Sa Re Ga Ma Pa : ಸರಿಗಮಪ ಲಿಟಲ್ ಚಾಂಪ್ಸ್ : ಪುಟಾಣಿಗಳ ಜೊತೆ ಎಂಜಾಯ್ ಮಾಡಿದ ಸೂಪರ್‌ಕ್ವೀನ್ಸ್
ಈ ಬಾರಿ ಮಕ್ಕಳು ಸರಿಗಮಪ ಶೋನಲ್ಲಿ 'ಸೂಪರ್ ಕ್ವೀನ್ಸ್' ಮತ್ತು 'ಸರಿಗಮಪ' ಮಹಾಸಂಗಮದಲ್ಲಿ ಸೂಪರ್ ಕ್ವೀನ್‌ಗಳು ಪುಟಾಣಿ ಮಕ್ಕಳ ಜೊತೆಗೆ ತಮ್ಮ ಧ್ವನಿಯನ್ನು ಸೇರಿಸಿ ಸಕ್ಕತ್ ಎಂಜಾಯ್ ಮಾಡಿದರು. ಮೂವರು ಆಂಕರ್‌ಗಳ ನಿರೂಪಣೆಯಲ್ಲಿ ಮಹಾ ಸಂಗಮದಲ್ಲಿ ರಸದೌತಣವನ್ನೇ ಉಣ ಬಡಿಸಿದರು. ರಾತ್ರಿ ಹಬ್ಬದ ಪ್ರಯುಕ್ತ ಶಿವನನ್ನೇ ಓಲೈಸುವ 'ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ' ಎಂದು ಚಿನ್ನಾರಿ ಮುತ್ತ ಹಾಡು ಹಾಡುತ್ತಿದ್ದರೆ ಈ ಕಡೆ ಮೆಂಟರ್‌ಗಳಾದ ಹೇಮಂತ್, ಇಂದು, ಲಕ್ಷ್ಮೀನಾಗರಾಜ್ ಹಾಗು ನಂದಿತಾ ಸೇರಿದಂತೆ ಹಲವರು 'ನೀಡು ಶಿವ ನೀಡದಿರು ಶಿವ' ಎಂದು ಹಾಡನ್ನು ಹಾಡಿದರು.
ಮಹಾ ಸಂಗಮಕ್ಕೆ ಅಣ್ಣ ಬಾಂಡ್ ಹಾಡಿನಿಂದ ಜೋಶ್ ತುಂಬಲಾಯಿತು. ಕನ್ನಡದ ಕೂಸು ಅಣ್ಣ ಬಾಂಡ್ ಎಂದು ಆಡುವ ಮೂಲಕ ಸೃಷ್ಟಿ ಮತ್ತು ಗೆಬ್ರಿಯೆಲ್ ಒಂದು ವಿನೂತನ ಲೋಕವನ್ನೇ ಸೃಷ್ಟಿ ಮಾಡಿದರು.

'ಶೇಕ್ ಇಟ್ ಪುಷ್ಪವತಿ' ಎಂದು ಡ್ಯಾನ್ಸ್
ಸೂಪರ್ ಕ್ವೀನ್ ರಜಿನಿ ಹಾಗೂ ಸರಿಗಮಪದ ಶಿವಾನಿ 'ಶೇಕ್ ಇಟ್ ಪುಷ್ಪವತಿ' ಎಂದು ಹಾಡುತ್ತಿದ್ದರೆ ಕುಳಿತಲೇ ತೀರ್ಪುಗಾರರು ಕುಣಿದು ಕುಪ್ಪಳಿಸಿದರು. ಇವರಿಬ್ಬರ ಹಾಡನ್ನು ಕೇಳಿದ 'ಬುಲ್ ಬುಲ್' ರಚಿತಾ ಚಪ್ಪಾಳೆ ತಟ್ಟಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು. ಇನ್ನು ಚಿನ್ನಾರಿ ಮುತ್ತ ಹಾಗೂ ಅರ್ಜುನ್ ಜನ್ಯ ಇಬ್ಬರು ಸಹ ಇವರಿಬ್ಬರ ಪರ್ಫಾರ್ಮೆನ್ಸ್ ನೋಡಿ ಫಿದಾ ಆದರು. ನಂತರ ಎಲ್ಲರೂ ಸೇರಿ ಸ್ಟೇಜ್ ಮೇಲೆ ಬಂದು 'ಶೇಕ್ ಇಟ್ ಪುಷ್ಪವತಿ' ಎಂದು ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

'ಕಿರಿಕ್ ಪಾರ್ಟಿ' ಹಾಡು ಹಾಡಿದ ದಿಯಾ-ರಶ್ಮಿ
ಸೂಪರ್ ಹಿಟ್ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ' ಎಂದು ಸೂಪರ್ ಕ್ವೀನ್ಸ್‌ನ ರಶ್ಮಿ ಹಾಗೂ ಸರಿಗಮಪ ನೇಹಾ ಹಾಡಿದರು. ಇದೇ ವೇಳೆ ಎಂದಿನಂತೆ ತಮ್ಮ ಹಾಸ್ಯದ ಮೂಲಕ ನಗುವಿನ ಕಚಗುಳಿ ಇಟ್ಟರು. ಬುಲ್ ಬುಲ್ ರಚ್ಚು ಹಾಗೂ ಕುರಿ ಕಥೆಯಲ್ಲಿ ಕೊನೆಗೆ ಸಸ್ಪೆನ್ಸ್ ಇಟ್ಟು ಕುರಿಯನ್ನು ನಗಿಸುವಂತೆ ಮಾಡಿದರು.

'ಕಾಣದಂತೆ' ಎಂದ ಪಂಕಜ್ -ನೀತು
'ರೆಕ್ಕೆಯಾ ಕುದುರೆ ಏರಿ' ಎಂದು ಹಾಡನ್ನು ಪ್ರಗತಿ ಹಾಗೂ ಗೀತಾ ಹಾಡಿದರು. ಈ ಹಾಡು ಎಲ್ಲರಿಗೂ ಬಹಳ ಇಷ್ಟವಾಯಿತು. ತಮ್ಮ ಅಪ್ಪಂದಿರ ಕೈಹಿಡಿದು ಹಾಡಿದರು. ಇದೇ ವೇಳೆ ಗೀತಾರ ಅಪ್ಪ ಯಾವ ರೀತಿ ಅಪ್ಪನ ಜವಾಬ್ದಾರಿ ಇದೆ ಎಂಬುದನ್ನು ತಿಳಿಸಿಕೊಟ್ಟರು. 'ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು' ಎಂದು ಸೂಪರ್ ಕ್ವೀನ್‌ನ ನೀತು ಹಾಗೂ ಸರಿಗಮಪದ ಪಂಕಜ್ ಹಾಡಿದರು.

ರೆಮೋ - ಖುಷಿ ಹಾಡು ಸೂಪರ್
ರೆಮೋ ಹಾಗೂ ಖುಷಿ ಇಬ್ಬರೂ ಸೇರಿ 'ಚೆಲುವೆ ನೀನು ನಕ್ಕರೆ ನನ್ನ ಬಾಳೆ ಸಕ್ಕ'ರೆ ಎಂದು ಹಾಡುವ ಮೂಲಕ ಎಲ್ಲರ ಮನದಲ್ಲೂ ಸಕ್ಕರೆ ಎಂತಹ ಸವಿ ಭಾವವನ್ನ ತಂದರು. ಪುಟಾಣಿ ಪೋರಿ ಶ್ರೀಸಾನಿಧ್ಯ ಹಾಗೂ ಸೂಪರ್ ಕ್ವೀನ್‌ನ ಅಪೂರ್ವ ಇಬ್ಬರು ಸೇರಿ 'ನವಿಲೇನೋ ಕುಣಿಬೇಕು ಕೋಗಿಲೆಯು ಹಾಡಬೇಕು ಅಪ್ಪನು ದುಡಿಬೇಕು ಅವ್ವನು ಹಡಿಬೇಕು' ಎಂದು ಹಾಡಿದರು.

ಐಶ್ವರ್ಯ- ವಿಷ್ಣು ಜುಗಲ್‌ಬಂದಿ
ಐಶ್ವರ್ಯ ಹಾಗೂ ಸರಿಗಮಪ ವಿಷ್ಣು 'ಚೆಲುವೆ ಒಂದು ಕೇಳ್ತೀನಿ' ಹಾಡನ್ನು ಹಾಡಿದರು. 'ನಿಲ್ಲೇ ನಿಲ್ಲೆ ಕಾವೇರಿ' ಎಂದು ಸರಿಗಮಪ ಸ್ಪರ್ಧಿ ಯೋಗಶ್ರೀ ಜೊತೆಗೆ ಹೇಮಂತ್ ಸಹ ಧ್ವನಿ ಸೇರಿಸಿ ಹಾಡನ್ನ ಹಾಡಿ ಎಲ್ಲರನ್ನ ರಂಜಿಸಿದರು. ಅರ್ಚಿಷಾ ಹಾಗೂ ಗುರುಪ್ರಸಾಸ್ 'ತೊಂದ್ರೆ ಇಲ್ಲ ಪಂಕಜ' ಎಂದು ಹಾಡುವ ಮೂಲಕ ಎಲ್ಲರನ್ನು ಕುಣಿಸಿದರು.


Click it and Unblock the Notifications











