Sathya serial: ಹಾಸನಾಂಬೆ ತಾಯಿಯ ದರ್ಶನ ಪಡೆದ 'ಸತ್ಯ' ಧಾರಾವಾಹಿ ತಂಡ
'ಸತ್ಯ' ಧಾರಾವಾಹಿ ಆರಂಭವಾದಾಗಿನಿಂದ ಅದರ ಕ್ರೇಜ್ ಎಷ್ಟಿದೆ ಎಂದರೆ, ಮಕ್ಕಳು ಸತ್ಯ ಪಾತ್ರಧಾರಿಯಂತೆ ಡ್ರೆಸ್ ಮಾಡಿಸಿಕೊಳ್ಳುತ್ತಾರೆ. ಸತ್ಯ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಧಾರಾವಾಹಿಯಲ್ಲಿ ಬರುವ ಕೆಲ ಪಾತ್ರಗಳಿಗೆ ಬಿಟ್ಟರೆ, ಪ್ರೇಕ್ಷಕರಂತೂ ಸತ್ಯಳನ್ನು ಒಪ್ಪಿಕೊಂಡಿದ್ದಾರೆ.
ಸೀರಿಯಲ್ ಡೈಲಾಗ್‌ಗಳನ್ನು ಹೇಳಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಷ್ಟರಮಟ್ಟಿಗೆ ಧಾರಾವಾಹಿ ಗಮನ ಸೆಳೆದಿದೆ. ಹೆಣ್ಣು ಮಕ್ಕಳು ಕೂಡ ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಬದುಕಬೇಕು ಎಂಬುದನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ.
ಸತ್ಯ ಪಾತ್ರವನ್ನು ಪ್ರತಿಯೊಬ್ಬರೂ ಇಷ್ಟಪಟ್ಟಿದ್ದಾರೆ. ಸತ್ಯ ಗುಣ ಎಷ್ಟೇ ಒರಟುತನವಿದ್ದರೂ ಆಕೆಯ ಜವಾಬ್ದಾರಿಯ ನಡೆ, ನ್ಯಾಯದ ಆಲೋಚನೆಗಳು, ಸತ್ಯ ಗಂಡು ಬೀರಿಯಂತೆ ಬೆಳದಿರುವುದು ಎಲ್ಲವೂ ಚೆನ್ನಾಗಿಯೇ ಮೂಡಿ ಬರುತ್ತಿದೆ.

ರಿಯಲ್ ಟಾಮ್ ಬಾಯ್
ಸತ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ 2019 ರಿಂದ ಪ್ರಸಾರವಾಗುತ್ತಿದೆ. ನಾಲ್ಕು ವರ್ಷಗಳಿಂದ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಸತ್ಯ ಈಗ ತನ್ನ ಗಂಡನ ಮನೆಯಲ್ಲಿ ಎಲ್ಲರ ಮನ ಗೆದ್ದಿದ್ದಾಳೆ. ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ಆಗಿರುವ ಸ್ವಪ್ನಾ ಕೃಷ್ಣ ಕನ್ನಡ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದು, ಸತ್ಯ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಮೂಡಿ ಬರುತ್ತಿರುವ ಸತ್ಯ ಪಾತ್ರಧಾರಿ ಬೇರೆಯಾರೂ ಅಲ್ಲವಂತೆ. ಸ್ವತಃ ಸ್ವಪ್ನಾ ಕೃಷ್ಣ ಅವರೇ ಟಾಮ್ ಬಾಯ್‌ನಂತೆ ನಡೆದುಕೊಳ್ಳುತ್ತಾರಂತೆ. ತಮ್ಮನ್ನೇ ತಾವು ಸತ್ಯ ರೂಪದಲ್ಲಿ ನೋಡುತ್ತಿದ್ದಾರಂತೆ. ನಿರ್ದೇಶಕಿ ಸ್ವಪ್ನಾ ಕೃಷ್ಣ ರಿಯಲ್ ಲೈಫ್ನಲ್ಲೂ ಸತ್ಯಳಂತೆ ಇರುತ್ತಾರೆ ಎಂದು ನಟಿ ಗೌತಮಿ ಜಾಧವ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸ್ವಪ್ನಾ ಮೇಡಂ ಡೈರೆಕ್ಷನ್ ಮಾಡುವ ಸತ್ಯ ಪಾತ್ರದಂತೆಯೇ ಕಾಣುತ್ತಾರೆ. ಅವರ ಪಾತ್ರವನ್ನೇ ನನಗೆ ಕೊಟ್ಟಂತಿರುತ್ತದೆ ಎಂದು ಹೇಳಿದ್ದಾರೆ.
ಮಹಿಳಾ ಮಣಿಗಳ ಪ್ರವಾಸ
ಸತ್ಯ ಧಾರಾವಾಹಿ ತಂಡ ಸಕತ್ ಜಾಲಿ ಮಾಡುತ್ತಿರುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ಮಹಿಳಾ ಮಣಿಗಳು ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಸತ್ಯ, ದಿವ್ಯಾ, ಊರ್ಮಿಳಾ, ರಿತು ಹಾಗೂ ಜಾನಕಿ ಮತ್ತು ನಿರ್ದೇಶಕಿ ಸ್ವಪ್ನಾ ಕೃಷ್ಣ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಧಾರಾವಾಹಿಯ ನಟಿಯರಾದ ಶಾಲಿನಿ ಎಸ್ ರಾವ್, ಅನು ಜನಾರ್ಧನ್, ರಕ್ಷಿತಾ ಭಾಸ್ಕರ್ ಹಾಗೂ ಗೌತಮಿ ಜಾಧವ್ ವೀಕೆಂಡ್‌ನಲ್ಲಿ ಟೆಂಪಲ್ ರನ್ ಮಾಡಿದ್ದಾರೆ.

ದೇವಿಯ ದರ್ಶನ ಪಡೆದು ಹಬ್ಬ ಆರಂಭ
ಹಾಸನದಲ್ಲಿರುವ ಹಾಸನಾಂಬೆ ದೇವಿಯ ದೇಗುವ ವರ್ಷದಲ್ಲಿ ಕೇವಲ 10 ದಿನಗಳ ಕಾಲ ಮಾತ್ರವೇ ತೆರೆದಿರುತ್ತದೆ. ಕಳೆದ ವಾರ ದೇಗುಲ ತೆರೆದಿದ್ದು, ಈಗ ಸತ್ಯ ಧಾರಾವಾಹಿಯ ರೆಬೆಲ್ ಲೇಡೀಸ್ ದೇವಿಯ ದರ್ಶನ ಪಡೆದಿದ್ದಾರೆ. ಬಳಿಕ ಬೇಲೂರಿನ ಚೆನ್ನಕೇಶವನ ದರ್ಶನವನ್ನು ಕೂಡ ಮಾಡಿದ್ದಾರೆ. ಟ್ರಾವೆಲ್, ಪಾರ್ಟಿ, ರಿಪೀಟ್ ಎಂದು ನಟಿ ಗೌತಮಿ ಜಾಧವ್ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ದೇವಿಯ ದರ್ಶನ ಪಡೆದು ದೀಪಾವಳಿ ಹಬ್ಬವನ್ನು ಆಚರಣೆ ಆರಂಭಿಸಿದ್ದಾರೆ.
ಎಂಜಾಯ್ ಮಾಡುವ ಧಾರಾವಾಹಿ ತಂಡ
ಕಳೆದ ಬಾರಿ ನಟಿಯರಾದ ಗೌತಮಿ ಜಾಧವ್, ಪ್ರಿಯಾಂಕಾ ಶಿವಣ್ಣ, ಶೈಲಶ್ರೀ ಅರಸ್, ನಿರ್ದೇಶಕಿ ಸ್ವಪ್ನಾ ಕೃಷ್ಣ ಜೊತೆಗೆ ಪ್ರವಾಸ ಕೈಗೊಂಡಿದ್ದರು. ನಾಲ್ಕು ಜನರೂ ಒಂದೇ ತರಹದ ಬಟ್ಟೆಯನ್ನು ಧರಿಸಿ ಎಂಜಾಯ್ ಮಾಡಿದ್ದರು. ಮಂಗಳೂರು, ಕುಂದಾಪುರ, ಚಿಕ್ಕಮಗಳೂರಿಗೆ ಹಾರಿದ್ದರು. ಬೀಚ್‌ನಲ್ಲಿ ಸಕತ್ ಎಂಜಾಯ್ ಮಾಡಿದ್ದರು.


Click it and Unblock the Notifications











