»   » ಪುಟಾಣಿಗಳಿಗಾಗಿ ಮತ್ತೆ ಜೀದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್

ಪುಟಾಣಿಗಳಿಗಾಗಿ ಮತ್ತೆ ಜೀದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್

Posted By:
Subscribe to Filmibeat Kannada
Zee Program Image
ಪುಟಾಣಿಗಳಿಗಾಗಿ ಮತ್ತೆ ಸರಿಗಮಪ ಲಿಟ್ಲ್ ಚಾಂಪ್ಸ್ ಪ್ರಾರಂಬವಾಗುತ್ತಿದೆ. ಈ ಮೊದಲು ಸ ರಿ ಗ ಮ ಪ ಕಾರ್ಯಕ್ರಮದ 8 ಸೂಪರ್ ಹಿಟ್ ಆವೃತ್ತಿಗಳನ್ನು ನೀಡಿದ್ದ ಜೀ ಕನ್ನಡ, ಇದೀಗ 9 ನೇ ಸೀಸನ್ನಿಗೆ ಅಣಿಯಾಗಿದೆ. ಇದು ಪುಟಾಣಿಗಳ ಗಾಯನ ಪ್ರತಿಭೆ ಒರೆಗೆ ಹಚ್ಚುವ ಸ ರಿ ಗ ಮ ಪ-ಲಿಟ್ಲ್ ಚಾಂಪ್ಸ್.

ಗಾಯನದಲ್ಲಿ ಪ್ರತಿಭಾವಂತ ಪುಟಾಣಿಗಳ ಆಯ್ಕೆಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಾನ್ವೇಷಣೆ (ಆಡಿಷನ್) ನಡೆಯಲಿದೆ. ಆಡಿಷನ್ ನಡೆಯುವ ದಿನಾಂಕ ಹಾಗೂ ಸ್ಥಳಗಳು ಈ ಕೆಳಗಿನಂತಿವೆ, ನೋಡಿ...

ಜೂನ್ 9 - ನೂತನ ವಿದ್ಯಾಲಯ, ಎಸ್ ಬಿ ಟೆಂಪಲ್ ರಸ್ತೆ ಗುಲಬರ್ಗ, ಜೂನ್ 10 - ಮೂರು ಸಾವಿರ ಮಠ ಸಭಾ ಭವನ, ಹುಬ್ಬಳ್ಳಿ, ಜೂನ್ 16 - ರೋಟರಿ ಸ್ಕೂಲ್ ಸರಸ್ವತಿಪುರಂ ಮೈಸೂರು, ಜೂನ್-17 - ಎಸ್ ಡಿ ಎಮ್ ಲಾ ಕಾಲೇಜ್, ಎಮ್ ಜಿ ರೋಡ್, ಮಂಗಳೂರು.

ಜೂನ್ 23 - ಬಾಪೂಜಿ ಕಾಲೇಜ್ ಸಭಾಂಗಣ ಮೆಡಿಕಲ್ ಕಾಲೇಜ್ ಕ್ಯಾಂಪಸ್, ದಾವಣಗೆರೆ, ಜೂನ್ 24 - ಶ್ರೀ ಭಗವಾನ ಮಹಾವೀರ ಜೈನ್ ಕಾಲೇಜ್, ಬೆಂಗಳೂರು ಈ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ವರೆಗೆ ಪ್ರತಿಭಾನೇಷ್ವಣೆ ಕಾರ್ಯಕ್ರಮ ನಡೆಯಲಿದೆ.

"ಈಗಾಗಲೇ ಪೂರ್ವ ತಯಾರಿ ಶುರುವಾಗಿದ್ದು ಅತ್ಯಂತ ನವೀನ ಮಾದರಿಯಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ರೂಪಿಸುತ್ತಿದ್ದೇವೆ. ಮೂಲೆ ಮೂಲೆಯ ಗ್ರಾಮಾಂತರದ ಪುಟಾಣಿಗಳಿಗೂ ಭಾಗವಹಿಸಬೇಕು ಎಂಬುದು ವಾಹಿನಿಯ ಆಶಯ.

ಪಾಲಕರು ಮಕ್ಕಳನ್ನು ಈ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಬೇಕು. ಸರಿಗಮಪ ಲಿಟ್ಲ್ ಚಾಂಪ್ಸ್ ಆಡಿಷನ್ಸ್ ಉಪಯೊಗವನ್ನು ಪಡೆಯಬೇಕು" ಎಂದು ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ| ಗೌತಮ ಮಾಚಯ್ಯ ತಿಳಿಸಿದ್ದಾರೆ.

ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ ಈ ಹಿಂದಿನ ಆವೃತ್ತಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದವು. ಅಲ್ಲಿ ಭಾಗವಹಿಸಿದ್ದ ಮಕ್ಕಳು ಇಂದಿಗೂ ಸರಿಗಮಪ ಪುಟಾಣಿಗಳೆಂದೇ ಗುರುತಿಸಲ್ಪಡುತ್ತಿದ್ದಾರೆ. ಇವರು ಈಗಾಗಲೇ ಚಿತ್ರರಂಗದಲ್ಲೂ ಹಿನ್ನೆಲೆ ಗಾಯಕರಾಗಿ ಹೆಸರು ಮಾಡುತ್ತಿದ್ದಾರೆ.

ಇದೀಗ ಮತ್ತೆ ಪ್ರಾರಂಭವಾಗಲಿರುವ ಕಾರ್ಯಕ್ರಮದ ಅಡಿಷನ್ಸ್ ಗೆ ಕಾದುಕೊಳಿತಿರುವ ಪುಟಾಣಿಗಳು ಹಾಗೂ ಅವರ ಪೋಷಕರಿಗೆ ಈ ಸುದ್ದಿ ತಾಜಾ ಮೈಸೂರ್ ಪಾಕ್. ಪುಟಾಣಿಗಳ ಕಣ್ಣಲ್ಲಿ ಈ ಸುದ್ದಿ ತಿಳಿದಾಗ ಮೂಡುವ ಮಿಂಚು, ಆ ವೇದಿಕೆಯಲ್ಲಿ ಹಾಡಾಗಿ ಹರಿಯಲಿದೆ. ಪುಟಾಣಿಗಳ ಹಾಡು ಕನ್ನಡಿಗರ ಮನ-ಮನೆಯಲ್ಲಿ ಸಂತೋಷದ ಸಿಂಚನ ಹರಿಸಲಿದೆ. (ಒನ್ ಇಂಡಿಯಾ ಕನ್ನಡ)

English summary
Zee Kannada Channel starts Sarigamapa Little Champs 9th Season very soon. Audition Starts form June 09 to June 24, 2012 in every corner of Karnataka. All 8 Season became very popular and now, 9th season is coming is on the way.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada