Sa Re Ga Ma Pa: ಸಮ್ಮರ್ ಸ್ಪೆಷಲ್ ಸಂಚಿಕೆಯಲ್ಲಿ ಜ್ಯೂರಿಗಳ ಕಲರವ: ಸಕ್ಕತ್ ಹಾಡುಗಳ ಹಂಗಮಾ
ಗಾಯಕರ ಜೊತೆ ಗ್ರಾಂಡ್ ಜೂರಿ ಮೆಂಬರ್ಸ್ ಬೇಸಿಗೆಯಲ್ಲಿ ಕಿವಿಗೆ ತಂಪು ನೀಡಿದ್ದಾರೆ. ವೇದಿಕೆ ಏರಿದ ಗಾಯಕರು ತಮ್ಮ ಸ್ವರ ಮಾಧುರ್ಯದಿಂದ ಎಲ್ಲರನ್ನೂ ರಂಜಿಸಿದರು. ಹಳೆ ಗಾಯಕರು ಹಾಗೂ ಹೊಸ ಗಾಯಕರು ವೇದಿಕೆಯ ಮೇಲೆ ಬಂದು ಒಂದು ಸುಂದರ ಗಾಯನಲೋಕವನ್ನೇ ಸೃಷ್ಟಿ ಮಾಡಿದರು. ಪ್ರತಿಯೊಂದು ಹಾಡನ್ನು ಸಹ ಭಾವ ತುಂಬಿ ಹಾಡಿದ ಪರಿಣಾಮ ಎಲ್ಲರ ಮನಸ್ಸಿಗೆ ಮುದ ನೀಡಿತು.
ಹೊಸ ಹಾಡು ಹಾಗೂ ಹಳೆಯ ಹಾಡುಗಳ ಭಾವ ನವನವೀನತೆಯನ್ನು ತಂದಿತು. ಅನುಶ್ರೀ ನಿರೂಪಣೆಯಲ್ಲಿ ಕಾರ್ಯಕ್ರಮವು ಬಹಳ ಸೊಗಸಾಗಿ ಮೂಡಿಬಂದಿತು. ಮಹಾ ಗುರು ಹಂಸಲೇಖರವರು ಎಲ್ಲರನ್ನು ಹುರಿದುಂಬಿಸಿದರು.

ಸುನಿಲ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಸರಿಗಮಪ ವೇದಿಕೆಯಿಂದಲೇ ಮುದ್ದಾಗಿ ಅರಳಿದ ಗ್ರಾಮೀಣ ಪ್ರತಿಭೆ. ಇವರು ಹಾಡು ಹಾಡಿದರೆ ಎಲ್ಲರಿಗೂ ಅಚ್ಚುಮೆಚ್ಚು. ಸುನಿಲ್ 'ನೀ ಸಿಗೋವರೆಗೂ' ಎಂದು ಭಾವನಾತ್ಮಕವಾಗಿ ಹಾಡುತ್ತಿದ್ದರೆ ತೀರ್ಪುಗಾರರು ಕಳೆದು ಹೋದರು. ಇದೇ ವೇಳೆ ತಾನೇ ಕಂಪೋಸ್ ಮಾಡಿದ ಹಾಡನ್ನು ಸುನೀಲ್ ವೇದಿಕೆ ಮೇಲೆ ಹಾಡಿದರು.
ಅಶ್ವಿನ್ ಜೊತೆಗೆ ವಾಣಿ ಹರಿಕೃಷ್ಣ ಬಹಳ ಮುದ್ದಾಗಿ ಹಾಡಿದರು. 'ಕಣ್ಣಾ ಮುಚ್ಚೆ ಮಡಿಲ ಆಸೆ' ಎಂದು ವಾಣಿ ಹರಿಕೃಷ್ಣ ಹಾಡುತಿದ್ದರೆ ಎಲ್ಲರೂ ಸಹ ಒಮ್ಮೆ ಮೂಕ ವಿಸ್ಮಿತರಾದರು. ಈ ವೇಳೆ ವಾಣಿ ಹರಿಕೃಷ್ಣರವರ ಮಗ ಸಹ ವೇದಿಕೆ ಮೇಲೆ ಬಂದು ತನ್ನ ಅಮ್ಮನ ಬಗ್ಗೆ ಹೇಳಿ ಕೊಂಡು ಅಮ್ಮನಿಗೆ ಅಪ್ಪುಗೆಯನ್ನು ನೀಡಿದರು.
'ಕನಸಲೂ ನೂರು ಬಾರಿ' ಎಂದ ಅನ್ವಿತಾ
ಅದ್ಭುತ ಧ್ವನಿಯಲ್ಲಿ ಚೆನ್ನಪ್ಪ 'ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು' ಎಂದು ಹಾಡುತ್ತಿದ್ದರೆ ಎಲ್ಲರೂ ಸಹ ಚನ್ನಪ್ಪನನ್ನು ಹೀರೋ ಎಂದೇ ಭಾವಿಸಿದರು. ಇದೇ ವೇಳೆ ಹಂಸಲೇಖ, ಅರ್ಜುನ್ ಜನ್ಯ ಸಹ ಚೆನ್ನಪ್ಪ ಹಾಡಿನ ಮೋಡಿಗೆ ಫಿದಾ ಆಗಿ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದರು. ಅನ್ವಿತಾ, ಅರ್ಜುನ್ ಜನ್ಯ ಅವರ 'ಕನಸಲೂ ನೂರು ಬಾರಿ' ಎಂದು ಹಾಡಿದರು.

'ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ' ಎಂದು ವಸುಶ್ರೀ ಜೊತೆ ಮೋಹನ್ ಹಾಡುತ್ತಿದ್ದರೆ ಎಲ್ಲರೂ ಸಹ ಖುಷಿಯಿಂದ ತಲೆದೂಗಿದರು. ಇದೇ ವೇಳೆ ಮೋಹನ್ ಅವರು ಡಾ. ರಾಜಕುಮಾರ್‌ರವರ ಡೈಲಾಗ್ ಹೊಡೆದು ಹಂಸಲೇಖರ ಮೆಚ್ಚುಗೆಗೆ ಪಾತ್ರರಾದರು. ಸಿಹಿ ಸಿಹಿಯಾಗಿ ಲಕ್ಷ್ಮಿ ಮತ್ತು ಖುಷಿ ಪುನೀತ್ ರಾಜಕುಮಾರ್‌ರವರ 'ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ' ಎಂದು ಹಾಡುತ್ತಿದ್ದರೆ ಅಲ್ಲಿದ್ದ ಮನಗಳಿಗೆ ಸಿಹಿಯನ್ನೇ ಉಣಬಡಿಸಿದಷ್ಟೇ ಸಂತೋಷವಾಯಿತು.
ಪ್ರೇಮದ ಕಾಶ್ಮೀರವನ್ನೇ ಧರೆಗಿಳಿಸಿದ ಪುಟಾಣಿಗಳು
ಶ್ರೀ ಸಾನಿಧ್ಯ ಹಾಗೂ ವಿಷ್ಣು ವಸಿಷ್ಠ್ ಸೇರಿಕೊಂಡು ಪ್ರೇಮ ಕಾಶ್ಮೀರದ ಅನುಭವವನ್ನೇ ತಂದು ಕೊಟ್ಟರು. ಆ ಪುಟಾಣಿಗಳ ಬಾಯಲ್ಲಿ ಅಣ್ಣಾವ್ರ ಹಾಡನ್ನು ಕೇಳುತ್ತಿದ್ದರೆ ಕಿವಿಗೆ ಇಂಪಾಗಿ ಮಾರ್ಧನಿಸುತ್ತಿತ್ತು. ಸುಪ್ರೀತ್ ಹಾಗೂ ನಿಖಿಲ್ ಇಬ್ಬರು ಸೇರಿ 'ಬ್ರದರ್ ಫ್ರಮ್ ಅನಧರ್ ಮದರ್' ಎಂದು ಹಾಡಿ ಎಲ್ಲರನ್ನು ಮೋಡಿ ಮಾಡಿದರು.
ಪ್ರತಿಯೊಬ್ಬರು ಹಾಡಿದ ಹಾಡುಗಳು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದವು. ಎಲ್ಲರೂ ಕೂಡ ಬಹಳ ಇಷ್ಟಪಟ್ಟು ನೋಡುವ ಕಾರ್ಯಕ್ರಮ ಸರಿಗಮಪ ಆಗಿದ್ದು, ಟಿಆರ್‌ಪಿಯಲ್ಲೂ ಸಹ ಮುಂಚೂಣಿಯಲ್ಲಿ ಇದೆ.


Click it and Unblock the Notifications











