Priyanka Shivanna: ಪ್ರಿಯಾಂಕಾ ಉಡುವ ವೆರೈಟಿ ವೆರೈಟಿ ಸೀರೆ ಎಲ್ಲಿಂದ ಬರುತ್ತೆ?

By ಎಸ್ ಸುಮಂತ್

ಪ್ರಿಯಾಂಕಾ.. ಈ ಫೋಟೊ ನೋಡುತ್ತಿದ್ದ ಹಾಗೇ ಹಲವಾರು ಘಟನೆಗಳು ನಿಮ್ಮ ಕಣ್ಣೆದುರು ಬಂದರೆ ಆಶ್ಚರ್ಯವೇನಿಲ್ಲ. ನಾಯಕಿಯಾಗಿ ಮಿಂಚಿದ್ದಕ್ಕಿಂತ ವಿಲನ್ ಆಗಿ ತೊಂದರೆ ಕೊಟ್ಟಿದ್ದೇ ಹೆಚ್ಚು. ಹೀಗಾಗಿ ಕಡಿಮೆ ಅವಧಿಯಲ್ಲೇ ಎಲ್ಲರ ಮನಸ್ಸಲ್ಲಿ ಕುಳಿತು ಬಿಟ್ಟಿದ್ದಾರೆ. ಪ್ರಿಯಾಂಕಾ ಹೆಚ್ಚಾಗಿ ನೆನಪಲ್ಲಿ ಉಳಿದಿರುವುದು ಚಂದ್ರಿಕಾ ಎಂಬ ಪಾತ್ರಧಾರಿಯಾಗಿ. ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಧಾರಾವಾಹಿಯೊಂದರಲ್ಲಿ ಪಕ್ಕಾ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದವರು ಪ್ರಿಯಾಂಕಾ. ಈಗಲೂ ಅದೇ ಪ್ರಿಯಾಂಕಾರನ್ನು ನೋಡುತ್ತಲೇ ಇದ್ದೀವಿ.

ಅದ್ಯಾಕೋ ಏನೋ ಪ್ರಿಯಾಂಕಾಗೆ ವಿಲನ್ ಪಾತ್ರಗಳೇ ಅರಸಿ ಬರುತ್ತಿವೆ. ಮೊದಲ ಧಾರಾವಾಹಿಯಲ್ಲಿಯೇ ವಿಲನ್ ಆಗಿ ಬಂದಿದ್ದರು. ವಿಲನ್‌ಗಳೆಂದರೆ ಶಾಪ ಹಾಕುವಂತಹ ಸಂದರ್ಭ ಬಂದರೂ ಪಡ್ಡೆ ಹೈಕ್ಳ ಮನಸ್ಸು ಕದಿಯುವಂತೆ ಪ್ರಿಯಾಂಕಾ ಡ್ರೆಸ್ ಮಾಡಿಕೊಳ್ಳುತ್ತಿದ್ದರು. ವಿಲನ್ ಲುಕ್‌ನಲ್ಲೂ ಅವರ ಸೌಂದರ್ಯ ಎದ್ದು ಕಾಣುತ್ತಿತ್ತು. ಹೆಣ್ಣು ಮಕ್ಕಳು ಹಿಂಗ್ಯಾಕೆ ಮಾಡಿದ್ದರು ಅಂತ ಹಿಡಿ ಶಾಪ ಹಾಕುತ್ತಾ ಕುಳಿತರೆ, ಪಕ್ಕದಲ್ಲೇ ಕುಳಿತ ಗಂಡು ಮಕ್ಕಳು ವಾವ್ ಅದೆಷ್ಟು ಸೌಂದರ್ಯ ಅಡಗಿದೆ ಅಂತ ಮನದಲ್ಲೇ ಮಂಡಿಗೆ ತಿನ್ನುತ್ತಾ ಕುಳಿತುಕೊಳ್ಳುತ್ತಿದ್ದರು.

ಸೋಶಿಯಲ್ ಮೀಡಿಯಾದಲ್ಲೂ ಸೀರೆ ಸದ್ದು

ಸೋಶಿಯಲ್ ಮೀಡಿಯಾದಲ್ಲೂ ಸೀರೆ ಸದ್ದು

ಪ್ರಿಯಾಂಕಾ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಾಗಲೂ ಸೀರೆಯಲ್ಲಿ ಮಿಂಚಿದ್ದರು. ಅದೇನೋ ನಂತರ ಬಂದಂತಹ ಧಾರಾವಾಹಿಗಳ ಆಫರ್‌ಗಳು ಕೂಡ ಪ್ರಿಯಾಂಕಾಗೆ ಸೀರೆಯನ್ನೇ ಹಾಕುವಂತ ಆಫರ್‌ಗಳು ಬಂದಿವೆ. ಹಾಗಂತ ಪ್ರಿಯಾಂಕಾ ಕೇವಲ ಧಾರಾವಾಹಿಗೆ ಮಾತ್ರ ಹಾಕುತ್ತಾರೆ ಎಂಬುದಿಲ್ಲ. ಒಮ್ಮೆ ಅವರ ಫೋಟೊಗಳನ್ನು ನೋಡಿದ್ರೇನೆ ಗೊತ್ತಾಗುತ್ತೆ. ಅವರು ಎಷ್ಟು ಸೀರೆ ಪ್ರಿಯೆ ಎಂಬುದು. ಅವರು ಸೀರೆಯಲ್ಲಿರುವ ಸಾಕಷ್ಟು ಫೋಟೊಗಳನ್ನು ಹಾಕಿದ್ದಾರೆ. ಅವರಿಗೆ ಸೀರೆಯ ಲುಕ್ ಕೂಡ ಅದ್ಭುತವಾಗಿ ಮ್ಯಾಚ್ ಆಗಿದೆ ಅನ್ನೋದರಲ್ಲಿ ನೋ ಡೌಟ್.

ಪ್ರಿಯಾಂಕಾ ಸೀರೆ ಕ್ರೇಜ್ ಇರುವವರಿಗೆ ಸ್ಪೂರ್ತಿ

ಪ್ರಿಯಾಂಕಾ ಸೀರೆ ಕ್ರೇಜ್ ಇರುವವರಿಗೆ ಸ್ಪೂರ್ತಿ

ಹಿಂದೊಂದಿತ್ತು ಮಾತು. ಮದುವೆ ಹಬ್ಬ ಹರಿ ದಿನಗಳಿಗೆ ಸೀರೆ ಕಡ್ಡಾಯವಾಗಿತ್ತು. ಹಾಗೇ ಕೆಲವು ವರ್ಷಗಳ ಹಿಂದೆ ಸೀರೆ ಉಡುವುದು ಅಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಾಗಿತ್ತು. ಕಾಲ ತುಂಬಾ ಬದಲಾಗಿದೆ. ಟ್ರೆಡಿಷನಲ್ ಆಗಿದ್ದ ಸೀರೆ ಲುಕ್ ಈಗ ಫ್ಯಾಷನ್ ಆಗಿ ಬದಲಾಗಿದೆ. ಯಾವುದೇ ಫಂಕ್ಷನ್‌ಗಳಿಗೂ ಸೀರೆಯನ್ನೇ ಬಳಕೆ ಮಾಡುತ್ತಾರೆ. ಸೀರೆಯನ್ನು ಹೀಗೂ ವೆರೈಟಿ ವೆರೈಟಿಯಾಗಿ ಹಾಕಿಕೊಳ್ಳಬಹುದು ಎಂಬುದನ್ನು ತೋರಿಸಿ ಕೊಡುತ್ತಿರುವುದು ಇದೇ ಪ್ರಿಯಾಂಕಾ. ಪ್ರಿಯಾಂಕ ಸೀರೆ ಉಡುವ ಸ್ಟೈಲ್ ಆಲ್ಮೋಸ್ಟ್ ಎಲ್ಲಾ ಹೆಣ್ಣು ಮಕ್ಕಳಿಗೂ ಸಿಕ್ಕಾಪಟ್ಟೆ ಇಷ್ಟ. ಹೊಸ ರೀತಿಯಲ್ಲಿ ಸೀರೆ ಹಾಕಬೇಕು ಎಂದಾಗೆಲ್ಲಾ ಪ್ರಿಯಾಂಕಾ ಸೋಶಿಯಲ್ ಮೀಡಿಯಾ ಕಡೆ ಕಣ್ಣು ಹಾಯಿಸಿದರೆ ಸಾಕು, ಸೀರೆ ಜೊತೆಗೆ ಹೇರ್ ಸ್ಟೈಲ್, ಮೇಕಪ್, ಜ್ಯುವೆಲ್ಲರಿ ಎಲ್ಲಾ ಸಲಹೆಯೂ ಸಿಕ್ಕಿ ಬಿಡುತ್ತದೆ. ಒಂದು ರೀತಿ ಸೀರೆ ಪ್ರಿಯರ ಅಂಬಾಸಿಡರ್ ಆಗಿದ್ದಾರೆ ಪ್ರಿಯಾಂಕಾ.

ಪ್ರಿಯಾಂಕಾಗೆ ಸೀರೆ ಸ್ಪಾನ್ಸರ್ ಮಾಡುವವರು ಯಾರು?

ಪ್ರಿಯಾಂಕಾಗೆ ಸೀರೆ ಸ್ಪಾನ್ಸರ್ ಮಾಡುವವರು ಯಾರು?

ನಟಿಯರಿಗೆ ಬಟ್ಟೆಗಳು ಸ್ಪಾನ್ಸರ್ ಬರುವುದು ಹೊಸ ವಿಚಾರವೇನು ಅಲ್ಲ. ಶಾಪ್‌ನವರಿಗೆ ಪ್ರಮೋಷನ್ ಕೂಡ ಸಿಗುತ್ತೆ. ಹೀಗಾಗಿಯೇ ಹೊಸ ಹೊಸ ಡಿಸೈನ್ ಸೀರೆಗಳನ್ನು ನಟಿಯರಿಗೆ ಸ್ಪಾನ್ಸರ್ ಆಗಿ ನೀಡುತ್ತಾರೆ. ಆದರೆ ವಿಚಾರ ಇದಲ್ಲ. ನಾವೂ ನೀವೆಲ್ಲಾ ಗಮನಸಿದಂತೆ ಒಬ್ಬರೋ ಇಬ್ಬರೋ ಅಥವಾ ಹೆಚ್ಚೆಂದರೆ ಐದು ಬೋಟಿಕ್ ಶಾಪ್‌ಗಳಿಂದ ನಟಿಯರಿಗೆ ಡ್ರೆಸ್ ಸ್ಪಾನ್ಸರ್ ಆಗಿ ಬರಬಹುದು. ಆದರೆ ಪ್ರಿಯಾಂಕಾ ವಿಚಾರ ತೀರ ಭಿನ್ನ ವಿಭಿನ್ನ. ಒಂದೊಂದು ಫೋಟೊಗೂ ಅವರು ಕೊಟ್ಟಿರುವ ಕರ್ಟಸಿ ನೋಡಿದರೆ ಒಮ್ಮೆ ಶಾಕ್ ಆಗೋದು ನಿಜ. ಪ್ರಿಯಾಂಕಾಗೆ ಸ್ಪಾನ್ಸರ್ ಅಂತು ಹೆಚ್ಚಾಗಿದ್ದಾರೆ ಅನ್ನೋದು ಅವರ ಇನ್‌ಸ್ಟಾಗ್ರಾಮ ನೋಡಿದರೆ ತಿಳಿಯುತ್ತೆ.

'ಸತ್ಯ' ಧಾರಾವಾಹಿಯಲ್ಲಿ ಪ್ರಿಯಾಂಕಾ ಗೆಟಪ್ ಚೇಂಜ್

ಪಾತ್ರಗಳು ಸಹ ಏನು ಬೇಕು ಎಂಬುದನ್ನು ಕೇಳುತ್ತವೆ. ಅದರಂತೆ ಪ್ರಿಯಾಂಕ ಸತ್ಯ ಧಾರಾವಾಹಿಯಲ್ಲಿ ಬೇರೆ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಮಧ್ಯಮವರ್ಗದ ಸಂಸಾರವಾಗಿರುವ ಕಾರಣ ಆ ಮನೆಯಲ್ಲಿ ಹೆಚ್ಚು ಕುರ್ತಾವನ್ನೇ ಬಳಸುತ್ತಿದ್ಧಾರೆ. ಆದರೆ ಮದುವೆ, ಹಬ್ಬದ ಸಮಯದಲ್ಲಿ ಮತ್ತೆ ತಮ್ಮ ಸೀರೆ ಲುಕ್ ನಲ್ಲಿ ಪ್ರೇಕ್ಷಕರನ್ನು ಕಣ್ಮನ ಸೆಳೆದಿದ್ದರು. ಒಮ್ಮೆ ಪ್ರಿಯಾಂಕಾ ಹಾಕುವ ಸ್ಯಾರಿಗಳನ್ನು ನೋಡಿದರೆ ಸೀರೆ ಪ್ರಿಯರು ಖಂಡಿತ ಆ ಸ್ಟೈಲ್‌ಗೆ ಮಾರು ಹೋಗದಿರಲು ಸಾಧ್ಯವಿಲ್ಲ.

ಪ್ರಿಯಾಂಕಾ ಸಿಕ್ಕಪಟ್ಟೆ ಆಕ್ಟಿವ್

ಪ್ರಿಯಾಂಕಾ ಸಿಕ್ಕಪಟ್ಟೆ ಆಕ್ಟಿವ್

ಸದ್ಯ ಧಾರಾವಾಹಿಗಳಲ್ಲಿ ಬ್ಯುಸಿ ಇರುವ ಪ್ರಿಯಾಂಕಾ ಸತ್ಯ, ಕೃಷ್ಣ ಸುಂದರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಫೋಟೊಗಳನ್ನು ಹಂಚುತ್ತಾ, ಹಾಡು, ಡ್ಯಾನ್ಸ್ ಅಂತ ಸೆಟ್‌ನಲ್ಲಿ ಗ್ಯಾಪ್ ಸಿಕ್ಕಾಗಲೆಲ್ಲಾ ಎಂಜಾಯ್ ಮಾಡುತ್ತಿರುತ್ತಾರೆ.

More from Filmibeat

English summary
Zee Kannada Sathya Serial Artist Priyanka Saree Collection Biography and Life Style. Here is the details about Priyanka Shivanna Saree sponsor list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X