ಸತ್ಯ ಕೈ ಮೇಲೆ ಬಿತ್ತು K ಎಂಬ ಗೋರಂಟಿ: ಸತ್ಯ- ಕಾರ್ತಿಕ್ ಮದುವೆ ಗ್ಯಾರೆಂಟಿನಾ?

By Priya Dore

ಕೋಟೆ ಮನೆಯಲ್ಲಿ ದಿವ್ಯಾ-ಕಾರ್ತಿಕ್ ಮದುವೆ ನಡೆಯುತ್ತಿದೆ. ಮದುವೆ ಮನೆಯಲ್ಲಿ ಕಾರ್ತಿಕ್ ಹಾಗೂ ಸೀತಾಗೆ ಸತ್ಯಳದ್ದೇ ಚಿಂತೆಯಾಗಿ ಬಿಟ್ಟಿದೆ. ಮತ್ತೆ ಎಲ್ಲಿ ಯಡವಟ್ಟು ಆಗುತ್ತೋ ಈ ಸತ್ಯ ಮದುವೆಯನ್ನು ನಿಲ್ಲಿಸಿ ಬಿಡುತ್ತಾಳೋ ಎಂದು ಹೆಜ್ಜೆ ಹೆಜ್ಜೆಗೂ ಅವಳನ್ನೇ ಗಮನಿಸುತ್ತಿದ್ದಾರೆ.

ಆದರೆ ಹೇಗಾದರೂ ಮಾಡಿ ದಿವ್ಯಾ ಅಕ್ಕನ ಮದುವೆ ಮಾಡಬೇಕು ಎಂದು ಸತ್ಯ ತನ್ನ ಜೀವನವನ್ನೇ ತ್ಯಾಗ ಮಾಡಲು ಹೊರಟಿದ್ದಾಳೆ. ಸತ್ಯ ನಡೆ ತಿಳಿದು ಬೇಸರಗೊಂಡ ಜಾನಕಿ ಕೂಡ, ಮಗಳಿಗೆ ಸಾಥ್ ನೀಡಿದ್ದಾರೆ. ಆದರೆ ದಿವ್ಯಾ ಬಾಲನನ್ನು ಸಂಪರ್ಕಿಸಲಾಗದೆ ಒಳಗೊಳಗೆ ಕೊರಗುತ್ತಿದ್ದಾಳೆ.

ಇತ್ತ ಸತ್ಯ ಸ್ನೇಹಿತರೆಲ್ಲಾ ಸೇರಿ ಹೇಗಾದರೂ ಮಾಡಿ ದಿವ್ಯಾ-ಕಾರ್ತಿಕ್ ಮದುವೆ ಕ್ಯಾನ್ಸಲ್ ಆಗಲಿ ಎಂದು ಯೋಚಿಸುತ್ತಿದ್ದಾರೆ. ಅಲ್ಲದೇ ಕೋಟೆ ಮನೆ ದೇವರಿಗೆ ತೆಂಗಿನ ಕಾಯಿ ಹೊಡೆದು ಪವಾಡ ಮಾಡಿಯಾದರೂ ಸತ್ಯ ಹಾಗೂ ಕಾರ್ತಿಕ್ ಮದುವೆ ಆಗುವ ಹಾಗೆ ಮಾಡಪ್ಪ ಅಂತ ದೇವರ ಬಳಿ ಹರಕೆ ಕಟ್ಟಿಕೊಂಡಿದ್ದಾರೆ.

ಸತ್ಯಾ-ರೀತು ಮೆಹೆಂದಿ ಕಹಾನಿ

ಸತ್ಯಾ-ರೀತು ಮೆಹೆಂದಿ ಕಹಾನಿ

ರಿತು ಯಾರಿಗಾದರೂ ತಾನು ಮೆಹಂದಿ ಹಾಕಲೇಬೇಕು ಎಂದು ಒದ್ದಾಡುತ್ತಿದ್ದಾಳೆ. ಆದರೆ ರಿತು ಕೈಯಲ್ಲಿ ಮೆಹಂದಿ ಹಾಕಿಸಿಕೊಳ್ಳಲು ಯಾರೂ ಒಪ್ಪುತ್ತಿಲ್ಲ. ಆಗ ಸತ್ಯ ಮುಂದೆ ಬಂದು ನಾನು ಮೆಹಂದಿ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಸತ್ಯಗೆ ಮೆಹಂದಿ ಹಾಕುವಾಗ ನೀವು ನೋಡೋಕಷ್ಟೇ ಖಡಕ್, ಆದರೆ ನಿಮ್ಮ ಮನಸ್ಸು ತುಂಬಾ ಸಾಫ್ಟ್. ಕಲೆಗೆ ಬೆಲೆ ಕೊಡುತ್ತೀರಾ ಎಂದು ರಿತು ಹೇಳುತ್ತಾಳೆ. ಆಗ ಸತ್ಯ ಎಲ್ಲರೂ ನನ್ನ ಬಟ್ಟೆ ನೋಡಿ ಅಖೆಯುತ್ತಾರೆ ಎನ್ನುವಷ್ಟರಲ್ಲಿ ರಿತು ತಾಯಿ ಬಂದು ಅವಳನ್ನು ಕರೆದುಕೊಂಡು ಹೋಗುತ್ತಾರೆ.

ಸತ್ಯಾ ಕೈಯಲ್ಲಿ K ಅಕ್ಷರದ ಮೆಹೆಂದಿ

ಸತ್ಯಾ ಕೈಯಲ್ಲಿ K ಅಕ್ಷರದ ಮೆಹೆಂದಿ

ಆಗ ರಿತು ಮೆಹಂದಿ ಹಾಕುವವರನ್ನು ಕಳಿಸಿ, ಸತ್ಯ ಕೈ ಮೇಲೆ ಮೆಹಂದಿಯನ್ನು ಪೂರ್ಣಗೊಳಿಸಲು ಹೇಳುತ್ತಾರೆ. ಅದೇ ವೇಳೆ ಮೆಹಂದಿ ಹಾಕುವವರಿಗೆ ಕೈ ಮೇಲೆ ಕೆ ಎಂದು ಬರೆಯುವಂತೆ ಹೇಳುತ್ತಾಳೆ. ಮೆಹಂದಿ ಹಾಕುವವಳು ಬಂದು ಸತ್ಯಗೆ ಮೆಹಂದಿ ಹಾಕುತ್ತಾಳೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಕಾರ್ತಿಕ್ ಬರುತ್ತಾನೆ. ಸತ್ಯ ಕೂಡ ಮೆಹಂದಿ ಹಾಕಿಸಿಕೊಳ್ಳುತ್ತಿರುವುದನ್ನು ಕಾರ್ತಿಕ್ ನೋಡುತ್ತಾನೆ. ಸತ್ಯಗೆ ಗೊತ್ತಿಲ್ಲದಂತೆ ಕೆ ಎಂಬ ಅಕ್ಷರವನ್ನು ಸತ್ಯಗೆ ಮೆಹಂದಿ ಹಾಕಲಾಗುತ್ತೆ. ಇದನ್ನು ನೋಡಿದ ಕಾರ್ತಿಕ್ ಶಾಕ್ ಆಗುತ್ತಾನೆ. ಆದರೆ ಈ ವಿಚಾರ ಸತ್ಯಗೆ ಗೊತ್ತಿರುವುದಿಲ್ಲ.

ಕಾರ್ತಿಕ್ ಮದುವೆಯಲ್ಲಿ ಹೊಸ ಟ್ವಿಸ್ಟ್

ಕಾರ್ತಿಕ್ ಮದುವೆಯಲ್ಲಿ ಹೊಸ ಟ್ವಿಸ್ಟ್

ಇತ್ತ ಗಿರಿಜಮ್ಮ ಮದುವೆ ಬಗ್ಗೆ ಯೋಚಿಸುತ್ತಾ ಡಲ್ ಆಗಿ ಇರುತ್ತಾರೆ. ಆಗ ಜಾನಕಿ ಬಂದು ಗಿರಿಜಮ್ಮನನ್ನು ಮಾತನಾಡಿಸುತ್ತಾರೆ. ಸತ್ಯಾನೇ ನಿಂತು ಮದುವೆ ಮಾಡಿಸುತ್ತಿದ್ದಾಳೆ. ಆದರೂ ಭಯ ಯಾಕೆ ಎಂದು ಜಾನಕಿ ಕೇಳುತ್ತಾಳೆ. ಆಗ ಗಿರಿಜಮ್ಮ ನನ್ನ ಭಯ ಮದುವೆಯದ್ದಲ್ಲ. ಆ ಜಾತಕದ್ದು ಎಂದು ಹೇಳುತ್ತಾಳೆ. ನಾವು ಸುಳ್ಳು ಹೇಳಿ ಈ ಮದುವೆಯನ್ನು ಮಾಡುತ್ತಿದ್ದೇವೆ. ಇದು ತಪ್ಪಲ್ವಾ? ನಾವು ರಾಮಚಂದ್ರ ಅವರಿಗೆ ಈ ಸತ್ಯನ ಹೇಳಬೇಕು. ನಾನಂತೂ ರಾಯರಿಗೆ ಈ ಸತ್ಯನ ಹೇಳಿ ಬಿಡಬೇಕು ಅಂತ ತೀರ್ಮಾನ ಮಾಡಿದ್ದೀನಿ. ಸುಳ್ಳಿನ ಭಾರ ಮುಳ್ಳಿನ ಥರ ಚುಚ್ಚುತ್ತಾನೆ ಇದೆ. ಸತ್ಯ ಹೇಳಿಬಿಡೋಣ. ಆಗ ಅವರು ಏನು ನಿರ್ಧಾರ ಮಾಡುತ್ತಾರೋ ನೋಡೋಣ ಎಂದು ಗಿರಿಜಮ್ಮ ಹೇಳುತ್ತಾಳೆ.

ದಿವ್ಯಾ-ಕಾರ್ತಿಕ್ ಮದುವೆ ಕಥೆಯೇನು?

ದಿವ್ಯಾ-ಕಾರ್ತಿಕ್ ಮದುವೆ ಕಥೆಯೇನು?

ಆಗ ಜಾನಕಿ ಈ ಸಲವೂ ಮದುವೆ ನಿಂತರೆ ನಮಗೆ ಸಾಯೋದು ಒಂದೇ ದಾರಿ ಎಂದಾಗ, ಗಿರಿಜಮ್ಮ ಇಲ್ಲ ಮದುವೆ ಮಾಡಿ ದಿನಾ ಸಾಯೋದಕ್ಕಿಂತ ಇದೇ ಸರಿ. ನಾನಂತೂ ಹೋಗಿ ಹೇಳುತ್ತೀನಿ ಅಂದಾಗ ಜಾನಕಿನೂ ಒಪ್ಪಿಕೊಳ್ಳುತ್ತಾಳೆ. ಇಬ್ಬರೂ ಒಟ್ಟಿಗೆ ಹೋಗಿ ಸತ್ಯ ಹೇಳಲು ಮುಂದಾಗುತ್ತಾರೆ. ಇದೇ ಸಮದರ್ಭದಲ್ಲಿ ಬಾಲ ಕೂಡ ಮದುವೆ ಮನೆಗೆ ಎಂಟ್ರಿ ಕೊಡುತ್ತಾನೆ. ಈ ಎಲ್ಲಾ ದೃಶ್ಯಗಳನ್ನೂ ನೋಡಿದರೆ ಈ ಬಾರಿ ಕೂಡ ದಿವ್ಯಾ-ಕಾರ್ತಿಕ್ ಮದುವೆ ಮುರಿದು ಬೀಳುತ್ತಾ? ಇಲ್ಲಾ ವೀಕ್ಷಕರಿಗೆ ನಿರ್ದೇಶಕರು ಶಾಕ್ ಕೊಡುತ್ತಾರಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.

More from Filmibeat

English summary
Zee Kannada Sathya Serial Written Update On April 22nd. Janaki and Girija decides to tell ramachandra about horoscope. Ritu applies mehandi to sathya palm. bala enters wedding place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X