇ ನಾನು ಇಷ್ಟು ದೊಡ್ಡ ಮನೆಯಲ್ಲಿ ಹೇಗಿರಲಿ ಎಂದೆಲ್ಲ ಮಾತನಾಡುತ್ತಿದ್ದಾಳೆ ಶಿವಾನಿ. ಬಳಿಕ ತ್ರಿಶೂಲ್ ನಿನಾಗಾಗಿ ನನ್ನ ಮಗುವಿಗಾಗಿ ನಾನು ಹೋಗಲೇ ಬೇಕು ಎಂದು ಹಠ ಹಿಡಿದು ಶಿವಾನಿಗೆ ಮಾತಿಗೆ ಅವಕಾಶ ನೀಡದೇ ಶಿವಾನಿಯನ್ನು ತಬ್ಬಿಕೊಳ್ಳುತ್ತಾನೆ.
ತ್ರಿಶೂಲ್ ಸಂದೇಹವನ್ನು ಸ್ವಾಮಿಗಳು ಪರಿಹರಿಸುತ್ತಾರ? ನಾಗಲೋಕದತ್ತ ತ್ರಿಶೂಲ್‌ನ್ನು ಕರೆದುಕೊಂಡು ಹೋಗುತ್ತಾರ? ಎಂಬ ಪ್ರಶ್ನೆ ಮೂಡುತ್ತಿದೆ. ತ್ರಿಶೂಲ್‌ಗೆ ನೆನಪುಶಕ್ತಿಯನ್ನು ಮರುಕಳಿಸುವ ಪ್ರಯತ್ನದಲ್ಲಿದ್ದಾರೆ ಸ್ವಾಮೀಜಿ. ತ್ರಿಶೂಲ್‌ಗೆ ಹಿಂದಿನ ಜನ್ಮದ ಅರಿವು ಆಗುತ್ತದಾ? ಎಂಬುವುದನ್ನು ಕಾದುನೋಡಬೇಕಿದೆ. ಎರಡು ತಿಂಗಳ ಮಟ್ಟಿಗೆ ನಾಗಿಣಿ 2ವನ್ನು ನೋಡಬಹುದೆಂಬ ಖುಷಿಯಲ್ಲಿ ಫ್ಯಾನ್ಸ್ ಇದ್ದಾರೆ.


Click it and Unblock the Notifications











