ಸರಿಗಮಪ ಲಿಟಲ್ ಚಾಂಪ್ಸ್ : ಥೀಮ್ ಚಾಲೆಂಜ್ ರೌಂಡ್‌ನಲ್ಲಿ ಚಾಲೆಂಜಿಗ್ ಫಾರ್ಮಮೆನ್ಸ್
ಈ ಬಾರಿ ಮಕ್ಕಳು ಸರಿಗಮಪ ಶೋನಲ್ಲಿ ಮಕ್ಕಳು ಥೀಮ್ ಚಾಲೆಂಜ್ ರೌಂಡ್‌ನಲ್ಲಿ ಚಾಲೆಂಜಿಗ್ ಫಾರ್ಮಮೆನ್ಸ್‌ನ್ನು ನೀಡಿದರು. ಎಲ್ಲರು ಸಹ ಉಬ್ಬೇರುವಂತೆ ಹಾಡನ್ನು ಹಾಡಿದರು. ಜಡ್ಜ್‌ಸ್ ಹಾಗೂ ಜೂರಿ ಮೆಂಬರ್ಸ್ ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕ್ಲಾಸ್ ಸಾಂಗ್‌ಗೂ ಸೈ, ಮಾಸ್ ಸಾಂಗ್‌ಗೂ ಸೈ ಎಂದು ಮಕ್ಕಳು ಹಾಡಿ ನಕ್ಕು ನಲಿದರು. ಕೆಲವು ಸ್ಪರ್ಧಿಗಳು ಜಡ್ಜ್‌ಸ್‌ಗಳ ಮೆಚ್ಚುಗೆಗೆ ಪಾತ್ರರಾದರು. ಇನ್ನೂ ಕೆಲವರು ಆಶ್ಚರ್ಯ ಎಂಬಂತಹ ರೀತಿಯಲ್ಲಿ ತಮ್ಮ ಪ್ರದರ್ಶನವನ್ನು ತೋರಿಸಿ ಶಹಬ್ಬಾಶ್ ಗಿರಿಯನ್ನು ಪಡೆದುಕೊಂಡರು.

ಶಿವನಿಗೆ ಶರಣು ಶರಣು ಎಂದ ಶಿವಾನಿ
ಕುಶಿಕ್ ಮತ್ತು ತನುಶ್ರೀ ಇಬ್ಬರು ಲವ್ ಥೀಮ್‌ನಲ್ಲಿ ಬಹಳ ಚನ್ನಾಗಿ ಹಾಡುವ ಮೂಲಕ ಜಡ್ಜ್‌ಸ್ ಮನಸೊರೆಗೊಳಿಸಿದರು. ಎನೇ ಕೇಳು ಕೊಡುವೆ ನಾನೀಗ ಎಂದು ಹಾಡಿ ಎಲ್ಲರ ಪ್ರೀತಿಯನ್ನು ಪಡೆದುಕೊಂಡರು. ಇದೇ ವೇಳೆ ವಿಜಯ್ ಪ್ರಕಾಶ್ ಅವರು ಎನೇ ಕೇಳಿದ್ರು ನಾವು ಕೊಡೋಕೆ ರೆಡಿ ಇದ್ದೇವೆ ಎಂದರು. ಇನ್ನೂ ಶಿವಾನಿ ಹೇಳು ಮಹದೇವ ಮನುಷ್ಯನ ಜೀವ ಎಂದು ಹಾಡುವ ಮೂಲಕ ಪ್ರೇಕ್ಷಕರನ್ನು ಭಾವಪರವಶರನ್ನಾಗಿ ಮಾಡಿತು.
ನಾನು ಬಳ್ಳಿಯ ಮಿಂಚು ಎಂದ ಪ್ರಗತಿ ಬಡಿಗೇರ್
ಮೊಟ್ಟಮೊದಲ ಬಾರಿಗೆ ಪ್ರಗತಿ ಜೋರಾಗಿ ಆಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆಯಿತು. ಮೆಂಟರ್ ಸಹ ಪ್ರಗತಿ ಪ್ರಾಕ್ಟಿಸ್ ಮಾಡಿದ್ದನ್ನು ಎಲ್ಲರ ಬಳಿಯೂ ಹೇಳಿದರು. ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಹಂಚು ಎಂದು ಹಾಡಿದರು. ನಯನ ಹಾಗೂ ಗುರುಪ್ರಸಾದ್ ಇಬ್ಬರು ಸೇರಿ ಜೀವ ವೀಣೆ ನೀನು ಮಿಡಿತದ ಸಂಗೀತ ಎಂದು ಹಾಡಿದರು. ಇದೇ ವೇಳೆ ಜಡ್ಜ್‌ಸ್ ಒಳ್ಳೆಯ ಕಾಮೆಂಟ್ ನೀಡಿದರು.
ದಿಯಾ, ಶ್ರೀಸಾನಿಧ್ಯ, ವಿಷ್ಣುಗೆ ರಿಂಗ್ ಗಿಫ್ಟ್
ದಿಯಾ ಹಾಗೂ ಶ್ರೀಸಾನಿಧ್ಯ ನೋಡಿವಳಂದವ ಮೊಗ್ಗಿನ ಮಾಲೆ ಚಂದಾವ ಎಂದು ಹಾಡಿದರು ಇದೇ ವೇಳೆ ದಿಯಾ, ಶ್ರೀಸಾನಿಧ್ಯ, ವಿಷ್ಣುಗೆ ಹಂಸಲೇಖ ಅವರ ಪತ್ನಿ ರಿಂಗ್ ಉಡುಗೊರೆಯಾಗಿ ನೀಡಿದರು. ಇದೇ ವೇಳೆ ಮಕ್ಕಳ ಹಾಡುಕೇಳುತ್ತಾ ಭಾವನಾತ್ಮಕವಾಗುತ್ತೇನೆ, ಕಣ್ಣೀರನ್ನು ಹಾಕಿದ್ದೇನೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಮೂವರಿಗೆ ಗಿಫ್ಟ್ ಆಗಿ ರಿಂಗ್ ನೀಡಿದರು.
ಶಾನೆ ಟಾಪಾಗಿ ಹಾಡನ್ನು ಹಾಡಿದ ವಿಷ್ಣು ವಸಿಷ್ಠ್
ಶಾನೇ ಟಾಪಗವ್ಳೆ ಎಂದು ಹಾಡನ್ನು ವಿಷ್ಣುವಸಿಷ್ಠ್ ಹಾಡಿದನು ಪುಟ್ಟ ಪೋರನ ಮುಗ್ಧತೆಗೆ ಎಲ್ಲರೂ ಸಹ ಮನಸೋತು ಹೋದರು. ನಂತರ ರೇವಣ್ಣಸಿದ್ದಪುಂಡಲೀಕ ಪುಲಾರಿ ದರ್ಶನ ಅಭಿನಯಿಸಿರು ಐರಾವತ ಸಿನಿಮಾದ ಹೇ ಐರಾವತ ಎಂದು ಮಾಸ್ ಆಗಿ ಹಾಡನ್ನು ಹಾಡಿ ಎಲ್ಲರೂ ಸಹ ಹುಬ್ಬೇರುವಂತೆ ಮಾಡಿದರು. ಇದೇ ವೇಳೆ ಅಣ್ಣ ತನಗೆ ಎಷ್ಟು ಆಸರೆಯಾಗಿ ಇದ್ದಾರೆ ಎಂಬುದನ್ನು ವೇದಿಕೆ ಮೇಲೆ ಹೇಳಿಕೊಂಡನು.
ಇಂಚರವೇ ಎಂದು ಹಾಡಿದ ಯೋಗಶ್ರೀ
ಇಂಚರವೇ ಇಂಚರವೇ ಎಂದು ಹಾಡಿದ ಯೋಗ ಶ್ರೀ ಹಾಡಿಗೆ ಸ್ವರ ಸಂಸ್ಥಾನವೇ ತಲೆದೂಗಿತು. ಕೆಲವೊಂದು ಕಡೆ ಶೃತಿ ಮಿಸ್ ಆದರು ಸಹ ಟಫ್ ಆಗಿರುವ ಹಾಡನ್ನು ಆಯ್ಕೆ ಮಾಡಿಕೊಂಡು ಯೋಗಶ್ರೀ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದರು. ಇದರಿಂದಾಗಿ ಜಡ್ಜಸ್ ಹತ್ತಿರ ಒಳ್ಳೆಯ ಕಮೆಂಟನ್ನು ಪಡೆದುಕೊಂಡರು.


Click it and Unblock the Notifications











