Saregamapa; ಶಿವಣ್ಣನಂತೆ ಅಪ್ಪುಗೂ ಅವಕಾಶ ಕೊಡಬೇಕಿತ್ತು ದೇವರು; ಅಭಿಮಾನಿಗಳ ನೋವು

By ಎಸ್ ಸುಮಂತ್

ಶಿವಣ್ಣ ನಮ್ಮ ಕರುನಾಡ ಚಕ್ರವರ್ತಿ.. ನಮ್ಮ ಹೆಮ್ಮೆ.. ಕನ್ನಡ ಇಂಡಸ್ಟ್ರಿಯ ನೆಚ್ಚಿನ ಅಣ್ಣ. ಇಷ್ಟು ದಿನ ಇವರ ಎನರ್ಜಿ ಬಗ್ಗೆ ಮಾತಾಡ್ತಾ ಇದ್ವಿ. ಇನ್ಮುಂದೆ ಸಿನಿಮಾ ಮೇಲಿನ ಇವರ ಬದ್ಧತೆಗೂ ತಲೆ ಬಾಗಲೇಬೇಕು. ಅಂತ ದೊಡ್ಡ ಕಾಯಿಲೆ ಇದ್ದರೂ, ತಾವು ಒಪ್ಪಿಕೊಂಡ ಸಿನಿಮಾಗೋಸ್ಕರ, ಕೊಟ್ಟ ಕಮಿಟ್ಮೆಂಟ್‌ಗೋಸ್ಕರ ಎಲ್ಲಿಯೂ ಸುಸ್ತಾದವರಂತೆ ತೋರಿಸಲೇ ಇಲ್ಲ. 62 ದಾಟಿದರೂ 26 ಯುವಕನಂತೆ ಆಕ್ಟೀವ್ ಆಗಿರುವ ಶಿವಣ್ಣನನ್ನು ನೋಡಿ ಕಲಿಯುವುದು ಬಹಳಷ್ಟಿದೆ.

ಸದ್ಯ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಸರ್ಜರಿಗೆಂದು ಹೋಗುವಾಗ ಶಿವಣ್ಣ ಯಾಕಿಷ್ಟು ಅಪ್ಸೆಟ್ ಆಗಿದ್ದಾರೆ, ಯಾಕಿಷ್ಟು ಭಯ ಪಡ್ತಾರೆ ಎಂದೇ ಹಲವರು ಮಾತಾಡಿಕೊಂಡಿದ್ದರು. ಸರ್ಜರಿ ಆದ ಮೇಲೆ, ನಡೆದ ಚಿಕಿತ್ಸೆಯ ಬಗ್ಗೆ ವೈದ್ಯರು ಹಾಗೂ ಬಾಮೈದ ಹೇಳಿದ್ದನ್ನ ಕೇಳಿ ಜನ ಶಾಕ್ ಆಗಿದ್ದರು. ಈಗ ಶಿವಣ್ಣನ ಎನರ್ಜಿ, ಆಕ್ಟೀವ್ ಆಗಿರುವುದನ್ನು ಕಂಡು ಆ ನೋವನ್ನ ಮರೆತಿದ್ದಾರೆ.

Zee kannada Saregamapa Fans get emotional seeing shiva rajkumar in stage

ಶೋನಲ್ಲಿ ನಗುತ್ತಿದ್ದ ಶಿವಣ್ಣ

ಡಿಕೆಡಿ ವೇದಿಕೆಗೆ ಶಿವಣ್ಣ ಬಂದರೇನೆ ಒಂಥರ ಕಳೆ. ಸ್ಪರ್ಧಿಗಳಿಗೆ ಹುಮ್ಮಸ್ಸು ತುಂಬಿತ್ತಾ ಇದ್ರು ಜೊತೆಗೆ ನಕ್ಕು ನಲಿಯುತ್ತಿದ್ದರು. ಮನಸ್ಸೊಳಗೆ ನೋವಿದ್ದರು, ದೇಹದಲ್ಲೂ ನೋವಿದ್ದರೂ ಯಾರ ಮುಂದೆಯೂ ತೋರಿಸಿಕೊಳ್ಳುತ್ತಿರಲಿಲ್ಲ. ಗೀತಕ್ಕ ಒಮ್ಮೆ ವೇದಿಕೆ ಮೇಲೂ ಹೇಳಿಕೊಂಡಿದ್ದರು. ಡಿಕೆಡಿಯಿಂದ ಇವ್ರು ಖುಷಿಯಾಗಿದ್ದರು ಅಂತ. ಸದ್ಯ ಆರೋಗ್ಯವಂತ ಶಿವಣ್ಣ ಆಗಿ ರಾಜ್ಯಕ್ಕೆ ಹಿಂತಿರುಗಿದ್ದಾರೆ.

ಸರಿಗಮಪ ವೇದಿಕೆಗೆ ಶಿವಣ್ಣ

ಜೀ ಕನ್ನಡ ಸದಾ ಶಿವಣ್ಣನಿಗಾಗಿ ಕಾಯುತ್ತೆ. ಸದ್ಯ ಸರಿಗಮಪ ಮಹಾ ಮನರಂಜ‌ನೆಯ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಶಿವಣ್ಣ ಹಾಗೂ ಗೀತಕ್ಕ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಶಿವಣ್ಣ ಸ್ವಲ್ಪ ಸೊರಗಿದ್ದಾರೆ. ಅಮೆರಿಕಾದಿಂದ ಬಂದ ಮೇಲೆ ಅದು ನೋಡುಗರಿಗೆ ಕಾಣಿಸುತ್ತಿದೆ. ಎಂದಿಗೂ ಎಂದೆಂದಿಗೂ ನಿನ್ನ ಜೊತೆಗೆ ಇರುವೆ ಎನ್ನುವ ಗೀತಕ್ಕ ವೇದಿಕೆ ಮೇಲೆ ಶಿವಣ್ಣನ ಕೈ ಹಿಡಿದು ಕರೆದುಕೊಂಡು ಬಂದಿದ್ದಾರೆ.

ಖುಷಿಯಲ್ಲಿ ತಾರೆಯರು

ಅನುಶ್ರೀ ಮೊದಲಿನಿಂದಲೂ ಅಪ್ಪು ಡೈ ಹಾರ್ಡ್ ಫ್ಯಾನ್. ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಎಲ್ಲರಂತೆ ಅವರು ಮಿಸ್ ಮಾಡಿಕೊಳ್ಳುತ್ತಾರೆ. ಅವರ ಫೋಟೋ ನೋಡಿದರೂ ಕಣ್ಣೀರು ಹಾಕುತ್ತಾರೆ. ಇತ್ತೀಚೆಗೆ ಶಿವಣ್ಣರ ಕಾರ್ಯಕ್ರಮದಲ್ಲಿ ಹೆಚ್ಚು ಮಾತಾಡುತ್ತಾ ಮಾತಾಡುತ್ತಾ ಆ ಪ್ರೀತಿಯನ್ನ, ಅಭಿಮಾನವನ್ನ ಶಿವಣ್ಣ ಅವರಲ್ಲಿ ಕಾಣುತ್ತಿದ್ದಾರೆ. ಶಿವಣ್ಣನ ಬಗ್ಗೆ ಮಾತಾಡುವಾಗಲೂ ಮನಸ್ಸಿನೊಳಗಿ‌ನ ಪ್ರೀತಿ ಎದ್ದು ಕಾಣುತ್ತದೆ. ಬಹಳ ದಿನಗಳ ಬಳಿಕ ವೇದಿಕೆ ಮೇಲೆ ಬಂದ ಶಿವಣ್ಣರನ್ನು ಕಂಡು ಭಾವುಕರಾಗಿದ್ದಾರೆ. ಅನುಶ್ರೀ ಮಾತ್ರವಲ್ಲ, ತಾರಾ, ಶೃತಿ, ಸುಧಾರಾಣಿ, ಅರ್ಜುನ್ ಜನ್ಯಾ, ವೇದಿಕೆ ಮೇಲಿದ್ದ ಮೆಂಟರ್ಸ್ ಎಲ್ಲರೂ ಕೂಡ ಭಾವುಕರಾಗಿದ್ದಾರೆ.

ಅಭಿಮಾನಿಗಳಿಗೆ ಖುಷಿ, ದುಃಖ

ಈ ವಿಡಿಯೋ ನೋಡಿದ ದೊಡ್ಮನೆ ಅಭಿಮಾನಿಗಳಿಗೆ ಶಿವಣ್ಣ ಮೊದಲಿನಂತಾದರಲ್ಲ ಎಂಬ ಹೆಚ್ಚಿನ ಖುಷಿ ಇದ್ರೆ, ಅಪ್ಪು ನೆನಪಾಗಿ ದುಃಖಿತರಾಗಿದ್ದಾರೆ. ಅಪ್ಪು ತುಂಬಾ ಚಿಕ್ಕ ವಯಸ್ಸಿಗೇನೆ ಹೃದಯಾಘಾತದಿಂದ ಎಲ್ಲರನ್ನ ಬಿಟ್ಟು ಹೋಗಿದ್ರು. ಈಗ ಶಿವಣ್ಣ ಸರ್ಜರಿ ಮಾಡಿಸಿಕೊಂಡು ಬಂದಿದ್ದಾರೆ. ದೇವರು ಆರೋಗ್ಯವನ್ನು ನೀಡಿದ್ದಾನೆ. ಇದೇ ರೀತಿ ಆರೋಗ್ಯವನ್ನು ಕರುಣಿಸು ದೇವರೇ ಎಂದು ಬೇಡಿಕೊಳ್ಳುವ ಅಭಿಮಾನಿಗಳು, ಆ ದೇವರು ಅಪ್ಪುಗು ಇಂಥದ್ದೊಂದು ಅವಕಾಶ ನೀಡಬೇಕಿತ್ತು ಎಂದು ಕಮೆಂಟ್ ಮೂಲಕ ತಮ್ಮ ಬೇಸರ ಹೊರ ಹಾಕಿದ್ದಾರೆ.

More from Filmibeat

English summary
Here is the details about Shivanna couple came to Saregamapa stage;
Read more about: shivarajkumar tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X