Sathya: ರಾಯರ ಮಾತು ಕೇಳದ ಲಕ್ಷ್ಮಣ : ದಿವ್ಯಾ ಮುಂದಿನ ನಡೆ ಏನು..?
'ಸತ್ಯ' ಧಾರಾವಾಹಿಯಲ್ಲಿ ದಿವ್ಯಾಗೆ ಬಾಲನ ಬಂಡವಾಳ ಗೊತ್ತಾಗಿದೆ. ಇದರಿಂದ ಬಾಲ ಸಂಕಷ್ಟವನ್ನು ಎದುರಿಸುತ್ತಿದ್ದಾನೆ. ಆದರೆ ದಿವ್ಯಾಳಿಗೆ ತನ್ನ ಪರಿಸ್ಥಿತಿ ನೆನೆದು ದುಃಖಿತಳಾಗಿದ್ದಾಳೆ. ರಾಮಚಂದ್ರ ರಾಯರು ಮನೆಯಲ್ಲಿ ಇಲ್ಲದ ಸಮಯದಲ್ಲಿ ರಿತುಗೆ ಎಂಗೇಜ್‌ಮೆಂಟ್ ಮಾಡಲು ಸೀತಾ ಹಾಗೂ ಲಕ್ಷ್ಮಣ ನಿರ್ಧರಿಸಿದ್ದಾರೆ. ಇದೀಗ ಎಂಗೇಜ್‌ಮೆಂಟ್ ವಿಷಯ ಗೊತ್ತಾಗಿ ರಾಮಚಂದ್ರ ರಾಯರು ಕೋಪ ಮಾಡಿಕೊಂಡಿದ್ದಾರೆ.
ರಿತುಗೆ ದೊಡ್ಡಪ್ಪ ಬಂದಿರುವುದು ರೆಕ್ಕೆ ಬಂದಂತಾಗಿದೆ. ತನಗೆ ಇಷ್ಟವಿಲ್ಲದ ಎಂಗೇಜ್‌ಮೆಂಟ್ ಅನ್ನು ದೊಡ್ಡಪ್ಪನ ಸಹಾಯದಿಂದ ಕ್ಯಾನ್ಸಲ್ ಮಾಡಬಹುದು ಎಂದುಕೊಂಡಿದ್ದಾಳೆ.

ರಾಮಚಂದ್ರ ರಾಯರ ಹಠ
ರಾಯರು ಮನೆಗೆ ಬಂದ ಕೊಡಲೇ ರಿತು ದೊಡ್ಜಪ್ಪನನ್ನು ಅಪ್ಪಿಕೊಂಡಿದ್ದಾಳೆ. ಇದರಿಂದ ರಾಮಚಂದ್ರ ರಾಯರಿಗೆ ಬೇಸರವಾಗಿದೆ. ಇನ್ನು ಲಕ್ಷ್ಮಣ ಮತ್ತು ಸೀತಾ, ರಾಯರಿಗೆ ಒಂದು ಮಾತನ್ನೂ ಹೇಳದೆ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಂಡಿರುವುದು ನೋವುಂಟು ಮಾಡಿದೆ. ಆದರೆ ಲಕ್ಷ್ಮಣ ಮತ್ತು ಸೀತಾ ಇಬ್ಬರೂ ರಾಯರ ಬಳಿ ಕ್ಷಮೆ ಕೇಳುತ್ತಾರೆ. ಆದರೆ ರಾಯರಿಗೆ ಈ ನಿಶ್ಚಿತಾರ್ಥ ಇಷ್ಟವಿರುವುದಿಲ್ಲ. ಹೀಗಾಗಿ ರಾಯರು ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡುವಂತೆ ಹೇಳಿದ್ದಾರೆ.
ಎಂಗೇಜ್‌ಮೆಂಟ್ ಕ್ಯಾನ್ಸಲ್
ರಾಯರ ಮಾತನ್ನು ಕೇಳಿದ ತೂಡಲೇ ಮನೆಯವರಿಗೆಲ್ಲಾ ಶಾಕ್ ಆಗಿದೆ. ಆದರೆ ರಿತುಗೆ ದೊಡ್ಡಪ್ಪನ ನಿರ್ಧಾರ ಖುಷಿ ತಂದಿದೆ. ಲಕ್ಷ್ಮಣ ಮತ್ತು ಸೀತಾ ಇಬ್ಬರು ಆತುರವಾಗಿ ನಿಶ್ಚಿತಾರ್ಥವನ್ನು ಅರೇಂಜ್ ಮಾಡಿದ್ದೇವೆ. ಈಗ ನಾಳೆ ಬೆಳಗ್ಗೆ ನಿಶ್ಚಿತಾರ್ಥ ನಡೆಯಬೇಕಿದೆ. ಎಲ್ಲಾ ಅರೇಂಜ್ ಮೆಂಟ್ ಕೂಡ ಮಾಡಿಕೊಂಡು ಆಗಿದೆ. ಈಗ ಹೇಗೆ ಕ್ಯಾನ್ಸಲ್ ಮಾಡುವುದು ಎಂದು ಹೇಳುತ್ತಾರೆ. ಇದಕ್ಕೆ ರಾಯರು ಹೇಗೆ ಆತುರದಲ್ಲಿ ನಿಶ್ಚಯಿಸಿದಿರೋ ಹಾಗೆ ನಿಲ್ಲಿಸಿ ಎಂದು ಹಠ ಮಾಡುತ್ತಾರೆ.
ಆಗ ಲಕ್ಷ್ಮಣ ಸಾಧ್ಯವಿಲ್ಲ. ನನ್ನ ಮಗಳ ಬಗ್ಗೆ ಯಾರೂ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿಲ್ಲ. ಸಮ್ಮತಿ ನೀಡಿದರೆ ಸಾಕು ಎಂದು ಹೇಳುತ್ತಾನೆ. ಈ ಮಾತಿನಿಂದ ರಾಯರಿಗೂ ನೋವಾಗುತ್ತದೆ. ರಿತುಗೆ ದೊಡ್ಡಪ್ಪನ ಮಾತನ್ನೂ ಕೂಡ ಕೇಳದೇ ನಿಶ್ಚಿತಾರ್ಥವನ್ನು ಮಾಡುತ್ತಿದ್ದಾರೆ ಎಂದು ಬೇಸರವಾಗಿದೆ.

ಕಂಗಾಲಾದ ಜಾನಕಿ-ಗಿರಿಜಮ್ಮ
ಇತ್ತ ದಿವ್ಯಾಳಿಗೆ ತಾನು ಆರಿಸಿಕೊಂಡಿದ್ದು ಬಡತನವನ್ನು. ತನ್ನ ಗಂಡ ಬಾಲ ಶ್ರೀಮಂತನಲ್ಲ ಎಂಬುದು ತಿಳಿದ ಕಾರಣ ಹೊಟ್ಟೆ ಉರಿಯಲ್ಲಿ ಬೇಯುತ್ತಿದ್ದಾಳೆ. ಸತ್ಯಗೆ ಅರಮನೆ ಜೀವನ ಲಭಿಸಿದೆ. ಕೋಟಿಗಟ್ಟಲೆ ಹಣವಿರುವ ಮನೆಗೆ ಸೊಸೆಯಾಗಿ ಹೋಗಿದ್ದಾಳೆ. ನಾನು ಬೀದಿಯಲ್ಲಿ ನಿಲ್ಲುವಂತೆ ಆಗಿದೆ ಎಂದು ಚೀರಾಡುತ್ತಾಳೆ. ಸತ್ಯ ಮೇಲೆ ಅನವಶ್ಯಕವಾಗಿ ದ್ವೇಷ ಕಾರುತ್ತಾಳೆ.
ಆದರೆ ಜಾನಕಿ ಮತ್ತು ಗಿರಿಜಮ್ಮ ಇಬ್ಬರೂ ಕೂಡ ದಿವ್ಯಾಳಿಗೆ ಬುದ್ಧಿ ಹೇಳುತ್ತಾರೆ. ನಿನ್ನ ತಪ್ಪು ನಿರ್ಧಾರಕ್ಕೆ ಸತ್ಯಳನ್ನು ಹೊಣೆಗಾರಿಕೆ ಮಾಡಬೇಡ. ನಿನ್ನ ಬದುಕನ್ನು ಆರಿಸಿಕೊಳ್ಳುವುದು ನಿನಗೆ ಬಿಟ್ಟಿದ್ದು. ನಿನ್ನ ಬುದ್ಧಿ ಎಲ್ಲಿತ್ತು ಎಂದೆಲ್ಲಾ ಪ್ರಶ್ನಿಸುತ್ತಾರೆ. ದಿವ್ಯಾ ಹುಚ್ಚಿಯಂತೆ ನಡೆದುಕೊಳ್ಳುತ್ತಾಳೆ. ಇದನ್ನು ನೋಡಿದ ಜಾನಕಿ ಹಾಗೂ ಗಿರಿಜಮ್ಮ ಕಂಗಾಲಾಗುತ್ತಾರೆ.
ಹುಚ್ಚಿಯಂತಾದ ದಿವ್ಯಾ
ಮನೆಯವರ ಮಾತುಗಳು ದಿವ್ಯಾಳಿಗೆ ಕೋಪ ತರಿಸುತ್ತದೆ. ಇವರಿಂದ ನಾನು ಮಾತು ಕೇಳಬೇಕಾಯ್ತಲ್ಲ ಎಂದು ಒದ್ದಾಡುತ್ತಾಳೆ. ಬಾಲನ ಮೇಲೆ ತನ್ನ ಬೇಸರವನ್ನೆಲ್ಲಾ ಹೊರ ಹಾಕುತ್ತಾಳೆ. ಆದರೆ ಬಾಲ ಮಾತ್ರ, ನನಗೆ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೆ ಬೇರೆ ದಾರಿ ಇರಲಿಲ್ಲ ಅದಕ್ಕೆ ಸುಳ್ಳು ಹೇಳಿದೆ ಎಂದು ಹೇಳುತ್ತಾನೆ. ಇದರಿಂದ ದಿವ್ಯಾ ಕೋಪ ಇನ್ನಷ್ಟು ಹೆಚ್ಚಾಗುತ್ತದೆ.
ನೀವೆಲ್ಲರೂ ತಣ್ಣಗಿನ ಹಾಲು ಕುಡಿದು ಖುಷಿಯಾಗಿರಿ ಎಂದು ಕಿರುಚಾಡುತ್ತಾಳೆ. ಹುಚ್ಚಿಯಂತೆ ಮಾತನಾಡುತ್ತಾಳೆ. ಇನ್ನು ಮುಂದೆ ತಾನು ಯಾವುದೇ ಕಾರಣಕ್ಕೂ ಬಾಲನ ಜೊತೆಗೆ ಬಾಳುವುದಿಲ್ಲ ಎಂದು ಹೇಳುತ್ತಾಳೆ.


Click it and Unblock the Notifications











