SaReGaMaPa: ಅಪ್ಪುಗಾಗಿ ಡ್ಯಾನ್ಸ್ ಮಾಡಿದ ಚೈತ್ರಾಲಿ; ಅಂದು ಈ ಹುಡುಗಿಗಾಗಿ ಸ್ಟೇಜ್‌ಗೆ ಬಂದಿದ್ರು ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ 50 ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರು ದೈಹಿಕವಾಗಿ ಇಲ್ಲದೆ ಇರಬಹುದು. ಆದರೆ ಅವರನ್ನ ಸೆಲೆಬ್ರೇಷನ್ ಮಾಡೋದನ್ನ ಯಾರೂ ಮರೆಯೋದಿಲ್ಲ. ಅದರಲ್ಲೂ ಜೀ ಕನ್ನಡದಲ್ಲಿ ಪ್ರತಿವರ್ಷ ಕೂಡ ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮ ಇದ್ದೇ ಇರುತ್ತದೆ. ಈ ಬಾರಿಯೂ ಅಪ್ಪು 50ರ ಸಂಭ್ರಮದಡಿ ಕಾರ್ಯಕ್ರಮವನ್ನ ನಡೆಸಲಾಗಿದೆ.
ಈ ವೀಕೆಂಡ್ ಅಪ್ಪು ಸಿನಿಮಾದ ಹಾಡುಗಳಿಗೆ ಡ್ಯಾನ್ಸ್ ಮಾಡಲಾಯ್ತು, 'ಅಪ್ಪು' ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ವಿಶೇಷ ನಮನ ಸಲ್ಲಿಸಲಾಯ್ತು. ಅವರ 50ರ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯ್ತು. ಅದರಲ್ಲೂ ಚೈತ್ರಾಲಿ ಎಲ್ಲರ ಗಮನ ಸೆಳೆದರು.

ಅಪ್ಪುಗಾಗಿ ಚೈತ್ರಾಲಿ ಡ್ಯಾನ್ಸ್
'ಡ್ಯಾನ್ಸ್ ವಿತ್ ಅಪ್ಪು' ಹಾಡಿಗೆ ಚೈತ್ರಾಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಮೂಲಕ ಅಪ್ಪುಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ. ಚೈತ್ರಾಲಿಗೆ ಮಾತು ಬರಲ್ಲ, ಕಿವಿ ಕೇಳಿಸುವುದಿಲ್ಲ. ಆದರೆ ಚೈತ್ರಾಲಿ ಕೈ ಬೆರಳಿನ ಸನ್ನೆಗಳನ್ನ ನೋಡಿ ಅರ್ಥ ಮಾಡಿಕೊಂಡು ಡ್ಯಾನ್ಸ್ ಮಾಡುತ್ತಾರೆ. ಇದೇ ಚೈತ್ರಾಲಿ ಸ್ಪೆಷಾಲಿಟಿ. ಅದರಲ್ಲೂ ಅಪ್ಪು ಸಿನಿಮಾದ ಹಾಡುಗಳಿಗೆ ಡ್ಯಾನ್ಸ್ ಮಾಡೋದು ಅಂದ್ರೆ ಚೈತ್ರಾಲಿಗೆ ತುಂಬಾನೇ ಇಷ್ಟ.
ಚೈತ್ರಾಲಿಗೋಸ್ಕರ ಬಂದಿದ್ದ ಅಪ್ಪು
ಚೈತ್ರಾಲಿ ಡಿಕೆಡಿನಲ್ಲಿ ಸ್ಪರ್ಧಿಯಾಗಿ ಬಂದಿದ್ದರು. ಏನು ಅರಿಯದೆ ಇದ್ದರು ಅಷ್ಟು ಪಾಸಿಟಿವ್ ಆಗು, ಸ್ಫೂರ್ತಿಯಾಗಿ ಕಂಡಿದ್ದರು. ನಿಮಗೆ ಯಾರಿಷ್ಟ ಎಂದು ಕೇಳಿದಾಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಎಂದು ಮಾತಾಡುವುದಕ್ಕೆ ಬಾರದೆ ಹೋದರು ಹೇಳಿದ್ದರು. ಆ ಮಾತನ್ನ ಕೇಳಿದ್ದ ಪುನೀತ್ ರಾಜ್‍ಕುಮಾರ್ ಚೈತ್ರಾಲಿಗೋಸ್ಕರ ಜೀ ಕನ್ನಡ ವೇದಿಕೆಗೆ ಬಂದಿದ್ದರು. ಇಡೀ ಕಾರ್ಯಕ್ರಮವನ್ನು ತಾಳ್ಮೆಯಿಂದ ಕೂತು ನೋಡಿದ್ದರು. ಬರೀ ಸನ್ನೆಗಳಿಂದಾನೇ ಅರ್ಥೈಸಿಕೊಂಡು ಚೈತ್ರಾಲಿ ಮಾಡುವ ಡ್ಯಾನ್ಸ್‌ಗೆ ಅಪ್ಪು ಕೂಡ ಅಂದು ಫಿದಾ ಆಗಿದ್ದರು.
ಆಟೋಗ್ರಾಫ್ ಹಾಕಿದ್ದ ಪುನೀತ್
ಅಂದು ಚೈತ್ರಾಲಿ ಅವರ ಡ್ಯಾನ್ಸ್ ಅನ್ನು ನೋಡಿದ್ದ ಅಪ್ಪು, ಇವತ್ತು ನಾನು ನಿಮಗೋಸ್ಕರ ಬಂದಿದ್ದು ಎಂಬುದನ್ನು ತಿಳಿಸಿದ್ದರು. ಹಾಗೇ ಚೈತ್ರಾಲಿ ತಂದಿದ್ದಂತ ಕರ್ಚೀಫ್ ಗೆ ಆಟೋಗ್ರಾಫ್ ಹಾಕಿ ನೀಡಿದ್ದರು. ಚೈತ್ರಾಲಿಗೆ ಹಾರೈಸಿದ್ದರು. ಚೈತ್ರಾಲಿಗೆ ಮೊದಲೇ ಅಪ್ಪು ಎಂದರೆ ಇಷ್ಟ. ಅಂದು ಅಪ್ಪು ಹಾಕಿದ್ದ ಆಟೋಗ್ರಾಫ್ ಇರುವ ಕರ್ಚೀಫ್ ಅನ್ನು ಫೋಟೋ ಫ್ರೇಮ್ ಹಾಕಿಟ್ಟುಕೊಂಡಿದ್ದಾರೆ. ಅದನ್ನ ಸ್ಟೇಜ್ ಮೇಲೆ ತಂದು ಮತ್ತೆ ತಮ್ಮ ಅಭಿಮಾನವನ್ನ ಪ್ರೂವ್ ಮಾಡಿದ್ದಾರೆ.
ಚೈತ್ರಾಲಿಯನ್ನ ಹೊಗಳಿದ ಜಡ್ಜಸ್
ಚೈತ್ರಾಲಿಯ ಈ ಅಭಿಮಾನಕ್ಕೆ ಜಡ್ಜಸ್ ಕೂಡ ಖುಷಿಯಾದರೂ. ನೀವೂ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಿ ಎಂದು ಹೇಳಿದರು. ನನಗೆ ಅಪ್ಪು ಎಂದರೆ ತುಂಬಾ ಇಷ್ಟ ಎಂದು ಮತ್ತೆ ಚೈತ್ರಾಲಿ ಹೇಳಿದರು. ಒಟ್ನಲ್ಲಿ ಅಪ್ಪು ಮೇಲಿನ ಅಭಿಮಾನವನ್ನ ಚೈತ್ರಾಲಿ ಕಾಪಾಡಿಕೊಂಡು ಬಂದಿರುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಅಪ್ಪು ಅಂದ್ರೆನೆ ಹಾಗೇ. ಅವರನ್ನ ಇಷ್ಟಪಡದವರು ಇಲ್ಲವೇ ಇಲ್ಲ. ಇತ್ತೀಚೆಗೆ ರಿಲೀಸ್ ಆದ ಅಪ್ಪು ಸಿನಿಮಾಗೆ ಥಿಯೇಟರ್‌ಗಳೆಲ್ಲಾ ಹೌಸ್‌ಫುಲ್ ಆಗಿರುವುದು ಇದಕ್ಕೆ ಉದಾಹರಣೆ.


Click it and Unblock the Notifications











