Sathya: ಬೀಗರಿಂದ ಅವಮಾನ ಅನುಭವಿಸಿದ ಕೋಟೆ ಮನೆ ಕುಟುಂಬಸ್ಥರು
Article desc : ಸತ್ಯ ಧಾರಾವಾಹಿಯಲ್ಲಿ ರಿತುಗೆ ಇಷ್ಟವಿಲ್ಲದಿದ್ದರೂ ಮನೆಯಲ್ಲಿ ಲಕ್ಷ್ಮಣ ಹಾಗೂ ಸೀತಾ ಹಠ ಮಾಡಿ ನಿಶ್ಚಿತಾರ್ಥ ಮಾಡುತ್ತಿದ್ದಾರೆ. ಇದರಿಂದ ಮನೆಯವರಿಗೆಲ್ಲಾ ಬೇಸರವಾಗಿದೆ. ಗುರುಗಳು ಈ ನಿಶ್ಚಿತಾರ್ಥವನ್ನು ಮಾಡಬೇಡಿ. ಇದರಿಂದ ಅವಮಾನವಾಗುತ್ತದೆ ಎಂದು ಮುನ್ಸೂಚನೆಯನ್ನೂ ನೀಡಿದ್ದರು. ಆದರೆ, ಗುರುಗಳು ಹೇಳಿದ ಮಾತನ್ನು ರಾಯರು ಹೇಳಿದರೂ ಯಾರೂ ಕೇಳಲಿಲ್ಲ. ಈಗ ನಿಶ್ಚಿತಾರ್ಥದ ವೇಳೆ ಯಡವಟ್ಟಾಗಿ ತಲೆ ತಗ್ಗಿಸುವಂತಾಗಿದೆ.
ಈಗಾಗಲೇ ನಿಶ್ಚಿತಾರ್ಥ ಶಾಸ್ತ್ರವನ್ನೂ ಆರಂಭ ಮಾಡಲಾಗಿದೆ. ಅರ್ಧ ಶಾಸ್ತ್ರ ಮುಗಿದಿದ್ದು, ಇನ್ನು ಅರ್ಧ ಶಾಸ್ತ್ರ ಬಾಕಿ ಉಳಿದಿದೆ. ಬಟ್ಟೆ ಬದಲಾಯಿಸಲೆಂದು ಹೋದ ರಿತು ಇನ್ನೂ ವಾಪಸ್ ಬಂದಿಲ್ಲ. ಇದರಿಂದ ಮನೆಯವರಿಗೆ ಗಾಬರಿಯಾಗಿದೆ. ಮೊದಲು ಊರ್ಮಿಳಾ ರೂಮಿಗೆ ಬಂದು ನೋಡುತ್ತಾಳೆ. ರಿತು ಎಲ್ಲೂ ಇರುವುದಿಲ್ಲ. ಇದರಿಂದ ಊರ್ಮಿಳಾ ಗಾಬರಿಯಾಗಿ ಕುಸಿದು ಬೀಳುತ್ತಾಳೆ.

ಊರ್ಮಿಳಾ ಹಾಗೂ ರಿತು ಬರಲಿಲ್ಲವೆಂದು ಸೀತಾ ಬರುತ್ತಾಳೆ. ಅವಳೂ ಹುಡುಕಾಡಿ ಗಾಬರಿಯಾಗಿರುತ್ತಾಳೆ. ಆಗ ಲಕ್ಷ್ಮಣ ಬರುತ್ತಾನೆ. ನಂತರ ಕಾರ್ತಿಕ್ ಹೀಗೆ ಎಲ್ಲರೂ ಬಂದು ಹುಡುಕಾಡಿದರೂ ರಿತು ಕಾಣಿಸುವುದಿಲ್ಲ. ಕೊನೆಗೆ ಸತ್ಯ ಬಂದು ಮತ್ತೆ ರೂಮನ್ನೆಲ್ಲಾ ಜಾಲಾಡುತ್ತಾಳೆ. ಲಕ್ಷ್ಮಣ, ಕಾರ್ತಿಕ್‌ಗೆ ಬೈಯುತ್ತಾನೆ. ಜವಾಬ್ದಾರಿಯಿಂದ ನೋಡಿಕೊಳ್ಳುವುದಕ್ಕೆ ಆಗುವುದಿಲ್ವಾ ಎಂದು ಕೂಗಾಡುತ್ತಾನೆ. ಇತ್ತ ಸೀತಾ, ಸತ್ಯಳನ್ನು ಪ್ರಶ್ನಿಸುತ್ತಾಳೆ. ಇದರಲ್ಲಿ ನಿನ್ನ ಕೈವಾಡ ಇದೆಯಾ ಎಂದು ಕೇಳುತ್ತಾಳೆ. ಸತ್ಯ ಇಲ್ಲ ಎನ್ನುತ್ತಾಳೆ. ಸೀತಾ, ಸತ್ಯಳನ್ನು ನಿನ್ನದೇ ಕುಮ್ಮಕ್ಕಿರಬೇಕು ಎಂದು ದೂಷಿಸುತ್ತಾಳೆ.
ರಾಕಿಗೆ ಈಗಲೂ ತಪ್ಪು ಮಾಡಲು ಇಷ್ಟವಿಲ್ಲ
ರಾಕಿ ಮತ್ತು ರಿತು ಇಬ್ಬರೂ ಯಾರಿಗೂ ಹೇಳದೇ, ಕೇಳದೇ ಮನೆಯಿಂದ ಆಚೆ ಬಂದಾಗಿದೆ. ರಾಕಿ ಹಾಗೂ ರಿತು ಇಬ್ಬರೂ ಬಸ್ ಸ್ಟಾಪ್‌ನಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಆಗಲೂ ರಾಕಿ ಇದು ಸರಿಯಿಲ್ಲ. ನಾವು ಯಾರಿಗೂ ಹೇಳದೇ ಬಂದಿದ್ದು ತಪ್ಪು. ನಿಮ್ಮ ಮನೆಯಲ್ಲಿ ಈಗ ಎಲ್ಲರೂ ಗಾಬರಿಯಾಗಿರುತ್ತಾರೆ ಎಂದು ಹೇಳುತ್ತಾನೆ. ಆದರೆ ರಿತು, ರಾಕಿ ಮಾತಿಗೆ ಬೇಸರ ಮಾಡಿಕೊಂಡು. ಮತ್ತೆ ನೀನು ನೆಗೆಟಿವ್ ಮಾತುಗಳನ್ನು ಆಡಬೇಡ. ಈಗ ನನಗೆ ಎಷ್ಟೋ ನಿರಾಳ ಆಗಿದೆ. ನಾನು ನಿನ್ನ ಜೊತೆಗೆ ಸುಖವಾಗಿರುತ್ತೀನಿ ಎನ್ನುತ್ತಾಳೆ.

ಮನೆಯಲ್ಲಿ ಎಲ್ಲರೂ ಗಾಬರಿ
ರಾಕಿ ನೀನು ಹೇಳಿದಷ್ಟು ಬದುಕು ಸುಲಭವಲ್ಲ ರಿತು. ನಾವು ಈಗ ಮಾಡಿರುವುದು ಬಹಳ ತಪ್ಪು. ಆದರೂ ಮುಂದೆ ಇಟ್ಟ ಈ ಹೆಜ್ಜೆಯನ್ನು ಹಿಂದೆ ಇಡುವುದು ಬೇಡ ಬಿಡು ಎಂದು ಹೇಳಿ ಸುಮ್ಮನಾಗುತ್ತಾನೆ. ರಿತು ಕಾಣಿಸದೇ ಇರುವುದಕ್ಕೆ ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದಾರೆ. ಕೀರ್ತನಾ ಕೈಗೆ ರಿತುಳ ಕಾಲಗೆಜ್ಜೆ ಸಿಕ್ಕಿದೆ. ಅದೂ ಕೂಡ ಮನೆಯ ಹಿಂದಿನ ಬಾಗಿಲ ಬಳಿ. ಇದರಿಂದ ರಿತು ಓಡಿ ಹೋಗಿದ್ದಾಳೆ ಎಂದು ಹೇಳುತ್ತಾಳೆ.
ಊರ್ಮಿಳಾ, ಸೀತಾ, ರಾಯರು, ಕಾರ್ತಿಕ್, ಸತ್ಯ, ಲಕ್ಷ್ಮಣ ಎಲ್ಲರೂ ಶಾಕ್ ಆಗುತ್ತಾರೆ. ಆದರೆ, ಕಾರ್ತಿಕ್ ಇಲ್ಲ ರಿತು ಇಲ್ಲೇ ಎಲ್ಲೋ ಇರಬೇಕು ಹುಡುಕೋಣ ಎಂದು ಹೇಳುತ್ತಾನೆ. ಅಷ್ಟರಲ್ಲಿ ನಿಶ್ಚಿತಾರ್ಥಕ್ಕೆ ಬಂದ ಬೀಗರಿಗೂ ಸತ್ಯ ಗೊತ್ತಾಗುತ್ತದೆ. ಇದಕ್ಕೇನಾ ಇಷ್ಟು ಬೇಗ ನಿಶ್ಚಿತಾರ್ಥ ಇಟ್ಟುಕೊಂಡಿದ್ದು, ಕೋಟೆ ಮನೆ ಅಂತ ಬಂದರೆ ಹೀಗೆಲ್ಲಾ ಆಯ್ತು ಎಂದು ಅವಮಾನಿಸುತ್ತಾರೆ.

ಬೀಗರಿಂದ ಅವಮಾನ
ಲಕ್ಷ್ಮಣ ಇಲ್ಲ. ಈಗಲೇ ಮಗಳನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಬೀಗರು, ಏನೂ ಬೇಡ ದೊಡ್ಡ ಮನೆಯವರು, ಒಳ್ಳೆಯ ಸಂಪ್ರದಾಯಸ್ಥರು ಅಂತ ನಂಬಿ ಬಂದ್ವಿ ನಮಗಿನ್ನು ಈ ಸಂಬಂಧ ಬೇಡ ಎನ್ನುತ್ತಾರೆ. ರಾಯರು ಬೇಸರದಲ್ಲೇ ಬೀಗರ ಮನೆಯವರಿಗೆ ಕ್ಷಮೆಯನ್ನು ಕೇಳುತ್ತಾರೆ.


Click it and Unblock the Notifications











