ಸರಿಗಮಪ ಪ್ರೀಮಿಯರ್ ಲೀಗ್‌ನಲ್ಲಿ ಹಾಡುಗಳದ್ದೇ ದರ್ಬಾರು
ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ - 19 ಮುಕ್ತಾಯವಾಗುತ್ತಿದ್ದಂತೆ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಮತ್ತೆ ಹಾಡುಗಳ ದರ್ಬಾರ್ ಶುರು ಆಗಿದೆ. ಪಂಚ್ ಪೈಲ್ವಾನ್ಸ್ ಹಾಗೂ ಕವಿತೆ ಕಿಂಗ್ಸ್ ನಡುವೆ ಸ್ಪರ್ಧೆ ಏರ್ಪಟ್ಟು ಟ್ರೋಫಿ ಗೆಲ್ಲುವುದು ಯಾರು ಎಂಬ ಕಾತರ ಹೆಚ್ಚಾಗಿದೆ. ಹಳೆಯ ಸರಿಗಮಪ ಸ್ಪರ್ಧಿಗಳೆಲ್ಲರೂ ಸಹ ವೇದಿಕೆ ಮೇಲೆ ಬಂದು ಕಮಾಲ್ ಮಾಡಿದ್ದಾರೆ.
ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಇಬ್ಬರು ಕೂಡ ತಮ್ಮ ತಮ್ಮ ತಂಡಗಳ ಬಗ್ಗೆ ಕಾತುರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾದ ಹಾಡುಗಳನ್ನು ಆಯ್ಕೆ ಮಾಡಿಕೊಂಡು ತೀರ್ಪುಗಾರರ ತಲೆ ತಿರುಗುವಂತೆ ಹಾಡುತ್ತಿದ್ದಾರೆ. ಹಂಸಲೇಖ ಮಹಾ ಗುರುಗಳು ಸಹ ಎಲ್ಲರ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಡಿಗೆ ತಕ್ಕಂತೆ ವೇಷವನ್ನ ಹಾಕಿಕೊಂಡು ಎಲ್ಲರೂ ಸಹ ಹಾಡನ್ನು ಹಾಡುತ್ತಿದ್ದಾರೆ. ಹಾಡಿನ ನಡುವೆ ಹಾಸ್ಯ ಹಾಗೂ ಕಾಲು ಎಳೆದುಕೊಳ್ಳುವುದು ಮನರಂಜನೆಯನ್ನು ನೀಡುತ್ತಿದೆ. ಸರಿಗಮಪ ಈ ಹಿಂದಿನ ಸೀಸನ್‌ನಲ್ಲಿ ಇದ್ದ ಹಳೆಯ ಹಾಡುಗಾರರು ಸಹ ಹೊಸ ಹಾಡುಗಾರರೊಂದಿಗೆ ತಮ್ಮ ಕಂಠವನ್ನು ನೀಡಿ ಸುಶ್ರಾವ್ಯವಾಗಿ ಹಾಡಿದ್ದಾರೆ.
ಹನುಮಂತ-ನಯನಾ ಜುಗಲ್‌ಬಂದಿ
'ನೀರಿಗೆ ಬಾರೆ ಚೆನ್ನಿ' ಎಂದು ಹನುಮಂತ ಹಾಗೂ ನಯನಾ ಹಾಡುತ್ತಿದ್ದರೆ ಎಲ್ಲರೂ ಕೂಡ ತಲೆದೂಗಿ ಇಬ್ಬರ ಕಂಠಕ್ಕೂ ಸಹ ಫಿದಾ ಆಗಿದ್ದರು. ಗುರು ಪ್ರಸಾದ್ ಹಾಗೂ ದತ್ತ ಪ್ರಸಾದ್ ಇಬ್ಬರು ಸಹ 'ಮಾರಿ ಕಣ್ಣು ಹೋರಿ ಮೇಲೆ ಕಟ್ಟುಕನ ಕಣ್ಣು ಕುರಿ ಮ್ಯಾಲೆ' ಎಂದು ಹಾಡಿ ಎಲ್ಲರ ಕಣ್ಣಿಗೆ ಹಬ್ಬವನ್ನು ನೀಡಿದರು. ವಿಜಯ್ ಪ್ರಕಾಶ್ ಒಳ್ಳೆಯ ಕಾಮೆಂಟನ್ನು ಕೊಟ್ಟರು.

'ಸಾಲುತ್ತಿಲ್ಲವೇ' ಎಂದ ಕುಶಿಕ್ -ಪೃಥ್ವಿ
'ಚಿನ್ನದ ಮಲ್ಲಿಗೆ ಹೂವೇ ಬಿಡು ನೀ ಬಿಂಕವ ಚೆಲುವೆ' ಎಂದು ಶರಧಿ ಹಾಗೂ ರೇವಣ ಸಿದ್ದ ಜೋಡಿ ಮೋಡಿ ಮಾಡಿತು. ಕುಶಿಕ್ ಹಾಗೂ ಪೃಥ್ವಿ 'ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ನಿನ್ನ ಹಾಗೇ ಅಮಲು ಬೇರೆ ಇಲ್ಲವೇ' ಎಂದು ಹಾಡಿ ತೀರ್ಪುಗಾರರನ್ನು ಮಂತ್ರ ಮುಗ್ಧರಾಗಿ ಮಾಡಿದರು.
ಅದ್ಭುತವಾಗಿ ಹಾಡಿದ ಜೋಡಿಗಳು
ಪ್ರಗತಿ ಬಡಿಗೇರ್ ಹಾಗೂ ಚೆನ್ನಪ್ಪ ಜೋಡಿ, ಈ ಕಡೆ ಸುನೀಲ್ ಹಾಗೂ ತನುಶ್ರೀ ಇಬ್ಬರ ಜೋಡಿ ಅದ್ಭುತ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದವು. ಪ್ರಗತಿ ಬಡಿಗೇರ್ ಹಾಗೂ ಚೆನ್ನಪ್ಪ 'ಜೀವ ಹೂವಾಗಿದೆ ಬಾಳು ಹಾಡಾಗಿದೆ' ಎಂದು ಹಾಡಿದರು. ತನುಶ್ರೀ ಹಾಗೂ ಸುನಿಲ್ 'ಕುಶಲವೇ ಕ್ಷೇಮವೇ' ಎಂದು ಅದ್ಭುತವಾಗಿ ಹಾಡಿ ಜಡ್ಜ್‌ಸ್‌ನಿಂದ ಉತ್ತಮವಾಗಿ ಕಾಮೆಂಟ್ ಪಡೆದರು.

ಲೀಗ್‌ನಲ್ಲಿ ಪುಟಾಣಿಗಳದ್ದೇ ದರ್ಬಾರ್
ಪ್ರೀಮಿಯರ್ ಲೀಗ್‌ನಲ್ಲಿ ಜ್ಞಾನ, ಶ್ರೀಸಾನಿಧ್ಯ, ದಿಯಾ, ವಿಷ್ಣು ಹವಾ ಜೋರಾಗಿತ್ತು. ಶ್ರೀಸಾನಿಧ್ಯ ಹಾಗೂ ಜ್ಞಾನ ಸೇರಿ 'ಮುತ್ತಾ ಮುತ್ತಾ ಮುತ್ತಾ ಚಿಣ್ಣಾರಿ ಮುತ್ತ' ಎಂದು ಹಾಡಿದರೆ, ದಿಯಾ ಹಾಗೂ ವಿಷ್ಣು 'ಕಿಟ್ಟಪ್ಪ ಕಿಟ್ಟಪ್ಪ ನಿನ್ ಪ್ಲ್ಯೂಟು ಎಲ್ಲಪ್ಪ' ಎಂದು ಎಲ್ಲರ ಮನವನ್ನು ರಂಜಿಸಿದರು.
ಗಗನವನ್ನೇ ಭಾಗಿಸಿದ ಸೃಷ್ಟಿ ಹಾಗೂ ಸಾಕ್ಷಿ
'ಸೂರ್ಯ ನಿನ್ನ ತಾಯಿ ಅಣೆಗೂ' ಇವನು ಎಂದು ಕೀರ್ತನ-ಸಿರಿಸಿಂಚನ ಹಾಡಿದರು. 'ಗಗನವೇ ಭಾಗಿ ಭೂಮಿಯನು ಸೇರಿದ ಹಾಗೇ' ಎಂದು ಸೃಷ್ಟಿ ಹಾಗೂ ಸಾಕ್ಷಿ ಹಾಡಿ ಮ್ಯಾಜಿಕ್ ಮಾಡಿದರು. 'ಮಸ್ತು ಮಸ್ತು ಹುಡುಗಿ ಬಂದ್ಳು' ಎಂದು ಗಗನ್ ಮತ್ತು ಪ್ರವೀಣ್ ಎಂಟರ್‌ಟೈನ್‌ಮೆಂಟ್ ಮಾಡಿದರು.
ಹೊಸಬರು ಮತ್ತು ಹಳಬರು ಇಬ್ಬರು ಸೇರಿಕೊಂಡು ವೇದಿಕೆಯ ಮೇಲೆ ಧೂಳೆಬ್ಬಿಸಿದರು. ತೀರ್ಪುಗಾರರು ಸಹ ಹಾಡುಗಳನ್ನು ಕೇಳುವ ಮೂಲಕ ಎಂಜಾಯ್ ಮಾಡಿದರು.


Click it and Unblock the Notifications











