Sathya: ರಾಯರ ಬಳಿ ಕ್ಷಮೆ ಕೇಳಿದ ಲಕ್ಷ್ಮಣ: ಕೀರ್ತನಾಳಿಗೆ ಗ್ರಹಚಾರ ಬಿಡಿಸಿದ ರಿತು

By ಪ್ರಿಯಾ ದೊರೆ

Article desc : ಸತ್ಯ ಧಾರಾವಾಹಿಯಲ್ಲಿ ರಿತು, ರಾಕಿ ಜೊತೆಗೆ ಮನೆ ಬಿಟ್ಟು ಹೋಗಿದ್ದಾಳೆ. ಇದರಿಂದ ಕೋಟೆ ಮನೆ ಮರ್ಯಾದೆ ಹರಾಜಾಗಿದೆ. ಇದರಿಂದ ಎಲ್ಲರೂ ಸತ್ಯ ಮೇಲೆ ಗೂಬೆ ಕೂರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮನೆಗೆ ಬಂದ ಹುಡುಗರು ರಾಕಿ ರೂಮ್‌ನಲ್ಲಿ ಇಲ್ಲ ಎಂಬ ವಿಚಾರವನ್ನು ತಿಳಿಸುತ್ತಾರೆ. ಗಾಬರಿಗೊಂಡ ಸತ್ಯ, ರಿತುಳನ್ನು ಎಲ್ಲೇ ಇದ್ದರೂ ಹುಡುಕಿಕೊಂಡು ಬರುವುದಾಗಿ ಹೇಳಿ ಹೊರಡುತ್ತಾಳೆ.

ಮನೆಯಲ್ಲಿ ಸೀತಾ, ಕೀರ್ತನಾ ಎಲ್ಲರೂ ಸತ್ಯಳನ್ನು ಬೈಯುತ್ತಿರುತ್ತಾರೆ. ಕಾರ್ತಿಕ್, ಸತ್ಯ ಪರವಾಗಿ ಮಾತನಾಡುತ್ತಿದ್ದರೆ, ಕೀರ್ತನಾ ಇನ್ನಷ್ಟು ಚಾಡಿ ಮಾತುಗಳನ್ನು ಹೇಳುತ್ತಾಳೆ. ಸತ್ಯ ಮನೆಯಿಂದ ಹೊರಡುತ್ತಿದ್ದಂತೆ ರಾಕಿ ಫೋನ್ ಮಾಡುತ್ತಾನೆ. ರಿತು ಸಾಯಲು ಹೊರಟಿದ್ದಳು. ಬೇರೆ ದಾರಿ ಇಲ್ಲದೇ, ಕರೆದುಕೊಂದಡು ಬಂದೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಸೀದಾ ರಾಕಿ ಹಾಗೂ ರಿತು ಇರುವ ಕಡೆ ಸತ್ಯ ಹೋಗುತ್ತಾಳೆ. ಸತ್ಯ, ರಾಕಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಇವತ್ತು ರಿತು ಎಂಗೇಜ್ ಮೆಂಟ್. ಇವತ್ತೇ ಹೀಗೆ ಮಾಡಬೇಕಾ..? ಏನಾದರೂ ಮಾಡುವಾಗ ನನಗೆ ಒಂದು ಮಾತು ಹೇಳಬೇಕು ಎಂಬುದು ಗೊತ್ತಾಗಲಿಲ್ವಾ ಎಂದು ಪ್ರಶ್ನಿಸುತ್ತಾಳೆ.

Zee Kannada Sathya Serial 26th May episode written update

ರಿತುಗೆ ಸತ್ಯ ಸಮಾಧಾನ

ರಿತು ನೀವ್ಯಾರು ನನಗೆ ಸಪೋರ್ಟ್ ಮಾಡಲಿಲ್ಲ. ನಾನು ತಾನೇ ಏನು ಮಾಡಲಿ ಎಂದು ಕೇಳುತ್ತಾಳೆ. ಆಗ ಸತ್ಯ ಈಗ ಎಂಗೇಜ್‌ಮೆಂಟ್ ಮಾಡಿಕೊಳ್ಳಬೇಕಿತ್ತು. ನಾವ್ಯಾರೂ ನಿನ್ನ ಕೈ ಬಿಡೋದಿಲ್ಲ. ನೀವಿಬ್ಬರೂ ಓದಿ ಏನಾದರೂ ಸಾಧನೆ ಮಾಡಿ. ಬಳಿಕ ನಾವೇ ಮುಂದೆ ನಿಂತು ನಿಮ್ಮ ಮದುವೆ ಮಾಡುತ್ತೇವೆ ಎಂದು ಸಮಾಧಾನ ಮಾಡಿ ರಿತುಳನ್ನು ಮನೆಗೆ ಕರೆದುಕೊಂಡು ಬರುತ್ತಾಳೆ.

ಸತ್ಯಳನ್ನು ಒಪ್ಪಿದ ಮನೆಯವರು

ರಿತು ಮನೆಗೆ ಬಂದ ಕೂಡಲೇ ಎಲ್ಲರೂ ಖುಷಿ ಪಡುತ್ತಾರೆ. ಯಾರೂ ರಿತುಗೆ ಬೈಯುವುದಿಲ್ಲ. ಎಲ್ಲರೂ ಸತ್ಯಳ ಕೆಲಸವನ್ನು ಮೆಚ್ಚಿಕೊಳ್ಳುತ್ತಾಳೆ. ನೀನು ಇದ್ದ ಕಾರಣವೇ ಇಂದು ರಿತು ನಮ್ಮ ಮನೆಗೆ ವಾಪಸ್ ಬಂದಿದ್ದಾಳೆ. ಆದರೆ, ನಿನ್ನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಕ್ಕೆ ಕ್ಷಮಿಸು ಎಂದು ಲಕ್ಷ್ಮಣ ಹೇಳುತ್ತಾನೆ. ರಾಯರು ಸತ್ಯಳನ್ನು ಹೊಗಳುತ್ತಾರೆ. ನಿನ್ನಂತಹ ಸೊಸೆ ನನಗೆ ಸಿಕ್ಕಿರುವುದು ನಮ್ಮ ಭಾಗ್ಯ. ಆದರೆ, ಇದರ ಬಗ್ಗೆ ಮನೆಯವರಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ. ಸೀತಾ ಕೂಡ ಒಳ್ಳೆಯ ಕೆಲಸವನ್ನು ಮಾಡಿದೆ ಎಂದು ಹೇಳುತ್ತಾಳೆ. ಇವರೆಲ್ಲಾ ಸತ್ಯಳ ಕೆಲಸವನ್ನು ಹೊಗಳುತ್ತಾರೆ.

Zee Kannada Sathya Serial 26th May episode written update

ಕೀರ್ತನಾಳಿಗೆ ಬೈದ ರಿತು

ಬದಲಿಗೆ ಕೀರ್ತನಾ, ಸತ್ಯ ಮೇಲೆ ಮತ್ತಷ್ಟು ಆರೋಪಗಳನ್ನು ಮಾಡುತ್ತಾಳೆ. ಸತ್ಯಾನೇ ಇದೆಲ್ಲಾ ಪ್ಲ್ಯಾನ್ ಮಾಡಿದ್ದಾಳೆ. ಅವಳೇ ರಾಕಿ ಜೊತೆ ಸೇರಿ ರಿತು ಮನೆ ಬಿಟ್ಟು ಓಡಿ ಹೋದಂತೆ ಮಾಡಿ ಈಗ ಕರೆದುಕೊಂಡು ಬಂದಿದ್ದಾಳೆ ಎನ್ನುತ್ತಾಳೆ. ಆಗ ರಿತು, ಕೀರ್ತನಾಳನ್ನು ಬೈಯುತ್ತಾಳೆ. ಅತ್ತಿಗೆಗೂ ನಾನು ಮಾಡಿದ ಕೆಲಸಕ್ಕೂ ಸಂಬಂಧವೇ ಇಲ್ಲ. ಅವರು ಈ ಮನೆಯಲ್ಲಿ ತಾಯಿ ರೀತಿ ಇದ್ದಾರೆ. ಎಲ್ಲರಿಗೂ ಪ್ರೀತಿ ತೋರಿಸುತ್ತಿದ್ದಾರೆ ಎಂದು ಹೊಗಳಿ ಮಾತನಾಡುತ್ತಾಳೆ.

ಕ್ಷಮೆ ಕೇಳಿದ ಲಕ್ಷ್ಮಣ

ಇದೆಲ್ಲಾ ಮಾತುಕತೆಯಾದ ಮೇಲೆ ಲಕ್ಷ್ಮಣ ಒಬ್ಬನೇ ಕುಳಿತು ಯೋಚಿಸುತ್ತಿರುತ್ತಾನೆ. ಮಗಳಿಗೆ ನಿಶ್ಚಿತಾರ್ಥ ಮಾಡುವ ಭರದಲ್ಲಿ ಅಣ್ಣನಿಗೆ ಬೇಸರವಾಗುವಂತೆ ಮಾಡಿದೆ. ಸತ್ಯ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡೆ ಎಂದು ಯೋಚಿಸುತ್ತಾನೆ. ಅಣ್ಣನ ಬಳಿ ಕ್ಷಮೆ ಕೇಳಬೇಕು ಎಂದು ಲಕ್ಷ್ಮಣ ರಾಯರ ಬಳಿ ಹೋಗುತ್ತಾನೆ. ಲಕ್ಷ್ಮಣ ಕ್ಷಮೆ ಕೇಳಿದಾಗ ರಾಯರು ಬೇಸರ ಮಾಡಿಕೊಳ್ಳುತ್ತಾರೆ. ಇದೆಲ್ಲಾ ಮರೆತುಬಿಡು ಎಂದು ಇಬ್ಬರೂ ಒಟ್ಟಾಗಿ ಮಾತನಾಡುತ್ತಾರೆ.

More from Filmibeat

English summary
Zee Kannada Sathya Serial 26th May episode written update. here is details about Ritu comes back home. Everyone agrees Sathya work. Lakshman asks sorry with Rayaru. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X