Sa Re Ga Ma Pa Li'l Champs : ಫ್ಯಾಮಿಲಿ ರೌಂಡ್‌ನಲ್ಲಿ ತಂದೆ- ತಾಯಿ ಜೊತೆ ಪುಟಾಣಿಗಳ ಗಾಯನ ಕಲರವ
ಸರಿಗಮಪ ಶೋನಲ್ಲಿ ಫ್ಯಾಮಿಲಿ ರೌಂಡ್‌ನಲ್ಲಿ ಮಕ್ಕಳು ತಮ್ಮ ಕುಟುಂಬ ಸದಸ್ಯರ ಜೊತೆಗೆ ಹಾಡು ಹಾಡಿ ತಮ್ಮ ಕುಟುಂಬ ಸದಸ್ಯರ ಟ್ಯಾಲೆಂಟ್ ಅನ್ನು ಸಹ ಪ್ರದರ್ಶಿದ್ದಾರೆ. ವೇದಿಕೆ ಮೇಲೆ ಬಂದ ಸರಿಗಮಪ ಶೋನ ಮಕ್ಕಳ ಕುಟುಂಬ ಸದಸ್ಯರು ಬಹಳ ಖುಷಿಯನ್ನು ಪಟ್ಟರು.
ಸರಿಗಮಪ ತನ್ನದೇ ಆದ ಚಾಪನ್ನು ಮೂಡಿಸಿ ಹಲವಾರು ಕಾರ್ಯಕ್ರಮಗಳನ್ನ ನಡೆಸಿಕೊಂಡು ಬಂದಿದೆ. ಅದರಲ್ಲಿ ಫ್ಯಾಮಿಲಿ ರೌಂಡ್ ಸಹ ಒಂದಾಗಿದೆ. ಮಕ್ಕಳಲ್ಲಿ ಅಡಗಿರುವ ಅದ್ಭುತ ಪ್ರತಿಭೆಗಳನ್ನು ಹೊರ ತರುವಲ್ಲಿ ಫ್ಯಾಮಿಲಿಯ ಪಾತ್ರವು ಸಹ ಬಹಳ ಪ್ರಮುಖವಾಗಿದೆ. ಇಲ್ಲಿ ಭಾವುಕ ಕ್ಷಣಗಳನ್ನು ಸರಿಗಮಪ ವೇದಿಕೆ ಸೃಷ್ಟಿ ಮಾಡಿತು.
ಎಲ್ಲರೂ ಸಹ ಕಷ್ಟದಲ್ಲಿ ಇರುವವರೇ ಕಷ್ಟದಲ್ಲಿರುವ ಕುಟುಂಬಸ್ಥರು ಯಾವ ರೀತಿ ತಮ್ಮ ಜೀವನವನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟು ನಮ್ಮ ಕಷ್ಟಗಳು ಅವರ ಕಷ್ಟಗಳ ಮುಂದೆ ನಗಣ್ಯ ಎಂದು ತೋರಿಸಿತು.

ತಂದೆಯೊಂದಿಗೆ ಕಂಪನ ಸೃಷ್ಟಿಸಿದ ಕುಷಿಕ್
ಕುಷಿಕ್ ಹಾಗೂ ಅವರ ತಂದೆ ಇಬ್ಬರು ಸೇರಿ ಸ್ಟೇಜ್ ಮೇಲೆ ಒಂದು ಹೊಸ ಕಂಪನವನ್ನೇ ಸೃಷ್ಟಿ ಮಾಡಿದರು. 'ಸ್ನೇಹ ಪ್ರೀತಿ ನನ್ನುಸಿರು' ಎಂದು ಆಡುವ ಮೂಲಕ ತೀರ್ಪುಗಾರರಿಂದ ಒಳ್ಳೆಯ ಕಾಮೆಂಟ್ ಅನ್ನು ಪಡೆದುಕೊಂಡರು. ಕುಷಿಕ್ ಸಹ ತನ್ನ ತಂದೆ ತಾಯಿಯರ ಬಗ್ಗೆ ವೇದಿಕೆಯ ಮೇಲೆ ಹೇಳಿ ನಾವು ಯಾವತ್ತೂ ಅವರನ್ನು ಮರೆಯಬಾರದು ಎಂದನು.

ಶಾರದೆಗೆ ನಮಿಸಿದ ಪ್ರಗತಿ
ಪ್ರಗತಿ ಬಡಿಗೇರ್ 'ಶಾರದೆ ದಯೆ ತೋರಿದೆ' ಎಂದು ಹಾಡುತ್ತಿದ್ದರೆ ಅವರ ತಂದೆ ಸಹ ಮಗಳ ದನಿಗೆ ದನಿ ಸೇರಿಸಿದರು. ಇದೇ ವೇಳೆ ತೀರ್ಪುಗಾರರು ನಿಮ್ಮ ಕುಟುಂಬ ಇಡೀ ಕರ್ನಾಟಕಕ್ಕೆ ಪರಿಚಯವಿದೆ ಎಂದು ಹೇಳಿ ಕುಟುಂಬಸ್ಥರನ್ನು ಹುರಿದುಂಬಿಸಿದರು. ನನ್ನ ತಂದೆ ಏನನ್ನು ಅತಿ ದೊಡ್ಡ ಶಕ್ತಿ ಎಂದು ಪ್ರಗತಿ ಬಡಿಗೇರ್ ವೇದಿಕೆಯ ಮೇಲೆ ಹೇಳಿ ಅಪ್ಪನ ಶಕ್ತಿಯನ್ನು ಪ್ರಪಂಚಕ್ಕೆ ಸಾರಿದರು.

ಅಮ್ಮನ ಹೆಸರನ್ನ ವರ್ಣಿಸಿದ ದಿಯಾ ಹೆಗಡೆ
ತನುಶ್ರೀ ತಮ್ಮ ಅಮ್ಮನೊಂದಿಗೆ 'ನಗು ಎಂದಿದೆ ಮಂಜಿನ ಬಿಂದು' ಎಂದು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ದಿಯಾ ಹೆಗ್ಡೆ ಅವರ ತಾಯಿಯ ಜೊತೆ 'ಆಡೋಣ ಬಾ ಆಡೋಣ ಬಾ' ಒಂದಾಗಿ ನಾವಿಂದು ಈಗ ಎಂದು ಹಾಡಿದರು. ಇದೇ ವೇಳೆ ಅವರ ಅಮ್ಮನ ಹೆಸರನ್ನು ವರ್ಣಿಸಿದರು. ಹಂಸಲೇಖರವರು ಕನ್ನಡವನ್ನು ಅರಳು ಉರಿದಂತೆ ಮಾತನಾಡುವ ಕುಟುಂಬ ಎಂಬ ಬಿರುದನ್ನ ನೀಡಿದರು.

ಅಮ್ಮನ ಜೊತೆ ವಿಸಿಸ್ಟ್ ಹಾಡು
ವಿಷ್ಣು ವಸಿಸ್ಟ್ ಅಮ್ಮನ ಜೊತೆಯಲ್ಲಿ 'ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ' ಎಂದು ಹಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದನು. ಅಣ್ಣನೊಂದಿಗೆ ಆಡಿದ ಪಂಕಜ್ 'ಮೂಕನಾಗಬೇಕು ಜಗದೊಳು ಜೋಕ್ಯಾಗಿರಬೇಕು' ಎಂದು ಆಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದನು.

ಶಿವಾನಿ ತಂದೆ ಮಿಮಿಕ್ರಿ
ಶಿವಾನಿ ತನ್ನ ತಂದೆಯ ಜೊತೆಗೆ ವೇದಿಕೆಯಲ್ಲಿ 'ನೋಡಿ ಸ್ವಾಮಿ ನಾವಿರೋದು ಹೀಗೆ' ಎಂದು ರಾಕಿಂಗ್ ಪರ್ಫಾರ್ಮೆನ್ಸ್ ಅನ್ನು ನೀಡಿದರು. ಜಡ್ಜಸ್ ತಂದೆ ಮಗಳ ಬಾಂಧವ್ಯ ಕೂಡ ರಾಕಿಂಗ್ ಆಗಿದೆ ಎಂದು ಹೇಳಿ ಖುಷಿಯನ್ನ ಪಟ್ಟರು. ಗುರುಪ್ರಸಾದ್ ತನ್ನ ಅಮ್ಮನ ಜೊತೆಗೆ 'ಅಮ್ಮಯ್ಯ ಅಮ್ಮಯ್ಯ ಬಾರೆ ಅಕ್ಕರೆ ಸಕ್ಕರೆ ತಾರೆ ಮಕ್ಕಳ ಬಾಯಿಗೆ' ಎಂದು ಹಾಡುವ ಮೂಲಕ ಸಂಭ್ರಮಿಸಿದನು.

ನಯನಾ ಕುಟುಂಬದ ಸ್ಪೆಷಲ್ ಎವಿ
'ದೇವರ ಆಟ ಬಲ್ಲವರ್ಯಾರು' ಆತನ ಎದುರು ನಿಲ್ಲುವರ್ಯಾರು ಎಂದು ನಯನಾ ವಸಂತ ಆಚಾರ್ ಅಳವಂಡಿ ಹಾಡನ್ನು ತಮ್ಮ ತಾಯಿಯ ಜೊತೆಗೆ ಹಾಡಿದರು. ತಂದೆಗೆ ಹುಷಾರಿಲ್ಲದೆ ಇರುವ ವಿಷಯವನ್ನು ಕೇಳಿ ಎಲ್ಲರೂ ಸಹ ಭಾವುಕಾರಾದರು. ಕುಟುಂಬದ ಕಷ್ಟವನ್ನು ಕೇಳಿ ಎಲ್ಲರೂ ಸಹ ಕಣ್ಣೀರನ್ನು ಹಾಕಿದರು. ನಿಮ್ಮ ಕುಟುಂಬದ ಕಷ್ಟದಲ್ಲಿ ನಾವು ಸಹ ಜೊತೆಗೆ ಇರುತ್ತೇವೆ ಎಂದು ನಯನ ಕುಟುಂಬದವರಿಗೆ ಭರವಸೆಯನ್ನ ನೀಡಿದರು.

ರಾಯರ ಹಾಡು ಹಾಡಿದ ಯೋಗಶ್ರೀ
ಯೋಗಶ್ರೀ ಮತ್ತು ಅವರ ಅಮ್ಮ ರಾಜೇಶ್ವರಿಯವರು ಭಕ್ತಿ ಗೀತೆಯಾದ ಗುರು ರಾಘವೇಂದ್ರ ಸ್ವಾಮಿಯ ಗೀತೆಯನ್ನು ಹಾಡಿದರು. ಇನ್ನೂ ರೇವಣ್ಣ ಅವರು 'ನಾವು ಮನೆಗೆ ಹೋಗೋದಿಲ್ಲ' ಅಂತ ಅವರ ಅಣ್ಣನ ಜೊತೆಗೆ ಆಡಿ ಎಲ್ಲರನ್ನ ಮನರಂಜಿಸಿದರು. ಅರ್ಚಿಷಾರವರು 'ನಿನ್ನಂತ ಅಪ್ಪ ಇಲ್ಲ' ಎಂದು ಅಪ್ಪನ ಜೊತೆಗೆ ಹೆಜ್ಜೆ ಹಾಕಿ ಹಾಡಿದರು. ಶ್ರೀ ಸಾನಿಧ್ಯ ಅವರು ತಾಯಿಯ ಜೊತೆಗೆ ಎಂದು ಆಡುವ ಮೂಲಕ ಎಲ್ಲರ ಗಮನ ಸೆಳೆದರು. ಸರಿ ಸಿಂಚನ ಅವರ ತಂದೆಯೊಂದಿಗೆ 'ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ' ಎಂದು ಸಂಭ್ರಮಿಸಿದರು. ಮೆಂಟರ್ ಅವರ ಫ್ಯಾಮಿಲಿಯವರು ಸಹ ವೇದಿಕೆಯ ಮೇಲೆ ಬಂದು ಸಂತಸವನ್ನ ವ್ಯಕ್ತಪಡಿಸಿದರು.


Click it and Unblock the Notifications











