ಸರಿಗಮಪ‌ ಲಿಟಲ್ ಚಾಂಪ್ಸ್: ಸರಿಗಮಪದಲ್ಲಿ ಹಳ್ಳಿ ಹಾಡು ಸಿಟಿ‌ ಬೀಟ್ಸ್

By ಶೃತಿ ಹರೀಶ್ ಗೌಡ

ಈ ಬಾರಿ ಮಕ್ಕಳು ಸರಿಗಮಪ ಶೋನಲ್ಲಿ 'ಹಳ್ಳಿ ಹಾಡು ಸಿಟಿ ಬೀಟ್ಸ್‌'ಗೆ ಸಖತ್‌ ಆಗಿ ಹಾಡು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಇನ್ನು ಜಡ್ಜ್‌ಸ್ ಇಬ್ಬರ ಹೆಸರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಜಡ್ಜ್‌ಸ್‌ಗೆ ಶಾಕ್ ಕೊಟ್ಟರು. ವಿಜಯ ಗೆಳೆಯರ ಬಳಗ ಹಾಗೂ ಜನ್ಯ ಜಾಲಿ ಗ್ಯಾಂಗ್ ಎಂದು ಮಕ್ಕಳು ಸಂಭ್ರಮಿಸಿದರು. ಹಂಸಲೇಖ ಮಹಾಗುರುಗಳು ಇದು ಆರೋಗ್ಯಕರ ಸ್ಪರ್ಧೆಯಾಗಿ ಹಾಡುವಂತೆ ತಿಳಿಸಿದರು.

ಪುಟ್ಟ ಪೋರ ವಿಷ್ಣು ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ಟರ್ ಪೀಸ್ ಸಿನಿಮಾದ ಅಣ್ಣನಿಗೆ ಲವ್ ಆಗಿದೆ ಹಾಡು ಹಾಡಿ ಜೊತೆಗೆ ನೃತ್ಯವನ್ನು ಮಾಡಿ ಜನರನ್ನು ರಂಜಿಸಿದರು. ಕುಷಿಕ್ ಮತ್ತು ಸಿರಿಸಿಂಚನ ಪಟ್ಟವರ್ಧನ್ ಇಬ್ಬರೂ ಸೇರಿ ಮಲೆನಾಡ್ ಅಡಿಕೆ ಮೈಸೂರ್ ವಿಳ್ಯದೆಲೆ ಹಾಡು ಹಾಡಿದರು ಇದು ಎಲ್ಲಾ ಪ್ರೇಕ್ಷಕರನ್ನು ಹಾಗೂ ಜಡ್ಜ್‌ಸ್‌ನ್ನು ಕುಣಿಯುವಂತೆ ಮಾಡಿತು.

ಶಿವಾನಿ ನವೀನ್ ಕೊಪ್ಪ ಅವರು ಧ್ವನಿಯನ್ನು ಬದಲಿಸಿಕೊಂಡು ಎರಡೆರಡು ಧ್ವನಿಯಲ್ಲಿ ರಂಗೇನಾಹಳ್ಳಿಯಾಗೆ ರಂಗದ ರಂಗೇಗೌಡ ಎಂದು ಹಾಡಿ ಜಡ್ಜ್‌ಸ್ ಮೆಚ್ಚುಗೆಗೆ ಪಾತ್ರವಾದರು. ಗುರುಪ್ರಸಾದ್ ಟೈಟಾನಿಕ್ ಹೀರೋಯಿನ್ ನನ್ನ ಚಲುವೆ ಹಾಡು ಹಾಡಿದರು. ಈ ಕಡೆ ಪಂಕಜ್ ಪರಸನಹಟ್ಟಿ ಹಳೇ ಪಾತ್ರೆ ಹಳೇ ಕಬುಣ ಎಂದು ಪ್ರೇಕ್ಷಕರನ್ನು ರಂಜಿಸಿದರು.

ಸಮೀಕ್ಷಾ ಸಾಲಿಗ್ರಾಮ ಹಾಡಿನ ಅರೇ ಅರೇ ಗಿಣಿರಾಮ ಹಾಡು

ಸಮೀಕ್ಷಾ ಸಾಲಿಗ್ರಾಮ ಹಾಡಿನ ಅರೇ ಅರೇ ಗಿಣಿರಾಮ ಹಾಡು

ಸಮೀಕ್ಷಾ ಸಾಲಿಗ್ರಾಮ ಅರೇ ಅರೇ ಗಿಣಿರಾಮ ಎಂದು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕಿದರು. ಅರ್ಚಿಷ ಹೆಚ್ ರಾವ್ ಮೈಲಾರಿ ಚಿತ್ರದ ಊರಿಂದ ಎದ್ದು ಬಂದ ಜೋಗಿನೂ ಅಲ್ಲ ರೀ ಓಂ ಯಿಂದ ಎದ್ದು ಬಂದ ಸತ್ಯನೂ ಅಲ್ಲ ರೀ ಎಂದು ಹಾಡಿದರು. ನಯನ ವಸಂತಾಚಾರ್ ತಾಜಾ ತಾಜಾ ಕಡ್ಲೆಕಾಯಿ ಕಡ್ಲೆ ಕಾಯ್ ಹಾಡು ಹಾಡಿದರು.

ಮನಮಿಡಿದ ಜನಪದ ಹಾಡು

ಮನಮಿಡಿದ ಜನಪದ ಹಾಡು

ತನುಶ್ರೀ ಪುಷ್ಪಕ ವಿಮಾನದ ಜಿಲ್ಕಾ ಜಿಲ್ಕಾ ಜಿಲ್ಕಾರೇ ಹಾಡು ಹಾಡಿದರು. ಇವರ ಜೊತೆಗೆ ಮೆಂಟರ್ ಇಂದುನಾಗರಾಜು ಅವರು ಬಂದು ಸ್ಟೇಜ್ ಮೇಲೆ ಹಾಡಿದರು ಗೋಲ್ಡನ್ ಬಜಾರ್ ಪಡೆದುಕೊಂಡರು. ಪ್ರಗತಿ ಬಡಿಗೇರ್ ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದು ಎಂದು ಜಾನಪದ ಗೀತೆ ಮನ ಮಿಡಿಯುವಂತೆ ಹಾಡಿದರು. ಈ ಸಂದರ್ಭದಲ್ಲಿ ಹಂಸಲೇಖಾ ಅವರು ತಾವು ಗಾದೆಗಳನ್ನೇ ಹಾಡಾಗಿ ಮಾಡಿರುವುದನ್ನು ಹೇಳಿದರು. ಇದೇ ವೇಳೆ ಜಡ್ಜ್‌ಸ್ ಗೋಲ್ಡನ್ ಬಜಾರ್ ಕೊಟ್ಟರು.

ಗಮನ ಸೆಳೆದ ಭಾವಗೀತೆ

ಗಮನ ಸೆಳೆದ ಭಾವಗೀತೆ

ದಿಯಾ ಮತ್ತು ಶ್ರೀಸಾನಿಧ್ಯ ಇಬ್ಬರು ಸೇರಿ ಕಲ್ಲೇಟಿಗಿಂತ ಕಣ್ಣೇಟು ಜೋರಾಗಿ ಎಂದು ಹಾಡಿದರು. ಇದೇ ವೇಳೆ ದಿಯಾ ಹೆಗ್ಡೆ ಬಸ್‌ನ ಪ್ರಯಾಣದಲ್ಲಿ ಹಳ್ಳಿ ಮತ್ತು ಸಿಟಿಯವರು ಯಾವ ರೀತಿ ಪ್ರಯಾಣ ಮಾಡಿ ತಮ್ಮ ಕಷ್ಟ ಸುಖ ಹಂಚಿಕೊಂಡರು ಎಂಬುದನ್ನು ತಿಳಿಸಿದರು. ಇದನ್ನು ವೇದಿಕೆ ಮೇಲೆ ಬಂದ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಕೇಳಿ ಸಂತೋಷವನ್ನು ಪಟ್ಟರು. ರೇವಣಸಿದ್ಧ ಪುಂಡಲೀಕ ಪುಲಾರಿ ಮತ್ತು ಯೋಗಶ್ರೀ ಹೊಸ ಗಾನ ಬಜಾನ ಹಾಡು ಹಾಡಿದರು. ಸುಷ್ಠಿ ಸುರೇಶ್ ಮುಗಿಲ ಮಾರಿಗೆ ರಾಗರತಿಯ ಎಂದು ಭಾವಗೀತೆ ಹಾಡಿದರು‌ ಗೋಲ್ಡನ್ ಬಜಾರ್ ಪಡೆದರು. ಪ್ರವೀಣ್ ಶೇಟ್ ಮತ್ತು ಸುಮೇದ್ ಇಬ್ಬರೂ ಸೇರಿ ಕಿಲಾಡಿ ಜೋಡಿ ಸಿನಿಮಾದ ಕಿಲಾಡಿ ಜೋಡಿ ಎಂದು ಹಾಡಿದರು. ಇಬ್ಬರ ಹಾಡಿಗೆ ಜ್ಯೂರಿ ಮೆಂಬರ್ಸ್ ಎದ್ದು ನಿಂತು ಚಪ್ಪಾಳೆ ತಟ್ಟಿದರು ಗೋಲ್ಡನ್ ಬಜಾರ್ ಪಡೆದರು.

ಸರಿಗಮಪ ವೇದಿಕೆಯಿಂದ ನಿರ್ಗಮಿಸಿದ ಸುಮೇದ್

ಸರಿಗಮಪ ವೇದಿಕೆಯಿಂದ ನಿರ್ಗಮಿಸಿದ ಸುಮೇದ್

ಈ ಬಾರಿ ಡೇಂಜರ್ ಝೋನ್ ಇದ್ದು, ಸುಮೇದ್, ಪ್ರವೀಣ್ ಅರ್ಚೀಷಾ ಪಂಕಜ್ ಡೇಂಜರ್ ಝೋನ್ ತಲುಪಿದ್ದರು. ಮೂವರು ಸೇಫ್ ಆಗಿ ಸುಮೇದ್ ಅವರು ಸರಿಗಮಪ ಜರ್ನಿ ಮುಗಿಸಿದರು. ಇದೇ ವೇಳೆ ಮಾತನಾಡಿದ ಸುಮೇದ್ ಅವರ ಮೇಂಟರ್ ಹೇಮಂತ್‌ಗೆ ಧನ್ಯವಾದ ಹೇಳಿದರು. ನಾನು ಸರಿಗಮಪದಿಂದ ಕಲಿತಿದ್ದೇ ಹೆಚ್ಚು ಸಾಕಷ್ಟು ಕಲಿತಿದ್ದೇನೆ ಎಲ್ಲವನ್ನು ಕೊಟ್ಟ ಸರಿಗಮಪ ಹಾಗೂ‌ ಜೀ ಕನ್ನಡಗೆ ಧನ್ಯವಾದ ತಿಳಿಸಿದರು. ಜಡ್ಜಸ್ ಆದ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ರವರ ಮಾತು ಅನುಶ್ರೀ ಅರ್ಜುನ್ ಜನ್ಯರನ್ನು ಕಾಲೆಳೆಯುವುದು ಎಲ್ಲವೂ ಸೇರಿ ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿ ಬಂದಿತು. ಅನುಶ್ರೀ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

More from Filmibeat

English summary
Zee Kannada sarigamapa little champs season -19 Written Update on February 4th And 5th episode. Here is the details about halli hadu city beats.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X