'ಸತ್ಯ' ಸೀರಿಯಲ್ ಕಾರ್ತಿಕ್‌ಗೆ ಲವ್ ಆಗಿರೋದು ಇವರ ಮೇಲೆ ನೋಡಿ!
ಅಮೂಲ್ ಬೇಬಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸತ್ಯನ ಮುಂದೆ ಬಂದರೆ ಗಡ ಗಡ ಅಂತ ನಡುಗಿತ್ತಿದ್ದ ಅಮೂಲ್ ಬೇಬಿ ಈಗ ಧೈರ್ಯವಾಗಿ ನಿಂತು ಕಾಡಿಸುವುದಕ್ಕೆ ಶುರು ಮಾಡಿದ್ದಾನೆ. ಮನಸ್ಸಲ್ಲಿ ಎಷ್ಟೆ ಪ್ರೀತಿ ಇದ್ದರು ಅದನ್ನು ಹಾಗೆಯೇ ಅದುಮಿಕೊಂಡು ಅಮೂಲ್ ಬೇಬಿ ಎದುರು ಸತ್ಯ ಅಸಹಾಯಕಳಾಗಿ ನಿಲ್ಲುತ್ತಿದ್ದಾಳೆ. ಸದ್ಯ ಸತ್ಯ ಧಾರಾವಾಹಿಯಲ್ಲಿ ಅಮೂಲ್ ಬೇಬಿ ಮತ್ತು ಸತ್ಯ ಮುಖಾಮುಖಿಯಾದಾಗ ಅವರಿಬ್ಬರನ್ನು ನೋಡುವುಕ್ಕೆ ಒಂದು ಮಜಾ ನೀಡುತ್ತಿದೆ.
ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ ನೋಡಿದಾಗ ಅದೆಷ್ಟು ಸಾಫ್ಟ್ ಹುಡುಗ, ಪಾಪ ಅನ್ನಿಸುತ್ತಾ ಇರುತ್ತೆ. ಆದರೆ ಕಾರ್ತಿಕ್ ರಿಯಲ್ ಲೈಫ್‌ನಲ್ಲಿಯೂ ಹಾಗೆಯೇ ಇದ್ದಾರಾ ಎಂದರೆ ಆ ಪ್ರಶ್ನೆಗೆ ನೋ ವೇ ಚಾನ್ಸೆ ಇಲ್ಲ ಅನ್ನೋ ಉತ್ತರ ಸಿಗುತ್ತೆ. ಯಾಕಂದರೆ ಕಾರ್ತಿಕ್ ರಿಯಲ್ ಲೈಫ್ ಬೇರೆ ರೀತಿಯಲ್ಲಿಯೇ ಇದೆ. ಅದರ ಅನಾವರಣ ಇಂದು ಆಗಲಿದೆ. ಅದಕ್ಕಾಗಿ ಮುಂದೆ ಓದಿ.
ಕಾರ್ತಿಕ್ ಧಾರಾವಾಹಿಗೆ ಬರುವುದಕ್ಕೆ ಮುನ್ನ ಒಂದು ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಬಣ್ಣದ ಲೋಕ ಅವರನ್ನು ಕೈ ಬೀಸಿ ಕರೆದಿತ್ತು. ಅದಕ್ಕಾಗಿಯೇ ಆ ಕೆಲಸ ಬಿಟ್ಟು ನೇರ ಧಾರಾವಾಹಿ ಲೋಕಕ್ಕೆ ಬಂದೇ ಬಿಟ್ಟರು. ಮೊದಲಿಗೆ 'ಕಿನ್ನರಿ' ಧಾರಾವಾಹಿ ಬಳಿಕ 'ಮನಸಾರೆ'ಯಲ್ಲಿ ನಟಿಸಿ, ಈಗ 'ಸತ್ಯ'ಳ ಅಮೂಲ್ ಬೇಬಿಯಾಗಿದ್ದಾರೆ. ಆದರೆ ಈ ಧಾರಾವಾಹಿಯಲ್ಲಿ ಯಾವಾಗಲೂ ಹೆದರುವ ಕಾರ್ತಿಕ್ ರಿಯಲ್ ಲೈಫ್‌ನಲ್ಲಿ ಹಾಗಿಲ್ಲ. ಈ ಬಗ್ಗೆ ಯೂಟ್ಯೂಪ್ ಚಾನೆಲ್ ಒಂದರಲ್ಲಿ ಕಾರ್ತಿಕ್ ಅಮೂಲ್ ಬೇಬಿ ಆಗಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಅಮೂಲ್ ಬೇಬಿ ರಿಯಲ್ ಲೈಫ್ ಹೇಗಿದೆ?
ರಿಯಲ್ ಲೈಫ್‌ನಲ್ಲಿ ನಾನು ಸತ್ಯನಂತಿದ್ದೇನೆ. ಸತ್ಯ ನನ್ನಂತೆ ಇದ್ದಾರೆ. ರಿಯಲ್ ಲೈಫ್‌ನಲ್ಲಿ ಸತ್ಯ ತುಂಬಾನೇ ಸಾಫ್ಟ್. ಗಾಡಿ ಓಡಿಸುವುದಕ್ಕೂ ಭಯ ಪಡುವ ಗೌತಮಿ ಜಾದವ್, ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ರಫ್ ಆಗಿರುತ್ತಾರೆ. ಆದರೆ ನಾನು ಆ ಧಾರಾವಾಹಿಯಲ್ಲಿ ಇರುವಂತೆ ಸಾಫ್ಟ್ ಅಲ್ಲ. ಯಾವುದಕ್ಕೂ ಭಯ ಪಡುವುದಿಲ್ಲ. ಗಾಡಿ ಅಂದರೆ ಮೊದಲೇ ಹೇಳಿದಂತೆ ಸಿಕ್ಕಾಪಟ್ಟೆ ಇಷ್ಟ. ಈ ರೀತಿಯ ಸಂಪೂರ್ಣ ವಿರುದ್ಧ ಪಾತ್ರದಲ್ಲಿ ನಟಿಸುವಾಗ ಸಾಕಷ್ಟು ಭಯ ಆಯಿತು. ಆದರೆ ನಿರ್ದೇಶಕರು ತುಂಬಾ ಸಪೋರ್ಟ್ ಮಾಡಿದ್ದರು. ಕಾರ್ತಿಕ್ ಅಂದರೆ ಹೀಗೆ ಮಾತನಾಡಬೇಕು. ನಾಚಿಕೆ ಪಟ್ಟುಕೊಳ್ಳಬೇಕು ಹೀಗೆ ಅಕ್ಕ ಸಾಕಷ್ಟು ಕ್ಲಾರಿಟಿ ಇತ್ತು. ನಂಗೆ ಅಮೂಲ್ ಬೇಬಿ ಅಂತ ನಾಮಕರಣ ಮಾಡಿದ್ದು ಕೂಡ ಸ್ವಪ್ನ ಅಕ್ಕನೆ ಅಂತ ತಮ್ಮ ಸತ್ಯ ಧಾರಾವಾಹಿಯ ದಿನಗಳನ್ನು ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

ಬೈಕ್ ಇಷ್ಟ ಇದ್ರೂ ಓಡಿಸೋ ಹಾಗಿಲ್ಲ
ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಕ್ರೇಜ್ ಇರುವಂತೆ ಕಾರ್ತಿಕ್ ಬಿಳಿಗೌಡಗೂ ಬೈಕು ಪ್ಲಸ್ ಕಾರು ಅಂದರೆ ಸಿಕ್ಕಾಪಟ್ಟೆ ಇಷ್ಟವಂತೆ. ಈಗ ಆ ಕ್ರೇಜ್‌ಗೆ ಸ್ವಲ್ಪ ಬ್ರೇಕ್ ಹಾಕಿದ್ದಾರೆ. ಈ ಮುಂಚೆ ತನ್ನಿಷ್ಟದ ಬೈಕ್‌ನಲ್ಲಿ ಸ್ಪೀಡ್ ನೋಡದೆ ಓಡಿಸುತ್ತಿದ್ದವರನ್ನು ಕೈ ಕಟ್ಟಿ ಹಾಕಿದಂತಾಗಿದೆ. ಈ ಬಗ್ಗೆ ವಿಷಯ ಬಿಚ್ಚಿಟ್ಟಿರುವ ಅಮೂಲ್ ಬೇಬಿ, ಕಾರು, ಬೈಕ್ ಅಂದರೆ ಹೆವೀ ಕ್ರೇಜ್. ಬೈಕ್ ಕ್ರೇಜ್ ಈ ಮುಂಚೆ ಇತ್ತು. ಆದರೆ ಒಂದು ಆಕ್ಸಿಡೆಂಟ್ ಆದ ಮೇಲೆ ಮನೆಯಲ್ಲಿ ಇದಕ್ಕೆಲ್ಲಾ ಪರ್ಮಿಷನ್ ಕಟ್ ಮಾಡಿದ್ದಾರೆ. ಬೈಕ್ ತಗೊಂಡು ಬರ್ತೀನಿ ಅಂದರೆ ಮನೆ ಬಿಟ್ಟು ಓಡಿಸುತ್ತೀನಿ ಅಂತಾರೆ. ನನಗೆ ಪ್ರೀತಿ ಅನ್ನೋದು ಹುಟ್ಟಿದ್ದರೆ ಅದು ಕಾರು ಬೈಕ್‌ಗಳನ್ನು ನೋಡಿದಾಗ, ಹುಡುಗಿಯರ ಮೇಲೆ ಪ್ರೀತಿ ಹುಟ್ಟಿಲ್ಲ ಎಂದಿದ್ದಾರೆ.

No Coffee..No Life..
ಕಾಫಿ, ಟೀ ಅನ್ನೋದು ಒಬ್ಬೊಬ್ಬರಿಗೆ ಅಡಿಕ್ಷನ್ ಆಗಿರುತ್ತದೆ. ಅದರಲ್ಲೂ ಕೆಲವೊಂದು ಕಡೆ ನೀಡುವ ಕಾಫಿ ಮತ್ತೊಂದು ಕಡೆ ಸಿಗುವುದಿಲ್ಲ. ಕಾಫಿ ಪ್ರಿಯರಿಗೆ ಟೇಸ್ಟ್ ಸಿಕ್ಕಿಲ್ಲವೆಂದಾದರೆ ಅದೆಷ್ಟು ದೂರ ಬೇಕಾದರೂ ಹುಡುಕಿಕೊಂಡು ಹೋಗಿ ಕುಡಿಯುತ್ತಾರೆ. ಕಾರ್ತಿಕ್‌ಗೆ ಕೂಡ ಕಾಫಿ ಮೋಹ ಕೊಂಚ ಹೆಚ್ಚಾಗಿದೆ. ಅವರ ಸೋಶಿಯಲ್ ಮೀಡಿಯಾದಲ್ಲಿ No Coffee..No Life ಅನ್ನೋದನ್ನು ಸಾಕಷ್ಟು ಕಡೆ ಗಮನಿಸಬಹುದು. ಕಾಫಿ ಕುಡಿಯುವಾಗಲೂ ಫೀಲ್ ಮಾಡಿಕೊಂಡೆ ಕುಡಿಯುತ್ತಾರೆ.

ಕಾರ್ತಿಕ್ ಸಿಕ್ಸ್ ಪ್ಯಾಕ್ ಸುಂದರ
ನಟ-ನಟಿಯರಿಗೆ ಫಿಟ್ನೆಸ್ ಅನ್ನೋದು ತುಂಬಾ ಅಂದರೆ ತುಂಬಾ ಮುಖ್ಯವಾಗುತ್ತದೆ. ಪಾತ್ರಗಳಿಗೂ ಅದು ಕೇಳುತ್ತದೆ. ಆದರೆ ಸತ್ಯ ಧಾರಾವಾಹಿಯ ಅಮೂಲ್ ಬೇಬಿಗೆ ಸಿಕ್ಸ್ ಪ್ಯಾಕೇ ಬೇಕು ಎಂಬುದು ಏನಿಲ್ಲ. ಧಾರಾವಾಹಿಯಲ್ಲಿ ಅಷ್ಟಾಗಿ ಸಿಕ್ಸ್ ಪ್ಯಾಕ್ ಕಾಣುವುದು ಇಲ್ಲ. ಆದರೆ ಕಾರ್ತಿಕ್ ಬಿಳಿಹುಡುಗ ಅಲ್ಲಲ್ಲ.. ಬಿಳಿಗೌಡ ಅವರ ಸೋಶಿಯಲ್ ಮೀಡಿಯಾಗೆ ವಿಸಿಟ್ ಮಾಡಿ ನೋಡಿದರೆ ಹುಡುಗಿಯರು ವಾಹ್ವ್ ಎನ್ನದೆ ಇರುವುದಿಲ್ಲ. ಆಗಿನ ಸ್ಟೈಲೇ ಬೇರೆ ರೀತಿಯಲ್ಲಿದೆ. ಲಾಂಗ್ ಹೇರ್ ಬಿಟ್ಟು, ಸಿಕ್ಸ್ ಪ್ಯಾಕ್ ಮಾಡಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Recommended Video


ಸ್ವಪ್ನಾ-ಕೃಷ್ಣ ಕಾರ್ತಿಕ್‌ಗೆ ಬೆನ್ನೆಲುಬು
ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ಒಡಹುಟ್ಟಿದವರೆ ಬೇಕಾಗಿರುವುದಿಲ್ಲ. ಸರಿಯಾದ ಮಾರ್ಗದರ್ಶನ ನೀಡುವವರು, ಪ್ರೀತಿ ತುಂಬುವವರು ಕೂಡ ಸಂಬಂಧಿಕರಾಗುತ್ತಾರೆ. ಅದರಂತೆ ಅಮೂಲ್ ಬೇಬಿಯ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುತ್ತಾ, ಪ್ರೋತ್ಸಾಹ ನೀಡುತ್ತಾ, U Can Do It ಎಂದು ಹೇಳುವ ಸ್ವಪ್ನಾ ಅಕ್ಕನ ಸ್ಥಾನದಲ್ಲಿ ನಿಂತಿದ್ರೆ, ಕೃಷ್ಣ ಅಣ್ಣನ ಸ್ಥಾನದಲ್ಲಿ ನಿಲ್ಲುತ್ತಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಕಾರ್ತಿಕ್ ಬಿಳಿಗೌಡ ಈ ಬಗ್ಗೆ ಹೇಳಿಕೊಂಡಿದ್ದಾರೆ. ನನಗೆ ಏನೇ ಡೌಟ್ ಇದ್ದರು ಅವರಿಗೆ ಕಾಲ್ ಮಾಡುತ್ತೇನೆ. ಬೈಕ್ ಬಗ್ಗೆ ಕೇಳುವುದಕ್ಕೂ ಅವರಿಗೆ ಕಾಲ್ ಮಾಡಿ ಸಲಹೆ ತೆಗೆದುಕೊಳ್ಳುತ್ತೇನೆ. ನನ್ನ ಅಕ್ಕ ಅಣ್ಣನಂತಿರುವ ಸ್ವಪ್ನಾ,ಕೃಷ್ಣ ನನ್ನ ಎರಡು ಪಿಲ್ಲರ್ ಇದ್ದಂತೆ ಎನ್ನುತ್ತಾರೆ.


Click it and Unblock the Notifications











