'ನೀನ್ ನನ್ನಟ್ಟಿ ಬೆಳ್ಕಂಗಿದ್ದೆ' ಹಾಡಿನ ಶೂಟಿಂಗ್ ವೇಳೆ ಒಂದೇ ಜಾಗದಲ್ಲಿ ದರ್ಶನ್ ಕೂತಿದ್ದು 3 ಗಂಟೆ!
ಜೀ ಕನ್ನಡದಲ್ಲಿ ಖ್ಯಾತಿ ಪಡೆದಿದ್ದ ಶೋ ಅಂದ್ರೆ ಅದು ಸರಿಗಮಪ. ಯಾವಾವ ಶುರುವಾದರೂ ಜನ ಪ್ರೀತಿಯಿಂದ ನೋಡುವ ಶೋ ಇದು. ಸಂಗೀತ ಪ್ರಿಯರಂತು ಇಷ್ಟಪಟ್ಟು ನೋಡುವ ಶೋ. ಈ ಸರಿಗಮಪ ಮೂಲಕ ಅದೆಷ್ಟೋ ಎಲೆಮರೆಯ ಕಾಯಿಯಂತೆ ಇರುವವರನ್ನು ಮುಖ್ಯ ವಾಹಿನಿಗೆ ತರುತ್ತಾರೆ. ಅವರ ಪ್ರತಿಭೆಯನ್ನ ಅನಾವರಣ ಮಾಡುತ್ತಾರೆ. ಸೀಸನ್ 1ರಿಂದಾನೂ ಇಲ್ಲಯವರೆಗೂ ಅದೆಷ್ಟೋ ಹಳ್ಳಿ ಪ್ರತಿಭೆಗಳು ಇಂದು ಒಳ್ಳೆಯ ಹಾಡುಗಾರರಾಗಿದ್ದಾರೆ.
ಈ ಬಾರಿ ಕೂಡ ಸರಿಗಮಪ ಶುರುವಾಗಿದೆ. ಈ ಬಾರಿ ಸ್ಪೆಷಲ್ ಅಂದ್ರೆ 6 ರಿಂದ 60 ವರ್ಷದವರೆಗಿನ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಅದರಲ್ಲಿ ಹಾವೇರಿ ಬಾಲು ಬೆಳಗುಂದಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಜಾನಪದ ಶೈಲಿಯ ಹಾಡುಗಾರಿಕೆಗೆ ಫೇಮಸ್ ಆಗಿದ್ದಾರೆ.

ಬಾಲು ಬೆಳಗುಂದಿ ಹಾಡಿಗೆ ಚಪ್ಪಾಳೆ
ಬಾಲು ಬೆಳಗುಂದಿ ಅಲ್ಲಲ್ಲಿಯೇ ಹಾಡುಗಳನ್ನ ಸೃಷ್ಟಿ ಮಾಡುತ್ತಾರೆ. ಅನುಶ್ರೀ ಅವರ ಬಗ್ಗೆಯೂ ಹಾಡು ರಚಿಸಿದ್ದರು. ಇಂದಿನ ವೇದಿಕೆಯಲ್ಲಿ ನೀನ್ ನನ್ನಟ್ಟಿ ಬೆಳ್ಕಂಗಿದ್ರೆ ನಂಜಿ ಹಾಡನ್ನ ಹಾಡಿದ್ದಾರೆ. ಬಾಲು ಬೆಳಗುಂದಿ ಧ್ವನಿಯಲ್ಲಿ ಈ ಹಾಡನ್ನ ಕೇಳುವುದೇ ಚೆಂದ. ಈ ಹಾಡು ಹಾಡುತ್ತಿದ್ದಂತೆ ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ನೆನಪಿನಂಗಳಕ್ಕೆ ಜಾರಿದ್ದಾರೆ.
ಶೂಟಿಂಗ್ ನೆನೆದ ಸಾಧುಕೋಕಿಲ
ಸಾಧುಕೋಕಿಲ ಕನ್ನಡ ಇಂಡಸ್ಟ್ರಿಯ ಖ್ಯಾತ ಹಾಸ್ಯ ನಟ ಕೂಡ, ಸಂಗೀತ ನಿರ್ದೇಶಕ, ಒಳ್ಳೆ ಗಾಯಕ ಕೂಡ. 'ಸುಂಟರಗಾಳಿ' ಸಿನಿಮಾದಲ್ಲಿ ದರ್ಶನ್ ಹಾಗೂ ರಕ್ಷಿತಾ ಜೋಡಿಯಾಗಿ ಅಭಿನಯಿಸಿದ್ದರು. ಇದರ ಹಾಡು 'ನೀನ್ ನನ್ನಟ್ಟಿ ಬೆಳ್ಕಂಗಿದ್ದೆ' ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತ ಹಾಡು. ಈ ಹಾಡು ಹಾಡಿದ ಕೂಡಲೇ ಸಾಧುಕೋಕಿಲ ಅವರು ಹಳೆಯ ದಿನಗಳಿಗೆ ಮರಳಿದ್ದಾರೆ. ದರ್ಶನ್ ಅಂದು ಆ ಹಾಡಿಗೆ ನೀಡಿದ ಸಮಯದ ಬಗ್ಗೆ ಮಾತನಾಡಿದ್ದಾರೆ.
ಅಂದು ದರ್ಶನ್ ಹೇಗಿದ್ದರು?
ಈ ಹಾಡಿಗೆ ನಾನೇ ಕೊರಿಯೋಗ್ರಫಿ ಮಾಡಿದ್ದು. ಅಂದು ದರ್ಶನ್ ಅವರನ್ನ ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಕೂರಿಸಿದೆವು. ಸಂಜೆ 7-7.30 ಆಗ ಶೂಟ್ ಮುಗೀತು. ಯಾಕಂದ್ರೆ ಕತ್ತಲೆ ಅಂದ ಕೂಡಲೇ ಕತ್ತಲೇ ಬರಬೇಕಿತ್ತು. ಹೀಗಾಗಿ ಸುಮಾರು 4 ಗಂಟೆಗಳ ಕಾಲ ದರ್ಶನ್ ಅವರನ್ನು ಅದೇ ಜಾಗದಲ್ಲಿ ಕೂರಿಸಲಾಗಿತ್ತು. ನ್ಯಾಚುರಲ್ ಆಗಿ ಬರಬೇಕು ಎಂಬ ಕಾರಣಕ್ಕೆ ರಿಯಲ್ ಆಗಿನೇ ಶೂಟ್ ಮಾಡಲಾಗಿತ್ತು ಎಂದಿದ್ದಾರೆ. ಸಾಧುಕೋಕಿಲ ಅವರು ಹೇಳಿದ ಶೂಟಿಂಗ್ ಅನುಭವ ಕೇಳಿ ಎಲ್ಲರೂ ದರ್ಶನ್ ಅವರ ಡೆಡಿಕೇಷನ್ ಬಗ್ಗೆ ಹೊಗಳಿದ್ದಾರೆ.
ಸ್ಟಾರ್ ನಟರು ತ್ಯಾಗ ಮಾಡ್ತಾರೆ
ಇನ್ನು ಈ ವಿಡಿಯೋ ನೋಡಿದ ಕೂಡಲೇ ದರ್ಶನ್ ಅಭಿಮಾನಿಗಳು ಕಮೆಂಟ್ ಬಾಕ್ಸ್ ನಲ್ಲಿ ಹಾಜರಾಗಿದ್ದಾರೆ. ದರ್ಶನ್ ಫ್ಯಾನ್ಸ್ ಎಲ್ಲಾ ಬಂದು ಲೈಕ್ ಮಾಡಿ ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ನಮ್ಮ ದರ್ಶನ್ ಅಂದ್ರೇನೆ ಹಾಗೇ ಅಂತೆಲ್ಲಾ ಹೊಗಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಕೂಡ ಶುರುವಾಗಿದೆ. ಆದರೆ ಈ ಬಾರಿ ದರ್ಶನ್, ಅಭಿಮಾನಿಗಳ ಜೊತೆಗೆ ನಿಂತು ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ. ಬೆನ್ನು ನೋವಿನ ಕಾರಣದಿಂದ ಹುಟ್ಟುಹಬ್ಬ ಆಚರಸಿಕೊಳ್ಳುತ್ತಿಲ್ಲ. ಇದರ ಬೆನ್ನಲ್ಲೇ ದರ್ಶನ್ ಡೆಡಿಕೇಷನ್ ವಿಡಿಯೋ ವೈರಲ್ ಆಗ್ತಾ ಇದೆ.


Click it and Unblock the Notifications











