Saregamapa: ಜೆಕೆ ರಾಜು ಮಾತಾಡಿದ್ರೆ ಸಾಕು ಕಣ್ಣೀರಾಗುವ ಅನುಶ್ರೀ; ಯಾಕೆ ಗೊತ್ತಾ..?
ಸರಿಗಮಪ ಶುರುವಾಗಿದೆ. ಸೀಸನ್ 21ರಲ್ಲಿ ವಿಶೇಷತೆಯೊಂದು ಅಡಗಿದೆ. ಈ ಬಾರಿ 6ರಿಂದ 60 ವರ್ಷದವರೆಗೂ ಆಡಲಿದ್ದಾರೆ. ಈಗಾಗಲೇ ಶೋ ಶುರುವಾಗಿದೆ. ಕಳೆದ ವಾರವಷ್ಟೇ ಸ್ಪರ್ಧಿಗಳ ಆಯ್ಕೆ ಸೀಸನ್ ನಡೆದಿದೆ. ಒಂದಷ್ಟು ಸ್ಪರ್ಧಿಗಳು ವೈಟಿಂಗ್ ಲಿಸ್ಟ್‌ನಲ್ಲಿದ್ದರೆ ಇನ್ನಷ್ಟು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಜೆ.ಕೆ.ರಾಜು ಕೂಡ ಒಬ್ಬರು. 'ಮೆಲ್ಲಗೆ ಮೆಲ್ಲಗೆ' ಎಂಬ ಹಾಡನ್ನು ಹಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಸದ್ಯ ಜೆ.ಕೆ.ರಾಜು ಈ ಸೀಸನ್‌ನ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ತಪ್ಪಾಗಲ್ಲ. ಆದರೆ ಅವರ ಪರಿಸ್ಥಿತಿ, ಅವರ ಜೀವನ ಮನಸ್ಸಿಗೆ ಬಹಳ ನೋವುಂಟು ಮಾಡುತ್ತದೆ. ಅದೇ ಕಾರಣಕ್ಕಾಗಿಯೇ ವೇದಿಕೆ ಮೇಲಿದ್ದ ತೀರ್ಪುಗಾರರು ಭಾವುಕರಾಗಿದ್ದಾರೆ. ಅನುಶ್ರೀ ಕೂಡ ಕಣ್ಣೀರಾಗಿದ್ದಾರೆ.

ಸರಿಗಮಪ ಶೋನಲ್ಲಿ ರಾಜು
ಸರಿಗಮಪ ಈ ವಾರ ಮೆಂಟರ್ ಆಯ್ಕೆ ನಡೆದಿದೆ. ಸ್ಪರ್ಧಿಗಳಿಗೆ ಮೆಂಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಈ ಶೋನಲ್ಲಿ ಬಹಳ ಗಮನ ಸೆಳೆದಿದ್ದು ರಾಜು. ಇವರ ಜೀವನ ನಡೆಯೋದೆ 3 ಸಾವಿರದಿಂದ. ಅಲ್ಲಿ ಇಲ್ಲಿ ಶೋಗಳು ಸಿಕ್ಕಿದರೆ ಹಾಡುತ್ತಾರೆ, ಬರುವ ಹಣದಲ್ಲಿ ಕೂಡಿಟ್ಟು ಅಷ್ಟರಲ್ಲಿಯೇ ಊಟ, ತಿಂಡಿ, ಕಾಫಿ ಕುಡಿಯುತ್ತಾರೆ. ಅಷ್ಟೇ ಯಾಕೆ ಬೆಂಗಳೂರಲ್ಲಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ನಡೆದುಕೊಂಡೇ ಹೋಗುತ್ತಾರೆ. ಈಗಿನ ರಾಯಲ್ ಲೈಫ್ ಲೀಡ್ ಮಾಡುವುದಕ್ಕಾಗಿ ಸಾಲ ಸೋಲ ಮಾಡುವವರಿಗೆ ರಾಜು ಸ್ಫೂರ್ತಿ.
ಇರುವಷ್ಟರಲ್ಲಿಯೇ ಜೀವನ
ಸರಿಗಮಪ ವೇದಿಕೆಯಲ್ಲಿ ತನ್ನ ಜೀವನ ಶೈಲಿಯ ಬಗ್ಗೆ ಹೇಳ್ತಾ ಇರ್ತಾರೆ. ಆದರೆ ಆ ಮಾತುಗಳು, ಆ ಕಷ್ಟಗಳು ಕೇಳಿದವರುಗೆ ಕಣ್ಣಲ್ಲಿ ನೀರು ತರಿಸುತ್ತದೆ. ಹೆಚ್ಚೇನು ಇಲ್ಲ, ಏನು ಸಿಗುತ್ತೆ ಅದೇ ಜೀವನ. ರಾಜು ಅವರಿಗೆ ಯಾರೂ ಇಲ್ಲ. ಒಂಟಿ ಜೀವನ. ಯಾರಿಂದಾನೂ ಕೈಯೊಡ್ಡಬಾರದು ಎಂಬುದೇ ರಾಜು ಜೀವನದ ಪರಮೋದ್ದೇಶ. ಹೀಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬುದನ್ನು ಪಾಲಿಸುತ್ತಿದ್ದಾರೆ. ರಾಜು ಅವರ ಜೀವನದ ದಾರಿ ಕೇಳಿ, ಅವರಾಡುವ ಮಾತುಗಳು ಅನುಶ್ರೀಗೆ ಕಣ್ಣೀರು ತರಿಸಿದೆ. ನೀವೂ ಮಾತಾಡಿದರೇನೆ ಕಣ್ಣೀರು ಬರುತ್ತದೆ. ನಿಮ್ಮ ಜೊತೆ ಟು ಎಂದಿದ್ದಾರೆ.

ಮಾತುಗಳು ಜೀವನಕ್ಕೆ ಅನುಕೂಲ
ಕಾಮಾಕ್ಷಿಪಾಳ್ಯದ ಬಳಿ ಇರುವ ರಾಜು ಸುಮನಹಳ್ಳಿ ತನಕ ನಡೆದುಕೊಂಡೇ ಬರುತ್ತಾರಂತೆ. ಈ ಮಾತುಗಳನ್ನ ಕೇಳಿದ ಅನುಶ್ರೀ, ನಿಮಗೆ ಗೊತ್ತಿಲ್ಲ ನಮ್ಮ ಲೈಫ್‌ನ ನೀವೂ ತುಂಬಾ ಬೆಟರ್ ಮಾಡ್ತಾ ಇದ್ದೀರಾ. ನೀವೂ ಆಡುವ ಮಾತುಗಳಿಂದ ಎಷ್ಟೋ ಬದಲಾವಣೆಗಳಾಗ್ತಾ ಇದೆ. ಅದು ನಿಮ್ಗೆ ಗೊತ್ತಾಗ್ತ ಇಲ್ಲ. ಗೊತ್ತಾಗೋದು ಬೇಡ ಎಂದು ಎಮೋಷನಲ್ ಆಗಿದ್ದಾರೆ.
ಸರಿಗಮಪದಲ್ಲಿ ಇದೇ ಮೊದಲು
ಇದೊಂದು ಮ್ಯೂಸಿಕಲ್ ಕ್ಲಾಸ್ ಜೊತೆಗೆ ಲೈಫ್ ಲೆಸೆನ್ ಕೊಡುವಂತೆ ಎಂದಿದ್ದಾರೆ. ರಾಜು ಅವರು ಹಿರಿಯರ ಜೀವನ, ಈಗಿನ ಯುವಕರ ಬಗ್ಗೆ ಮಾತಮಾಡುವುದನ್ನು ಕೇಳುತ್ತಿದ್ದಂತೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಅವರ ಕಣ್ಣಲ್ಲೂ ನೀರು ಬಂದಿದೆ. ಈಗಾಗಲೇ ರಾಜು ಅವರನ್ನ ಮೆಂಟರ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಜನ್ಯಾ ಅವರು ಮೆಂಟರ್ ಪರ್ಮಿಷನ್ ತೆಗೆದುಕೊಂಡು, ರಾಜು ಅವರಿಗೆ ಮೂರು ಜನ ಮೆಂಟರ್ ಆಗಿದ್ದಾರೆ. ವೇದಿಕೆ ಮೇಲೆ ರಾಜೇಶ್ ಕೃಷ್ಣ ಬರುತ್ತಿದ್ದಂತೆ ರಾಜು ಅವರು, ಎಷ್ಟು ಚೆನ್ನಾಗಿ ಕಾಣ್ತಾ ಇದ್ದೀರಪ್ಪ ಎಂದಿದ್ದಾರೆ. ರಾಜು ಮುಗ್ಧತೆಗೆ ಎಲ್ಲರೂ ಮನಸೋತಿದ್ದಾರೆ.


Click it and Unblock the Notifications











