ಸರಿಗಮಪ ಲಿಟಲ್ ಚಾಂಪ್ಸ್ : ಶೋ ಯುವರ್ ಸ್ಟ್ರೆಂಥ್ ರೌಂಡ್‌ನಲ್ಲಿ ಶಕ್ತಿ ಪ್ರದರ್ಶನ

ಈ ಬಾರಿ ಮಕ್ಕಳು ಸರಿಗಮಪ ಶೋನಲ್ಲಿ ಮಕ್ಕಳು ತಮ್ಮ ಪ್ರತಿಭೆ ಮೂಲಕ ತಮ್ಮಲ್ಲಿರುವ ಶಕ್ತಿಯನ್ನು ಪ್ರದರ್ಶನ ಮಾಡಿದರು. ಮೆಂಟರ್ಸ್ ತಮ್ಮ ಸಹ ಬಹಳ ಕಷ್ಟದ ಸಾಂಗ್ ಗಳನ್ನು ಸೆಲೆಕ್ಟ್ ಮಾಡಿ ತಮ್ಮ ಸ್ಫರ್ಧಿಗಳ ಕೈಯಲ್ಲಿ ಹಾಡಿಸಿದರು. ಇದೇ ವೇಳೆ ಮೈಲಾ ದಿನಾಚರಣೆಯ ಪ್ರಯುಕ್ತ ಒಂದೊಳ್ಳೆಯ ಗೀತೆಯನ್ನ ಹಾಡಿಸಲಾಯಿತು. ಹಂಸಲೇಖರವರು ಅಲ್ಲಿಯೇ ಸಾಹಿತ್ಯವನ್ನ ರಚಿಸಿ ಹೆಣ್ಣು ಮಕ್ಕಳಿಗಾಗಿ ವಿಜಯ್ ಪ್ರಕಾಶ್ ರವರ ಕೈಯಲ್ಲಿ ಒಂದು ಗೀತೆಯನ್ನು ಹಾಡಿಸಿದರು.
ಸರಿಗಮಪ ವೇದಿಕೆಗೆ ಬಂದಂತಹ ಪುಟ್ಟಕ್ಕನ ಮಕ್ಕಳು ವೇದಿಕೆಗೆ ವಿಶಿಷ್ಟವಾದ ರಂಗನ್ನು ತಂದರು. ಪ್ರಗತಿ ಬಡಿಗೇರ್ ಅವರ ಕುಟುಂಬದ ಜೊತೆಗೆ ಫೋಟೋವನ್ನು ತೆಗೆಸಿಕೊಂಡು ಸಂಭ್ರಮ ಪಟ್ಟರು. ಇದೇ ಸಂದರ್ಭದಲ್ಲಿ ಅನುಶ್ರೀ ವಿಜಯಪ್ರಕಾಶ್‌ರವರು ಪುಟ್ಟಕ್ಕನ ಮಕ್ಕಳನ್ನು ಇವರಿಗೆ ಒಮ್ಮೆ ಪರಿಚಯ ಮಾಡಿಸಬೇಕು ಎಂದಿದ್ದನ್ನು ನೆನಪಿಸಿದರು.
ಕಾಯಿಸಬೇಡ ಬಾರೇ ಎಂದ ಕುಷಿಕ್
ದಿಯಾ ಹೆಗಡೆ ಅಭಿಮಾನಿಗಳೇ ನಮ್ಮನೆ ದೇವರು ಎಂದು ಪುನೀತ್ ರಾಜಕುಮಾರ್ ರವರ ಹಾಡನ್ನು ಹಾಡಿದರು. ಈ ಸಂದರ್ಭದಲ್ಲಿ ದಿಯಾಗೆ ಒಂದು ಸರ್ಪ್ರೈಸ್ ಕಾದಿತ್ತು ದಿಯಾಳನ್ನು ಇಷ್ಟಪಡುವ ಅಭಿಮಾನಿ ಬಳಗದವರು ಸರಿಗಮಪ ವೇದಿಕೆಗೆ ಬಂದು ದಿಯಾಗೆ ಅಚ್ಚರಿಯನ್ನ ಮೂಡಿಸಿದರು. ಕುಷಿಕ್ ಆಡಿದ ಹಾಡಿಗೆ ಜಡ್ಜಸ್ ಒಳ್ಳೆಯ ಪ್ರಶಂಸೆ ನೀಡಿದರು. ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ ಎಂದು ಕುಷಿಕ್ ಹಾಡುತ್ತಿದ್ದರೆ ಎಲ್ಲರೂ ಸಹ ಒಮ್ಮೆ ಎಲ್ಲೋ ಕಳೆದು ಹೋಗಿದ್ದರು.
ಟುವ್ವಿ ಟುವ್ವಿ ಎಂದ ವಿಷ್ಣುವಸಿಷ್ಠ್
ಶಿವರಾಜ್ ಕುಮಾರ್ ಅವರ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ ಎಂದು ವಿಷ್ಣು ವಸಿಷ್ಟ್ ತನ್ನ ಪುಟಾಣಿ ಕಂಠದ ಮೂಲಕ ಹಾಡಿದನು. ಸ್ವರ ಸಂಸ್ಥಾನವೇ ಶರಣು ಎನ್ನುವಂತೆ ಸಾವಿರದ ಶರಣವ್ವ ಕನ್ನಡದ ತಾಯಿ ಎಂದು ಶಿವಾನಿ ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಮನಸ್ಸನ್ನು ಸೂರೆಗೊಳಿಸಿದರು.
ಕಾಣದ ಕಡಲಿಗೆ ಹಂಬಲಿಸಿದ ಪಂಕಜ್
ಪುಟಾಣಿ ಶ್ರೀ ಸಾನಿಧ್ಯ ಶಿವರಾಜ್ ಕುಮಾರ್ ರವರ ಇಲ್ಲಿ ನೋಡಿ ಪುಷ್ಪ ಮಾತಾಡೇ ಪುಷ್ಪ ಎಂದು ಹಾಡುತ್ತಿದ್ದರೆ ಸ್ವರ ಸಂಸ್ಥಾನದಲ್ಲಿದ್ದವರ ಮೈ ಮನಸ್ಸು ರೋಮಾಂಚನವಾಯಿತು. ಈ ಕಡೆ ಪಂಕಜ್ ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂದು ಹಾಡುತ್ತಿದ್ದರೆ ಎಲ್ಲರೂ ಸಹ ತಲೆದೂಗಿದರು.
ಪ್ರೀತ್ಸೆ ಪ್ರೀತ್ಸೆ ಎಂದು ಹೃದಯ ಗೆದ್ದ ಗುರುಪ್ರಸಾದ್
ಪ್ರಗತಿ ಬಡಿಗೇರ್ ನೀನೇ ಮೊದಲು ನೀನೇ ಕೊನೆ ಎಂದು ಆಡುತ್ತಿದ್ದರೆ ಎಲ್ಲರ ಮನಸ್ಸು ಸಹ ಒಮ್ಮೆ ಪ್ರೀತಿಯ ಕಡಲಿಗೆ ಜಾರಿತು. ಎಲ್ಲರೂ ಸಹ ಪ್ರಗತಿ ಬಡಿಗೇರ್ ಧ್ವವಿಯನ್ನು ಮೆಚ್ಚಿಕೊಂಡರು. ಈ ಕಡೆ ಗುರುಪ್ರಸಾದ್ ಉಪೇಂದ್ರ ರವರ ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನೇ ಪ್ರೀತ್ಸೆ ಎಂದು ಹಾಡಿ ಎಲ್ಲರ ಹೃದಯವನ್ನ ಗೆದ್ದುಬಿಟ್ಟನು.
ಆಲೋಚನೆ ಮಾಡಿದ ತನುಶ್ರೀ
ತನುಶ್ರೀ ಆರಾಧನೆ ಆಲೋಚನೆ ಎಲ್ಲ ನಿಂದೆನೆ ಎಂದು ಹಾಡುತ್ತಿದ್ದರೆ ಎಲ್ಲರೂ ಸಹ ಮನದೂಗಿ ಹಾಡನ್ನು ಕೇಳಿದರು. ಇದೇ ವೇಳೆ ತನುಶ್ರೀಗೆ ಜಡ್ಜಸ್ ಗಳು ಒಳ್ಳೆಯ ಕಾಮೆಂಟನ್ನು ನೀಡಿದರು. ಅನುಶ್ರೀ ಅವರು ಸರಿಗಮಪ ವೇದಿಕೆಯಲ್ಲಿ ಆನ್ಲೈನ್ ಮೂಲಕ ಮ್ಯಾಜಿಕ್ ಕಲಿತಿದ್ದೇನೆ ಎಂದು ಹೇಳುವ ಮೂಲಕ ಎಲ್ಲರನ್ನ ನಕ್ಕು ನಗಿಸಿದರು.


Click it and Unblock the Notifications











