Saregamapa: ರಾಜೇಶ್ ಕೃಷ್ಣನ್ ಮನೆಯಲ್ಲಿ ಸರಿಗಮಪ 'ರಾಜು' ಸಂಕ್ರಾಂತಿ ಸಂಭ್ರಮ

By ಎಸ್ ಸುಮಂತ್

ಸಂಕ್ರಾಂತಿ ಸಂಭ್ರಮಕ್ಕೆ ಜೀ ಕನ್ನಡ ವೇದಿಕೆ ಸಿದ್ಧವಾಗಿದೆ. ಹಾಡು, ಕುಣಿತ, ಕಾಮಿಡಿ ಮೂಲಕ ಮನರಂಜಿಸಲು ರೆಡಿಯಾಗಿದೆ. ಅದರಲ್ಲೂ ಹೊಸದಾಗಿ ಆರಂಭವಾಗಿರುವ ಸರಿಗಮಪ ವೇದಿಕೆಯಲ್ಲಿ ಹಾಡುಗಳ ಮಹಾಪೂರ ನೋಡುಗರನ್ನ ರಂಜಿಸುತ್ತಿದೆ.

ಸ್ಪರ್ಧಿಗಳ ಗಾನ ಬಜಾನದ ಜೊತೆಗೆ ಜಾನಪದ ಹಾಡುಗಳು, ಅಯ್ಯಪ್ಪ ಸ್ವಾಮಿ ಗೀತೆಯೂ ಮೊಳಗಿದೆ. ಇದು ಕೇಳುಗರನ್ನ ಭಕ್ತಿ ಲೋಕಕ್ಕೆ ಕರೆದೊಯ್ಯುವಂತೆ ಮಾಡಿದೆ. ಇದು ಜಸ್ಟ್ ಪ್ರೋಮೋ, ಸಂಕ್ರಾಂತಿಯ ಸುಗ್ಗಿ ಟಿವಿಯಲ್ಲಿ ಸಿಗಲಿದೆ.

Zee kannada Sarigamapa contestant Raju singing practice promo

ಹಾಡು, ಹರಟೆಯ ಜೊತೆಗೆ ವಿಶೇಷ ಅತಿಥಿಗಳ ಆಗಮನವೂ ಆಗಿದೆ. ಗಾಯಕ ವಿಜಯ್ ಪ್ರಕಾಶ್ ಈ ಶೋನಲ್ಲಿ ತೀರ್ಪುಗಾರ, ಮೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಪತ್ನಿಯನ್ನು ಶೋಗೆ ಕರೆಸಲಾಗಿದ್ದು, ಗಂಡನಿಗಾಗಿ ಒಂದೊಳ್ಳೆ ಕವನವನ್ನು ಹೇಳಿದ್ದಾರೆ. ಪ್ರೋಮೋ ಎಲ್ಲರ ಮನಸೂರೆಗೊಳ್ಳುವಂತೆ ಮಾಡಿದೆ. ಶನಿವಾರ ಮತ್ತು ಭಾನುವಾರ ಎರಡು ದಿನ ಪ್ರಸಾರವಾಗಲಿದೆ.

ರಾಜು ತಾತಗೆ ಫ್ಯಾನ್ಸ್

ಸರಿಗಮಪ ರಾಜು ತಾತಗೆ ಇರುವ ಫ್ಯಾನ್ಸ್ ಕಡಿಮೆ ಏನು ಅಲ್ಲ. ವೇದಿಕೆ ಮೇಲೆ ತಾತ ಬಂದ್ರೆ ಸಾಕು ಸರಿಗಮಪ ಶೋನಲ್ಲಿ ಶಿಳ್ಳೆ, ಚಪ್ಪಾಳೆಗಳು ಜೋರು ಸದ್ದು ಮಾಡುತ್ತವೆ. ತಾತನ ಜೀವನಗಾಥೆಯನ್ನು ಕೇಳಿದ ಮೇಲೆ ಒಂದಷ್ಟು‌ ಜನಕ್ಕೆ, ಮನರಂಜನೆಯ ಜೊತೆಗೆ ಜೀವನದ ಪಾಠವೂ ಉಚಿತವಾಗಿ ಸಿಕ್ಕಂತೆ ಆಗಿದೆ. ಅದಹ ಬೇಕು ಇದು ಬೇಕು ಎಂದು ನೆಮ್ಮದಿ, ನಿದ್ದೆ ಬಿಟ್ಟು ಓಡುತ್ತಿರುವ ನಮ್ಮ ನಿಮ್ಮಂಥವರಿಗೆ ಸರಳ ಬದುಕು ಎಷ್ಟು ಸುಖಕರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಾಜು ತಾತ. ಆದರೆ ಒಮ್ಮೊಮ್ಮೆ ಅವರನ್ನು ನೋಡಿದಾಗ ಎಂಥವರಿಗೆ ಆದರೂ ಮನಸ್ಸು ಕರಗದೆ‌ಇರಲಾರದು.

ರಾಜೇಶ್ ಕೃಷ್ಣನ್ ಮನೆಗೆ ರಾಜು

ರಾಜು ತಾತ ಸರಿಗಮಪ ಶೋಗೆ ಆಯ್ಕೆಯಾದ ಮೇಲೆ ಮೆಂಟರ್ ಆಯ್ಕೆಯೂ ವಿಶೇಷವಾಗಿತ್ತು. ಮೊದಲ ಬಾರಿಗೆ ಮೂರು ಜಡ್ಜಸ್ ಗಳು ಒಭರಿಗೆ ಮೆಂಟರ್ ಆಗಿರುವುದು. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮೂವರಲ್ಲಿ ಬಿಡುವಿದ್ದವರಿಂದ ಸಂಗೀತಾಭ್ಯಾಸ ನಡೆಯಲಿದೆ. ಈ ಬಾರಿ ಹಬ್ಬದ ಸ್ಪೆಷಲ್ ಗಾಗಿರಾಜೇಶ್ ಕೃಷ್ಣನ್ ಮೆಂಟರ್ ಆಗಿದ್ದರು. ರಾಜು ತಾತ ರಾಜೇಶ್ ಕೃಷ್ಣನ್ ಮನೆಗೆ ಬಂದಿದ್ದು, ಅಮ್ಮ ಕೊಟ್ಟ ತಿಂಡಿ ತಿಂದು, ಪ್ರಾಕ್ಟೀಸ್ ಶುರು ಮಾಡಿದ್ದಾರೆ.

ನಿಂಗಿ ನಿಂಗಿ ಹಾಡು

ಮನೆಯಲ್ಲಿ ರಾಜೇಶ್ ಕೃಷ್ಣನ್ ಅವರು ಕೊಟ್ಟ ತರಬೇತಿ ವೇದಿಕೆ ಮೇಲೆ ವರ್ಕ್ ಆಗಿದೆ. ರಾಜು ಅವರು ನಿಂಗಿ ನಿಂಗಿ ನಿಂಗಿ ಹಾಡನ್ನು ಎಂಜಾಯ್ ಮಾಡಿಕೊಂಡು ಹಾಡಿದ್ದಾರೆ. ರಾಜು ಅವರ ರಾಗಕ್ಕೆ ವಿಜಯ್ ಪ್ರಕಾಶ್ ಮನಸೋತಿದ್ದಾರೆ. ಮೆಂಟರ್ ರನ್ನ ಹಾಡಿ ಹೊಗಳಿದ್ದಾರೆ. ಬಳಿಕ ವೇದಿಕೆ ಮೇಲೆ ರಾಜೇಶ್ ಕೃಷ್ಣನ್ ಕೂಡ ಬಂದಿದ್ದು, ಇಬ್ಬರು ಎಂಜಾಯ್ ಮಾಡಿದ್ದಾರೆ. ಮೊದಲೇ ರಾಜೇಶ್ ಕೃಷ್ಣನ್ ವಾಯ್ಸ್ ಗೆ ಫಿದಾ ಆಗುವ ಮಂದಿ ಇದೀಗ ರಾಜೇಶ್ ಕೃಷ್ಣನ್ ಹಾಗೂ ತಾತನ ಜುಗಲ್ ಬಂಧಿಗೆ ಮನಸೋತಿದ್ದಾರೆ.

ಫುಲ್ ವೈರಲ್

ರಾಜು ತಾತನ ಜೀವನದ ಪಾಠ ಒಂದೊಮ್ಮೆ ಯೋಚಿಸಿದಾಗ ಎಲ್ಲರ ಬದುಕನ್ನು ಬದಲಾಯಿಅಉವ ಶಕ್ತಿ ಹೊಂದಿದೆ. ಅನುಶ್ರೀ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಈ ಬಗ್ಗೆ ಅದಾಗಲೇ ಸುಮಾರು ಸಲ ಹೇಳಿದ್ದಾರೆ. ಸುದೀಪ್ ಅವರ ಮುಂದೆಯೂ ಹಾಡು ಹಾಡಿ ರಾಜು ಸೈ ಎನಿಸಿಕೊಂಡಿದ್ದರು. ಇದೀಗ ಸಂಕ್ರಾಂತಿ ವಿಶೇಷಕ್ಕೆ ಬಿಟ್ಟಿರುವ ಪ್ರೋಮೋ ಮಿಲಿಯನ್ ಗಟ್ಟಲೇ ರೀಚ್ ಆಗ್ತಾ ಇದೆ. ಅಂದ್ರೆ ರಾಜು ತಾತನ ಕ್ರೇಜ್ ಎಷ್ಟಿದೆ ಎಂಬುದನ್ನು ಊಹಿಸಬಹುದು.

More from Filmibeat

English summary
Here is the details about Sankranti celebration on Sarigamapa stage;
Read more about: tv sumanth music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X