ಮೇಘನಾ ಶಂಕರಪ್ಪ ಮದುವೆ ಸಂಭ್ರಮ, ಹೇಗಿತ್ತು ಅರಿಶಿನ ಶಾಸ್ತ್ರ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಅಶೋಕನ ಮನದರಸಿಯಾಗಿರುವ ನಟಿ ಮೇಘನಾ ಶಂಕರಪ್ಪ ಇದೀಗ ನಿಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 28 ವರ್ಷದ ನಟಿ ಮೇಘನಾ ಶಂಕರಪ್ಪ ಅವರು ಎಂಗೇಜ್ ಆಗಿದ್ದು, ಅವರ ಕುಟುಂಬದಲ್ಲಿ ಮದುವೆಯ ಶಾಸ್ತ್ರಗಳು ಜೋರಾಗಿಯೇ ನಡೆಯುತ್ತಿದೆ. ಇಂದು ನಾಳೆ ಮದುವೆ ನಡೆಯಲಿದ್ದು, ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ. ಹಳದಿ ಶಾಸ್ತ್ರದ ಫೋಟೋಗಳನ್ನು ಇನ್ ಸ್ಟ್ರಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಸೀತಾರಾಮ್ ಪ್ರಿಯಾ ಮದುವೆ

ಭರತನಾಟ್ಯವನ್ನು ಇಷ್ಟಪಡುವ ನಟಿ ಮೇಘನಾ ಶಂಕರಪ್ಪ ಅವರು ಬಿಬಿಎಂ ಓದಿದ್ದು, ಮೂಲತ ದಾವಣಗೆರೆಯವರು. ಕಿನ್ನರಿ, ಕೃಷ್ಣ ತುಳಸಿ, ದೇವಯಾನಿ, ರತ್ನಗಿರಿ ರಹಸ್ಯ, ಸಿಂಧೂರಿ, ನಮ್ಮನೆ ಯುವರಾಣಿ ಸೇರಿದಂತೆ ಮತ್ತಷ್ಟು ಧಾರಾವಾಹಿಗಳಲ್ಲಿ ಮೇಘನಾ ಅವರು ನಟಿಸಿದ್ದಾರೆ. ಇನ್ನು ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿ ಮೇಘನಾ ಅವರು ಖಳನಾಯಕಿ ನೇತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದ ಮೇಘನಾ ಅವರು ಮುಂದೆ ಕಿನ್ನರಿ ಧಾರಾವಾಹಿ ಮೂಲಕ ನಟನೆಯನ್ನು ಪ್ರಾರಂಭಿಸಿದರು. ಸೀತಾ ರಾಮ ಧಾರಾವಾಹಿ ಮೇಘನಾ ಅವರ ನಟನಾ ವೃತ್ತಿಗೆ ಒಳ್ಳೆಯ ಬ್ರೇಕ್ ಕೊಟ್ಟಿದೆ. ಆದರೆ, ಮದುವೆ ಫಿಕ್ಸ್ ಆದಾಗಿನಿಂದ ಮೇಘನಾ ಅವರು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುವುದೇ ಬಹಳ ಅಪರೂಪವಾಗಿದೆ.

zee kannada seetha rama serial actress meghana shankarappa marriage

ಮಾತಿನ ಮಲ್ಲಿ

ಸೀತಾರಾಮ ಧಾರಾವಾಹಿಯಲ್ಲಿ ಚಟಪಟ ಅಂತ ಮಾತನಾಡುವ ಮೇಘನಾ ಅವರು ನಿಜ ಜೀವನದಲ್ಲೂ ಹಾಗೆಯೇ ಮಾತನಾಡುತ್ತಾರಂತೆ. ಯಾವ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಕ್ಕೆ ಬಯಸುವುದಿಲ್ಲವಂತೆ. ದಾವಣಗೆರೆ ಮೂಲದವರಾದ ಮೇಘನಾ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದು. ತಮ್ಮ ದಿನಚರಿಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಉದಯ್ ಪುರ್, ಜೈಪುರ, ಕುಂದಾಪುರ ಸೇರಿದಂತೆ ಅಲ್ಲಲ್ಲಿ ಪ್ರವಾಸ ಕೂಡ ಕೈಗೊಳ್ಳುತ್ತಿರುತ್ತಾರೆ. ಮೇಘನಾ ಅವರು ದಪ್ಪಗಿದ್ದರೂ ಕೂಡ ಬಹಳ ಮುದ್ದಾಗಿ ಕಾಣಿಸುತ್ತಾರೆ. ಅಲ್ಲದೇ, ರುಚಿ ರುಚಿಯಾದ ಊಟವನ್ನು ಮಾಡಲು ಬಯಸುವ ಮೇಘನಾ ಅವರು ಹೇಗೆ ಕಾಣುತ್ತೇವೆ ಎಂಬುದು ಮುಖ್ಯವಲ್ಲ ನಾವು ಎಷ್ಟು ಆರೋಗ್ಯವಾಗಿರುವುದು ಮುಖ್ಯ ಎಂದು ಹೇಳುತ್ತಾರೆ.


ಭಾವಿ ಪತಿ ಜೊತೆಗೆ ರೊಮ್ಯಾಂಟಿಕ್ ಫೋಟೊ

ಸೀತಾರಾಮ ಧಾರಾವಾಹಿಯಲ್ಲಿ ನಟಿಸುವಾಗಲೇ ಮೇಘನಾ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ದಪ್ಪಗಿದ್ದರೂ ಆಕ್ಟೀವ್ ಆಗಿ ಕುಣಿದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಡಟುಕೊಳ್ಳುವಂತೆ ಮಾಡಿದ್ದರು. ಇನ್ನು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಹೊಸ ಮನೆಯನ್ನು ಖರೀದಿಸಿದ ನಟಿ ಮೇಘನಾ ಶಂಕರಪ್ಪ ಅವರು ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಗೃಹಪ್ರವೇಶಕ್ಕೆ ಇಡೀ ಸೀತಾರಾಮ ಧಾರಾವಾಹಿ ತಂಡವೇ ಆಗಮಿಸಿತ್ತು. ಇತ್ತೀಚೆಗೆ ಭಾವಿ ಪತಿ ಜಯಂತ್ ಅವರ ಜೊತೆಗೆ ಮೇಘನಾ ಶಂಕರಪ್ಪ ಅವರು ಬ್ಯುಸಿಯಾಗಿದ್ದರು.


ಮದುವೆ ಸಂಭ್ರಮದಲ್ಲಿ ಮೇಘನಾ ಶಂಕರಪ್ಪ

ಪ್ರೀವೆಡ್ಡಿಂಗ್ ಫೋಟೋಶೂಟ್ ಗಳನ್ನು ಮಾಡಿಸಿಕೊಂಡಿದ್ದರು. ಮುದುವೆಗೂ ಮುನ್ನವೇ ಭಾವಿ ಪತಿಯ ಜೊತೆಗೆ ರೊಮ್ಯಾಂಟಿಕ್ ಫೋಟೋಗಳಿಗೆ ಪೋಸ್ ಕೊಟ್ಟು ಸುದ್ದಿಯಾಗಿದ್ದರು. ಜೋಡಿಗಳು ವೈಟ್ ಆಂಡ್ ವೈಟ್ ನಲ್ಲಿ ಮಿಂಚಿದ್ದರು. ಸದ್ಯ ಹಳದಿ ಶಾಸ್ತ್ರ ನೆರೇವೇರಿದ್ದು. ಇದರ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ನಾಳೆ ಮದುವೆ ನಡೆಯಲಿದ್ದು, ಮೇಘನಾ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅರೇಂಜ್ ಮ್ಯಾರೇಜ್ ಆಗುತ್ತಿರುವ ಮೇಘನಾ ಶಂಕರಪ್ಪ ಅವರು ಮದುವೆಯ ಬಳಿಕ ನಟನೆಯನ್ನು ಮುಂದುವರೆಸುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿಇದೆ. ಅದೇನೇ ಇರಲಿ ಎಲ್ಲರ ಮೆಚ್ಚಿನ ತಿಂಡಿ ಪೋತಿ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ ಅವರ ಹೊಸ ಬಾಳಿಗೆ ಶುಭವಾಗಲಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X