SeethaRaama: ವಿಂಟೇಜ್ ಕ್ಯಾಮರಾದಲ್ಲಿ ಅಡಗಿದೆಯಾ ಭಾರ್ಗವಿಯ ಭವಿಷ್ಯ?

By ಪ್ರಿಯಾ ದೊರೆ

'ಸೀತಾರಾಮ' ಧಾರಾವಾಹಿಯಲ್ಲಿ ಕಥೆ ಬೇರೆಯ ತಿರುವು ಪಡೆದುಕೊಳ್ಳುತ್ತಿದೆ. ಸುಬ್ಬಿ ಮನೆಗೆ ಹೊಂದಿಕೊಂಡು ಸಿಹಿ ಎಂದು ಎಲ್ಲರ ಎದುರು ಪ್ರೂವ್ ಮಾಡಿದ್ದಾಗಿದೆ.

ಈಗ ಸಿಹಿಗೂ ಕೂಡ ಹನುಮಂತನಿಂದ ಶಕ್ತಿ ಸಿಕ್ಕಿದೆ. ಇದರಿಂದ ಸಿಹಿ ಯಾವುದೇ ಸಮಸ್ಯೆ ಬಂದರೂ ಎದುರಿಸುತ್ತಿದ್ದಾಳೆ. ಸಿಹಿ-ಸುಬ್ಬಿ ತಮ್ಮ ಲೋಕದಲ್ಲೇ ಇದ್ದಾರೆ.

Zee Kannada Seetharama Serial 04th April episode written update

ಇತ್ತ ಸೀತಾ ಮನೆ ಕ್ಲೀನ್ ಮಾಡಲು ಹೋಗಿ ತನ್ನ ಅತ್ತೆ ಮಾವನ ನೆನಪನ್ನು ಮರುಕಳಿಸಿದ್ದಾಳೆ. ರಾಮ್ ಗೆ ಮೊದಲ ಬಾರಿಗೆ ತನ್ನ ತಂದೆ-ತಾಯಿಯ ವಸ್ತುಗಳನ್ನು ನೋಡುವ ಅವಕಾಶ ಸಿಕ್ಕಿದೆ.

25 ವರ್ಷದ ಕಥೆ ಹೇಳಿದ ಸತ್ಯಜಿತ್

ಸತ್ಯಜಿತ್ ಕುಡಿತದ ಚಟಕ್ಕೆ ಬಿದ್ದು, ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಾನೆ. ಇದರೀಮದ ಸೂರಿಗೆ ಬೇಸರವಿದ್ದು, ಮಗನನ್ನು ನೋಡಲು ಕೂಡ ಬಯಸುವುದಿಲ್ಲ. ಆದರೆ, ಸತ್ಯಜಿತ್ ತನ್ನ ಅಣ್ಣ-ಅತ್ತಿಗೆಯ ಸಾವಿಗೆ ನಾನು ಕಾರಣವಲ್ಲ ಎಂದು ಹೇಲಿದರೂ ಕೇಳಲು ಸೂರಿ ತಯಾರಿಲ್ಲ. ಇನ್ನು ಕುಡಿದ ಮತ್ತಿನಲ್ಲಿ ಸತ್ಯಜಿತ್ ನಿಜ ಹೇಳುತ್ತಾನೆ ಎಂದು ಹೆದರಿದ ಭಾರ್ಗವಿ ಅಲ್ಲಿಂದ ಸತ್ಯಜಿತ್‌ನನ್ನು ಹೊರಗೆ ಕಳಿಸುವ ಯತ್ನ ಮಾಡುತ್ತಾಳೆ. ಮೊದಲ ಬಾರಿಗೆ ಅಪ್ಪ-ಅಮ್ಮನ ಪೆಟ್ಟಿಗೆಯನ್ನು ರಾಮ್ ನೋಡುತ್ತಾನೆ. ಅದರಲ್ಲಿ ಕ್ಯಾಮರಾ ಕಂಡು ಬೆರಗಾಗುತ್ತಾನೆ. ಸತ್ಯಜಿತ್ ಇದು ತನ್ನದು, ತನಗಾಗಿ ಪ್ರಸಾದ್ ಅಣ್ಣ ತೆಗೆದುಕೊಟ್ಟಿದ್ದು ಎಂದು ಹೇಳುತ್ತಾರೆ. ಆಗ 25 ವರ್ಷದ ಹಳೆಯ ಕಥೆಯನ್ನು ಸತ್ಯಜಿತ್ ಹೇಳಲು ಶುರು ಮಾಡುತ್ತಾರೆ.

ರಾಮ್‌ಗೆ ಅಪ್ಪ-ಅಮ್ಮನನ್ನು ನೋಡುವ ತವಕ

ಸತ್ಯಜಿತ್ ಈ ಕ್ಯಾಮರಾದಲ್ಲಿ ಕೊನೆಯದಾಗಿ ಅಣ್ಣ-ಅತ್ತಿಗೆಯ ಫೊಟೋ ತೆಗೆದೆ. ಅಣ್ಣನಿಗೆ ಬಿಕ್ಕಲಿಕೆ ಬಂತು ಅಂತ ಕ್ಯಾಮರಾವನ್ನು ಅವರ ಕೈಗೆ ಕೊಟ್ಟು ನೀರು ತರಲು ಹೋದೆ. ಬರುವ ವೇಳೆಗೆ ಅಣ್ಣ-ಅತ್ತಿಗೆ ಇಬ್ಬರೂ ಇರಲಿಲ್ಲ. ಅದೇ ಕೊನೆ ಮತ್ತೆ ಕ್ಯಾಮರಾ ಕ್ರೇಜ್ ಅಲ್ಲಿಗೆ ಬಿಟ್ಟೆ. ಬಹಳ ದಿನಗಳ ಬಳಿಕ ಪೊಲೀಸರು ಈ ಕ್ಯಾಮರಾವನ್ನು ತಂದುಕೊಟ್ಟರು ಎಂದು ಹೇಳುತ್ತಾರೆ. ಚಿಕ್ಕಪ್ಪನ ಮಾತುಗಳನ್ನು ಕೇಳಿದ ರಾಮ್, ನನ್ನ ಅಪ್ಪ-ಅಮ್ಮನನ್ನು ಇದುವರೆಗೂ ನೋಡಲೇ ಇಲ್ಲ. ಈಗಲಾದರೂ ಈ ಕ್ಯಾಮರಾದಲ್ಲಿ ನೆಗೆಟಿವ್ ವಾಶ್ ಮಾಡಿಸಿದರೆ ನೋಡಬಹುದು ಎಂದು ಆಸೆ ಪಡುತ್ತಾನೆ.

ಕ್ಯಾಮರಾದಲ್ಲಿದೆ ಭಾರ್ಗವಿಯ ಭವಿಷ್ಯ

ಅವತ್ತು ಏನು ನಡೆಯಿತು ಎಂಬುದು ಕ್ಯಾಮರಾದಲ್ಲಿ ಸೆರೆಯಾಗಿರಬಹುದು ಎಂದು ಅಶೊಕ್ ಅನುಮಾನ ಪಡುತ್ತಾನೆ. ಸತ್ಯಜಿತ್ ಕೂಡ ನೆಗೆಟಿವ್ ನಲ್ಲಿ ಏನಿದೆ ಎಂದು ನೋಡಲು ಬಯಸುತ್ತಾನೆ. ಆಗ ಅಲ್ಲಿಗೆ ಬಂದ ಭಾರ್ಗವಿ ಆ ಕ್ಯಾಮರಾ ನನಗೆ ಕೊಡಿ ನಾನು ಫೋಟೋಸ್ ಗಳನ್ನು ಮಾಡಿಸಿ ಕೊಡುತ್ತೇನೆ ಎಂದು ಹೇಳುತ್ತಾಳೆ. ಯಾಕೆಂದರೆ, ಭಾರ್ವಿಗೆ ತಾನೇ ತನ್ನ ಭಾವ-ಅಕ್ಕನನ್ನು ಕೊಂದ ವಿಚಾರ ಗೊತ್ತಾಗುತ್ತದೆಯೋ ಎಂಬ ಭಯವಿದೆ. ಕ್ಯಾಮರಾದಲ್ಲಿ ಭಾರ್ಗವಿಯ ಭವಿಷ್ಯ ಅಡಗಿದ್ದು, ಅದನ್ನು ತೊಳೆಸಲು ಸತ್ಯಜಿತ್ ಮತ್ತು ಅಶೋಕ್ ಹೋಗುತ್ತಾರೆ.

ಭಾರ್ಗವಿಯ ಬಣ್ಣ ಬಯಲಾಗುತ್ತಾ?

ಸತ್ಯಜಿತ್‌ಗೆ ಈ ಕ್ಯಾಮರಾದಲ್ಲಿ ಅಂದು ನಡೆದ ಘಟನೆಗಳ ಫೋಟೋಗಳಿದ್ದರೆ, ಭಾರ್ಗವಿಯ ಬಣ್ಣ ಬಯಲು ಮಾಡಬಹುದು ಎಂಬ ಖುಷಿಯಿದೆ. ಸ್ವತಃ ಅಶೋಕ್ ಮತ್ತು ಸತ್ಯಜಿತ್ ನೆಗೆಟಿವ್ ಅನ್ನು ವಾಶ್ ಮಾಡುತ್ತಾರೆ. ಫೋಟೋಗಳನ್ನು ಮನೆಗೆ ತೆಗೆದುಕೊಂಡು ಬಂದಾಗ ಬಾಗಿಲಲ್ಲೇ ಕಾದು ಕುಳಿತ ಭಾರ್ಗವಿ ಫೋಟೋಗಳನ್ನು ತನಗೇ ನೀಡುವಂತೆ ಗಾಬರಿಯಯಲ್ಲಿ ಕೇಳುತ್ತಾಳೆ. ಆದರೆ, ಅಪ್ಪ-ಅಮ್ಮನನ್ನು ನೋಡುವ ಆಸೆಯಿಂದ ರಾಮ್ ಪೋಟೋ ನೋಡಲು ಮುಂದಾಗಿದೆ. ಅದರಲ್ಲಿ ಏನಿದೆ.? ಭಾರ್ಗವಿಯ ಕಥೆ ಏನು ಎಂಬ ರಹಸ್ಯ ಸೋಮವಾರ ಎಪಿಸೋಡ್‌ನಲ್ಲಿ ಬಯಲಾಗಲಿದೆ.

More from Filmibeat

English summary
Bhargavi future hiding in vintage camera. Photos reveals truth;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X