For Quick Alerts
  ALLOW NOTIFICATIONS  
  For Daily Alerts

  ಸೀತಾಗೆ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿಬಿದ್ದ ಸತ್ಯ-ಕಾರ್ತಿಕ್

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಮನೆಯವರಿಗೆ ಗೊತ್ತಿಲ್ಲದ ಹಾಗೆ ಕಾರ್ತಿಕ್ ಮತ್ತು ಸತ್ಯ ಇಬ್ಬರೂ ರಾಜಹುಲಿ ಏರಿಯಾಗೆ ಹೋಗಿದ್ದಾರೆ. ಸೀತಾ ಬೇಡ ಬೇಡ ಎಂದರೂ ಹೋಗಿದ್ದು, ಇದರಿಂದ ಇಬ್ಬರೂ ಮುಂದೆ ಯಾವ ಶಿಕ್ಷೆ ಅನುಭವಿಸುತ್ತಾರೋ ಗೊತ್ತಿಲ್ಲ.

  ಕೀರ್ತನಾ ಇದೇ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದಾಳೆ. ಹೀಗಾಗಿ ಸೀತಾಗೆ ಸತ್ಯ ಮನೆಯಲ್ಲಿ ಇಲ್ಲ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಸೀತಾ ಸೀದಾ ಕಾರ್ತಿಕ್ ರೂಮ್ ಬಳಿ ಹೋಗಿ ಕಿರುಚಾಡಿದ್ದಾಳೆ. ಆದರೆ ಸತ್ಯ ಪ್ಲಾನ್ ಮಾಡಿಯೇ ಹೋಗಿದ್ದು ಕೀರ್ತನಾ ಸೋತಿದ್ದಾಳೆ.

  ಒಂದು ಹೆಜ್ಜೆ ಮುಂದಿಟ್ಟು ಧೈರ್ಯ ಮಾಡಿಯೇಬಿಟ್ಟ ಕಂಠಿ: ಪೂರ್ವಿಗೆ ಗೊತ್ತಾಯ್ತು ಸತ್ಯ !ಒಂದು ಹೆಜ್ಜೆ ಮುಂದಿಟ್ಟು ಧೈರ್ಯ ಮಾಡಿಯೇಬಿಟ್ಟ ಕಂಠಿ: ಪೂರ್ವಿಗೆ ಗೊತ್ತಾಯ್ತು ಸತ್ಯ !

  ಇತ್ತ ದಿವ್ಯಾ ಹೇಗಾದರೂ ಮಾಡಿ ಎಲ್ಲಾ ವ್ರತವನ್ನೂ ಸಂಪೂರ್ಣ ಮಾಡಬೇಕು. ಆಗ ತನ್ನ ಕನಸು ನನಸಾಗುತ್ತದೆ. ತಾನು ಕೇಳಿದ್ದನ್ನು ಗಣೇಶ ಕೊಡುತ್ತಾನೆ. ಆಗ ಸುಖವಾಗಿರಬಹುದು ಎಂದು ಕಷ್ಟಪಟ್ಟು ಎಲ್ಲಾ ಕೆಲಸವನ್ನೂ ಮಾಡಿ ಮುಗಿಸಿದ್ದಾಳೆ.

  ಗ್ಯಾರೇಜ್ ನಲ್ಲಿ ಸತ್ಯ

  ಗ್ಯಾರೇಜ್ ನಲ್ಲಿ ಸತ್ಯ

  ಸತ್ಯಳನ್ನು ಕಾರ್ತಿಕ್ ಗ್ಯಾರೇಜಿಗೆ ಕರೆದುಕೊಂಡು ಬಂದಿದ್ದಾನೆ. ಸತ್ಯ ಗೌರಿಯನ್ನು ಹೊತ್ತು ಬಂದಿದ್ದಾಳೆ. ಗೌರಿ ಗಣೇಶ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ. ಟಮಟೆ ಬಾರಿಸಿ ಸತ್ಯ ಎರಡು ಸ್ಟೆಪ್ ಕೂಡ ಹಾಕಿದ್ದಾಳೆ. ಸತ್ಯ ಮೊದಲ್ಲಿನ ಖುಷಿ ನೋಡಿ ಕಾರ್ತಿಕ್‌ಗೂ ಖಷಿಯಾಗಿದೆ. ನಮ್ಮ ಮನೆಯಲ್ಲಿ ಇರುವಾಗ ಸತ್ಯ ಇಷ್ಟು ಖುಷಿಯಾಗಿರುವುದನ್ನೇ ನೋಡಿಲ್ಲ. ಅದೇ ಇಲ್ಲಿಗೆ ಬಂದ ಕೂಡಲೇ ಅವಳ ಮುಖ ಹೇಗೆ ಅರಳುತ್ತದೆ ಎಂದು ಆಶ್ಚರ್ಯ ಪಟ್ಟಿದ್ದಾನೆ. ಇನ್ನು ಹುಡುಗರು ಸತ್ಯ ಬಂದಿದ್ದಕ್ಕೆ ಫುಲ್ ಖುಷಿಯಾಗಿದ್ದಾರೆ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ.

  ಬಾಗಿನ ಪಡೆದ ಸತ್ಯ

  ಬಾಗಿನ ಪಡೆದ ಸತ್ಯ

  ಇನ್ನು ಮನೆಯಲ್ಲಿ ಇಲ್ಲಿಗೆ ಬರಲು ಒಪ್ಪಿದರಾ ಎಂದು ಕೇಳಿದ್ದಕ್ಕೆ ಸತ್ಯ ಅತ್ತೆ ಹೋಗಿ ಎಂದ ಮೇಲೆ ನಾವಿಲ್ಲಿಗೆ ಬಂದಿದ್ದು ಎಂದು ಹೇಳಿದ್ದಾಳೆ. ಸತ್ಯ ಹೇಳಿದ ಮಾತನ್ನು ಕೇಳಿದ ಕಾರ್ತಿಕ್ ಶಾಕ್ ಆಗಿದ್ದಾನೆ. ಮನೆಯಲ್ಲಿ ಅಷ್ಟು ಬೇಸರವಿದ್ದರೂ ಅದನ್ನು ಇಲ್ಲಿ ಅವಳು ಹೇಳಿಕೊಳ್ಳುವುದಿಲ್ಲ. ಸತ್ಯ ಎಷ್ಟು ಒಳ್ಳೆಯವಳು. ಮನೆಯ ಗುಟ್ಟನ್ನು ಬಿಟ್ಟು ಕೊಡುವವಳಲ್ಲ ಎಂದು ಅರ್ಥ ಮಾಡಿಕೊಂಡಿದ್ದಾನೆ. ಇನ್ನು ಮನೆಗೆ ಕರೆ ಜಾನಕಿ ಹಾಗೂ ಗಿರಿಜಮ್ಮ ಮಗಳಿಗೆ ಬಾಗಿನ ಕೊಟ್ಟು, ಅಳಿಯನಿಗೆ ಬಟ್ಟೆ ಕೊಟ್ಟಿದ್ದಾರೆ. ಇದನ್ನು ನೋಡಿದ ಕಾರ್ತಿಕ್, ಜಾನಕಿ ಹಾಗೂ ಗಿರಿಜಮ್ಮನಿಗೆ ಗಿಫ್ಟ್ ಕೊಟ್ಟಿದ್ದಾನೆ. ಕಾರ್ತಿಕ್ ಕೊಟ್ಟ ಗಿಫ್ಟ್‌ನಿಂದ ಜಾನಕಿ ಹಾಗೂ ಗಿರಿಜಮ್ಮ ಭಾವುಕರಾಗಿದ್ದಾರೆ.

  ಸೀತಾ ಕೆಂಗಣ್ಣಿಗೆ ಗುರಿಯಾದ ಸತ್ಯ

  ಸೀತಾ ಕೆಂಗಣ್ಣಿಗೆ ಗುರಿಯಾದ ಸತ್ಯ

  ಸತ್ಯ ಹಾಗೂ ಕಾರ್ತಿಕ್ ಮನೆ ಬಾಗಿಲಿಗೆ ಬಂದ ಕೂಡಲೇ ಸೀತಾ ಇಬ್ಬರನ್ನೂ ತಡೆದಿದ್ದಾಳೆ. ನನ್ನ ಮಾತಿಗೆ ಮರಿಯಾದೆ ಇಲ್ಲದಂತೆ ಇಬ್ಬರೂ ಹಬ್ಬದ ದಿನ ಮನೆಯಿಂದ ಹೊರಗೆ ಹೋಗಿದ್ದೀರಾ ಎಂದು ಬೇಸರ ಮಾಡಿಕೊಂಡಿದ್ದಾಳೆ. ಸೀತಾ ಕೀರುಚಾಟಕ್ಕೆ ಸತ್ಯ ತಬ್ಬಿಬ್ಬಾಗಿದ್ದಾಳೆ. ಇದೇ ವೇಳೆ ರಾಮಚಂದ್ರ ರಾಯರು ಆಗಮಿಸಿದ್ದಾರೆ. ಅಷ್ಟರಲ್ಲಿ ಕಾರ್ತಿಕ್ ನಾವು ನಮ್ಮ ಸ್ನೇಹಿತರ ಮನೆಗೆ ಹೋಗಿದ್ವಿ ಮುತೈದೆ ಬಾಗಿನ ಪಡೆಯಲು. ಅದು ಬಿಟ್ಟು ಸತ್ಯ ಏರಿಯಾಗೆ ಹೋಗಿಲ್ಲ ಎಂದು ಸುಳ್ಳು ಹೇಳುತ್ತಾನೆ. ಕಾರ್ತಿಕ್ ಮಾತನ್ನು ಕೇಳಿ ಸತ್ಯ ಶಾಕ್ ಆಗಿತ್ತಾಳೆ.

  ದಿವ್ಯಾಳಿಗೆ ಸಂಕಷ್ಟ ತಪ್ಪಿದ್ದಲ್ಲ

  ದಿವ್ಯಾಳಿಗೆ ಸಂಕಷ್ಟ ತಪ್ಪಿದ್ದಲ್ಲ

  ಇತ್ತ ದಿವ್ಯ ಎಲ್ಲಾ ಕೆಲಸವನ್ನು ಮಾಡಿ ಸುಸ್ತಾಗಿದ್ದಾಳೆ. ಇದೇ ವೇಳೆಗೆ ಬಾಲ ಕಾಲನ್ನು ಒತ್ತುತ್ತಾ ಮಾತನಾಡಿದ್ದಾರೆ. ಪ್ರೀತಿ ಬಗ್ಗೆ ಪ್ರಶ್ನೆ ಬಂದಿದ್ದಕ್ಕೆ ಬಾಲಾ ದಿವ್ಯನಿಗೆ ಚಂದ್ರನನ್ನು ತೋರಿಸಿ ಖುಷಿ ಪಡಿಸಿದ್ದಾಳೆ. ಚಂದ್ರನನ್ನು ನೋಡಿದ ದಿವ್ಯಾ, ತನ್ನ ಗ್ರಹಚಾರದ ಕೆಟ್ಟಿತು ಎಂದುಕೊಂಡಿದ್ದಾಳೆ. ಗಣೇಶ ಹಬ್ಬದ ದಿನ ಚೌತಿ ಚಂದ್ರನನ್ನು ನೋಡಿದರೆ, ಅಪವಾದ ಹಾಗೂ ಕಷ್ಟಗಳು ಕಟ್ಟಿಬುತ್ತು ಎಂಬ ಸರೋಜ ಮಾತನ್ನು ನೆನಪಿಸಿಕೊಂಡಿದ್ದಾಳೆ.

  English summary
  Sathya and karthik went for rajahuli Area and caught
  Tuesday, September 6, 2022, 19:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X