Saregamapa: ಸರಿಗಮಪ ವೇದಿಕೆಯಲ್ಲಿ ಅಂಧಮಕ್ಕಳ ಶಿಕ್ಷಕಿ ಭೂಮಿಕಾ; ಕಣ್ಣೀರು ತರಿಸಿದ ವಿಡಿಯೋ
ಸರಿಗಮಪ ಸೀಸನ್ ಮತ್ತೆ ಶುರುವಾಗಿದೆ. ಈ ಬಾರಿ 6ರಿಂದ 60 ವರ್ಷದವರೆಗಿನ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಒಂದಷ್ಟು ಸ್ಪರ್ಧಿಗಳು ಸಂಗೀತ ಕಲಿತವರು ಇದರಲ್ಲಿ ಭಾಗವಹಿಸಿದ್ರೆ, ಸಂಗೀತದ ಮೇಲೆ ಆಸಕ್ತಿ ಇರುವವರು, ಪ್ರತಿಭೆ ಇರುವವರು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮೇಲ್ನೋಟಕ್ಕೆ ಪ್ರತಿಭೆಗಳ ಮುಖದಲ್ಲಿ ಸಂಗೀತದಿಂದ ನಗು, ಖುಷಿ ಕಂಡರು ಸಹ, ಮನಸ್ಸೊಳಗೆ ಬೆಟ್ಟದಷ್ಟು ನೋವಿದೆ. ಅದು ಸರಿಗಮಪ ವೇದಿಕೆ ಮೇಲೆ ಅನಾವರಣವಾಗುತ್ತಿದೆ.
ಪ್ರತಿ ಸೀಸನ್‌ನಲ್ಲೂ ಜೀ ಕನ್ನಡ ಪ್ರತಿಭೆಗಳ ಜೊತೆಗೆ ಅನಿವಾರ್ಯತೆ ಇರುವವರಿಗೂ ಅವಕಾಶ ನೀಡುತ್ತದೆ. ಈ ಸೀಸನ್ ನಲ್ಲಿ ಅಂತವರು ಹಲವರಿದ್ದಾರೆ. ವಯಸ್ಸಾದ ಹಿರಿ ಜೀವ ರಾಜು ಒಂದು ಕಡೆಯಾದರೆ ಈಗ ಭೂಮಿಕಾ ಅವರ ಹಿನ್ನೆಲೆ ನೋಡಿದರೆ ಕಣ್ಣಂಚಲ್ಲಿ ನೀರು ಬಾರದೆ ಇರುವುದಿಲ್ಲ. ನೀವೂ ಒಮ್ಮೆ ಈ ಸ್ಟೋರಿ ನೋಡಿದ್ರೆ ನಿಮಗೂ ಹಾಗೆ ಅನ್ನಿಸದೇ ಇರಲಾರದು.

ಭೂಮಿಕಾ ಗಡದ್ ಹಾಡಿಗೆ ಖುಷಿ
ಭೂಮಿಕಾ ಗಡದ್ ಇಂದು ಸರಿಗಮಪ ವೇದಿಕೆಯಲ್ಲಿ 'ಅರಳುವ ಹೂಗಳೇ ಆಲಿಸಿರಿ' ಹಾಡು ಹಾಡಿದ್ದಾರೆ. ಈ ಹಾಡು ಭೂಮಿಕಾ ಜೀವನದಲ್ಲಿ ಬಹಳ ಮುಖ್ಯವಾದದ್ದು. ಯಾಕಂದ್ರೆ ಭೂಮಿಕಾ ಇಷ್ಟು ಚಿಕ್ಕ ವಯಸ್ಸಿಗೇನೆ ದೊಡ್ಡ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೊಸಪೇಟೆಯಲ್ಲಿರುವ ಭೂಮಿಕಾ ಅಲ್ಲಿಯೇ ಶಾಲೆಯೊಂದನ್ನ ನಡೆಸುತ್ತಿದ್ದಾರೆ. ಸಂಗೀತದಲ್ಲಿ ಆಸಕ್ತಿ ಜಾಸ್ತಿ. ಸಂಗೀತ ಕಲಿಯದೇ ಇದ್ದರೂ, ಹಿರಿಯರಿಂದ ಬಂದಂತ ಬಳುವಳಿಯಾಗಿದೆ.
ಭೂಮಿಕಾ ಒಂದೊಳ್ಳೆ ಕೆಲಸ
ಭೂಮಿಕಾ ಮಾಡುತ್ತಿರುವ ಈ ಸಮಾಜ ಸೇವೆಗೆ ಎಲ್ಲರೂ ಹ್ಯಾಟ್ಸಪ್ ಹೇಳಲೇಬೇಕಾಗಿದೆ. ಯಾಕಂದ್ರೆ ಭೂಮಿಕಾ ನಡೆಸುತ್ತಿರುವುದು ಅಂಧ ಮಕ್ಕಳ ಶಾಲೆ. ಸುಮಾರು ಮಕ್ಕಳು ಈ ಶಾಲೆಯಲ್ಲಿದ್ದಾರೆ. ತಂದೆ - ಮಗಳೇ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಭೂಮಿಕಾ ಕೊಟ್ಟು ಹೆಚ್ಚು ಸಮಯವನ್ನು ಅಂಧ ಮಕ್ಕಳ ಶಾಲೆಯಲ್ಲಿಯೇ ನಡೆಸುತ್ತಾರೆ. ಮಕ್ಕಳಿಗೆ ಭೂಮಿಕಾ ಎಂದರೆ ಬಹಳ ಪ್ರೀತಿ. ಶಾಲೆಗೆ ಬಂದಾಗೆಲ್ಲ ಅಕ್ಕ ಬಂದ್ರು ಅನ್ನೋ ಖುಷಿ ಮಕ್ಕಳಿಗೆ. ಜೀ ಕನ್ನಡ ಸರಿಗಮಪ ವೇದಿಕೆಯಲ್ಲಿ ಈ ವಿಟಿ ಅನಾವರಣವಾಗಿದೆ.
ಮಕ್ಕಳೊಟ್ಟಿಗೆ ಆಟ..ಪಾಠ..ಸಂಗೀತ
ಅಷ್ಟೇ ಅಲ್ಲ ಮಕ್ಕಳನ್ನ ಶಾಲೆಗೆ ಬಿಟ್ಟು ತಾವೂ ಬೇರೆ ಮನೆಯಲ್ಲಿರುವುದನ್ನು ಮಾಡಿಲ್ಲ. ಭೂಮಿ ಅವರಿಗೆ ಅಂತ ವ್ಯವಸ್ಥೆಯೂ ಇಲ್ಲ. ಮಕ್ಕಳಿರುವ ಕಟ್ಟಡದಲ್ಲಿಯೇ ಇವರು ವಾಸವಾಗಿದ್ದಾರೆ. ಮಕ್ಕಳ ಜೊತೆಗೆ ಭೂಮಿಕಾ ಆಟ ಆಡ್ತಾರೆ, ಪಾಠ ಮಾಡ್ತಾರೆ ಅಷ್ಟೇ ಯಾಕೆ ಮಕ್ಕಳ ಜೊತೆಗೆ ಕೂತು ಸಂಗೀತವನ್ನು ಪ್ರಾಕ್ಟೀಸ್ ಮಾಡ್ತಾರೆ. ಹೊರಗಿನಿಂದ ಬರುವಾಗ ಮಕ್ಕಳಿಗೆ ತಿಂಡಿ ತಿನಿಸನ್ನು ತಂದು ಕೊಡುತ್ತಾರೆ.
ಭೂಮಿಕಾ ಕಾರ್ಯ ಮೆಚ್ಚಿದ ಜನ
ಭೂಮಿಕಾ ಲೋಕಲ್‌ನಲ್ಲಿಯೇ ಒಂದಷ್ಟು ಹಾಡು ಹೇಳುತ್ತಾ ಇರುತ್ತಾರೆ. ಹಲವು ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಾರೆ. ಅದರಿಂದ ಬಂದ ಹಣವನ್ನು ತಂದೆಯವರ ಕೈಗಿಟ್ಟು, ಖರ್ಚಿಗೆ ಬಳಸಿಕೊಳ್ಳಿ ಎನ್ನುತ್ತಾರೆ. ಇದನ್ನು ಕೇಳಿದ ಜಡ್ಜಸ್ ಗೆ ಕಣ್ಣು ತುಂಬಿ ಬಂದಿದೆ. ಇಷ್ಟು ಚಿಕ್ಕ ವಯಸ್ಸಿಗೆ ದುಡಿದ ಅಲ್ಪ ಸ್ವಲ್ಪ ಹಣವನ್ನು ತಂದೆ ಕೈಗಿಡುವ ಭೂಮಿಕ ಗಡಾದ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಜಡ್ಜಸ್ ಮಾತ್ರವಲ್ಲ ವೀಕ್ಷಕರು ಕೂಡ ಮೆಚ್ಚಿದ್ದಾರೆ. ಭೂಮಿಕಾಗೆ ನಿಂಗೆ ಒಳ್ಳೆಯದಾಗ್ಲಮ್ಮ ಎಂದು ಹಾರೈಸಿದ್ದಾರೆ.


Click it and Unblock the Notifications











