ಸತ್ಯ ಮನೆ ಬಿಟ್ಟು ಹೋಗುವ ವಿಚಾರ ಜಾನಕಿಗೆ ಗೊತ್ತಾಗೋಯ್ತಾ..?

By ಪ್ರಿಯಾ ದೊರೆ

ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಈಗ ಮದುವೆ ಮನೆಯಲ್ಲಿ ಸೀರಿಯಲ್ ತಂಡ ಜಮಾಯಿಸಿದೆ. ಆದರೆ ಮದುವೆಯಾದ ಮೇಲೆ ಸತ್ಯ ಮನೆಬಿಟ್ಟು ಯಾರಿಗೂ ಕಾಣದಂತೆ ದೂರ ಹೋಗುತ್ತಿದ್ದಾಳೆ. ಈ ವಿಚಾರ ಈಗ ರಾಕೇಶ್‌ಗೂ ಗೊತ್ತಾಗಿದ್ದು, ಇತ್ತ ಜಾನಕಿಗೂ ಗೊತ್ತಾಗಿದೆ.

ಈಗ ಜಾನಕಿ ಸತ್ಯಳನ್ನು ಈ ವಿಚಾರವಾಗೇ ವಿಚಾರಿಸುತ್ತಿದ್ದಾಳೆ. ನನ್ನಿಂದ ಯಾಕೆ ಎಲ್ಲವನ್ನೂ ಮುಚ್ಚಿಡುತ್ತೀಯಾ. ಯಾಕೆ ಹೀಗೆಲ್ಲಾ ಮಾಡುತ್ತೀಯಾ. ನಾನೇನು ಬೇರೆಯವರ. ನೀನು ನಮ್ಮನ್ನೆಲ್ಲಾ ಬಿಟ್ಟು ಎಲ್ಲಿಗೆ ಹೋಗುತ್ತೀಯಾ? ಯಾಕೆ ಹೋಗಬೇಕು? ನಾವು ನಿಮ್ಮ ಜೊತೆಗೆ ಬರುತ್ತೀವಿ ಎಂದು ಜಾನಕಿ ಹೇಳುತ್ತಾಳೆ.

ಜಾನಕಿ ಹೀಗೆಲ್ಲಾ ಪ್ರಶ್ನೆ ಮಾಡುತ್ತಿದ್ದರೆ, ಸತ್ಯ ಏನೂ ಗೊತ್ತಿಲ್ಲ ಅನ್ನೋ ಹಾಗೆ ಏನಮ್ಮ.? ನಾನೆಲ್ಲಿಗೆ ಹೋಗಲಮ್ಮ. ಯಾಕೆ ಹೀಗೆ ಕೇಳುತ್ತಿದ್ದೀಯಾ? ಈಗ ಏನಾಯ್ತು ಅಂತ.? ನಾನೆಲ್ಲಿಗೆ ಹೋಗಲಿ. ನಿಮ್ಮ ಜೊತೆನೇ ಇದೀನಲ್ಲಮ್ಮ.? ಅಂತ ಅಮ್ಮನನ್ನು ಸಮಾಧಾನ ಮಾಡುತ್ತಾಳೆ.

Zee Kannada Sathya Serial Janaki comes to know about Sathya Going Far Away.

ಆದರೂ ಸುಮ್ಮನಾಗದ ಜಾನಕಿ, ನಾನು ಎಲ್ಲಾ ಕೇಳಿಸಿಕೊಂಡೆ. ಯಾಕೆ ಮಾತು ಕೊಟ್ಟೆ ಮನೆ ಬಿಟ್ಟು ಹೋಗುತ್ತೀನಿ ಅಂತ. ಇದು ತಪ್ಪಲ್ವಾ. ಇನ್ನು ಎಷ್ಟು ಅಂತ ತ್ಯಾಗ ಮಾಡುತ್ತೀಯ ನೀನು. ಮಾತು ಕೊಡಬೇಕಾದರೆ ನಾವ್ಯಾರೂ ನೆನಪಾಗಲಿಲ್ವಾ.? ನಮ್ಮನ್ನೆಲ್ಲಾ ಬಿಟ್ಟು ಎಲ್ಲಿಗೆ ಹೋಗುತ್ತೀಯಾ ಎಂದು ಕಿರುಚುತ್ತಾಳೆ. ಆಗ ಸತ್ಯ, ಮಲ್ಲಗೆ ಮಾತಾಡಮ್ಮ ಎಲ್ಲರೂ ಮಲಗಿದ್ದಾರೆ ಎಂದು ಹೇಳುತ್ತಾಳೆ. ನನಗೆ ಬೇರೆ ದಾರಿ ಇರಲಿಲ್ಲ ಅಮ್ಮ. ದಿವ್ಯಕ್ಕ ಹಾಗೂ ಕಾರ್ತಿಕ್ ಮದುವೆ ಆಗಬೇಕು ಅಂದರೆ ನಾನು ಮನೆ ಬಿಟ್ಟು ಹೋಗಬೇಕು ಅಂದ್ರು. ಅದಕ್ಕೆ ಒಪ್ಪಿಕೊಂಡೆ ಎಂದು ಸತ್ಯ ಹೇಳುತ್ತಾಳೆ.

ಆಗ ಜಾನಕಿ, ಆಯ್ತು ನೀನು ಎಲ್ಲಿಗೆ ಬೇಕಾದರೂ ಹೋಗು. ನಾನು ನಿನ್ನ ತಡೆಯೊಲ್ಲ. ಪಾಪಿಗಳು ಕಣೆ ನಾವು. ನಿನ್ನನ್ನು ಬಲಿ ಕೊಟ್ಟುಬಿಟ್ವಿ. ನೀನೇ ಇರಲ್ಲ ಅಂದ ಮೇಲೆ ನಾವ್ಯಾಕೆ ಇಲ್ಲಿರಬೇಕು. ನಾವು ನಿಮ್ಮ ಜೊತೆಗೆ ಬಂದು ಬಿಡುತ್ತೀವಿ. ಅತ್ತೆ ಮತ್ತೆ ನಾನು ಇಬ್ಬರೂ ನಿನ್ನ ಜೊತೆಯಲ್ಲೇ ಇರುತ್ತೀವಿ. ಹೇಗಿದ್ರೂ ಮನೆ ಬರೆದು ಕೊಡಿ ಅಂದ ನಿಮ್ ಚಿಕ್ಕಪ್ಪನನ್ನು ಬೆನ್ನ ಹಿಂದೆ ಬಿದ್ದಿದ್ದಾರೆ. ಅವರಿಗೆ ಈ ಮನೆಯನ್ನು ಬರೆದುಕೊಟ್ಟು, ನಾವು ನಿನ್ನ ಜೊತೆ ಬಂದು ಬಿಡುತ್ತೀವಿ ಎಂದು ಜಾನಕಿ ಕಣ್ಣೀರು ಹಾಕುತ್ತಾಳೆ. ಆಗ ಸತ್ಯ, ಅಳಬೇಡಮ್ಮ, ಅಪ್ಪ ಕೊಟ್ಟ ಕರ್ತವ್ಯನ ನಾನು ಮಾಡುತ್ತೀನಿ. ಅಮ್ಮ ನಿಮಗೆ ದುಡ್ ಕಳಿಸುತ್ತೀನಿ. ನಿಮಗೇನು ತೊಂದರೆ ಆಗಲ್ಲ ಅಮ್ಮ ಎಂದು ಸತ್ಯ ಹೇಳಿದಾಗ, ಜಾನಕಿ ಇಲ್ಲ ಅನ್ನಬೇಡ ಅಂತ ಮಾತು ತೆಗೆದುಕೊಳ್ಳುತ್ತಾಳೆ.

Zee Kannada Sathya Serial Janaki comes to know about Sathya Going Far Away.

ಇನ್ನು ಮದುವೆ ಮನೆಗೆ ಎಲ್ಲರೂ ಹೋಗುತ್ತಾರೆ. ಮದುವೆ ಮನೆಯಲ್ಲಿ ಕಾರ್ತಿಕ್ ಕುಟುಂಬದವರು ಬರುತ್ತಾರೆ. ಆಗ ಅವರನ್ನು ಸ್ವಾಗತ ಮಾಡಲು ದಿವ್ಯಾ ಮನೆಯವರು ಎದುರುಗಡೆ ಬರುತ್ತಾರೆ. ರಾಜೀ ಆರತಿ ಎತ್ತಲು ಮುಂದೆ ಬರುತ್ತಾಳೆ. ಆಗ ಗಿರಿಜಮ್ಮ ಈ ಸಲ ನಮ್ಮ ಸತ್ಯಾನೂ ಇದ್ಧಾಳೆ ಆರತಿ ಮಾಡೋದಕ್ಕೆ ಎಂದು ಹೇಳುತ್ತಾಳೆ. ಸತ್ಯ ಆರತಿ ಮಾಡಲು ಮುಂದಾದಾಗ ಸೀತಾ ತಡೆಯುತ್ತಾಳೆ. ಹಣೆಯಲ್ಲಿ ಕುಂಕುಮ ಇಲ್ಲ. ಕೈಯಲ್ಲಿ ಬಳೆ ಇಲ್ಲದೆ ಆರತಿ ಮಾಡುತ್ತಾರಾ ಎಂದು ಹೇಳುತ್ತಾ, ಸತ್ಯ ಹಣೆಗೆ ಕುಂಕುಮ ಇಡುತ್ತಾಳೆ. ಕೈಗೆ ಬಳೆ ತೊಡಿಸುತ್ತಾಳೆ. ನಂತರ ಆರತಿ ಮಾಡುವುದಕ್ಕೆ ಹೇಳುತ್ತಾಳೆ. ಇತ್ತ ದಿವ್ಯಾ ರೂಮಿನೆದುರು ಕಾಕ್ರೋಜ್ ಹಾಗೂ ಸ್ನೇಹಿತರು ಕಾವಲು ಕಾಯುತ್ತಿರುತ್ತಾರೆ. ದಿವ್ಯ ಎಲ್ಲೂ ಹೋಗದಂತೆ ನೋಡಿಕೊಳ್ಳುತ್ತಿರುತ್ತಾರೆ. ದಿವ್ಯಾ ಬಾಲನಿಗೆ ಫೋನ್ ಮಾಡಲು ಆಗದೆ, ಆಚೆಗೆ ಹೋಗಲೂ ಆಗದೇ ಒದ್ದಾಡುತ್ತಿರುತ್ತಾಳೆ.

More from Filmibeat

English summary
Janaki Comes To Know About Sathya Going Far Away After Divya Karthik Marriage. Know more about Sathya Serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X