Seetha Rama Serial: ಸೀತಾ ಕಣ್ಣೀರಿಗೂ ಕರಗಲಿಲ್ಲ ಭಾರ್ಗವಿ.. ಹಿಡಿಶಾಪ ಹಾಕಿದ ವೀಕ್ಷಕರು!
ಸೀತಾಗೆ ಅಂತ ಇರುವುದು ಒಂದೇ ಸೂರು. ಮಗಳ ಶಿಕ್ಷಣ, ಮಗಳ ಆಸ್ಪತ್ರೆ ಖರ್ಚು, ಊಟ -ತಿಂಡಿ ಅಂತ ನೋಡಿಕೊಂಡರು ಬರುವ ಸಂಬಳ ಸಾಕಾಗುವುದಿಲ್ಲ. ಸೀತಾ ಹೇಳಿದಂತೆ ಈ ಬೆಂಗಳೂರು ಜೀವನದಲ್ಲಿ ಸ್ಯಾಲರಿ ಬಂದ ದಿನ ಶ್ರೀಮಂತ, ತಿಂಗಳ ಕೊನೆಯಲ್ಲಿ ಬಡವ. ಇದು ಬೆಂಗಳೂರಿನಲ್ಲಿ ವಾಸಿಸುವವರ ಪರಿಸ್ಥಿತಿ.
ಸಿಹಿ ಎಲ್ಲವನ್ನು ಸಹಿಸಿಕೊಳ್ಳುತ್ತಾಳೆ. ಆದರೆ, ತನ್ನದು ಎನ್ನುವ ವಸ್ತುಗಳನ್ನು ಯಾರಿಗೂ ಬಿಟ್ಟುಕೊಡುವುದಕ್ಕೆ ಇಷ್ಟಪಡುವುದಿಲ್ಲ. ಅದರಲ್ಲೂ ಮನೆಯ ವಿಚಾರಕ್ಕೆ ಯಾರು ಬರುವಂತೆ ಇಲ್ಲ. ಇದು ಸೀತಾಗೆ ಗೊತ್ತಾಗಿಯೇ ಮನೆ ಉಳಿಸಿಕೊಳ್ಳುವ ದಾರಿಗೆ ರಾಮ್ ಸಹಾಯ ತೆಗೆದುಕೊಂಡಿದ್ದಾಳೆ. ಆದರೆ, ಈಗ ಭಾರ್ಗವಿಯಿಂದ ಎಲ್ಲವೂ ಹಾಳಾಗಿದೆ.

ಚರಣ್ ಡಿಯನ್ನೇ ಬೈದ ಭಾರ್ಗವಿ
ಆಫೀಸ್‌ನಲ್ಲಿ ಏನೇ ಆಗು ಹೋಗುಗಳಿದ್ದರು ಅದನ್ನೆಲ್ಲಾ ನೋಡಿಕೊಳ್ಳುವುದು ಚರಣ್ ಡಿ. ಆಫೀಸ್‌ಗೆ ಮ್ಯಾನೇಜರ್ ಎನ್ನುವುದಕ್ಕಿಂತ ಈ ಚರಂಡಿ, ಭಾರ್ಗವಿಗೆ ಪಕ್ಕ ಅಸಿಸ್ಟೆಂಟ್ ಆಗಿನೇ ಕೆಲಸ ಮಾಡುತ್ತಿದ್ದಾನೆ. ಅದಕ್ಕಾಗಿಯೇ ಅಡ್ವಾನ್ಸ್ ಸ್ಯಾಲರಿಯನ್ನು ಬೇರೆಯವರ ಅಕೌಂಟ್‌ಗೆ ಹಾಕಿಸಲಾಗಿದೆ. ಈಗ ಸೀತಾಳನ್ನು ಕ್ಯಾಬಿನ್ ಕರೆಸಿ, ಚರಣ್ ಡಿಯನ್ನು ಮುಂದೆ ನಿಲ್ಲಿಸಿಕೊಂಡು ಮ್ಯಾನೇಜರ್‌ದೆ ತಪ್ಪು ಎಂಬಂತೆ ಬೈದಿದ್ದಾಳೆ.
ಬೇರೆ ಸಿಬ್ಬಂದಿಯ ನೆಪ ತಂದ ರಾಮ್ ಚಿಕ್ಕಿ
ಇಲ್ಲಿ ಭಾರ್ಗವಿ ತನ್ನ ಅಸಲಿ ಆಟ ಶುರು ಮಾಡಿದ್ದಾಳೆ. ಸೀತಾಳನ್ನು ಪಾಪದವಳಂತೆ ನೋಡಿದ್ದು, "ಅವರಿಗೆ ಏನು ಕಷ್ಟ ಇರುತ್ತೋ ಏನೋ. ಆದರೆ ನಿಮಗೆ ಬುದ್ದಿ ಬೇಕು ಅಲ್ಲವಾ. ಬೇರೆ ಎಂಪ್ಲಾಯ್ಸ್ ಕೂಡ ಬಂದು ಸೀತಾಗೆ ಹಣ ಕೊಟ್ಟಿದ್ದೀರಿ ನಮಗೂ ಅಡ್ವಾನ್ಸ್ ಸ್ಯಾಲರಿ ಬೇಕು ಎಂದರೆ ಏನು ಮಾಡುತ್ತೀರಿ. ಇನ್ನು ಮುಂದೆ ಈ ರೀತಿಯ ತಪ್ಪು ಆಗಬಾರದು. ನೋಡು ಸೀತಾ ತಪ್ಪು ಮಾಡಿ, ಹೀಗೆ ತಲೆ ಬಗ್ಗಿಸಿ ನಿಂತು ಬಿಡುತ್ತಾರೆ" ಅಂತ ಸೀತಾಳನ್ನು ಸಪೋರ್ಟ್ ಮಾಡಿಕೊಳ್ಳುತ್ತಿರುವಂತೆ ಭಾರ್ಗವಿ ಮಾತನಾಡಿದ್ದಾಳೆ.

ಸೀತಾಳ ವಿವರಣೆ ಕೇಳುವುದಕ್ಕೆ ರೆಡಿಯಿಲ್ಲ
ಭಾರ್ಗವಿಯ ಮಾತು ಸೀತಾಳಿಗೆ ಅರ್ಥವಾಗಿದೆ. ಸುಮ್ಮನೆ ಅಡ್ವಾನ್ಸ್ ಸ್ಯಾಲರಿಗೆ ಅಪ್ಲೈ ಮಾಡಿದ್ದಾರೆ ಎಂದುಕೊಂಡಿದ್ದಾರೆ, ಹಣದ ಅವಶ್ಯಕತೆಯ ಬಗ್ಗೆ ತಿಳಿ ಹೇಳಲು ಹೊರಟಿದ್ದಾಳೆ. ಆದರೆ, ಅದನ್ನು ಕೇಳುವ ಗೋಜಿಗೆ ಭಾರ್ಗವಿ ಹೋಗಿಲ್ಲ. ಯಾಕಂದ್ರೆ, ಭಾರ್ಗವಿಗೆ ಎದುರು ಇರುವವರು ಕಸಕ್ಕೆ ಸಮ. ತಾನೊಬ್ಬಳೇ ಅಧಿಕಾರದಲ್ಲಿರಬೇಕು. ತಾನು ಹೇಳಿದ ಮಾತುಗಳನ್ನಷ್ಟೇ ಕೇಳಬೇಕು ಎಂಬ ಅಹಂ. ಹೀಗಾಗಿ ಸೀತಾಗೆ ಅಗತ್ಯತೆಯ ಬಗ್ಗೆ ಹೇಳಿಕೊಳ್ಳುವುದಕ್ಕೆ ಸಮಯವನ್ನೇ ನೀಡಲಿಲ್ಲ.
ಕಣ್ಣೀರು ಹಾಕಿದ ಸೀತಾ
ರಾಮ್ ಇದ್ದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಅಶೋಕ್ ಕೂಡ ಸಾಕಷ್ಟು ಕಾಲ್ ಟ್ರೈ ಮಾಡಿದ್ದಾನೆ. ಆಫೀಸ್‌ನಲ್ಲಿ ಈ ಕೆಲಸ ಮಾಡಬೇಕು ಎಂದುಕೊಂಡೆ ರಾಮ್‌ನನ್ನು ದೇವಸ್ಥಾನಕ್ಕೆ ಕಳುಹಿಸಿದ್ದಾಳೆ. ಇಲ್ಲಿ ಎಲ್ಲವನ್ನು ಸಲೀಸಾಗಿ ಮುಗಿಸಿದ್ದಾಳೆ. ಸೀತಾಳಿಗೆ ಮನೆ ಉಳಿಯುತ್ತದೆ ಎಂಬ ದೊಡ್ಡ ನಂಬಿಕೆ ಇತ್ತು. ಆದರೆ, ಭಾರ್ಗವಿಯಿಂದ ಎಲ್ಲವೂ ಹಾಳಾಗಿದೆ. ಹಣ ಸಿಗಲ್ಲ ಅಂತ ಗೊತ್ತಾದಾಗ, ಭಾರ್ಗವಿ ಮಾಡಿದ ಅವಮಾನಕ್ಕೆ ಸೀತಾ ಕುಗ್ಗಿ ಹೋಗಿದ್ದಾಳೆ. ಬಿಕ್ಕಳಿಸಿ ಬಿಕ್ಕಳಿಸಿ ಮಕ್ಕಳು ಕಣ್ಣೀರಿಟ್ಟಂತೆ ಇಟ್ಟು, ಕ್ಷಮೆ ಕೇಳಿ ಹೊರ ಬಂದಿದ್ದಾಳೆ. ನೋಡುಗರಿಗೆ ಆ ಕಣ್ಣೀರು ಬೇಸರ ತರಿಸಿದರು, ಭಾರ್ಗವಿಗೆ ಅದು ತಾಗಲೇ ಇಲ್ಲ.


Click it and Unblock the Notifications











