ಸಂಕ್ರಾಂತಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ, ಹಬ್ಬಕ್ಕೆ ತಯಾರಿ ನಡೆಸುತ್ತಿರುವ ಜೀ ವಾಹಿನಿ..!
ಹಿಂದೂ ಧರ್ಮದವರಿಗೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬ. ಬೇವು ಬೆಲ್ಲ ತಿಂದು ಒಳ್ಳೇದು ಮಾತನಾಡಿ ಎಂದು ಅನೇಕ ಜನರು ಹೇಳುತ್ತಾರೆ. ಬಾಳಲ್ಲಿ ಸಿಹಿ ಕಹಿ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದನ್ನು ಮೆಟ್ಟಿ ನಿಂತು ನಾವೆಲ್ಲರೂ ಬಹಳ ಒಟ್ಟಾಗಿ ಬಾಳೋಣ ಎನ್ನುವುದು ಈ ಪದದ ಅರ್. ಹಬ್ಬ ಇನ್ನೇನು ಸನ್ನಿಹಿತವಾಗಿದೆ. ಹಬ್ಬದ ಸಂಭ್ರಮವನ್ನು ಇನ್ನಷ್ಟು ದುಪ್ಪಟ್ಟು ಮಾಡಲು ಜೀ ಕನ್ನಡ ವಾಹಿನಿಯವರು ಸಾಕಷ್ಟು ಪ್ರಿಪರೇಷನ್ ಮಾಡಿಕೊಂಡಿದೆ. ಸಂಕ್ರಾಂತಿ ಹಬ್ಬ ಎಂದರೆ ಅಲ್ಲಿ ಸಾಕಷ್ಟು ಸಂಭ್ರಮ ಖುಷಿ ಇರಲೇಬೇಕು. ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸಂಕ್ರಾಂತಿ ಅಂದಮೇಲೆ ಅಲ್ಲಿ ಖುಷಿ, ಸಂಭ್ರಮ ಇರಬೇಕು.
ಅದರಲ್ಲೂ ಎಲ್ಲಾ ಹಬ್ಬಗಳನ್ನೂ ವಿಶೇಷ ರೀತಿಯಿಂದ ಆಚರಿಸುವ ಜೀ಼ ಕನ್ನಡದ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ ರಸದೌತಣ ಸಿಗಲಿದೆ. ಈ ವರುಷದ ಸಂಕ್ರಾಂತಿ ಹಬ್ಬವನ್ನು ಎಲ್ಲರ ಜೊತೆ ಆಚರಿಸಲು 'ಪುಟ್ಟಕ್ಕನ ಮಕ್ಕಳು' ಮತ್ತು ಅಣ್ಣಯ್ಯ ಕುಟುಂಬಗಳು ಕೆಂಪೇಗೌಡರ ಹುಟ್ಟೂರಾದ ಮಾಗಡಿಗೆ ತೆರಳಿದ್ದು 'ಪುಟ್ಟಕ್ಕನ ಮಕ್ಕಳು' ಕುಟುಂಬದಿಂದ ಪುಟ್ಟಕ್ಕ, ಕಂಠಿ, ಸ್ನೇಹ, ಸಹನಾ, ರಾಜಿ, ಗೋಪಾಲ ಮತ್ತು 'ಅಣ್ಣಯ್ಯ' ಕುಟುಂಬದಿಂದ ಶಿವೂ, ಪಾರು, ರತ್ನ, ರಾಣಿ, ರಮ್ಯಾ, ರಶ್ಮಿ, ವೀರಭದ್ರ, ಪರಶು ಇನ್ನಿತರ ಕಲಾವಿದರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಹಾಗೆಯೇ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೆಸರಾಂತ ನಿರೂಪಕಿ ಶಾಲಿನಿ ಅವರು ವಹಿಸಿಕೊಂಡಿದ್ದು, ಹಾಡು, ನೃತ್ಯ ಮತ್ತು ಮನರಂಜನೆ ನೋಡಲು ವೀಕ್ಷಕರು ಮಾತ್ರ ತುದಿಗಾಲಿನಲ್ಲಿ ನಿಂತಿದ್ದಾರೆ .ಪುಟ್ಟಕ್ಕನ ಮಕ್ಕಳು ಧಾರವಾಹಿ ತಂಡ ಹಾಗು ಅಣ್ಣಯ್ಯ ಧಾರವಾಹಿ ತಂಡ ಮಾಗಡಿ ಕೋಟೆ ಮೈದಾನಕ್ಕೆ ಆಗಮಿಸಿದ್ದು ಮಾಗಡಿಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರು ಸಂಭ್ರಮಿಸಿದೆ. ಇನ್ನು ಅಭಿಮಾನಿಗಳು ಬಹಳ ಪ್ರೀತಿಯಿಂದ ಬಂದು ಎರಡು ಧಾರವಾಹಿ ತಂಡವನ್ನು ವೆಲ್ ಕಂ ಮಾಡಿಕೊಂಡಿದ್ದಾರೆ.
ಹಬ್ಬದ ಮೆರುಗು ಹೆಚ್ಚಿಸಲಿವೆ ಧಾರವಾಹಿ ತಂಡಗಳು
ನೆಚ್ಚಿನ ತಾರೆಗಳನ್ನು ಭೇಟಿಯಾಗಲು ಸದಾವಕಾಶ ಹಾಗೆಯೇ ಸಂಕ್ರಾಂತಿಯನ್ನು ಜೊತೆಯಾಗಿ ಆಚರಿಸಲು 'ಅಣ್ಣಯ್ಯ-ಪುಟ್ಟಕ್ಕನ ಮಕ್ಕಳು' ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜನರಿಗೆ ಮನರಂಜನೆಯನ್ನು ನೀಡಲು ಕಲಾವಿದರು ಸಜ್ಜಾಗಿ ಬರುತ್ತಿರುವುದು ಮಾತ್ರ ಸತ್ಯ. ಅಣ್ಣಯ್ಯ ಧಾರವಾಹಿ ಇತ್ತೀಚಿನ ದಿನಗಳಲ್ಲಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ನೋಡುಗರಿಗೆ ಬಹಳಷ್ಟು ಖುಷಿಯನ್ನು ನೀಡಿದೆ. ಇದೀಗ ಅಣ್ಣಯ್ಯ ಧಾರವಾಹಿ ತಂಡದಲ್ಲಿರುವ ಶಿವು ಹಾಗೆಯೇ ಪಾರು ಜೋಡಿ ಬಹಳಷ್ಟು ಫೇಮಸ್ ಆಗಿದ್ದು ನೋಡುಗರಿಗೆ ಸಖತ್ ಎಂಟಟೈನ್ನ್ಮೆಂಟ್ ಅನ್ನು ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಪುಟ್ಟಕ್ಕನ ಮಕ್ಕಳು ಧಾರವಾಹಿ ತಂಡ ಆಗಮಿಸುತ್ತಿದ್ದು ಸಾಕಷ್ಟು
ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಾಗುವುದು ಮಾತ್ರ ಸತ್ಯ.
ಧಾರವಾಹಿ ತಂಡದ ಜೊತೆ ಸಂಕ್ರಾಂತಿ ಸಂಭ್ರಮ
ಜೀ ವಾಹಿನಿಯಲ್ಲಿ ಪ್ರಸಾರ ಆಗುವ ಮತ್ತೊಂದು ಜನಪ್ರಿಯ ಧಾರವಾಹಿ ಪುಟ್ಟಕ್ಕನ ಮಕ್ಕಳು. ಧಾರಾವಾಹಿಯಲ್ಲಿ ಇದೀಗ ಹೊಸ ಸ್ನೇಹಾಳದ್ದೆ ಹವಾ ಹೆಚ್ಚಾಗಿದೆ. ಅನೇಕ ಜನರು ಈಕೆಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಹಾಗೆಯೇ ಹಳೆಯ ಸ್ನೇಹಳನ್ನು ನೆನೆದು ಈಕೆ ಇರಬೇಕಾಗಿತ್ತು ಎಂದು ಕೂಡ ಅನೇಕ ಜನರು ಮಾತನಾಡಿಕೊಂಡರು. ಆದರೆ ಕೆಲವರ ಪ್ರಶ್ನೆಗೆ ನಿರ್ದೇಶಕರು ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











