'ಸೀತಾರಾಮ' ಧಾರಾವಾಹಿಯಿಂದ ಶ್ಯಾಮ್ ಹೊರಬಂದಿದ್ದೇಕೆ?

By ಎಸ್ ಸುಮಂತ್

ಸೀತಾರಾಮ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಹೀಗಾಗಿಯೇ ಅದರ ಸಮಯ ಬದಲಾದರೂ ವೀಕ್ಷಕರ ಡಿಮ್ಯಾಂಡ್ ಮೇರೆಗೆ ಮರು ಪ್ರಸಾರವನ್ನು ಮಾಡುತ್ತಿದೆ ಜೀ ಕನ್ನಡ. ಅದರಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶ್ಯಾಮ್ ಮತ್ತು ಶಾಲಿನಿ ಪಾತ್ರಗಳು ಪರಿಚಯವಾಗಿದ್ದವು. ಈ ಪಾತ್ರಗಳು ಬಂದ ಮೇಲೆನೆ ಸೀತಾ ಸಾರೋಗಸಿ ಮದರ್ ಎಂಬುದು ಎಲ್ಲರಿಗೂ ತಿಳಿದಿದ್ದು.

ಸಿಹಿಗೆ ಶ್ಯಾಮ್ ಡಾಕ್ಟರ್ ಆಗಿದ್ದಾಗ ಬೇರೆ ರೀತಿಯಲ್ಲಿಯೇ ಕಾಣಿಸುತ್ತಿದ್ದರು. ಆಮೇಲೆ ದ್ವೇಷಿಯಂತಾಗಿಬಿಟ್ಟರು. ಆಮೇಲೆ ಶ್ಯಾಮ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆದಂತ 'ಮ್ಯಾಕ್ಸ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟಕ್ಕೂ ಅರ್ಜುನ್ ಆದಿದೇವ್ 'ಸೀತಾರಾಮ' ಧಾರಾವಾಹಿಯನ್ನು ಬಿಟ್ಟಿದ್ದು ಯಾಕೆ ಗೊತ್ತಾ? ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ನೋಡಿ.

Zee kannada Seetharama Actor Arjun adhidev reveals why he left show

ಆರಂಭದ ದಿನಗಳು ಹೇಗಿದ್ದವು?

ನಾನು ಕಲಿಯುತ್ತಿದ್ದ ಸಮಯ ಅದು. ಮೊದಲ ಸೀರಿಯಲ್ ಮುಗ್ಸಿ ಎಕ್ಸ್ ಪಿರಿಮೆಂಟ್ ಮಾಡಬಹುದು ಎಂಬುದನ್ನ ಕಲಿತೆ. ಹೇಳುವವರು ಕೇಳುವವರು ಆ ಸಮಯದಲ್ಲಿ ಕಡಿಮೆ ಇತ್ತು. ಒಮ್ಮೆ ಪಾಪ್ಯೂಲಾರಿಟಿ ಬಂದ್ರೆ ಜನ ನಿರೀಕ್ಷೆ ಮಾಡ್ಯಾರೆ. ಆದರೆ ಕಲಿಯುವ ವಯಸ್ಸಿನಲ್ಲಿ ಅಷ್ಟೊಂದು ನಿರೀಕ್ಷೆ ಇರಲ್ಲ. ನಾನು ಸಬ್ಜೆಕ್ಟ್ ರೆಡಿ ಮಾಡಿಕೊಂಡು ಹೋದಾಗ ಆ ಕಥೆಯನ್ನ ಇಷ್ಟಪಡುತ್ತಿದ್ದವರು, ನಾನೇ ಹೀರೋ ಆಗ್ತೀನಿ ಎಂದಾಗ ನಿಮಗಿನ್ನು ಮಾರ್ಕೆಟ್‌ ವ್ಯಾಲ್ಯೂನೇ ಇಲ್ಲ. ಆ ಪಾತ್ರವನ್ನ ಮತ್ತೊಬ್ಬರು ಮಾಡಲು. ನೀವು ಯಾವುದಾದರೂ ಬೇರೆ ಪಾತ್ರ ತಗೊಳ್ಳಿ ಅಥವಾ ಟೀಂನಲ್ಲಿ ನಿಂತು ಸಪೋರ್ಟ್ ಮಾಡಿ ಎನ್ನುತ್ತಿದ್ದರು.

ಸಿನಿಮಾ ಆಡಿಷನ್

ಸಿನಿಮಾ ಆಡಿಷನ್ಸ್‌ಗೆ ಅಂತ ಹೋದಾಗ ಸೀರಿಯಲ್ಸ್ ಮಾಡ್ತಾ ಇದ್ದೀರಾ ಅನ್ನೋರು. ಆಗ ನಾನು ನಿರ್ಧಾರ ಮಾಡಿದೆ ಸೀರಿಯಲ್ ಮಾಡ್ತಾ ಇರೋದನ್ನ ಪ್ರಮೋಷನ್ ಮಾಡಿಕೊಳ್ಳಬಾರದು ಅಂತ. ಆದ್ರೆ ಈಗ ಎಲ್ಲದಕ್ಕೂ ಪ್ರಮೋಷನ್ ಅಗತ್ಯವಿದೆ. ಆಗ ಸೀರಿಯಲ್‌ನಲ್ಲಿ ಮಾಡ್ತಾ ಇದ್ದೀನಿ ಅಂತ ಹೇಳಿಕೊಳ್ತಾ ಇರಲಿಲ್ಲ. ಆದ್ರೆ ಟೆಲಿವಿಷನ್ ನನಗೆ ಅನ್ನ ಕೊಡ್ತಾ ಇತ್ತು.

ಮುಂದಿನ ಗುರಿ ಏನಿದೆ..?

ಮುಂದೊಂದು ದಿನ ನಾನು ಟಾಪ್‌ನಲ್ಲಿ ನಿಂತುಕೊಳ್ತೀನಿ, ಅದ್ಭುತ ಸಬ್ಜೆಕ್ಟ್‌ಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಒಳ್ಳೆ ಪಾತ್ರಗಳು ಸಿಗುವ ನಿರೀಕ್ಷೆಯೂ ಇದೆ. ಅದಕ್ಕೋಸ್ಕರವೇ ವರ್ಕ್ ಕೂಡ ಮಾಡ್ತಾ ಇದ್ದೀನಿ. ಖಂಡಿತ ಆ ಗುರಿಯನ್ನ ರೀಚ್ ಮಾಡ್ತೀನಿ. ಜನರ ಮುಂದೆ ತಯಾರು ಮಾಡಿಕೊಂಡು ಬಂದೇ ನಟಿಸಬೇಕು. ಅವರು ಆಗ ಪ್ರೀತಿ ತೋರಿಸುತ್ತಾರೆ. ಇಲ್ಲಂದ್ರೆ ಹೇಗಿರ್ತೀವೋ ಹಾಗೇ ಬಂದಾಗ ಇವನದ್ದು ಇಷ್ಟೇ ಅಂದುಕೊಂಡು ಬಿಡ್ತಾರೆ. ಪ್ರತಿ ಪರ್ಫಾಮೆನ್ಸ್ ನಲ್ಲೂ ಡೆವಲಪ್ ಆಗಬೇಕು.

ಸೀತಾರಾಮ ಯಾಕೆ ಬಿಟ್ರಿ?

ಶ್ಯಾಮ್ ಪಾತ್ರ ತುಂಬಾ ಇಷ್ಟ ಆಗಿತ್ತು. ಪಾತ್ರವನ್ನು ಪ್ರೀತಿ ಮಾಡಬೇಕು. ಜನ ಕೂಡ ಶ್ಯಾಮ್ ಕ್ಯಾರೆಕ್ಟರ್‌ನ ಇಷ್ಟಪಡ್ತಾ ಇದ್ರು. ಆರಂಭದಲ್ಲಿ ಜನ ತುಂಬಾ ಇಷ್ಟ ಪಟ್ರು. ಆಮೇಲೆ ಸ್ವಲ್ಪ ಆ ಕ್ಯಾರೆಕ್ಟರ್ ಬೇರೆ ರೀತಿಯೇ ಆಗಿತ್ತು. ಸಿಹಿಯನ್ನು ಬೇಕೆ ಬೇಕು ಅಂತ ಹಠ ಮಾಡಿದಾಗ ಜನ ಆ ಪಾತ್ರವನ್ನ ಇಷ್ಟ ಪಟ್ಟರು. ಆದರೆ ಜನ ಆ ಘಟನೆಯನ್ನ ರಿಸೀವ್ ಮಾಡಿಕೊಳ್ಳೋದಕ್ಕೆ ಇಷ್ಟಪಡಲಿಲ್ಲ. ಅದೇನು ನೆಗೆಟಿವ್ ಕ್ಯಾರೆಕ್ಟರ್ ಅಲ್ಲ. ನಂಗು ಒಬ್ಬ ಮಗನಿದ್ದಾನೆ. ಒಂದೂವರೆ ವರ್ಷದ ಮಗ. ಅವನಿಗೇನು ಇಷ್ಟ ಅದನ್ನ ನೋಡೋದಕ್ಕೆ ಇಷ್ಟಪಡ್ತೀನಿ. ಈಗ ಯಾರೋ ಬಂದು ಎತ್ಕೊಳ್ತಾರೆ. ನಮ್ಮ ಜೊತೆಗೆ ಬರಲ್ಲ ಅಂದಾಗ ಅತ್ತುಕೊಂಡು ಬರೋದನ್ನ ನೋಡೋಕೆ ನಂಗು ಇಷ್ಟ ಆಗಲ್ಲ. ಹಾಗಾಗಿ ಬಿಟ್ಟು ಬರ್ತೀನಿ ಎಂದಿದ್ದಾರೆ.

More from Filmibeat

English summary
Here is the details about Why Shyam exit from Seetharama serial?
Read more about: serials kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X