Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸರಿಗಮಪ ಲಿಟಲ್ ಚಾಂಪ್ಸ್: ಪ್ರೇಕ್ಷಕರನ್ನು ರಂಜಿಸಿದ ಸರಿಗಮಪ ಲಿಟಲ್ ಚಾಂಪ್ಸ್
ಈ ಬಾರಿಯ ಸಂಚಿಕೆಯಲ್ಲಿ ಬಹಳಷ್ಟು ವಿಶೇಷತೆಗಳು ಕೂಡಿದ್ದವು. ಮೆಂಟರ್ಸ್ ಸೆಲೆಕ್ಟ್ ಮಾಡಿದ ಹಾಡುಗಳಿಗೆ ಮಕ್ಕಳು ಸಕ್ಕತ್ ಆಗಿ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಕುಣಿದು ಕುಪ್ಪಳಿಸಿದರು. ಇನ್ನೂ ಪೋಷಕರು ತಮ್ಮ ಮಕ್ಕಳ ಡ್ಯಾನ್ಸ್ ನೋಡಿ ಸಂಭ್ರಮಿಸಿದರು.
ಅಧ್ಯಕ್ಷ ಹಾಡಿಗೆ ಪಿರಿಯಾಪಟ್ಟಣದ ಹುಡುಗ ಗುರುಪ್ರಸಾದ್ ಸ್ಟೆಪ್ ಹಾಕಿ ಹಾಡು ಹಾಡಿದರು. ಇದಕ್ಕೆ ಜಡ್ಜ್‌ಸ್ ಸಹ ಒಳ್ಳೆಯ ಕಾಮೆಂಟ್ ಕೊಟ್ಟರು. ಮಹಾಗುರುಗಳಾದ ಹಂಸಲೇಖ ಸಹ ಗುರು ನಿನ್ನ ಹವಾ ಶುರು ಎಂದು ಕಾಮೆಂಟ್ ಮಾಡಿದರು. ಗುರುಪ್ರಸಾದ್ ಹಾಡಿಗೆ ಗೋಲ್ಡನ್ ಬಜರ್ ಸಹ ಸಿಕ್ಕಿತು.
ಶ್ರೀಸಾನಿಧ್ಯ ಮತ್ತು ವಿಷ್ಣು ಬಸಣ್ಣಿ ಬಾ ಸಾಂಗ್‌ಗೆ ಹಾಡು ಹಾಗೂ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಇದು ಎಲ್ಲ ಜಡ್ಜ್‌ಸ್‌ರ ಮೆಚ್ಚುಗೆಗೆ ಪಾತ್ರವಾಯಿತು. ಈ ಇಬ್ಬರು ಪುಟಾಣಿಗಳ ಫಾರ್ಮೆಮೆನ್ಸ್ ನೋಡಿ ಗುರುಕಿರಣ್ ನಕ್ಕು ಸುಸ್ತಾದರು.

ಪ್ರವೀಣ ಮತ್ತು ರೇವಣ್ಣ ಗಾಯನಕ್ಕೆ ಚಪ್ಪಾಳೆ
ಪ್ರವೀಣ ಮತ್ತು ರೇವಣ್ಣ ಅವರು ಬಾರೇ ಬಾರೇ ಮೋರೆ ತೋರೆ ಹಾಡಿಗೆ ಎಲ್ಲರೂ ಎದ್ದು ಚಪ್ಪಾಳೆ ತಟ್ಟಿದರು. ಮಂಜು ಮಾಸ್ಟರ್ ಕೋರಿಯೋಗ್ರಾಫಿಯಲ್ಲಿ ಈ ಸಾಂಗ್‌ಗೆ ಇವರಿಬ್ಬರೂ ಹಾಡಿ ನೃತ್ಯ ಮಾಡಿದರು. ಇದೇ ವೇಳೆ ಜಡ್ಜ್‌ಸ್ ಇಬ್ಬರಿಗೂ ಶುಭ ಹಾರೈಸಿದರು. ಕೋರಿಯೋಗ್ರಾಫರ್‌ಗೆ ಸಹ ಒಳ್ಳೆಯ ಕಾಮೆಂಟ್ ಸಿಕ್ಕಿತ್ತು ನಂತರ ಹಂಸಲೇಖ ಅವರು ಗೋಲ್ಡನ್ ಬಜರ್ ಒತ್ತಿದರು.

ನಂದಿತಾ ಹಾಗೂ ಹೇಮಂತ್ ಗಾಯನ
ಇತ್ತ ನಂದಿತಾ ಹಾಗೂ ಹೇಮಂತ್ ಇಬ್ಬರೂ ಸಹ ಅದ್ಭುತವಾಗಿ ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನಾ ಹಾಡನ್ನು ಆಡಿ ಡ್ಯಾನ್ಸ್ ಮಾಡಿದರು. ಸಮೀಕ್ಷಾ ಸಾಲಿಗ್ರಾಮ ಹಾಗೂ ನಯನ ಇವರು ದೂರದಿಂದ ಬಂದ ಸುಂದರಾಗಜಾಣ ಎಂಬ ಹಾಡಿಗೆ ಹಾಡು ಹಾಡಿ ಹೆಜ್ಜೆಯನ್ನು ಹಾಕಿದರು.ಇದಕ್ಕೆ ಜಡ್ಜ್‌ಸ್ ಸಹ ಒಳ್ಳೆಯ ಕಾಮೆಂಟ್ ನೀಡಿದರು. ಸುಮೇದ್ ಹಾಗೂ ಮೋಹಿತ್ ಅವರು ಎಣ್ಣೆನೂ ಸೋಡನೂ ಎಂತ ಒಳ್ಳೆಯ ಫ್ರೆಂಡ್ ಹಾಡಿಗೆ ಹಾಡು ಆಡಿ ಹೆಜ್ಜೆಯನ್ನು ಹಾಕಿದರು. ಇದಕ್ಕೆ ಜಡ್ಜ್‌ಸ್ ಒಳ್ಳೆಯ ಪ್ರಯತ್ನ ಎಂದು ಕಾಮೆಂಟ್ ನೀಡಿದರು.

ಅಪ್ಪು ಹಾಡಿಗೆ ನೃತ್ಯ
ಇನ್ನೂ ದಿಯಾ ಎಂಬ ಹುಡುಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಟ್ವಿಕಂಲ್ ಟ್ವಿಕಂಲ್ ಲಿಟಲ್ ಸ್ಟಾರ್ ಎಂಬ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಮನಸ್ಸನ್ನು ಸೊರೆ ಮಾಡಿದರು. ಗುರುಕಿರಣ್ ಸಹ ಬಂಡಲ್ ಬಡಾಯಿ ಮದೇವ ಬಿಡುವನು ಧಮ್ಮಿಲ್ಲದ ರೈಲು ವಾರೆವ್ಹಾ ಹಾಡು ಹಾಡಿದರು. ಸರಿಗಮಪ ಸೀಸನ್ 19 ಮಾತ್ರ ಎಲ್ಲ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಮಾಡಿತು. ಅನುಶ್ರೀ ನಿರೂಪಣೆ ಸಹ ಜೊತೆಗೆ ಅರ್ಜುನ್ ಜನ್ಯ ಅವರು ಕಾಲೆಳೆಯುವ ರೀತಿ ಸಹ ಮೊದಲಿನಿಂದಲೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಲಿಟಲ್ ಚಾಂಪ್ಸ್ ತನ್ನದೇ ಆದಂತಹ ಒಂದು ಪ್ರಾಮುಖ್ಯತೆ ಉಳಿಸಿಕೊಂಡು ಬಂದಿದೆ.