Sa Re Ga Ma Pa Lil Champs : ಸಿಂಗ್ ವಿಥ್ ಮೆಂಟರ್ಸ್ ರೌಂಡ್‌ನಲ್ಲಿ ಚಮತ್ಕಾರ

By ಶೃತಿ ಹರೀಶ್ ಗೌಡ
Zee Kannada saregamapa little champs season 19 Written Update on March 18th And 19th episode

ಈ ಬಾರಿ ಮಕ್ಕಳು ಸರಿಗಮಪ ಶೋನಲ್ಲಿ ಮಕ್ಕಳು ತಮ್ಮ ಮೆಂಟರ್ಸ್‌ಗಳ ಜೊತೆ ಹಾಡನ್ನು ಹಾಡಿ ಖುಷಿಯನ್ನು ಪಟ್ಟರು.‌ ತಮ್ಮ ಗುರುಗಳ ಜೊತೆಗೆ ಸ್ವರ ತಾಳವನ್ನ ಸೇರಿಸಿ ಗುರುಗಳ ಹತ್ತಿರ ಶಹಬ್ಬಾಷ್ ಗಿರಿ ಪಡೆದುಕೊಂಡರು. ಪ್ರೇಕ್ಷಕರು ಮತ್ತಷ್ಟು ನೋಡಬೇಕು ಎಂಬಂತೆ ಗಾನ ಕೋಗಿಲೆಗಳು ಹಾಡನ್ನು ಹಾಡಿದರು.

ಎ ಯಿಂದ ಝೆಡ್ ವರೆಗೆ ಅಪ್ಪು ವರ್ಣಣೆ

ದಿಯಾ ಹೆಗ್ಡೆ , ಶ್ರೀಸಾನಿಧ್ಯ, ವಿಷ್ಣು ಮೂವರು ಸೇರಿ ವೇದಿಕೆಯ ಮೇಲೆ ಒಂದು ಹೊಸ ಲೋಕವನ್ನೇ ಸೃಷ್ಟಿ ಮಾಡಿದರು. ಎದೆಯೊಳಗೆ ಗೀಟಾರ್ ಡಿಂಗ್ ಡಿಂಗ್ ಎನ್ನುತ್ತದೆ ಎಂದು ಹಾಡು ಆಡುವ ಮೂಲಕ ಎಲ್ಲರ ಮನಸ್ಸನ್ನು ಸೂರೆಗೊಳಿಸಿದರು. ನಂತರ ದಿಯಾ ಹೆಗ್ಡೆ ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ಎ ಯಿಂದ ಝೆಡ್ ವರೆಗಡ ಅಪ್ಪುವನ್ನು ವರ್ಣಣೆ ಮಾಡಿದಳು.

ವೀಣೆ ವಾದನದಿಂದ ಕಂಪು ಸೂಸಿದ ನಂದಿತಾ

ಅನುರಾಧ ಭಟ್ ಹಾಗೂ ತನುಶ್ರೀ ತೆರೆದಿದೆ ಮನ ಓ ಬಾ ಅತಿಥಿ ಎಂದು ಹಾಡುವ ಮೂಲಕ ಸ್ವರ ಸಂಸ್ಥಾನವೇ ಬೆರಗಾಗುವಂತೆ ಹಾಡಿದರು. ತನುಶ್ರೀ ಮೆಂಟರ್ ಅನುರಾಧ ಭಟ್ ಸಮದಲ್ಲೇ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ವೀಣೆ ವಾದನದ ಮೂಲಕ ನಂದಿತಾ ಕಂಪು ಸೂಸುವ ಹಾಗೇ ಇಂಪನ್ನು ತಂದರು.

ಕಲ್ಲಲ್ಲಿ ಹೂ ಅರಳಿಸಿದ ಹೇಮಂತ್‌- ಗುರುಪ್ರಸಾದ್

ಕಲ್ಲರಳಿ ಹೂವಾಗಿ ಹೂ ಅರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ ಎಂದು ಎಲ್ಲರ ಎದೆಯನ್ನು ಹೇಮಂತ್ ಹಾಗೂ ಗುರುಪ್ರಸಾದ್ ನಡುಗಿಸಿದರು.ಈ ಕಡೆ ಲಕ್ಷ್ಮೀ ನಾಗರಾಜು ಸಮೀಕ್ಷಾ ಮತ್ತು ಸೃಷ್ಟಿ ಸುರೇಶ್ ಜೊತೆಗೆ ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಎಂದು ಶ್ರಾವಣವನ್ನು ಕರೆದರು. ಆಸ್ಕರ್ ಅವಾರ್ಡ್ ಗೆದ್ದ ನಾಟು ನಾಟು ಹಾಡಿಗೆ ಅಭಿನಂದನೆ ಸಲ್ಲಿಸಲಾಯಿತು.

ಜಗದೋದ್ಧಾರನ ಆಡಿಸಿದ ಪ್ರಗತಿ- ಇಂದು ನಾಗರಾಜ್

ಜಗದೋದ್ಧಾರನನ್ನು ಸ್ವರ ಸಂಸ್ಥಾನದ ಒಳಗೆ ಇಂದು ನಾಗರಾಜ್ ಅವರ ಜೊತೆಗೆ ಪ್ರಗತಿ ಬಡಿಗೇರ್ ಸೇರಿಕೊಂಡು ಆಡಿಸಿದರು. ಇವರ ಜೊತೆಗೆ ವಿಜಯ ಪ್ರಕಾಶ್ ಸಹ ಪ್ರಗತಿ ಬಡಿಗೇರ್‌ಗೆ ಬಹಳ ಅಚ್ಚುಕಟ್ಟಾಗಿ ಸ್ವರಗಳನ್ನು ಹೇಳಿಕೊಟ್ಟರು. ಹಂಸಲೇಖ ಮಹಾಗುರುಗಳು ಅವರ ಅಣ್ಣನನ್ನು ಸರಿಗಮಪ ವೇದಿಕೆಯಲ್ಲಿ ನೋಡಿ ಭಾವುಕರಾದರು. ನಂತರ ಅಣ್ಣನ ಪಾದಾರವಿಂದಗಳಿಗೆ ಎರಗಿದರು.

ಶ್ರೀಕಂಠನನ್ನು ಕರೆದ ರೇವಣ್ಣ - ಸುಚೇತನ್

ಮೆಂಟರ್ ಸುಚೇತನ್ ಹಾಗೂ ರೇವಣ್ಣ ಶ್ರೀಕಂಠ ವಿಷಕಂಠ ಎಂದು ನಂಜುಂಡೇಶ್ವರನನ್ನು ಕರೆದರು. ಇವರ ಹಾಡಿಗೆ ಸ್ವರ ಸಂಸ್ಥಾನ ತಲೆದೂಗಿತು. ನಂತರ ಇಂದು ನಾಗರಾಜ್ ಹಾಗೂ ಪಂಕಜ್ ಮಾಸ್ ಹಾಡಿಗೆ ಹಾಡಿದರು. ನಂತರ ಸುಚೇತನ್ ಜೊತೆಗೆ ಸಿರಿ‌ಸಿಂಚನ ಬಯಸದೇ ಬಳಿ ಬಂದೆ ಬಯಕೆಯ ಸಿರಿ ತಂದೆ ಎಂದು ಹಾಡಿದರು.

ಅನುಶ್ರೀ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಮಹಾಗುರುಗಳು ಎಲ್ಲಾ ಸ್ಪರ್ಧಾಳುಗಳಿಗೆ ಸ್ಪೂರ್ತಿಯ ಮಾತುಗಳನ್ನು ಹಾಡವ ಮೂಲಕ ಹುರಿದುಂಬಿಸಿದರು. ಅರ್ಜುನ್ ಜನ್ಯ ಅನುಶ್ರೀ ಅವರ ಕಾಲನ್ನು ಎಳೆದರು. ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರ ಗೆಳೆತನ ಎಲ್ಲರಿಗೂ ಇಷ್ಟವಾಗಿದೆ. ಮೆಂಟರ್ಸ್‌ಗಳು ಸಹ ತಮ್ಮ ತಮ್ಮ ಶಿಷ್ಯರಿಗೆ ಅಚ್ಚುಕಟ್ಟಾಗಿ ಹಾಡುಗಳನ್ನು ಹೇಳಿಕೊಟ್ಟು ಪ್ರಸ್ತುತ ಪಡಿಸಿದರು.

More from Filmibeat

English summary
Zee Kannada saregamapa little champs season 19 Written Update on March 18th And 19th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X