Chandana deepak: 'ಸೀತಾರಾಮ' ಶಾಲಿನಿ ಬರೀ ಆಕ್ಟರ್ ಮಾತ್ರ ಅಲ್ಲ ಐಕಿಯಾ ಟೀಂನಲ್ಲಿ ಕೆಲಸ ಕೂಡ ಮಾಡ್ತಾರೆ!

By ಎಸ್ ಸುಮಂತ್

'ಸೀತಾರಾಮ' ಧಾರಾವಾಹಿಯಲ್ಲಿಎಲ್ಲವೂ ಚೆನ್ನಾಗಿತ್ತು, ಸೀತಾರಾಮ ಸಂತಸದಿಂದ ಕಾಲ ಕಳೆಯುತ್ತಿದ್ದರು. ಸಿಹಿ ಎಂಬ ಪುಟ್ಟ ಪ್ರಪಂಚ ದೇಸಾಯಿ ಮನೆತನದ ವಾತಾವರಣವನ್ನೇ ಬದಲಾಯಿಸಿದ್ದಳು. ಅದರಲ್ಲೂ ದುರಹಂಕಾರವನ್ನೇ ಮೈತುಂಬಿಕೊಂಡಿದ್ದ ಅನಿಕೇತನನ್ನೇ ಸಿಹಿ ಬದಲಾಯಿಸಿದ್ದಳು. ಮೊಬೈಲ್ ಬಿಟ್ಟು ಟಾಯ್ಸ್‌ ಜೊತೆ ಆಟವಾಡುವುದಕ್ಕೆ ಶುರು ಮಾಡಿದ್ದ, ಸಿಹಿ ಜೊತೆಗೆ ಒಳ್ಳೆ ಬ್ರದರ್ ಆಗಿ ನಡೆದುಕೊಳ್ಳುತ್ತಿದ್ದ. ಇದೆಲ್ಲ ಸಿಹಿ ಮನೆಗೆ ಬಂದ ಮೇಲೆ ಆದಂತ ಬದಲಾವಣೆಗಳು.

ಹೀಗೆ ನೆಮ್ಮದಿಯಾಗಿದ್ದವರ ಬದುಕಲ್ಲಿ ಬಂದದ್ದೇ ಶಾಲಿನಿ ಅಂಡ್ ಡಾಕ್ಟರ್ ಶ್ಯಾಮ್. ಸಿಹಿ ಯಾರ ಮಗಳು ಎಂಬ ಸತ್ಯ ಅನಾವರಣವಾಗಿದ್ದು. ಬಳಿಕವೇ ಸೀತಾರಾಮ ಬದುಕಲ್ಲಿ ಬಿರುಗಾಳಿ ಎದ್ದದ್ದು. ಶಾಲಿನಿಗೆ ಮಕ್ಕಳೆಂದರೆ ಆಗುವುದಿಲ್ಲ.

Zee kannada Seetharama serial fame Chandana deepak biography work and more

ಸೀತಾ ಮೇಲಿನ ಹಠಕ್ಕೆ ಶಾಲಿನಿ ಬಲವಂತವಾಗಿ ಸಿಹಿಯನ್ನ ಕರೆದುಕೊಂಡು ಹೋಗಿದ್ದಳು. ಅದೇ ಶಾಲಿನಿ ನಟನೆಯಷ್ಟೇ ಅಲ್ಲದೆ ಐಕಿಯಾದಲ್ಲಿ ಕೆಲಸ ಕೂಡ ಮಾಡ್ತಾರೆ ಅನ್ನೋದು ಗೊತ್ತಾ..?

ಇಂಜಿನಿಯರ್ ಆಗಿರುವ ಚಂದನಾ

ಚಂದನಾ ದೀಪಕ್ ಮೂಲತಃ ಬೆಂಗಳೂರಿನವರೇ. ಸಾಫ್ಟ್‌ವೇರ್ ಇಂಜಿನಿಯರಿಂಗ್ ಮುಗಿಸಿದ್ದು, ನಟನೆಯತ್ತ ಬಂದಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಇತ್ತೀಚಿನ ಧಾರಾವಾಹಿ ಸೀತಾರಾಮದಲ್ಲಿ ಕೆಲವೇ ಕೆಲವು ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡರು ಒಂದೊಳ್ಳೆ ಪಾತ್ರವನ್ನು ನಿಭಾಯಿಸಿದ್ದಾರೆ.

ಐಕಿಯಾದಲ್ಲಿ ಕೆಲಸ

ಚಂದನಾ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ತಮ್ಮದೇ ಪ್ರೊಫೆಷನ್ ಕೂಡ ಮೆಂಟೈನ್ ಮಾಡ್ತಾ ಇದಾರೆ‌. ಹೋಂ ಫರ್ನಿಚರ್ ಸಿಗುವ ದೊಡ್ಡ ಕಂಪನಿ ಐಕಿಯಾದಲ್ಲಿ ವರ್ಕ್ ಮಾಡ್ತಾ ಇದ್ದಾರೆ. ನಾಗಸಂದ್ರದ ಐಕಿಯಾದಲ್ಲಿ ಇಂಟಿರಿಯರ್ ಡಿಸೈನ್ ಟೀಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಂದಂತ ಕ್ಲೈಂಟ್‌ಗಳಿಗೆ ಎಕ್ಸ್‌ಪ್ಲೈನ್ ಮಾಡೋ ರೀತಿಗೆ ಜನ ಸಾಮಾನ್ಯರು ಸಹ ಫಿದಾ ಆಗುತ್ತಾರೆ. ಒಮ್ಮೆ ಆದರೂ ಐಕಿಯಾಗೆ ಹೋಗಬೇಕು ಎನ್ನುವಷ್ಟು ಇಂಪ್ರೆಸ್ ಮಾಡ್ತಾರೆ. ಹೀಗಾಗಿಯೇ ಗ್ರಾಹಕರು ಕೂಡ ಚಂದನಾ ಅವರ ಬಳಿಯೇ ಸಲಹೆಗಳನ್ನ ಪಡೆಯುತ್ತಾರೆ.

ಇಂಟಿರಿಯರ್‌ನಲ್ಲಿ ಹೆಚ್ಚು ಅರಿವು

ನಟಿ ಮೇಘನಾ ರಾಜ್ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ರಾಯನ್ ಜೊತೆಗೆ ವಿಡಿಯೋ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ‌. ಗ್ರ್ಯಾಂಡ್ ಆಗಿ ಗೃಹಪ್ರವೇಶ ಕೂಡ ಮಾಡಿದರು. ಮನೆಯಲ್ಲಿ ಎಲ್ಲರಿಗೂ ಬಹಳ ಮುಖ್ಯವಾದದ್ದು ಬೆಡ್ ರೂಮ್. ಮೇಘನಾ ರಾಜ್ ಕೂಡ ಬೆಡ್ ರೂಮ್ ಅಲಂಕಾರಕ್ಕೆ ಬಹಳ ಪ್ರಾಶಸ್ತ್ಯ ನೀಡುತ್ತಾರೆ. ಅದಕ್ಕಾಗಿಯೇ ಐಕಿಯಾ ಕಾಂಟ್ಯಾಕ್ಟ್ ಮಾಡಿ ಬೆಡ್ ರೂಮ್, ಬಾಲ್ಕನಿಯನ್ನು ಅಲಂಕಾರ ಮಾಡಿಸಿದ್ದಾರೆ. ಇದೆಲ್ಲದರ ಮುಂದಾಳತ್ವ ತೆಗೆದುಕೊಂಡಿದ್ದೇ ಚಂದನಾ ದೀಪಕ್. ಐಕಿಯಾ ಶೋ ರೂಮ್ ವಿಸಿಟ್ ಮಾಡಿದಾಗಿನಿಂದ, ಮೇಘನಾ ರಾಜ್ ಮನೆ ಅಲಂಕಾರ ಮಾಡುವವರೆಗೂ ಮುಂದೆ ನಿಂತು ನೋಡಿಕೊಂಡಿದ್ದಾರೆ. ಮೇಘನಾಗೂ ಫುಲ್ ಇಂಪ್ರೆಸ್ ಆಗಿದೆ.

ಚಂದನಾ-ದೀಪಕ್ ಜಾಲಿ ಜಾಲಿ

ಚಂದನಾ ಹಾಗೂ ದೀಪಕ್ ಇಬ್ಬರು ಕೂಡ ಕಲಾವಿದರೆ. ಇತ್ತೀಚೆಗಷ್ಟೇ ತಮ್ಮ ಮದುವೆ ವಾರ್ಷಿಕೋತ್ಸವವನ್ನ ಆಚರಸಿಕೊಂಡಿದ್ದಾರೆ. ಪ್ರವಾಸಕ್ಕೆ ಹೋಗಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಅಂದ ಹಾಗೇ ದೀಪಕ್ ಹಾಗೂ ಚಂದನಾ ನಟರಷ್ಟೇ ಅಲ್ಲ ಸೀರಿಯಲ್ ನಿರ್ಮಾಣದಲ್ಲೂ ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದಾರೆ. ತಾನೂ ನಟಿ, ನಿರ್ಮಾಪಕಿ, ಕೆಲಸ ಮಾಡುವುದೇನು ಎಂಬುದೆಲ್ಲ ಇಲ್ಲ. ಫುಲ್ ಆಕ್ಟೀವ್ ಆಗಿರುವುದರಲ್ಲಿ ಚಂದನಾ ಎತ್ತಿದ ಕೈ. ಅವರನ್ನು ನೋಡಿದರೇನೆ ಖುಷಿಯಾಗುತ್ತದೆ.

More from Filmibeat

English summary
Here is the details about Seetharama serial actress Chandana works at IKEA.
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X