»   » ಜೀ ಕನ್ನಡದಲ್ಲಿ ಐವರು ಪುಟಾಣಿಗಳ ಅಂತಿಮ ಸಮರ !

ಜೀ ಕನ್ನಡದಲ್ಲಿ ಐವರು ಪುಟಾಣಿಗಳ ಅಂತಿಮ ಸಮರ !

Posted By:
Subscribe to Filmibeat Kannada
Little Champs
ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಗ್ರ್ಯಾಂಡ್ ಫಿನಾಲೆ (ಅಂತಿಮ ಸ್ಪರ್ಧೆ) ನವೆಂಬರ್ 09 ಮತ್ತು 10, ಶುಕ್ರವಾರ ಮತ್ತು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಐವರು ಪುಟಾಣಿ ಸ್ಪರ್ಧಿಗಳಲ್ಲಿ ಯಾರು ಅಂತಿಮವಾಗಿ 'ಲಿಟ್ಲ್ ಚಾಂಪ್ಸ್' ಪಟ್ಟ ಗಿಟ್ಟಿಸಲಿದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ.

ಈ ಸ್ಪರ್ಧೆಗೆ ಖ್ಯಾತ ಗಾಯಕಿ ಉಷಾ ಉತ್ತುಪ್ ಮತ್ತು ಗುರುಕಿರಣ ವಿಶೇಷ ತಿರ್ಪುಗಾರರಾಗಿ ಭಾಗವಹಿಸಿದ್ದರು. ಸರಣಿಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ವಿಜಯ ಪ್ರಕಾಶ್ ಹಾಜರಿದ್ದರು.

ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು ಮಂಗಳೂರಿನ ಗಗನ, ಬೆಂಗಳೂರಿನ ಕೀರ್ತನ, ಹುಬ್ಬಳ್ಳಿಯ ಆದಿತಿ, ಸಿದ್ಧಾರ್ಥ ಮತ್ತು ವಿಶ್ವನಾಥ ಈ 5 ಪುಟಾಣಿಗಳ ನಡುವೆ ನಡೆದ ಬಿರುಸಿನ ಗಾಯನ ಸಮರ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಗಾಯನದಲ್ಲಿ ಪ್ರತಿಭಾವಂತ ಪುಟಾಣಿಗಳ ಆಯ್ಕೆಗಾಗಿ ರಾಜ್ಯದ ಆರು ಭಾಗಗಳಲ್ಲಿ ಪ್ರತಿಭಾನ್ವೇಷಣೆ (ಆಡಿಷನ್) ನಡೆಸಲಾಗಿದ್ದು, ಗುಲಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು, ದಾವಣಗೆರೆ, ಬೆಂಗಳೂರು ನಗರಗಳಲ್ಲಿ ಆಡಿಷನ್ ನಲ್ಲಿ 2000 ಕ್ಕೂ ಹೆಚ್ಚು ಮಕ್ಕಳು ಬಾಗವಹಿಸಿದ್ದರು.

54 ಮಕ್ಕಳನ್ನು ಆಯ್ಕೆ ಸುತ್ತಿನಲ್ಲಿ ಹಾಡಲು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಜೀ ಕನ್ನಡ ಸ್ಟೂಡಿಯೋಕೆ ಈ ಎಲ್ಲ ಮಕ್ಕಳನ್ನೂ ಕರೆಸಿಕೊಂಡು ಆಯ್ಕೆ ಸುತ್ತಿನ ಸ್ಪರ್ಧೆ ನಡೆಸಿ 17 ಸ್ಪರ್ಧಿಗಳನ್ನು ಅಂತಿಮಗೊಳಿಸಲಾಗಿತ್ತು.

ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ ಜೀ ವಾಹಿನಿಯ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಕನ್ನಡದಲ್ಲಿ 9ನೇ ಆವೃತ್ತಿಯನ್ನು ಪರಿಸಮಾಪ್ತಿಗೊಳಿಸುತ್ತಿದ್ದೇವೆ. ಮಕ್ಕಳ ಮನಸ್ಸಿಗೆ ನೋವಾಗದಂತೆ ಸ್ಪರ್ಧೆ ನಡೆಸಿದ್ದೇವೆ. ಸೋತವರ ಮುಖದಲ್ಲೂ ನಗುವನ್ನು ಮೂಡಿಸಿದ್ದೇವೆ. ಎಲ್ಲ ಕಾಲಕ್ಕೂ ಸಲ್ಲುವ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಜೊತೆಗೆ ಪುಟ್ಟ ಮಕ್ಕಳ ತುಂಟತನ, ಮುಗ್ದತೆ, ಆಯಾಚಿತವಾಗಿ ಮೂಡುವ ಸ್ಪರ್ಧಾ ಮನೋಭಾವ, ಮಿಶ್ರಭಾವನೆಗಳ ಬುತ್ತಿಯಾಗಿ ಈ ಸಲದ ಸ ರಿ ಗ ಮ ಪ ಗ್ರ್ಯಾಂಡ್ ಫಿನಾಲೆ ಮೂಡಿ ಬಂದಿದೆ ಎಂದು ವಿವರಿಸುತ್ತಾರೆ ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ| ಗೌತಮ ಮಾಚಯ್ಯ

ಸ.ರಿ.ಗ.ಮ.ಪ ಗ್ರ್ಯಾಂಡ್ ಫಿನಾಲೆ ಸಂಚಿಕೆಗಳನ್ನು ಇದೇ ಶುಕ್ರವಾರ ಮತ್ತು ಶನಿವಾರ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ವೀಕ್ಷಿಸ... (ಒನ್ ಇಂಡಿಯಾ ಕನ್ನಡ)

English summary
Zee Kannada Reality Show 'Sa Re Ga Ma Pa Little Champs' Grand Finale to Telecast on 09th and 10 November 2012 at 7-00 PM. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada